ಜಾಯ್ ಬೈಡನ್ ಅವರ ಹೊಸ ಜರ್ಮನ್ ಶೆಫರ್ಡ್ ನಾತು ಶ್ವೇತಭವನಕ್ಕೆ ಕಾಲಿರಿಸಿದೆ. ಕಳೆದ 4 ವರ್ಷಗಳಿಂದ ಈ ನಾಯಿ ವೈಟ್‌ಹೌಸ್‌ಗೆ ಬಂದಿರಲಿಲ್ಲ. ಜಾಯ್‌ ಬಿಡನ್ ಅವರು ಅಧ್ಯಕ್ಷೀಯ ಚುನಾವಣೆ ಗೆದ್ದಿರುವ ಹಿನ್ನೆಲೆಯಲ್ಲಿ ಅವರ ಎರಡು ನಾಯಿಗಳಾದ ಚಾಂಪ್ ಮತ್ತು ಮೇಜರ್ ಬೈಡನ್ ಮತ್ತವರ ಪತ್ನಿ ಜಿಲ್ ಜೊತೆ ಬರಲಿದೆ. ಚಾಂಪ್ 2008ರಿಂದಲೂ ಬೈಡನ್ ಜೊತೆಗಿದೆ ಎಂಬುದು ವಿಶೇಷ. 

ಬೈಡನ್ ಮತ್ತು ಜಿಲ್‌ಗೆ ಅವರ ಮಗಳು ಆಶ್ಲೇ ತಾತ್ಕಾಲಿಕವಾಗಿ ಮನೆಯ ಅಗತ್ಯವಿರುವ ನಾಯಿಮರಿಗಳನ್ನು ನೋಡಿಕೊಳ್ಳಲು ಕೊಟ್ಟಿದ್ದರು. ಬೈಡನ್ ಮತ್ತು ಜಿಲ್ ಮೊದಲಿಗೆ ನಾಯಿಯನ್ನು ಬೆಳೆಸಿದರು, ನಂತರ ಅವರ ಹೆತ್ತವರನ್ನು ಒಂದನ್ನು ತಾವೇ ಇಟ್ಟುಕೊಂಡರು. ನಂತರದಲ್ಲಿ ಡೆಲವೇರ್ ಹ್ಯೂಮನ್ ಸೊಸೈಟಿಯಿಂದ ಇದನ್ನು ಖರೀದಿಸಿದ್ದಾರೆ.

2ನೇ ಚುನಾವಣೆಯಲ್ಲಿ ಮುಗ್ಗರಿಸಿದ 11ನೇ ಅಧ್ಯಕ್ಷ ಟ್ರಂಪ್‌!

ನಾಯಿ ಚೆನ್ನಾಗಿ ತರಬೇತಿ ಪಡೆದಿದೆ. 4 ವರ್ಷಗಳ ನಂತರ ಶ್ವೇತಭವನದಲ್ಲಿ ಶ್ವಾನ ಇದೀಗ ಮೊದಲ ಬಾರಿ ಬಂದಿದೆ. ಒಬಾಮಾ ಅವರ ಎರಡು ಪೋರ್ಚುಗೀಸ್ ವಾಟರ್ ಡಾಗ್ಸ್, ಬೊ ಮತ್ತು ಸನ್ನಿ ಕೂಡಾ ಇದ್ದರು. ಟ್ರಂಪ್ ಮತ್ತು ಮೆಲೇನಿಯಾ ನಾಯಿಗಳನ್ನು ಸಾಕಿರಲಿಲ್ಲ. ಅವರಲ್ಲಿ ಯಾವುದೇ ಸಾಕುಪ್ರಾಣಿಗಳೂ ಇರಲಿಲ್ಲ.