ಪಾಕ್ ಡೇಟಿಂಗ್ ಆ್ಯಪ್ ಜಾಹೀರಾತು ಮಾಡುತ್ತಿದೆ ಸದ್ದು! ಕಸಿನ್ ಬಿಡಿ, ಬೇರೆಯವರ ಕಟ್ಕೊಳ್ಳಿ

ಯುವ ಸಮೂಹವನ್ನು ಟಾರ್ಗೆಟ್ ಮಾಡಿಕೊಂಡು ವ್ಯವಹಾರ ಬೆಳೆಸುವ ಡೇಟಿಂಗ್ ಆಪ್‌ಗಳ ವಿಲಕ್ಷಣವೆನಿಸಿದ ಮಾರ್ಕೆಟಿಂಗ್‌ ಟ್ರಿಕ್ಸ್‌ಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಅದೇ ರೀತಿ ಈಗ ಪಾಕಿಸ್ತಾನದಲ್ಲಿ ಡೇಟಿಂಗ್ ಆಪ್ ಒಂದರ ಬಿಲ್ ಬೋರ್ಡ್  ಸಾಕಷ್ಟು ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ

Leave the cousin grab someone else Tagline of Pakiatan dating apps advertising make noise In Internet akb

ಮದುವೆ ಹಾಗೂ ಸಂಬಂಧಗಳೇ ಇವತ್ತು ಕೋಟ್ಯಾಂತರ ಮೊತ್ತದ ವಹಿವಾಟು ನಡೆಸುವ ಉದ್ಯಮವಾಗಿ ಮಾರ್ಪಟ್ಟಿವೆ. ಮದುವೆಗಾಗಿ ಸಾವಿರಾರು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಮುಂದೆ ಬಂದರೆ ಇತ್ತ ಮದುವೆಗೆ ಮೊದಲಿನ ಲವ್‌ ಸ್ಟೋರಿಗಾಗಿ ಸಾಕಷ್ಟು ಡೇಟಿಂಗ್ ಆಪ್‌ಗಳು ಸಂಬಂಧಕ್ಕಾಗಿ ಹಾತೊರೆಯುವ ಯುವ ಸಮೂಹಕ್ಕೆ ಸಹಾಯ ಮಾಡುತ್ತವೆ. ಸ್ವಾಮಿ ಕಾರ್ಯವೂ ಆಯ್ತ ಸ್ವಕಾರ್ಯವೂ ಆಯ್ತು ಎಂಬ ಮಾತಿನಂತೆ ಈ ಮ್ಯಾಟ್ರಿಮೋನಿಯಲ್ ಆಪ್ ಹಾಗೂ ಡೇಟಿಂಗ್ ಆಪ್‌ಗಳು ಸಾಕಷ್ಟು ದುಡ್ಡು ಮಾಡುತ್ತಿವೆ. ಇದರ ಜೊತೆಗೆ ಇವುಗಳ ವಿಲಕ್ಷಣವೆನಿಸಿದ ಮಾರ್ಕೆಟಿಂಗ್‌ ಟ್ರಿಕ್ಸ್‌ಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಅದೇ ರೀತಿ ಪಾಕಿಸ್ತಾನದಲ್ಲಿ ಈಗ ಡೇಟಿಂಗ್ ಆಪ್ ಒಂದರ ಸಾರ್ವಜನಿಕ ಬಿಲ್ ಬೋರ್ಡ್ ಅಥವಾ ಜಾಹೀರಾತೊಂದು ಸಾಕಷ್ಟುವ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ

