ಯಾದಗಿರಿಯಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ ಬಲರಾಮ 16 ವರ್ಷದ ಬಾಲಕಿಯನ್ನು ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಗರ್ಭಿಣಿಯಾದಾಗ ಅಬಾರ್ಷನ್ ಮಾಡಿಸಿ, ಬಳಿಕ ತಾಳಿ ಕಟ್ಟಿದ್ದಾನೆ. ಮನೆಯವರು ವಿರೋಧಿಸಿದ್ದರಿಂದ ಆಕೆಯನ್ನು ಬೀದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಲರಾಮ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಯಾದಗಿರಿ (ಏ.09): ಸಮಾಜದ ಸ್ವಾಸ್ಥ್ಯ ಕಾಪಾಡುವುದಾಗಿ ಪೊಲೀಸ್ ಇಲಾಖೆ ಸೇರಿದ ಪೊಲೀಸ್ ಕಾನ್ಸ್‌ಸ್ಟೇಬಲ್ 16 ವರ್ಷದ ಬಾಲಕಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಗರ್ಭಿಣಿ ಆದಾಗ ಹಲವು ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದು, ನೆಪ ಮಾತ್ರಕ್ಕೆ ತಾಳಿ ಕಟ್ಟಿ ಮನೆಗೆ ಕರೆದೊಯ್ದಿದ್ದಾನೆ. ಆತನ ಮನೆಯವರು ವಿರೋಧ ಮಾಡುತ್ತಿದ್ದಂತೆ ಬಾಲಕಿಯನ್ನು ನಡು ರಸ್ತೆಯಲ್ಲಿ ಕೈಬಿಟ್ಟು ಪರಾರಿ ಆಗಿದ್ದಾನೆ.

ಕಾಯಾ, ವಾಚಾ, ಮನಸಾ ಹಾಗೂ ಸಂವಿಧಾನದ ಮೇಲೆ ಪ್ರಮಾಣ ಮಾಡಿ ರಾಷ್ಟ್ರ, ರಾಜ್ಯ ಹಾಗೂ ಸಮಾಜದ ಸೌಖ್ಯ ಕಾಪಾಡುವುದಾಗಿ ಪೊಲೀಸ್ ಹುದ್ದೆಗೆ ಸೇರಿದ್ದ ಪೊಲೀಸಪ್ಪ, ಕಾನೂನಿಗೆ ವಿರುದ್ಧವಾಗಿ 16 ವರ್ಷದ ಬಾಲಕಿಯೊಂದಿಗೆ ಲವ್ವಿ-ಡವ್ವಿ ಹೆಸರಿನಲ್ಲಿ ತನು-ಮನವನ್ನೂ ಅನುಭವಿಸಿದ್ದಾನೆ. ಬಾಲಕಿ ಗರ್ಭಿಣಿ ಆದಾಯ ಮಾತ್ರೆ ನುಂಗಿಸಿ ಅಬಾರ್ಷನ್ ಮಾಡಿಸಿದ್ದಾನೆ. 18 ವರ್ಷ ಆಗುತ್ತಿದ್ದಂತೆ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದು, ಇದೀಗ ಮನೆಯವರು ಒಪ್ಪುತ್ತಿಲ್ಲವೆಂದು ನಡುಬೀದಿಯಲ್ಲಿ ಕೈಬಿಟ್ಟಿದ್ದಾನೆ. ಇದೀಗ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸಪ್ಪನ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೆ ಪ್ರೀತಿಯ ನಾಟಕವಾಡಿ ಎರಡು ವರ್ಷ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸೈದಾಪುರ ಪೊಲೀಸ್ ಠಾಣೆ ಪೇದೆ ಬಲರಾಮ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಆಗಿದ್ದಾನೆ. ಹೈಸ್ಕೂಲ್‌ಗೆ ಹೋಗುತ್ತಿದ್ದ ಬಾಲಕಿ ಬುಟ್ಟಿಗೆ ಕೆಡವಿಕೊಂಡಿದ್ದ ಪೇದೆ ಬಲರಾಮ, ಬಳಿಕ ಆಕೆಯೊಂದಿಗೆ 2 ವರ್ಷ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದರಿಂದ ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದಳು. ಗರ್ಭಿಣಿ ಆಗಿದ್ದ ಬಾಲಕಿಗೆ ಟ್ಯಾಬ್ಲೆಟ್ ಕೊಟ್ಟು, ಮಗುವನ್ನು ಅಬಾರ್ಷನ್ ಮಾಡಿ ತೆಗೆಸಿದ್ದನು.

ಇದನ್ನೂ ಓದಿ: 13 ವರ್ಷದ ಸಂಸಾರ ಬಿಟ್ಟು Instagram ಲವರ್ ಜೊತೆ ಜೂಟ್! ಗಂಡ-ಮಕ್ಕಳು ಬೇಡ ಬಟ್ಟೆಗಾಗಿ ವಾಪಸ್ ಬಂದ ಹೆಂಡ್ತಿ!

ಇದಾದ ನಂತರ ಡಿಸೆಂಬರ್ 2024ರಲ್ಲಿ ಬಾಲಕಿಯೊಂದಿಗೆ ಬಲರಾಮ ರಿಜಿಸ್ಟರ್ ‌ಮ್ಯಾರೇಜ್ ಆಗಿದ್ದನು. ಬಾಲಕಿಗೆ 18 ವರ್ಷ ತುಂಬುತ್ತಿದ್ದಂತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. ಮದುವೆಯಾದ ಬಳಿಕ ಬಾಲಕಿಯನ್ನ ಮನೆಗೆ ಸೇರಿಸಿಕೊಳ್ಳಲು ಪೇದೆ ಕುಟುಂಬ ನಿರಾಕರಣೆ ಮಾಡಲಾಗಿದೆ. ಹೀಗಾಗಿ ನೀನು ಏನಾದರೂ ಮಾಡ್ಕೋ ನಿನಗೂ, ನನಗೂ ಸಂಬಂಧವಿಲ್ಲ ಎಂದು ಬಾಲಕಿಯನ್ನು ನಿರಾಕರಣೆ ಮಾಡಿದ್ದಾನೆ. ಇದೀಗ ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ, ಪೇದೆ ಬಲರಾಮ ವಿರುದ್ಧ ಬಾಲಕಿ ಪೋಷಕರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪೊಕ್ಸೋ ಕೇಸ್ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಕಿತ್ತುತಿನ್ನುವ ಬಡತನದಲ್ಲೂ ಪಾರ್ಟ್‌ಟೈಮ್ ಕೆಲಸ ಮಾಡಿ ಪಿಯುಸಿಯಲ್ಲಿ 6ನೇ ರ್ಯಾಂಕ್‌ ಗಳಿಸಿದ ನಾಗವೇಣಿ!