ಚಿಕ್ಕಮಗಳೂರು(ಎ.03): ಹರೆಯದಲ್ಲಿ ಹುಟ್ಟೋ ಪ್ರೀತಿ ಆಕರ್ಷಣೆಯಾಗಿ ಕೊನೆಗೊಳ್ಳುವುದೇ ಹೆಚ್ಚು. ಇಲ್ಲೊಂದು ಜೋಡಿ 10ನೇ ತರಗತಿಯಲ್ಲಿದ್ದಾಗಲೇ ಪರಸ್ಪರ ಪ್ರೀತಿಸಲಾರಂಭಿಸಿ ಈಗ ಮದುವೆಯಾಗಿದ್ದಾರೆ.

ಇದು ವಿಶೇಷವೇನಲ್ಲ ಬಿಡಿ. ಹೈಸ್ಕೂಲ್ ಪ್ರೀತಿಯನ್ನೇ ಜೀವನ ಸಂಗಾತಿಯಾಗಿ ಪಡೆದ ಭಾಗ್ಯವಂತರು ಬಹಳಷ್ಟಿರುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಮುದ್ದಾಗಿ ತನ್ನ ಮುಂದೆ ಓಡಾಡಿಕೊಂಡಿದ್ದ ತನ್ನ ಹುಡುಗಿ ಕಾಲಿನ ಸ್ವಾಧೀನ ಕಳೆದುಕೊಂಡು ವೀಲ್‌ಚೇರ್‌ನಲ್ಲಿ ಕೂರುವಂತಾಗುವನ್ನೂ ನೋಡಿದ್ದಾನೆ ಈ ಪ್ರೇಮಿ.

ಮರಿ ಜೊತೆ ರಸ್ತೆ ದಾಟಲು ಹರಸಾಹಸ ಪಟ್ಟ ತಾಯಿ ಕರಡಿ: ವಿಡೀಯೋ ವೈರಲ್!

ಚಿಕ್ಕಮಗಳೂರಿನ ಮನು ಮತ್ತು ಸ್ವಪ್ನಾ ಕಷ್ಟ ಸುಖದಲ್ಲೂ ಜೊತೆಯಾಗೋ ಮಾತನ್ನು ನಿಭಾಯಿಸಿ ತೋರಿಸಿದ್ದಾರೆ. ವಿವಾಹದ ಮೂಲಕ ಈ ಮಾತನ್ನು ಉಳಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಸ್ವಪ್ನಾ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ವೀಲ್‌ಚೇರ್ ಸೇರಿದಾಗ ಆಕೆಯನ್ನೂ, ಆಕೆಯ ಮನೆಯವರನ್ನೂ ಒಪ್ಪಿಸಿ ಆಕೆಯನ್ನು ವಿವಾಹವಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಮುಂದೆ ಬಂದಿದ್ದಾನೆ ಆಕೆಯ ಪ್ರೇಮಿ.

ಮನು ಮತ್ತು ಸ್ವಪ್ನಾ (21) 6 ವರ್ಷದ ಹಿಂದೆ 10ನೇ ತರಗತಿಯಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ಪಿಯುಸಿ ಮುಗಿಸಿ ವಿದ್ಯಾಭ್ಯಾಸ ನಿಲ್ಲಿಸಿದ ಮನು ಹಾರ್ಡ್‌ವೇರ್ ಶಾಪ್‌ನಲ್ಲಿ ಕೆಲಸ ಮಾಡಲಾರಂಭಿಸಿದ್ದ. ಇತ್ತ ಸ್ವಪ್ನಾ ಪಿಯುಸಿ ಮುಗಿಸಿ ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದಳು.

ಪ್ರೀತಿ ಹೇಳು ಮಾತೇ ಬೇಕಿಲ್ಲ... ಒಂದು ಕಿರು ನೋಟ, ನಗು, ಸ್ಪರ್ಶವೂ ಸಾಕು

ಎರಡು ವರ್ಷದ ಹಿಂದಿನ ಘಟನೆ ಆಕೆಯ ಬದುಕು ಬದಲಾಯಿಸಿತ್ತು. ನೆಲಕ್ಕೆ ಬಿದ್ದ ಆಕೆ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಳು. ಮನು ತನ್ನನ್ನು ಇಷ್ಟಪಡಲಾರ, ಈ ಪ್ರೀತಿ ಮುಗಿಯಿತು ಎಂದುಕೊಂಡಿದ್ದಾಕೆಗೆ ಬದುಕು ಕೊಟ್ಟಿದ್ದಾನೆ ಮನು.

ನಮ್ಮಲ್ಲಿ ಜಾತಿಯ ಸಮಸ್ಯೆಯೂ ಇತ್ತು. ಎರಡೂ ಕುಟುಂಬ ಮಲ್ನಾಡ್ ನಗರದ ಹೊರಭಾದ ಭಕ್ತರಹಳ್ಳಿ ಒಂದೇ ಗ್ರಾಮದಲ್ಲಿದ್ದರೂ, ಮನು ಕೊನೆಗೆ ಸ್ವಪ್ನಾಳ ಕಾಳಜಿ ವಹಿಸಲು ಕೆಲಸವನ್ನೂ ತೊರೆದ. ಸ್ವಪ್ನಾ ಪೋಷಕರೂ ದಿನಗೂಲಿ ಕೆಲಸಗಾರರಾಗಿದ್ದಾರೆ.

ದುಃಖಿಯಾಗಿಯೇ ಇರುತ್ತೇನೆಂದು ಹಠವೇಕೆ? ಸದಾ ಸುಖಿಯಾಗಿರೋದು ನಮ್ಮ ಕೈಯಲ್ಲೇ ಇದೆ!

ಆಕೆಯ ಕಾಲುಗಳ ಸ್ವಾಧೀನ ಮತ್ತೆ ಮರಳಿಸಲು ಸಾಧ್ಯವಾಗದ ಕಾರಣ ನಾನೇ ಆಕೆಯ ಜೊತೆಗಿದ್ದು ನೋಡಿಕೊಳ್ಳುತ್ತೇನೆ. ಭಕ್ತರ ಹಳ್ಳಿಯಲ್ಲಿ ಇತ್ತೀಚೆಗಷ್ಟೇ ಇವರ ವಿವಾಹ ನಡೆದಿದೆ.