ಮದ್ವೆ ಅಂದ್ರೆ ವ್ಯವಹಾರವಲ್ಲ, ಬೇಕೆಂದಾಗ ಸಿಗಲು ಅಂಗಡಿಯಲ್ಲಿಲ್ಲ ಡಿವೋರ್ಸ್: ಜಡ್ಜ್

ಕೋರ್ಟ್ ಮುಂದೆ ಡಿವೋರ್ಸ್ ಕೇಸ್ ಒಂದು ಜನರ ಗಮನ ಸೆಳೆದಿದೆ. ಅದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿ ಡಿವೋರ್ಸ್ ಗೆ ಪಟ್ಟು ಹಿಡಿದ್ರೆ, ಜಡ್ಜ್ ಅವರ ಮಧ್ಯೆ ಹೊಂದಾಣಿಕೆ ನಡೆಸೋ ಪ್ರಯತ್ನ ಮಾಡಿ ಕೊನೆಗೂ ಕೈಚೆಲ್ಲಿದ್ದಾರೆ. ಮುಂದೆನಾಯ್ತು ಎಂಬ ವಿವರ ಇಲ್ಲಿದೆ. 
 

Judge gives a lesson to couple who wants divorce roo

ಹೆಂಡ್ತಿ ಕೈ ಕೊಯ್ಕೊಂಡಿದ್ಲು, ಮನೆ ಮೇಲ್ ನಿಂತು ಹಾರ್ತೆನೆ ಅಂತಾಳೆ.. ಸಂಸಾರ ಸಾಕಾಯ್ತು ಸರ್, ಡಿವೋರ್ಸ್ (Divorce) ಬೇಕು ಅಂತ ಗದಗದ ವ್ಯಕ್ತಿ ಕೋರ್ಟ್ (Court) ಮುಂದೆ ಬಂದಿದ್ದ. ಎಂ.ಕಾಮ್ ಮಾಡಿರೋ ಆತನ ಪತ್ನಿಯದ್ದೂ ಅದೇ ಪಟ್ಟು. ದಂಪತಿ ಡಿವೋರ್ಸ್ ಬೇಕು ಅಂದ್ರೆ ಜಡ್ಜ್ ಅವರನ್ನು ನಿರಂತರ ಮನವೊಲಿಸುವ ಯತ್ನ ಮಾಡ್ತಿದ್ರು. ಡಿವೋರ್ಸ್ ಅನ್ನೋದು ಅಂಗಡಿಯಿಂದ ಖರೀದಿ ಮಾಡೋ ಸೊಪ್ಪಲ್ಲ ಎಂದ ಜಡ್ಜ್, ಕೊನೆಯಲ್ಲಿ ಕೇಸನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠ (Koppal Gavisiddeswar Math )ಕ್ಕೆ ಹಸ್ತಾಂತರಿಸಿದ್ದಾರೆ. ಜಡ್ಜ್ ಹಾಗೂ ಡಿವೋರ್ಸ್ ಪಡೆಯಲು ಮುಂದಾಗಿದ್ದ ದಂಪತಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

ತಂದೆ – ತಾಯಿಗೆ ಒಬ್ಬನೆ ಮಗನಾಗಿರುವ ವ್ಯಕ್ತಿಗೆ ಪತ್ನಿ ಹಾಗೂ ಆಕೆ ಮನೆಯವರು ಕಾಟ ನೀಡ್ತಿದ್ದಾರಂತೆ. ಕೋರ್ಟ್ ಮುಂದೆ ಡಿವೋರ್ಸ್ ಗೆ ಬಂದ ಅವರು ತನ್ನ ಕಷ್ಟ ಹೇಳಿಕೊಂಡಿದ್ದಾರೆ. ಪತ್ನಿ ಕೂಡ ಜಡ್ಜ್ ಮುಂದೆ ಏನಾಯ್ತು ಅನ್ನೋದನ್ನು ಹೇಳಿದ್ದಾರೆ. ಆದ್ರೆ ಜಡ್ಜ್ ಗೆ ಇದು ಡಿವೋರ್ಸ್ ನೀಡೋ ಕೇಸ್ ಅನ್ನಿಸ್ತಿಲ್ಲ. ಉನ್ನತ ಶಿಕ್ಷಣ ಹೊಂದಿರುವ ಇವರಿಬ್ಬರಿಗೆ ಕೌನ್ಸಿಲಿಂಗ್ ಅವಶ್ಯಕತೆ ಇದೆ ಅನ್ನೋದು ಜಡ್ಜ್ ಅಭಿಪ್ರಾಯ. ಅತಿಯಾಗಿ ಪ್ರೀತಿಸುವ ಪತ್ನಿ ಇಂಥ ಸಣ್ಣಪುಟ್ಟ ಕಿರಿಕಿರಿ ನೀಡೋದು ಕಾಮನ್. ಅದನ್ನು ಸಹಿಸಿಕೊಳ್ಳಬೇಕು ಎಂದ ಜಡ್ಜ್, ಆತ್ಮಹತ್ಯೆ ಬೆದರಿಕೆ ಯಾಕೆ ಹಾಕ್ತೀರಿ ಎಂದು ಮಹಿಳೆಗೆ ಮೃದುವಾಗಿ ಗದರಿದ್ರು. 

