ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಅವರ ಇಚ್ಛೆಯಂತೆ ವಿಲ್ ಮೂಲಕ ಯಾರಿಗಾದರೂ ನೀಡಬಹುದು. ವಿಲ್ ಇಲ್ಲದಿದ್ದರೆ, ಪತ್ನಿ, ಮಕ್ಕಳು ಮತ್ತು ತಾಯಿಗೆ ಸಮಾನ ಹಂಚಿಕೆಯಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಗೆ ಸಂಪೂರ್ಣ ಹಕ್ಕಿಲ್ಲ, ಎಲ್ಲಾ ಮಕ್ಕಳಿಗೂ ಸಮಾನ ಹಂಚಿಕೆಯಾಗಬೇಕು.

ಅಪ್ಪನ ಆಸ್ತಿಯ ಮೇಲಿನ ಹಕ್ಕಿಗೆ ಸಂಬಂಧಿಸಿದಂತೆ ಕೋರ್ಟ್​ಗಳಿಗೆ ಬರುವ ಕೇಸುಗಳಿಗೆ ಲೆಕ್ಕವೇ ಇಲ್ಲ. ಆಸ್ತಿಗಾಗಿಯೇ ಕೊ*ಲೆಗಳೂ ನಡೆದು ಹೋಗುತ್ತವೆ. ಆಸ್ತಿ ಹೆಚ್ಚು ಮಾಡಿಟ್ಟರೆ ಮಕ್ಕಳೇ ಹೆತ್ತವರನ್ನು ಸಾಯಿಸಿರುವ ಉದಾಹರಣೆಗಳೂ ಇವೆ. ಅಪ್ಪ-ಅಮ್ಮ ವೃದ್ಧರಾಗುತ್ತಿದ್ದಂತೆಯೇ ಅವರನ್ನು ಮನೆಯಿಂದ ಹೊರಕ್ಕೆ ಹಾಕುವ ಮಕ್ಕಳು ಅದೆಷ್ಟು ಮಂದಿ ಇಲ್ಲ, ಆದರೆ ಅಪ್ಪನ ಆಸ್ತಿಗಾಗಿ ಆತನ ಕೊನೆಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕವಾಡುವ ಮಕ್ಕಳೂ ಇದ್ದಾರೆ. ಹಾಗಿದ್ದರೆ ಅಪ್ಪನ ಆಸ್ತಿಯಲ್ಲಿ ಮಕ್ಕಳಿಗೆ ಎಷ್ಟು ಹಕ್ಕು ಇದೆ, ಅಪ್ಪ ಇಷ್ಟ ಪಟ್ಟರೆ ಆ ಆಸ್ತಿಯ ಬಿಡಿಗಾಸನ್ನೂ ಮಕ್ಕಳಿಗೆ ಕೊಡದಿರಲು ಸಾಧ್ಯನಾ? ಅಥ್ವಾ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಮಕ್ಕಳಿಗೆ ಮಾತ್ರ ಕೊಡಲು ಸಾಧ್ಯನಾ ಎನ್ನುವ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಬಹುತೇಕ ಮಂದಿಯಲ್ಲಿ ಇದ್ದೇ ಇರುತ್ತದೆ.

ಹಾಗಿದ್ದರೆ ಅಪ್ಪನ ಆಸ್ತಿಯ ಮೇಲೆ ಯಾರಿಗೆ ಎಷ್ಟು ಹಕ್ಕಿದೆ ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹಿಂದೂಗಳಿಗೆ ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಅನ್ವಯ ಆಗುತ್ತದೆ. ಇದಕ್ಕೆ 2005ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅನ್ವಯ ಆಸ್ತಿ ಹೇಗೆ ಪಾಲಾಗುತ್ತದೆ, ಅಪ್ಪ ಆಸ್ತಿ ಕೊಡದಿದ್ದರೆ ಏನಾಗುತ್ತದೆ ಎನ್ನುವುದನ್ನು ನೋಡುವುದಾದರೆ: ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ, ಆಸ್ತಿಯಲ್ಲಿ ಎರಡು ಭಾಗ ಇದೆ. ಒಂದು ಅಪ್ಪ ತಾನೇ ದುಡಿದಿರುವ ಆಸ್ತಿ, ಸಂಪತ್ತು, ಇನ್ನೊಂದು ಅವರ ಹಿರಿಯರಿಂದ ಬಂದಿರುವ ಆಸ್ತಿ ಅರ್ಥಾತ್​ ಅಪ್ಪನ ಪಿತ್ರಾರ್ಜಿತ ಆಸ್ತಿ. ಕಾನೂನಿನ ಅನ್ವಯ ಈ ಎರಡೂ ಆಸ್ತಿಗಳಿಗೆ ಬೇರೆ ಬೇರೆ ರೀತಿಯ ನಿಯಮಗಳು ಇವೆ. 

