Viral Video: ಫೋಟೊ ಕ್ಲಿಕ್ಕಿಸಿ ವೈರಲ್ಲಾದ ಹಿರಿಯ ದಂಪತಿ
ಫೋಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು ಯುವಜೋಡಿಯ ಸಾಮಾನ್ಯ ಹವ್ಯಾಸ. ಆದರೆ, ಇದೀಗ ಹಿರಿಯ ದಂಪತಿಗಳ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಇದರಲ್ಲಿ ಹಿರಿಯರ ನೈಜ ಪ್ರೀತಿ, ಕಾಳಜಿ ಎದ್ದು ಕಾಣುತ್ತದೆ.
ಹೋದಲ್ಲೆಲ್ಲ ಸೆಲ್ಫಿ, ಫೋಟೊ ಎಂದು ಮುಗಿಬೀಳುತ್ತಾರೆ ಎನ್ನುವ ಟೀಕೆ ಯುವಜನತೆಗೆ ಸಾಮಾನ್ಯ. ಜೀವನದಲ್ಲಿ ಅಮೂಲ್ಯವೆನಿಸಿದ ಎಲ್ಲ ಕ್ಷಣಗಳನ್ನೂ ಸೆರೆ ಹಿಡಿದು ದಾಖಲಿಸುವುದು ಅವರಿಗೆ ಇಷ್ಟ. ಹೀಗಾಗಿ, ಹೋದಲ್ಲಿ ಬಂದಲ್ಲಿ ಫೋಟೊ ಕ್ಲಿಕ್ಕಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೊ ಅಪ್ ಲೋಡ್ ಮಾಡಿ “ರಿಲೇಷನ್ ಶಿಪ್ ಚಾಲೆಂಜ್’ ನೀಡುವುದು ಆಗೀಗ ಟ್ರೆಂಡ್ ಆಗಿ ಕಾಣಿಸುತ್ತದೆ. ಪ್ರವಾಸಗೈದ, ಕುಟುಂಬಸ್ಥರ ಜತೆಗಿರುವ ಎಲ್ಲ ಫೋಟೊಗಳು ಜಾಲತಾಣಗಳಲ್ಲಿ ರಾರಾಜಿಸುತ್ತವೆ. ಆದರೆ, ಏನೇ ಹೇಳಿದರೂ ಸಂಬಂಧಗಳನ್ನು ನಿಭಾಯಿಸುವ ವಿಚಾರದಲ್ಲಿ ಯುವಜನತೆಗೆ ಮಾರ್ಕ್ಸ್ ಕಡಿಮೆಯೇ! ಸಂಗಾತಿಯನ್ನು ಹೊಂದುವುದು ಸುಲಭ. ಆದರೆ, ಆ ಸಂಗಾತಿಯೊಂದಿಗೆ ಸಂಬಂಧವನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಕಷ್ಟ. ಇಂದಿನ ಯುವಜನತೆ ಈ ಅಂಶದಲ್ಲಿ ತಮ್ಮ ಹಿರಿಯರಿಂದ ಕಲಿಯುವುದು ಸಾಕಷ್ಟಿದೆ. ಅದಿರಲಿ, ಅದು ಬೇರೆಯದೇ ಆದ ಸಂಗತಿ. ಈಗ್ಯಾಕೆ ಈ ವಿಚಾರ ಬಂತೆಂದರೆ, ಇಲ್ಲೊಂದು ಹಿರಿಯ ದಂಪತಿಯ ವಿಡಿಯೋವೊಂದು ದೀರ್ಘಕಾಲದ ಸಾಂಗತ್ಯವನ್ನು ತಿಳಿಸುತ್ತದೆ. ಈ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು, ಹಿರಿಯ ದಂಪತಿ “ರಿಲೇಷನ್ ಶಿಪ್ ಚಾಲೆಂಜ್’ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆಪ್ತ ಸಂಬಂಧ (Relation): ಈ ಹಿರಿಯ ದಂಪತಿಯೇನೂ (Couple) ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ಫೋಟೊ (Photo) ಅಪ್ ಲೋಡ್ (Upload) ಮಾಡಿಲ್ಲ. ಯಾವುದೋ ಸಿಸಿ ಕ್ಯಾಮರಾದಿಂದ ಚಿತ್ರಿಸಲಾಗಿದೆ ಎಂಬಂತೆ ಕಂಡುಬರುವ ವಿಡಿಯೋ ಇದು. ಇದರಲ್ಲಿರುವ ದಂಪತಿಯ ಸಂಬಂಧ ಎಷ್ಟು ಆಪ್ತವಾಗಿದೆ (Intimacy) ಎನ್ನುವುದನ್ನು ಇದು ವ್ಯಕ್ತಪಡಿಸುತ್ತದೆ.