ಸಿಎ ಅಭ್ಯರ್ಥಿಗೆ ಸ್ನೇಹಿತನಿಂದ ಫನ್ನಿ ವಿಶ್, ಕೇಕ್ ನೋಡಿ ನೆಟ್ಟಿಗರು ಖುಷ್

ಪ್ರತಿಯೊಬ್ಬ ದಂಪತಿ ನೋಡ್ಬೇಕು ಈ ವಿಡಿಯೋ : ಕೋರ್ಟ್ ಮುಂದೆ ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್ ಅರ್ಜಿ ಸಲ್ಲಿಸಿರುವ ಈ ದಂಪತಿಗೆ ಜಡ್ಜ್ ಬುದ್ಧಿವಾದ ಹೇಳಿದ್ದಾರೆ. ದಂಪತಿಗೆ ಹೊಂದಿಕೊಂಡು ಹೋಗುವ ಮಹತ್ವವನ್ನು ಹೇಳಿದ ಜಡ್ಜ್,  ಗಂಡ – ಹೆಂಡತಿ ಮಧ್ಯೆ ಏರಿಳಿತ ಸಾಮಾನ್ಯ. ದಾಂಪತ್ಯದಲ್ಲಿ ಸ್ಪೀಡ್ ಬ್ರೇಕರ್ ಇದ್ದೇ ಇರುತ್ತೆ. ಮ್ಯಾನೇಜ್ ಮಾಡ್ಕೊಂಡು ಹೋಗ್ಬೇಕು ಎಂದು ಸಲಹೆ ನೀಡಿದ್ದಾರೆ. ಶಾಂತವಾದ ಸ್ಥಳದಲ್ಲಿ ಕುಳಿತು ಪರಸ್ಪರ ಮಾತನಾಡಿ, ಕಾನೂನಿನಿಂದ ಜೀವನ ಸಾಧ್ಯವಿಲ್ಲ. ಕಾನೂನು ನಿಮಗೆ ಜೀವನ ಪಾಠ ಕಲಿಸುವುದಿಲ್ಲ. ಹುರುಳಿಲ್ಲದ ನಿಮ್ಮ ಕೇಸ್ ಐದು ವರ್ಷಗಳವರೆಗೆ ನಡೆಯುತ್ತದೆ. ಇಬ್ಬರ ಬಾಳು ಇದ್ರಿಂದ ಹಾಳಾಗುತ್ತೆ ಎಂದ್ರು. ಮತ್ತೆ ಸೇರಿ ಬಾಳ್ತೀರಾ ಎಂಬ ಪ್ರಶ್ನೆಯನ್ನು ಜಡ್ಜ್ ದಂಪತಿ ಮುಂದಿಟ್ರು. 