ಮಾವನ ಆಸ್ತಿಯಲ್ಲಿ ಅಳಿಯನಿಗೂ ಪಾಲಿದ್ಯಾ? ಹೈಕೋರ್ಟ್​ ನೀಡಿರುವ ಮಹತ್ವದ ತೀರ್ಪೇನು? ಇಲ್ಲಿದೆ ಡಿಟೇಲ್ಸ್​

 ಅಪ್ಪನ ಸ್ವಯಂ ಆಸ್ತಿ ಆಗಿದ್ದರೆ: ಅಪ್ಪನ ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ, ಸಂಪತ್ತಿಗೆ ಅಪ್ಪನೇ ನೇರ ಹೊಣೆ. ಅದಕ್ಕೆ ಆತನೇ ನಾಯಕ. ಆದ್ದರಿಂದ ಆ ಆಸ್ತಿಯನ್ನು ಆತ ಯಾರಿಗೆ ಬೇಕಾದರೂ ಕೊಡಬಹುದು. ಒಬ್ಬನೇ ಮಗನಿಗೆ ಕೊಡಬಹುದು, ಮಗಳಿಗೆ ಕೊಡಬಹುದು, ಎಲ್ಲಾ ಮಕ್ಕಳಿಗೂ ಸಮನಾಗಿ ಹಂಚಬಹುದು ಇಲ್ಲವೇ ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದರೆ ಆತ ಅದನ್ನು ತನ್ನಿಷ್ಟ ಬಂದವರಿಗೆ ಉಡುಗೊರೆ ರೂಪದಲ್ಲಿ ಕೊಡಬಹುದು. ಇದರ ಬಗ್ಗೆ ಮಕ್ಕಳು ಕಂ ಕಿಂ ಅನ್ನುವಂತಿಲ್ಲ. ಆದರೆ, ಹೀಗೆ ಮಾಡಬೇಕಾದರೆ ಆತ ಅದಕ್ಕೆ ವಿಲ್​ ಬರೆದು ಇಡಬೇಕಾಗುತ್ತದೆ. ನನ್ನ ಸ್ವಯಂ ಸಂಪಾದನೆಯ ಆಸ್ತಿ ಇಷ್ಟು ಇದ್ದು, ಇದು ಇವರಿಗೆ ಸಲ್ಲಬೇಕು ಎಂದು ಬರೆಯಬೇಕಾಗುತ್ತದೆ. ಒಂದು ವೇಳೆ ಸ್ವಯಂ ಆಸ್ತಿ ಇದ್ದು, ವಿಲ್​ ಬರೆಯದೇ ಅಪ್ಪ ತೀರಿಕೊಂಡರೆ, ಆಗ ಆ ಆಸ್ತಿಯ ವರ್ಗ I ವಾರಸುದಾರರಿಗೆ ಸಮನಾಗಿ ಹಂಚಿಕೆಯಾಗುತ್ತದೆ. ವರ್ಗ I ವಾರಸುದಾರು ಎಂದರೆ ಆತನ ಪತ್ನಿ, ಮಕ್ಕಳು (ಗಂಡ ಮತ್ತು ಹೆಣ್ಣು ಮಕ್ಕಳು ಇಬ್ಬರೂ) ಹಾಗೂ ತಾಯಿ. ಇವರಿಗೆಲ್ಲವೂ ಸಮನಾಗಿ ಹಂಚಿಕೆಯಾಗುತ್ತದೆ. 

ಪಿತ್ರಾರ್ಜಿತ ಆಸ್ತಿ ಯಾರಿಗೆ ಸೇರುತ್ತದೆ?; ಒಂದು ವೇಳೆ ಅಪ್ಪನಿಗೆ ಅವರ ಹಿರಿಯರಿಂದ ಬಂದಿರುವ ಆಸ್ತಿಯಾಗಿದ್ದರೆ ಅಂದ್ರೆ ಪಿತ್ರಾರ್ಜಿತ ಆಸ್ತಿ ಆಗಿದ್ದರೆ, ಮಕ್ಕಳು ಹುಟ್ಟಿದಾಗಲೇ ಅದಕ್ಕೆ ಸಮನಾಗಿ ಅರ್ಹರಾಗಿರುತ್ತಾರೆ. ಅಂದರೆ ಗಂಡು- ಹೆಣ್ಣು ಭೇದವಿಲ್ಲದೇ ಎಲ್ಲಾ ಮಕ್ಕಳಿಗೂ ಇದು ಸಮನಾಗಿ ಹಂಚಿಕೆ ಆಗಬೇಕು. ಆಗ ತಂದೆಗೆ ಇದರ ಮೇಲೆ ಹಕ್ಕು ಇರುವುದಿಲ್ಲ. ಇದಕ್ಕೆ ಅರ್ಹರಾಗಿರುವ ಮಕ್ಕಳ ಅನುಮತಿ ಇಲ್ಲದೇ ಪಿತ್ರಾರ್ಜಿತ ಆಸ್ತಿಯನ್ನು ತನ್ನಿಷ್ಟದಂತೆ ನೀಡಲು ಅಪ್ಪನಿಗೆ ಹಕ್ಕು ಇರುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಮಕ್ಕಳು ಕಾನೂನಿನ ಮೂಲಕ ಆಸ್ತಿಯ ಭಾಗ ಕೇಳುವ ಅಧಿಕಾರ ಇದೆ.

ವಕ್ಫ್​ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್​ಸ್ಟ್ರೋಕ್​? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು