Relationship Tips: ನಿಜಕ್ಕೂ ಯೋಚಿಸಿ ಹೇಳಿ, ಸಂಬಂಧ ಚೆನ್ನಾಗಿರೋಕೆ ಪ್ರೀತಿಯೊಂದೇ ಸಾಕಾ?

ಸಂಬಂಧದಲ್ಲಿ ಪ್ರೀತಿಯೊಂದೇ ಎಲ್ಲವೂ ಅಲ್ಲ. ಪ್ರೀತಿಯ ಮಧುರ ಭಾವನೆಯ ಜತೆಗೆ ಇತರ ಕೆಲವು ಮೌಲ್ಯಗಳನ್ನೂ ಇಬ್ಬರೂ ಹೊಂದಿರಬೇಕಾಗುತ್ತದೆ. ಕೇವಲ ಪ್ರೀತಿಯೊಂದರಿಂದ ಸಂಬಂಧ ಚೆನ್ನಾಗಿರಲು ಸಾಧ್ಯವಿಲ್ಲ. 
 

 Love is not enough for good relationship

“ಸಂಬಂಧದಲ್ಲಿ ಪ್ರೀತಿಯೊಂದಿದ್ದರೆ ಎಲ್ಲವೂ ಸಾಧ್ಯ, ಪ್ರೀತಿಯೊಂದೇ ಸಂಬಂಧವನ್ನು ಮುನ್ನಡೆಸುತ್ತದೆ’ ಇತ್ಯಾದಿ ನಂಬಿಕೆಗಳು ನಮ್ಮಲ್ಲಿ ಬೇರೂರಿವೆ. ಆದರೆ, ವಾಸ್ತವ ಸಂಗತಿಯೆಂದರೆ, ಕೇವಲ ಪ್ರೀತಿಯೊಂದೇ ಇದ್ದರೆ ಸಂಬಂಧದಲ್ಲಿ ಎಲ್ಲವೂ ಇದ್ದಂತೆ ಅಲ್ಲ. ಆಪ್ತಸಮಾಲೋಚಕರ ಪ್ರಕಾರ, ಪ್ರೀತಿಯೊಂದರಿಂದಲೇ ಸಂಬಂಧವನ್ನು ಉತ್ತಮಪಡಿಸಲು ಸಾಧ್ಯವಿಲ್ಲ. ಪ್ರೀತಿಯ ಜತೆಗೆ ಇನ್ನೂ ಹಲವಾರು ಮೌಲಿಕ ಅಂಶಗಳು ಇರಬೇಕಾಗುತ್ತವೆ. ಭಾವನಾತ್ಮಕ ಪ್ರಬುದ್ಧತೆ ಇಲ್ಲವಾದರೆ ಸಂಬಂಧವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ಪ್ರೀತಿಯಿದ್ದರೂ ಗೌರವ ಇಲ್ಲದೆಡೆ ಬದುಕಲು ಸಾಧ್ಯವಾಗುವುದಿಲ್ಲ. ಸಂಬಂಧ ಚೆನ್ನಾಗಿರಲು ಸೂಕ್ತ ಸಂವಹನದಿಂದ ಹಿಡಿದು ನಂಬಿಕೆಯವರೆಗೆ ಹಲವು ಮೌಲ್ಯಗಳನ್ನು ಇಬ್ಬರೂ ಹೊಂದಿರಬೇಕಾಗುತ್ತದೆ. ಹಲವು ಜೋಡಿಗಳನ್ನು ಕಾಣಬಹುದು, ಪರಸ್ಪರ ಇಷ್ಟಪಟ್ಟರೂ ಬಹಳಷ್ಟು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಭಾರೀ ಹಿಂಸೆ ಪಡುತ್ತಾರೆ.

ಆಗ ಪ್ರೀತಿಪಾತ್ರರನ್ನೇ ದೂರ ಮಾಡುವುದು ಸುಲಭ ಎನಿಸಲು ಶುರುವಾಗುತ್ತದೆ. ಹೀಗಾಗಿ, ಪ್ರೀತಿಯೊಂದೇ ಸಂಬಂಧದ ಜೀವಾಳ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯೊಂದೇ ಇತರ ಮೌಲ್ಯಗಳ ಅಭಾವವನ್ನು ತುಂಬಲಾರದು. ಸಂಗಾತಿಯೊಂದಿಗೆ ಸುಖಮಯ ಜೀವನ ನಡೆಸಲು ಹಲವು ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಪ್ರೀತಿಯೊಂದೇ ಸಂಬಂಧಕ್ಕೆ ಸಾಕಾಗದು ಎನ್ನುವುದಕ್ಕೆ ಹಲವು ಕಾರಣಗಳು ಇಲ್ಲಿವೆ. 