ಹಾಗಿದ್ದರೆ ಆ ಬಿಲ್‌ ಬೋರ್ಡ್‌ನಲ್ಲಿ ಇರೋದೇನು?
ಕಸಿನ್‌ಗಳನ್ನು ಬಿಟ್ಟು ಬಿಡಿ ಬೇರೊಬ್ಬರನ್ನು ಹುಡುಕಿ ಎಂಬುದು ಈ ಡೇಟಿಂಗ್ ಆಪ್‌ನ ಜಾಹೀರಾತು ಟ್ಯಾಗ್‌ಲೈನ್. ಭಾರತ ಹಾಗೂ ಪಾಕಿಸ್ತಾನ ಭೌಗೋಳಿಕವಾಗಿ ಗಡಿಗಳಿಂದಾಗಿ ಬೇರ್ಪಟ್ಟಿದ್ದರೂ  ಭಾರತ ಹಾಗೂ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಕೆಲವು ಸಮುದಾಯಗಳಲ್ಲಿ ಕುಟುಂಬಗಳಲ್ಲಿ ಸಂಬಂಧಿಗಳ ಮಧ್ಯೆಯೇ ಮದುವೆ ಮಾಡಲಾಗುತ್ತದೆ. ಸಂಬಂಧಿಗಳಲ್ಲೇ ಮದುವೆಯಾಗುವುದು ಹುಡುಗ ಹುಡುಗಿಗೆ ಇಷ್ಟವಿಲ್ಲದಿದ್ದರೂ ಪೋಷಕರ ಮಾತಿಗೆ ಎದುರಾಡಲಾಗದು, ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂಬ ಕಾರಣಕ್ಕೆ ಸಂಬಂಧಗಳಲ್ಲೇ ವಿವಾಹ ಮಾಡಲಾಗುತ್ತದೆ. ಈ ರೀತಿ ವಿವಾಹ ಮಾಡುವುದರಿಂದ ಅನುವಂಶೀಯ ಕಾಯಿಲೆಗಳು ಬರುವುದು ತಿಳಿದಿದ್ದರೂ ಕೂಡ ಸಂಪ್ರದಾಯದ ಕಾರಣಕ್ಕೆ ಇದನ್ನು ಮುಂದುವರೆಸುತ್ತಾರೆ.

ಆದರ ಈ ರೀತಿ ಸಂಬಂಧದಲ್ಲೇ ಮದುವೆಯಾಗುವುದನ್ನು ಬಯಸದೇ ಇರುವ ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿ ಈ ಡೇಟಿಂಗ್ ಆಪ್ ಈ ಜಾಹೀರಾತು ನೀಡಿದ್ದು, 'ಕಸಿನ್ಸ್‌ಕೋ ಚೋಡೋ ಕೋಯಿ ಅವರ್‌ ಕೋ ಡುಂಡೋ' ಎಂದು ತನ್ನ ಜಾಹೀರಾತಿಗೆ ಟ್ಯಾಗ್ಲೈನ್ ನೀಡಿದೆ. ಮುಜ್ ಆಪ್ ಎಂಬ ಡೇಟಿಂಗ್ ಆಪ್ ಈ ರೀತಿ ಜಾಹೀರಾತು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿನ ಫೋಟೋ ವೈರಲ್ ಆಗಿದೆ. 

ವಂಶ್ ಪಂಡಿತ್ ಎಂಬುವವರು ಟ್ವಿಟ್ಟರ್‌ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗ್ತಿದೆ. ಇವರು ಭಾರತದಲ್ಲೂ ಇದೇ ರೀತಿ ಡೇಟಿಂಗ್ ಆಪ್ ಸ್ಥಾಪಿಸಬೇಕು. ಹಾಗೆಯೇ ಈ ಸಂಬಂಧದೊಳಗೆ ಮದುವೆಯನ್ನು ನಿಲ್ಲಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮದುವೆ ಮೊದಲಿನ ಪ್ರೇಮ ಸಂಬಂಧಕ್ಕೆ ಪ್ರೋತ್ಸಾಹ ನೀಡುವ ಈ ಡೇಟಿಂಗ್ ಆಪ್‌ಗೆ ಮುಸ್ಲಿಂ ರಾಷ್ಟ್ರವೆನಿಸಿದ ಪಾಕಿಸ್ತಾನದಲ್ಲಿ ಏನು ಕೆಲಸ ಎಂಬುದು ಮಾತ್ರ ತಿಳಿಯುತ್ತಿಲ್ಲ, ಏಕೆಂದರೆ ಇಸ್ಲಾಂನಲ್ಲಿ ವಿವಾಹಪೂರ್ವ ಸಂಬಂಧಕ್ಕೆ ಹುಡುಗ ಹುಡುಗಿಯ ಸಂಬಂಧಕ್ಕೆ ಸಮ್ಮತಿ ಇಲ್ಲ.!

 

Latest Videos
Follow Us:
Download App:
  • android
  • ios