ಲಿವಿಂಗ್ ಟುಗೆದರ್ ಸಂಬಂಧದಲ್ಲಿರುವ ಜೋಡಿಗಳು ತಮ್ಮ ನಡುವೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸಂಬಂಧಗಳು ವಿಭಿನ್ನ ಸ್ವರೂಪ ಪಡೆಯುತ್ತಿವೆ. ಮೊದಲೆಲ್ಲಾ ಗಂಡು ಹೆಣ್ಣಿನ ನಡುವಿನ ಸಂಬಂಧಕ್ಕೆ ಮದುವೆಯೆಂಬ ಸ್ಟಾಂಪ್ ಹಾಕಲಾಗುತ್ತಿತ್ತು. ನಂತರ ಅವರು ಎಲ್ಲಾ ಸಂಸಾರಿಗಳಂತೆ ಬದುಕು ಸವೆಸುತ್ತಿದ್ದರು. ಆದರೆ ಈಗ ಹಾಗಿಲ್ಲ ಸಂಬಂಧಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ. ಸಂಬಂಧಗಳಿಗೆ ಅವುಗಳ ಸ್ವರೂಪಕ್ಕೆ ತಕ್ಕಂತೆ ಹೊಸ ಹೊಸ ಹೆಸರುಗಳನ್ನು ಇಡಲಾಗುತ್ತಿದೆ. ಅಂತಹ ಸಂಬಂದಗಳಲ್ಲೊಂದು ಬಹಳ ಹಳೆಯದಲ್ಲಾದ ಆದರೆ ಈಗ ಸಾಮಾನ್ಯ ಎನಿಸಿರುವ ಲೀವಿಂಗ್ ಟುಗೆದರ್ ಸಂಬಂಧಗಳು.
ಲೀವಿಂಗ್ ಟುಗೆದರ್ ಬಗ್ಗೆ ಯಾರಿಗೂ ಹೆಚ್ಚಾಗಿ ವಿವರಿಸಬೇಕಾಗಿಲ್ಲ, ಆದರೂ ಅರಿಯದವರಿಗಾಗಿ ಉದ್ಯೋಗ ಶಿಕ್ಷಣ ಅರಸಿ ನಗರ ಪ್ರದೇಶಕ್ಕೆ ಬರುವ ಹುಡುಗ ಹುಡುಗಿಯರು ಪರಸ್ಪರ ಪರಿಚಯವಾದ ನಂತರ ಅಥವಾ ಪ್ರೀತಿಯಾದ ನಂತರ ಜೊತೆಯಾಗಿ ಒಂದೇ ಮನೆಯಲ್ಲಿ ಒಂದೇ ಸೂರಿನ ಕೆಳಗೆ ವಾಸ ಮಾಡುವುದಾಗಿದೆ. ಇವರ ನಡುವೆ ಎಲ್ಲಾ ಸಂಬಂಧಗಳಿರುತ್ತವೆ. ಸಂಬಂಧ ಚೆನ್ನಾಗಿದ್ದರೆ ಮದುವೆಯನ್ನು ಆಗುತ್ತಾರೆ ಸ್ನೇಹಿತರಂತೆ ಬದುಕುವವರು ಇರಬಹುದೇನೋ? ಮೊದಲೆಲ್ಲಾ ಈ ಸಂಬಂಧಗಳಲ್ಲಿ ಖರ್ಚು ಮಾಡುವವರು ಒಬ್ಬರಾಗಿದ್ದರೆ ಖರ್ಚಿಲ್ಲದೇ ಎಲ್ಲಾ ಸೌಲಭ್ಯಗಳನ್ನು ಪಡೆಯುವವರು ಮತ್ತೊಬ್ಬರಾಗಿದ್ದರು. ಆದರೆ ಈಗ ಈ ಸಂಬಂಧದಲ್ಲೂ ಬದಲಾವಣೆಯಾಗಿದೆ.