ಜಡ್ಜ್ ಇಷ್ಟೆಲ್ಲ ಹೇಳಿದ್ರೂ ಒಲ್ಲೆ ಎಂದ ದಂಪತಿಗೆ ನೀವು  ಭೀಷ್ಮ ಪ್ರತಿಜ್ಞೆ ಮಾಡಿದ್ದೀರಾ ಎನ್ನುತ್ತಲೇ ಕೇಸನ್ನು ಮ್ಯಾರೇಜ್ ಕೌನ್ಸಿಲ್ ಗೆ ಶಿಫ್ಟ್ ಮಾಡಿದ್ದಲ್ಲದೆ ಮಠಾಧೀಶರ ಸಲಹೆ ಪಡೆಯಲು ಹೇಳಿದ್ದಾರೆ. ಗವಿಸಿದ್ದೇಶ್ವರ ಸ್ವಾಮಿಗಳಿಗೆ ಪತ್ರ ಬರೆದಿರುವ ಅವರು, ಇದೇ ಭಾನುವಾರಕ್ಕೆ ಕೌನ್ಸಿಲಿಂಗ್ ಫಿಕ್ಸ್ ಮಾಡಿದ್ದಾರೆ. ಸ್ವಾಮಿಗಳ ಬಳಿ ಹೇಗೆ ಹೋಗ್ಬೇಕು, ಅಲ್ಲಿ ಏನು ಹೇಳ್ಬೇಕು ಎಲ್ಲವನ್ನೂ ದಂಪತಿಗೆ ಜಡ್ಜ್ ಹೇಳಿದ್ರೂ, ಪತಿ ಮಾತ್ರ ತನ್ನ ಪಟ್ಟು ಬಿಡ್ತಿಲ್ಲ. ಯಾವುದೇ ಕಾರಣಕ್ಕೂ ಪತ್ನಿ ಜೊತೆ ಒಂದೇ ಬಸ್ ನಲ್ಲಿ ಮಠಕ್ಕೆ ಹೋಗಲ್ಲ ಅಂತ ಪಣತೊಟ್ಟಿದ್ದಾನೆ. ಜಗ್ಗದ ಆತನ ದಾರಿಗೆ ಬಂದ ಜಡ್ಜ್, ಮಠಕ್ಕೆ ಹೋಗುವ ಸಮಯದಲ್ಲಿ ಇಬ್ಬರು ಮತ್ತೆ ಕೂಡಿ ಬದುಕಲು ಸಾಧ್ಯವಿದೆ ಎಂಬ ಭರವಸೆಯಲ್ಲಿ ಹೋಗಿ. ಗವಿಸಿದ್ದೇಶ್ವರ ಸ್ವಾಮಿಗಳ ಸಲಹೆ ಕೇಳಿ. ಅವರು ಹೇಳಿದಂತೆ ಮಾಡಿ ಎಂದಿದ್ದಾರೆ.  ನಮ್ಮ ಸಮಸ್ಯೆಗೆ ಕೋರ್ಟ್ ನಿಂದ ಪರಿಹಾರ ಸಿಕ್ಕಿಲ್ಲ. ಹಾಗಾಗಿ ನಿಮ್ಮ ಬಳಿ ಬಂದಿದ್ದೇವೆ ಎಂದು ಸ್ವಾಮಿಜಿ ಮುಂದೆ ವಿನಂತಿ ಮಾಡಿ, ಸೂಕ್ತ ಸಲಹೆ ಪಡೆಯಿರಿ ಎಂದಿದ್ದಾರೆ.  

ನಕಲಿ MBBS ಪ್ರಮಾಣಪತ್ರ ದಂಧೆ: 400 ವಿದ್ಯಾರ್ಥಿಗಳಿಂದ ₹3 ಕೋಟಿ ವಸೂಲಿ!

ಇದೇ ವೇಳೆ, ಪ್ರೊಪೇಸರ್ ಕೃಷ್ಣೇಗೌಡರ ಬಗ್ಗೆ ಮಾತನಾಡಿದ ಜಡ್ಜ್, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ದಂಪತಿ ಅವರ ಬಳಿ ಹೋದ್ಮೇಲೆ ಹೊಂದಿ ಬದುಕುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ 9 ದಂಪತಿ  ಒಟ್ಟಿಗೆ ಬದುಕುವ ಪ್ರತಿಜ್ಞೆ ಮಾಡಿದ್ದಾರೆ. ಸಣ್ಣ ವಿಷ್ಯಕ್ಕೆ ವಿಚ್ಛೇದನ ಪಡೆಯುತ್ತಾ ಹೋದ್ರೆ ನಮ್ಮ ದೇಶ ಪಾಶ್ಚಾತ್ಯ ದೇಶವಾಗುತ್ತೆ. ನಮ್ಮ ಸಂಸ್ಕೃತಿಯ ಸರ್ವನಾಶವಾಗುತ್ತೆ ಎಂದಿದ್ದಾರೆ.  

Latest Videos
Follow Us:
Download App:
  • android
  • ios