ಮನೆ ಕೆಲಸದವರು ದೀರ್ಘ ಸಮಯ ಉಳಿಯಲ್ವಾ? ಈ ಟಿಪ್ಸ್ ಬಳಸಿ

ಮನೆ ಕೆಲಸದವರನ್ನು ನಾವು ಹೇಗೆ ನೋಡಿಕೊಳ್ತೇವೆ ಎನ್ನುವುದು ಮುಖ್ಯ. ನಮ್ಮ ಕ್ರಿಯೆಗೆ ಅವರ ಪ್ರತಿಕ್ರಿಯೆಯಿರುತ್ತದೆ. ಪದೇ ಪದೇ ಕೆಲಸದವರು ನಿಮ್ಮ ಮನೆ ಬಿಡ್ತಿದ್ದಾರೆ ಅಂದ್ರೆ ತಪ್ಪು ನಿಮ್ಮಲ್ಲೇ ಇದೆ ಎಂದರ್ಥ. ಹೀಗಿದ್ದಾಗ ಏನು ಮಾಡ್ಬೇಕು ಗೊತ್ತಾ?  
 

Know About Maid Common Problem And How To Solve It

ನಗರಗಳಲ್ಲಾಗಲೀ ಹಳ್ಳಿಯಲ್ಲಾಗಲೀ ಕೆಲಸದವರ ಸಮಸ್ಯೆ ಬಹಳ ಇದೆ. ಮತ್ತೆ ಮತ್ತೆ ಕೈ ಕೊಡುವ ಕೆಲಸದವರಿಂದ ಯಾವ ಕೆಲಸವೂ ಸಂಪೂರ್ಣವಾಗುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಕೆಲಸದವರ ಅವಶ್ಯಕತೆ ತೀವ್ರವಾಗಿದೆ. ಮಹಿಳೆಯರು ಉದ್ಯೋಗಕ್ಕೆ ಹೋಗುವುದರಿಂದ ಅವರಿಗೆ ಮನೆ ಕೆಲಸಕ್ಕೆ ಒಬ್ಬರ ಅಗತ್ಯವಿರುತ್ತದೆ. ನೆಲ ಒರೆಸಲು, ಪಾತ್ರ ತೊಳೆಯಲು, ಬಟ್ಟೆ ತೊಳೆಯಲು, ಅಡಿಗೆ ಮಾಡಲು,  ಪುಟ್ಟ ಮಗುವನ್ನು ನೋಡಿಕೊಳ್ಳಲು ಹೀಗೆ ಎಲ್ಲದಕ್ಕೂ ಕೆಲಸದವರು ಬೇಕಾಗುತ್ತಾರೆ. ಹಾಗಾಗಿ ಕೆಲಸದವರೂ ಕೂಡ ಮನೆಯ ಅವಶ್ಯಕತೆಯಲ್ಲೇ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗೆ ಮನೆ (Home) ಕೆಲಸದವರ ಕೊರತೆ ಹೆಚ್ಚುತ್ತಿದೆ. ಯಾರೋ ಒಬ್ಬರು ಕೆಲಸಕ್ಕೆ ಸಿಕ್ಕರೂ ಅವರು ಬಹಳ ದಿನಗಳತನಕ ಒಂದೆಡೆ ನಿಲ್ಲುವುದಿಲ್ಲ. ಮನೆ ಕೆಲಸದವರು ಹೀಗೆ ಕೆಲಸ ತೊರೆದರೆ ಮನೆಯ ಕೆಲಸಗಳು ಯಾವುದೂ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ. ಉದ್ಯೋಗಸ್ಥ ಮಹಿಳೆಯರಿಗಂತೂ ಕೆಲಸದವಳು ಇಲ್ಲವೆಂದರೆ ಬಹಳ ತೊಂದರೆಯಾಗುತ್ತದೆ. ಅವರ ಬಿಡುವಿಲ್ಲದ ಕೆಲಸದ ಮಧ್ಯೆ ಮನೆ ಕೆಲಸವನ್ನೂ ಮುಗಿಸಿ ಕಚೇರಿ (Office) ಗೆ ತೆರಳುವುದು ಸುಲಭದ ಮಾತಲ್ಲ. ಮನೆ ಕೆಲಸದವರು ನಮ್ಮ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗದೇ ಇರಲು ಏನು ಮಾಡಬೇಕೆನ್ನುವ ಸಲಹೆಗಳು ಇಲ್ಲಿವೆ.

ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!