ಸಂವಹನವೇ (Communication) ಇಲ್ಲವಾದರೆ ಪ್ರೀತಿ (Love) ಯೊಂದೇ ಸಾಕಾಗದು: ಸೂಕ್ತ ಸಂವಹನ ಆರೋಗ್ಯಕರ (Healthy) ಮತ್ತು ಸಂತಸದ ಸಂಬಂಧಕ್ಕೆ (Relation) ಅತ್ಯಂತ ಅಗತ್ಯ. ಸೂಕ್ತ ಸಂವಹನವಿದ್ದಾಗ ಪರಸ್ಪರರ ಭಾವನೆ (Feelings), ವಿಚಾರ, ಅಭಿಪ್ರಾಯಗಳನ್ನು ಹೇಳಿಕೊಳ್ಳುವ ಅವಕಾಶವಿರುತ್ತದೆ. ಜತೆಯಾಗಿ ಸೇರಿ ಸಮಸ್ಯೆ ಎದುರಿಸುವ ದಾರಿ ಹೊಳೆಯುತ್ತದೆ. ಪರಿಣಾಮಕಾರಿ ಸಂವಹನ ಇಲ್ಲದೆ ಇರುವಾಗ ಪ್ರೀತಿಯೊಂದರಿಂದ ಏನೂ ಮಾಡಲಾಗದು. ಹೀಗಾಗಿ, ಆರಂಭದಿಂದಲೇ ಉತ್ತಮ ಸಂವಹನ ಹೊಂದಿರುವುದು ಮುಖ್ಯ.

ಮದ್ವೆಯ ಮೊದಲ ಆರು ತಿಂಗಳು ಇಂಥಾ ಜಗಳ ಸಾಮಾನ್ಯ, ಸೀರಿಯಸ್ ಆಗಿ ತಗೋಬೇಡಿ

ನಂಬಿಕೆ (Trust) ಇಲ್ಲವಾದರೆ: ಪ್ರೀತಿಯಿದ್ದೂ ನಂಬಿಕೆ ಇಲ್ಲ ಎಂದಾದರೆ ಖಂಡಿತವಾಗಿ ನೆಮ್ಮದಿ ಲಭಿಸುವುದಿಲ್ಲ. ಯಾವುದೇ ಸಂಬಂಧ ಉತ್ತಮವಾಗಿರಲು ನಂಬಿಕೆ ಅತಿ ಅಗತ್ಯ. ನಂಬಿಕೆ ಇಲ್ಲದಿರುವಾಗ ಪ್ರೀತಿಯ ಭಾವನೆಗಳು ಅಪನಂಬಿಕೆ ಮತ್ತು ಅಸೂಯೆಗಳಿಂದ ಮುಚ್ಚಿ ಹೋಗುವ ಸಾಧ್ಯತೆ ಹೇರಳ. ಜತೆಗೆ,  ಪಾರದರ್ಶಕತೆ, ಪ್ರಾಮಾಣಿಕತೆಯೂ ಅಗತ್ಯ.

ಹೊಂದಾಣಿಕೆ (Compatibility) ಎಷ್ಟು ಮುಖ್ಯ?: ಸಂಬಂಧದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ ಎನ್ನುವ ಅರಿವು ಬಹುತೇಕರಿಗೆ ಇರುತ್ತದೆ. ಕಷ್ಟಪಟ್ಟು ಮಾಡಿಕೊಳ್ಳುವ ಹೊಂದಾಣಿಕೆ (Adjustment) ಅಲ್ಲ, ಇಷ್ಟಪಟ್ಟು ಬದಲಾವಣೆ ಹಾಗೂ ವಿಭಿನ್ನತೆಯನ್ನು ಒಪ್ಪಿಕೊಂಡು ಒಳಗೊಳ್ಳುವುದು ಸಂಬಂಧದಲ್ಲಿ ಮುಖ್ಯ. ಕಷ್ಟಪಟ್ಟು ಮಾಡಿಕೊಳ್ಳುವ ಹೊಂದಾಣಿಕೆಯಿಂದ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಆದರೆ, ಒಪ್ಪಿಕೊಳ್ಳುವುದರಿಂದ ನಿಜವಾದ ಸಾಂಗತ್ಯ ಉಂಟಾಗುತ್ತದೆ.

