400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಕ್ MBBS ಸರ್ಟಿಫಿಕೇಟ್ ನೀಡಿದ ನಕಲಿ ವೈದ್ಯನ ಬಂಧನ
400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಕಲಿ MBBS ಪದವಿ ಪ್ರಮಾಣಪತ್ರಗಳನ್ನು ನೀಡಿ ₹3 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಬರೇಲಿಯಲ್ಲಿ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಈ ವಂಚನೆಯು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಾಗ ಬೆಳಕಿಗೆ ಬಂದಿತು, ಇದರಿಂದಾಗಿ ಆರೋಪಿ ವಿಜಯ್ ಶರ್ಮಾ ನೇತೃತ್ವದಲ್ಲಿ ನಡೆದ ವಂಚನೆಯ ಬೃಹತ್ ಜಾಲ ಬಯಲಾಯಿತು.
ಬರೇಲಿ: 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಕಲಿ ವೈದ್ಯಕೀಯ ಪದವಿಯ (MBBS Bill) ಪ್ರಮಾಣ ಪತ್ರ ನೀಡಿ ಅವರಿಂದ 3 ಕೋಟಿಗೂ ಅಧಿಕ ವಸೂಲಿ ಮಾಡಿದ ನಕಲಿ ವೈದ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ವಿಜಯ್ ಶರ್ಮಾ ಎಂದು ಗುರುತಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ ಎಸ್ಪಿ ಮನುಶ್ ಪರೀಕ್, ಬರೇಲಿಯ ಖುಶ್ರೋ ಮೆಮೊರಿಯಲ್ ಪಿಜಿ ಕಾಲೇಜು ನಕಲಿ ಎಂಬಿಬಿಎಸ್ ಸರ್ಟಿಫಿಕೇಟ್‌ಗಳನ್ನು ವಿವಿಧ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಿದೆ. ಈ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಮುಖ ಆರೋಪಿ ವಿಜಯ್ ಶರ್ಮಾ ಈ ದಂಧೆಯಿಂದಾಗಿ ಒಟ್ಟು 3.7 ಕೋಟಿ ಹಣ ಗಳಿಸಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಸೇವೆ ಆರಂಭಿಸಲು ಹಾಗೂ ಉದ್ಯೋಗಕ್ಕಾಗಿ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವವರೆಗೂ ಈ ಫ್ರಾಡ್ ಬಗ್ಗೆ ಗೊತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ವಿಜಯ್ ಶರ್ಮಾ, ತಾನು ಮೆಡಿಸಿನ್ ಹಾಗೂ ಸರ್ಜರಿಯಲ್ಲಿ ಬ್ಯಾಚುಲರ್ ಡಿಗ್ರಿ ಮಾಡಿದ್ದಾಗಿ ಹೇಳಿಕೊಂಡಿದ್ದ, ಆದರೆ ಪೊಲೀಸರು ವಿಚಾರಣೆ ನಡೆಸಿದ ನಂತರವಷ್ಟೇ ಆತನ ನಿಜ ಬಣ್ಣ ಬಯಲಾಗಿದೆ.
ಹಣಕ್ಕಾಗಿ ಹತ್ತಿರದ ಸಂಬಂಧಿಯಿಂದಲೇ 5 ವರ್ಷದ ಮಗುವಿನ ಉಸಿರುಕಟ್ಟಿಸಿ ಹತ್ಯೆ
ಕಳೆದ ವಾರವಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಾಲೇಜಿನ ಮಾಲೀಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕಾಲೇಜನ್ನು ಈಗ ಆಡಳಿತ ಮಂಡಳಿಯೇ ಬಂದ್ ಮಾಡಿದೆ. ಇತ್ತ ಪ್ರಮುಖ ಆರೋಪಿ ಶರ್ಮಾ ನಾಪತ್ತೆಯಾಗಿದ್ದ, ಆದರೆ ನಿನ್ನೆ ಆತನನ್ನು ಬಂಧಿಸಲಾಗಿದ್ದು, ಆತ ವಿಚಾರಣೆ ವೇಳೆ ತಾನು ಈ ಬೃಹತ್ ಮೋಸದ ಜಾಲದ ಭಾಗವಾಗಿದ್ದಾಗಿ ಹಾಗೂ ನಕಲಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ.
ತಾನು ಹಾಗೂ ತನ್ನ ಸಹಾಯಕರು ಕಾನ್ಪುರ, ರೂರ್ಕಿ, ಹಿಮಾಚಲ ಪ್ರದೇಶ ಹಾಗೂ ಒಡಿಶಾ ವಿಶ್ವವಿದ್ಯಾನಿಲಯದಿಂದ ನಕಲಿ ಡಿಗ್ರಿ ಪಡೆದಿದ್ದೇವೆ. ಈ ನಕಲಿ ಸರ್ಟಿಫಿಕೇಟ್ ದಂಧೆಯಿಂದ ಬಂದ ಹಣದಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಈ ಹಿಂದೆಯೂ ವಿಜಯ್ ಶರ್ಮಾ ವಿರುದ್ಧ ಫ್ರಾಡ್ ಹಾಗೂ ಪೋರ್ಜರಿ ಸಹಿ ಮಾಡಿದ ಹಿನ್ನೆಲೆ ಇದೆ. ಈ ಹಿಂದೆ ಈತ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಮಾಡಿದ್ದು, ಸಣ್ಣದೊಂದು ಕನ್ಸಲ್ಟೆನ್ಸಿಯನ್ನು ತೆರೆದಿದ್ದ, ಈ ಕನ್ಸಲ್ಟೆನ್ಸಿಯಲ್ಲಿ ಆತ ಪದವೀಧರರಿಗೆ ನಕಲಿ ಡಿಗ್ರಿಗಳನ್ನು ಹಣಕ್ಕಾಗಿ ಮಾಡಿಕೊಡುತ್ತಿದ್ದ.
ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ
ಈ ಹಿಂದೆ ಮಹಾರಾಷ್ಟ್ರದ ನಲಸೊಪರಾದಲ್ಲಿಯೂ ಇಂತಹದ್ದೇ ಪ್ರಕರಣವೊಂದು ನಡೆದಿತ್ತು. 12ಕ್ಲಾಸ್‌ನಲ್ಲಿ ಶಾಲೆಬಿಟ್ಟು ನಕಲಿ ವೈದ್ಯನಾದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದರು. ಈತ ಯಾವುದೇ ಡಿಗ್ರಿ ಇಲ್ಲದೇ ದಶಕಕ್ಕೂ ಹೆಚ್ಚು ಕಾಲ ರೋಗಿಗಳಿಗೆ ಔಷಧಿ ನೀಡುತ್ತಿದ್ದ. ಈ ನಕಲಿ ವೈದ್ಯನನ್ನು ತಿರುಮಲ ತೆಲಿ ಎಂದು ಗುರುತಿಸಲಾಗಿತ್ತು. ವಸೈ ವಿರಾರ್‌ನ ಮಹಾನಗರ ಪಾಲಿಕೆ ಅಧಿಕಾರಿಗಳು ಈತನ ಕ್ಲಿನಿಕ್‌ಗೆ ದಾಳಿ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.
ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