ಕೆಲಸದವರ ಜೊತೆ ಚೆನ್ನಾಗಿ ಮಾತನಾಡಿ : ಬಹಳ ಮಂದಿ ಕೆಲಸದವರ ಜೊತೆ ಮಾತನಾಡುವ ರೀತಿಯೇ ಬೇರೆಯಾಗಿರುತ್ತದೆ. ನಾವು ಅವರಿಗೆ ದುಡ್ಡು ಕೊಡುತ್ತೇವೆ, ಅವರು ನಮ್ಮ ಅಧೀನದಲ್ಲಿದ್ದಾರೆ ಎನ್ನುವ ಭಾವನೆ ನಮ್ಮಲ್ಲಿರುತ್ತದೆ. ಮನೆಯ ಯಜಮಾನನ ಇಂತಹ ನಡವಳಿಕೆಯೇ ಯಜಮಾನ ಮತ್ತು ಕೆಲಸದವರ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ನಾವು ಅವರಿಗೆ ಹಣ (Money) ಕೊಟ್ಟರೂ ಅದರ ಬದಲಾಗಿ ಅವರಿಂದ ಕೆಲಸ ಪಡೆದಿರುತ್ತೇವೆ. ಹಾಗಾಗಿ ನಾವು ಕೆಲಸದವರ ಬಳಿ ಚೆನ್ನಾಗಿ ಮಾತನಾಡಿದರೆ ಅವರು ಕೂಡ ನಮಗೆ ಗೌರವ ನೀಡಿ ಮನೆಯ ಕೆಲಸಗಳನ್ನು ಕೂಡ ಸರಿಯಾಗಿ ಮಾಡುತ್ತಾರೆ. ಆಗ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ಅವಶ್ಯಕತೆ ಇದ್ದಾಗ ಹಣದ ಸಹಾಯ ಮಾಡಿ : ಜೀವನದಲ್ಲಿ ಎಲ್ಲರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ತುರ್ತು ಪರಿಸ್ಥತಿಗಳಲ್ಲಿ ಹಣದ ಕೊರತೆಯಾಗುತ್ತದೆ. ಇಂತಹ ಪರಿಸ್ಥಿತಿ ನಿಮ್ಮ ಮನೆ ಕೆಲಸದವರಿಗೂ ಬಂದರೆ ಖಂಡಿತವಾಗಿಯೂ ಸಹಾಯಮಾಡಿ. ಅವರ ವೇತನದ ಸ್ವಲ್ಪ ಭಾಗವನ್ನು ಅಡ್ವಾನ್ಸ್ ರೂಪದಲ್ಲಿ ನೀಡಿದರೆ ಅವರು ನಿಮ್ಮ ಉಪಕಾರವನ್ನು ಮರೆಯುವುದಿಲ್ಲ ಹಾಗೂ ನೀವು ಹೇಳಿದ ಕೆಲಸಕ್ಕೆ ಅವರು ಇಲ್ಲ ಎನ್ನುವುದಿಲ್ಲ. ನೀವು ಮಾಡಿದ ಸಹಾಯದಿಂದ ಅವರು ಕೂಡ ನಿಮ್ಮ ಜೊತೆ ಹೊಂದಿಕೊಂಡು ಹೋಗುತ್ತಾರೆ.

Real Story : ಮೋಸ ಮಾಡಿದ ಪತಿ ಸುಧಾರಿಸಿಕೊಳ್ತಿದ್ದಾನೆ… ಆದ್ರೆ ನಂಬೋದು ಹೇಗೆ?

ವೇಳಾಪಟ್ಟಿಯ ಪ್ರಕಾರವೇ ಕೆಲಸ ಮಾಡಿಸಿ : ಮನೆಯಲ್ಲಿ ಕೆಲಸದವರು ಇದ್ದರೆಂದರೆ ಎಲ್ಲ ಕೆಲಸದ ಜವಾಬ್ದಾರಿಯನ್ನೂ ಅವಳ ಮೇಲೆ ಹೊರಿಸುವುದು ಸರಿಯಲ್ಲ. ನಾವು ಅವಳಿಗೆ ಮೊದಲಿನಿಂದಲೂ ಯಾವ ಕೆಲಸದ ಜವಾಬ್ದಾರಿಯನ್ನು ಕೊಟ್ಟಿದ್ದೇವೆಯೋ ಅಷ್ಟೇ ಕೆಲಸವನ್ನು ಅವಳ ಬಳಿ ಮಾಡಿಸಬೇಕು. ಅದಕ್ಕೂ ಹೆಚ್ಚಿನ ಕೆಲಸವನ್ನು ನಾವು ಹೇಳಿದಾಗ ಅವರು ಕೋಪಗೊಂಡು ಸಿಡುಕುವ ಸಾಧ್ಯತೆ ಇರುತ್ತದೆ. ಜೊತೆಗೆ ಕಿರಿಕಿರಿಯ ಕಾರಣಕ್ಕೆ ಕೆಲಸ ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗೊಮ್ಮೆ ನಿಮಗೆ ಎಕ್ಸಟ್ರಾ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದಾಗ ಮುಂಚಿತವಾಗಿಯೇ ಅದರ ಬಗ್ಗೆ ಅವರ ಬಳಿ ಚರ್ಚಿಸಿ.

ಸರಿಯಾದ ಸೂಚನೆ ನೀಡಿ : ಕೆಲಸ ಮಾಡುವ ಶೈಲಿ ಒಂದು ಮನೆಯಿಂದ ಇನ್ನೊಂದು ಮನೆಯಲ್ಲಿ ಭಿನ್ನವಾಗಿರುತ್ತದೆ. ಹಾಗಾಗಿ ಆರಂಭದಲ್ಲಿ ಕೆಲಸದವಳು ನಿಮ್ಮ ಮನೆಗೆ ಬಂದಾಗ ನಿಮ್ಮ ಮನೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು, ರೂಮ್ ಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ನಿಮ್ಮ ಮನೆಯ ರುಟಿನ್ ವರ್ಕ್ ಅನ್ನು ಕೆಲಸದವಳಿಗೆ ಸರಿಯಾಗಿ ತಿಳಿಸಿಕೊಡಿ. ಆರಂಭದ ನಾಲ್ಕೈದು ದಿನ ನೀವು ಸರಿಯಾಗಿ ಸೂಚನೆ ಕೊಟ್ಟರೆ ನಂತರ ಅದೇ ರೀತಿಯ ಕೆಲಸವನ್ನು ಅವರು ಮುಂದೆವರೆಸುತ್ತಾರೆ.

Latest Videos
Follow Us:
Download App:
  • android
  • ios