ವಾಕಿಂಗ್ ಮಾಡಲು ಸುಂದರ ಹುಡುಗಿ ಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ವೈರಲ್ ಆಗಿದೆ. ಈ ಜಾಹೀರಾತಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಒಂಟಿತನವೆಂಬುದು ಒಂದು ದೊಡ್ಡ ಶಾಪ. ಎಲ್ಲರೂ ಜೊತೆಗಿದ್ದರೂ ತನಗೆ ಯಾರು ಇಲ್ಲ ಎಂಬ ಭಾವನೆ ಅನೇಕರನ್ನು ಕಾಡುತ್ತದೆ. ಹೀಗಿರುವಾಗ ವಾಕಿಂಗ್ ಹೋಗೋಕೆ ಚೆಂದದ ಹುಡುಗಿ ಬೇಕು ಎಂಬ ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತ ಬಗ್ಗೆ ಖಚಿತತೆ ಇಲ್ಲ. ಆದರೆ ನೆಟ್ಟಿಗರು ಈ ಫೋಸ್ಟ್‌ಗೆ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಈ ಜಾಹೀರಾತಿನಲ್ಲಿ ಏನಿದೆ ನೋಡೋಣ ಬನ್ನಿ.

ಜಾಹೀರಾತಿನಲ್ಲಿರೋದೇನು?
ಮುಂಜಾನೆ ವಾಯುವಿಹಾರಕ್ಕೆ ಹೋಗಲು ಸುಂದರವಾದ ಹುಡುಗಿ ಬೇಕು. ಬಿಹೆಚ್‌ಯು ಸಮೀಪ, ಕೇವಲ ಒಂದು ಗಂಟೆ, ಸ್ಯಾಲರಿ 6 ರಿಂದ 10 ಸಾವಿರ ರೂಪಾಯಿ ಎಂದು ಬರೆದು ದೂರವಾಣಿ ಸಂಖ್ಯೆಯನ್ನು ಹಾಕಲಾಗಿದೆ. kalyug gram ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಜಾಹೀರಾತಿನ ಫೋಟೋ ಪೋಸ್ಟ್ ಮಾಡಲಾಗಿದ್ದು, 'ಇತನ ಅಕೆಲಾ ಬಂದ ಆಜ್ ತಕ್ ನಹೀ ದೇಖ' ಎಂದು ಬರೆದಿದ್ದಾರೆ. ಅಂದರೆ ನಾನು ಇಷ್ಟೊಂದು ಒಂಟಿತನ ಅನುಭವಿಸುತ್ತಿರುವ ವ್ಯಕ್ತಿಯನ್ನು ಯಾವತ್ತೂ ನೋಡಿಲ್ಲ ಎಂದು ಅವರು ಬರೆದಿದ್ದಾರೆ. 

ಪ್ರೀತಿಯ ಭಯ, ಆದ್ರೂ ಬಂಧಿಯಾಗೋದ್ಯಾಕೆ?

ನೆಟ್ಟಿಗರ ಕಾಮೆಂಟ್ ಹೇಗಿದೆ ನೋಡಿ!
ಇನ್ನೂ ಈ ಪೋಸ್ಟ್ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಮಹಿಳೆ ನಾನು ನನ್ನ ಗಂಡ ಹಾಗೂ ಮಗನನ್ನು ಕರೆದುಕೊಂಡು ಬರಬಹುದೇ? ವಾಕ್‌ಗೆ ಜಾಸ್ತಿ ಜನ ಬಂದಂತಾಗುತ್ತದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಂಟಿತನ ತುಂಬಾ ಭಯಾನಕವಾಗಿರುತ್ತದೆ. ಕೆಲವೊಮ್ಮೆ ಜೊತೆಗೆ ನಡೆಯಲು ನಿಮಗೆ ಯಾರಾದರೂ ಜೊತೆಗಾರ ಬೇಕು ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇಲ್ಲಿ ಕೂಡ ವರ್ಣಬೇಧ ಕಾಣುತ್ತಿದೆ. ವಾಕ್ ಹೋಗುವುದಕ್ಕೂ ಇವರಿಗೆ ಸುಂದರ ಹುಡುಗಿ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಒಂಟಿತನದ ಬಗ್ಗೆ ಮಾತನಾಡಿದ್ದು, ಒಂಟಿತನ ತುಂಬಾ ನೋವಿನಿಂದ ಕೂಡಿರುತ್ತದೆ. ಈ ಸ್ಥಿತಿಯನ್ನು ನಾನು ಪ್ರತಿದಿನವೂ ಎದುರಿಸುತ್ತಿದ್ದೇನೆ ಎಂದು ಒಬ್ಬರು ಮಹಿಳೆ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತೊಬ್ಬರು ನಾನು ಸಿದ್ಧಳಿದ್ದೇನೆ ಸ್ಯಾಲರಿ ಏನು ಬೇಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿ

ಈ ಜಾಹೀರಾತಿನ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ. 

View post on Instagram