ಗೌರವವೇ (Respect) ಇಲ್ಲವೆಂದರೆ: ಸಂಬಂಧದಲ್ಲಿ ಗೌರವ ಇಲ್ಲವಾದರೆ ಸಂಗಾತಿಯೊಂದಿಗೆ ಕ್ಷಣಕಾಲವೂ ಬಾಳಲು ಸಾಧ್ಯವಾಗುವುದಿಲ್ಲ. ಪರಸ್ಪರ ಗೌರವದ ಭಾವನೆ ಇರುವಾಗಲೇ ಸಂಬಂಧ ಮಧುರವಾಗಿರುತ್ತದೆ. ಒಬ್ಬರ ಭಾವನೆ, ಅಭಿಪ್ರಾಯಗಳನ್ನು (Opinion) ಗೌರವಿಸದೆ ಇದ್ದಾಗ ಹಿಂಸೆಯಾಗುವುದು ಸಹಜ.

Relationship Tips: ವಿನಾಕಾರಣ ಬೈಯ್ಯೋ ಗಂಡನಿದ್ದರೆ ಮನಸ್ಸು ಒಡೆದ ಹಾಲಿನಂತೆ!

ಜವಾಬ್ದಾರಿಯ ಹಂಚಿಕೆ (Shared Responsibility): ಹಣ ತಂದುಕೊಡುವುದೊಂದು ತನ್ನ ಜವಾಬ್ದಾರಿ, ಉಳಿದದ್ದೆಲ್ಲ ಹೆಂಡತಿಯದ್ದು ಎನ್ನುವ ಪುರುಷರಿದ್ದಾರೆ. ಕುಟುಂಬಕ್ಕಾಗಿ (Family) ದುಡಿಯುವುದು ಎಷ್ಟು ಅನಿವಾರ್ಯವೋ ದೈನಂದಿನ ವ್ಯವಹಾರಗಳಲ್ಲೂ ಕೆಲವೊಮ್ಮೆ ಭಾಗಿಯಾಗುವುದು ಅಷ್ಟೇ ಅಗತ್ಯ. ಮುಖ್ಯವಾಗಿ, ಮಕ್ಕಳ (Children) ಪಾಲನೆಯಲ್ಲಿ ಇಬ್ಬರೂ ಜತೆಯಾಗಿ ನಿಂತರೆ ಮಾತ್ರ ಉತ್ತಮ. ಹಾಗೆಯೇ, ಸಂಗಾತಿಗಳಲ್ಲಿ ಯಾರಿಗಾದರೂ ಜವಾಬ್ದಾರಿಯೇ ಇಲ್ಲವೆಂದಾದರೂ ಸರಿಯಲ್ಲ. 

ಭಾವನಾತ್ಮಕ ಪ್ರಬುದ್ಧತೆ (Emotional Maturity): ಯಶಸ್ವಿ ಸಂಬಂಧಕ್ಕೆ ಭಾವನಾತ್ಮಕ ಪ್ರಬುದ್ಧತೆ ಭಾರೀ ಅಗತ್ಯ. ಪ್ರತಿ ಸನ್ನಿವೇಶಕ್ಕೂ ಅತಿಯಾಗಿ ರಿಯಾಕ್ಟ್ (Overreact) ಮಾಡುವ ಸಂಗಾತಿಯಲ್ಲಿ ಪ್ರೀತಿಯ ಭಾವನೆ ಸಾಕಷ್ಟಿದ್ದರೂ ಪ್ರಯೋಜನವಿಲ್ಲ. ಅವರ ಪ್ರೀತಿಯೇ ವ್ಯತಿರಿಕ್ತವಾಗುವುದು ಕಂಡುಬರುತ್ತದೆ. ವರ್ತನೆ (Behaviour) ಸಂಬಂಧಿ ಏರುಪೇರು, ಹಾನಿಕಾರಕ ಸ್ವಭಾವದಿಂದಾಗಿ ಸಂಬಂಧ ಹದಗೆಡುವುದು ಸಾಮಾನ್ಯ. 

ವ್ಯಸನ (Addiction), ನಿಂದನೆ (Abuse) ಇತ್ಯಾದಿ: ದಂಪತಿಯಲ್ಲಿ ಯಾರಾದರೂ ವ್ಯಸನಕ್ಕೆ ತುತ್ತಾಗಿದ್ದರೆ, ಯಾರಾದರೂ ಮತ್ತೊಬ್ಬರನ್ನು ನಿಂದಿಸುವ ಗುಣ ಹೊಂದಿದ್ದರೆ ಸಂಬಂಧ ಚೆನ್ನಾಗಿರಲು ಸಾಧ್ಯವೇ ಇಲ್ಲ. ಮಾತಿನ ದೌರ್ಜನ್ಯ, ನಿಂದನೆಗಳು ಗಂಭೀರ ಸ್ವರೂಪದ ಪರಿಣಾಮ ಬೀರುತ್ತವೆ. 

Latest Videos
Follow Us:
Download App:
  • android
  • ios