ಇಬ್ಬರು ಉದ್ಯೋಗಸ್ಥರು ಒಂದೇ ಸೂರಿನ ಕೆಳಗೆ ಲೀವಿಂಗ್ ಟುಗೆದರ್‌ನಲ್ಲಿದ್ದರೆ ಮನೆ ಬಾಡಿಗೆಯಿಂದ ಹಿಡಿದು ದಿನದ ದಿನದ ದಿನಸಿವೆಚ್ಚ ಹೀಗೆ ಪ್ರತಿಯೊಂದನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಅದೇ ರೀತಿ ಹೀಗೆ ವಾಸ ಮಾಡುವವರು ತಮ್ಮ ನಡುವೆಯೇ ಕೆಲ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಇದಕ್ಕೆ ಯಾರೂ ಕೂಡ ಕಾನೂನು ಪ್ರಕಾರ ಅಫಿಡವಿಟ್ ಮಾಡಿಸುವುದು ತೀರಾ ಕಡಿಮೆ. ಆದರೂ ಲೀವಿಂಗ್ ಟುಗೆದರ್ ಹೆಸರಿನಲ್ಲಿ ಜೊತೆಯಾಗಿ ಜೀವಿಸುವ ನಿರ್ಧರಿಸಿದ ಪ್ರೇಮಿಗಳು ಇಲ್ಲೊಂದು ಕಡೆ ತಮ್ಮ ಒಪ್ಪಂದಗಳ ಬಗ್ಗೆ ಅಫಿಡವಿಟ್ ಮಾಡಿಸಿದ್ದು, ಅದರ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ ಏನಿದೆ?
ಅಂದಹಾಗೆ ಈ ಅಫಿಡವಿಟ್ ಅಥವಾ ಒಪ್ಪಂದ ಪತ್ರವನ್ನು ಗರ್ಲ್‌ಫ್ರೆಂಡ್ ಒಬ್ಬಳು ಮಾಡಿದ್ದಾಗಿ ಉಲ್ಲೇಖಿಸಲಾಗಿದೆ. ಅದರಲ್ಲಿ ಉಲ್ಲೇಖಿಸಿದಂತೆ, ನಾವು ಮಹಾಲಕ್ಷ್ಮಿ ನಗರದಲ್ಲಿ ವಾಸ ಮಾಡುತ್ತಿದ್ದು, ಕೆಳಗೆ ತಿಳಿಸಿದ ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸುತ್ತೇವೆ ಎಂದು ಸಹಿ ಹಾಕುತ್ತಿದ್ದೇವೆ.
- ಪ್ರತಿವಾರ ಟಾಯ್ಲೆಟ್ ಕ್ಲೀನ್ ಮಾಡಬೇಕು.
- ಖರ್ಚು ಮಾಡಿದ ಪ್ರತಿ ಹಣವನ್ನು ಎರಡು ಭಾಗವಾಗಿ ವಿಭಾಜಿಸಲಾಗುತ್ತದೆ.
- ಮಂಗಳವಾರ ದೈಹಿಕ ಸಂಬಂಧ ಇರುವುದಿಲ್ಲ.
- ಬಾತ್‌ರೂಮ್‌ನಲ್ಲಿ ಫೋನ್ ಬಳಸುವಂತಿಲ್ಲ.
- ರಾಹುಲ್‌ಗೆ ಯಾವುದೇ ಹೌಸ್ ಪಾರ್ಟಿಗೆ ಅನುಮತಿ ಇಲ್ಲ
ಹೀಗೆ ಹಲವು ಕಂಡೀಷನ್‌ಗಳನ್ನು ಬರೆದು ಅಫಿಡವಿಟ್ ಮಾಡಿಸಲಾಗಿದ್ದು, ಮೇಲೆ ಹೇಳಿದ ಎಲ್ಲಾ ನಿಯಮಗಳನ್ನು ಇಬ್ಬರು ಪರಸ್ಪರ ಒಪ್ಪಿ ನಿರ್ಧರಿಸಲಾಗಿದೆ. ಇದರಲ್ಲಿ ಯಾವುದಾದರೂ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯಲಾಗಿದ್ದು, ಕೆಳಗೆ ಇಂದೊರ್ ಹಾಗೂ ನಿನ್ನೆಯ ದಿನಾಂಕವಿದೆ. ಕೆಳಗೆ ಇಬ್ಬರು ಸಾಕ್ಷಿಗಳು ಹಾಗೂ ಇಬ್ಬರು ಫಲಾನುಭವಿಗಳ ಹೆಸರು ಹಾಗೂ ಸಹಿ ಇದೆ.
ಗರ್ಲ್‌ಫ್ರೆಂಡ್ ತುಂಬಾ ಬುದ್ಧಿವಂತೆ ಎಂದು ಬರೆದು DekhBhai ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ಪೋಸ್ಟ್ ಮಾಡಲಾಗಿದೆ. ಈ ಸೋಶಿಯಲ್ ಮೀಡಿಯಾ ಪೋಸ್ಟ್ ಆಸಲಿಯೋ ನಕಲಿಯೋ ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ಪೋಸ್ಟ್ ಬಗ್ಗೆ ಹಲವು ಕಾಮೆಂಟ್ ಮಾಡಿದ್ದಾರೆ.