ವೃದ್ಧಾಪ್ಯದ ಒಂಟಿತನ ಬಲ್ಲಿರಾ? ಅದನ್ನ ನಿವಾರಿಸುವ 'ಗುಡ್ ಫೆಲೋಸ್'ಗೆ ರತನ್ ಟಾಟಾ ಬೆನ್ನೆಲುಬು
ವಿಡಿಯೋದ ಆರಂಭದಲ್ಲಿ ಮೊದಲು ಹಿರಿಯರೊಬ್ಬರು (Elder) ಸ್ಕೂಟರ್ ನಲ್ಲಿ ಕುಳಿತುಕೊಂಡು ಮೊಬೈಲ್ ನಲ್ಲಿ (Mobile) ಯಾರದ್ದೋ ಫೋಟೊ ಕ್ಲಿಕ್ ಮಾಡುತ್ತಿರುವಂತೆ ಕಂಡುಬರುತ್ತದೆ. ಬಳಿಕ, ವಿಡಿಯೋ ಮುಂದುವರಿದಂತೆ ಆ ಹಿರಿಯರು ತಮ್ಮ ಪತ್ನಿಯ (Wife) ಫೋಟೊ ತೆಗೆಯುತ್ತಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಆಕೆ ಮಾಲ್ (Mall) ಒಂದರ ಎದುರು ಕುಳಿತಿದ್ದಾರೆ. ಗಂಡ ಫೋಟೊ ತೆಗೆಯುತ್ತಿರುವುದರಿಂದ ಪೋಸ್ (Pose) ನೀಡುತ್ತಿದ್ದಾರೆ.
ನೈಜ ಪ್ರೀತಿ (True Love): ಫೋಟೊ ಸೆಷನ್ ಮುಗಿದ ಬಳಿಕ ಮಹಿಳೆ ಎದ್ದು ನಿಲ್ಲುತ್ತಾಳೆ. ಇಬ್ಬರೂ ಸೇರಿ ಸ್ಕೂಟರ್ ಮೇಲೆ ಕುಳಿತುಕೊಂಡು ಆ ಸ್ಥಳದಿಂದ ನಿರ್ಗಮಿಸುತ್ತಾರೆ. ಇಡೀ ವಿಡಿಯೋದಲ್ಲಿ ಆ ಹಿರಿಯರಿಬ್ಬರ ವರ್ತನೆ ಎಷ್ಟು ಸಹಜವಾಗಿ ಮೂಡಿ ಬಂದಿದೆ ಎಂದರೆ, ಎಲ್ಲಿಯೂ ಕೃತಕ ಎನಿಸುವುದಿಲ್ಲ. ಏಕೆಂದರೆ, ಅವರು ಬೇರೊಬ್ಬರು ವೀಕ್ಷಣೆ ಮಾಡಲಿ ಎಂದು ಮಾಡಿರುವ ಕೃತ್ಯ ಇದಲ್ಲ.
ಮರೆವು ಹೆಚ್ಚಾಗ್ತಾ ಇದೆಯಾ? ಡೆಮೆನ್ಷಿಯಾ ಬಗ್ಗೆ ಹೊಸ ಸ್ಟಡಿ ಏನನ್ನುತ್ತೆ?
ಈಗಾಗಲೇ 7 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ನೂರಾರು ಮಂದಿ ಶೇರ್ ಮಾಡಿದ್ದಾರೆ. ನೆಟ್ಟಿಗರ ಗಮನ ಸೆಳೆದಿರುವ ಈ ವಿಡಿಯೋ ಹಿರಿಯ ದಂಪತಿಗಳ ನೈಜವಾದ ಪ್ರೀತಿ ತೋರುತ್ತದೆ ಎಂದು ವಿವರಣೆ ನೀಡಲಾಗಿದೆ.