ವಾಷಿಂಗ್ಟನ್(ನ.08)‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಸ್ಪರ್ಧಿಸಿ ಸೋಲು ಅನುಭವಿಸಿದ 11ನೇ ಅಧ್ಯಕ್ಷ ಟ್ರಂಪ್‌ ಆಗಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷರಾದವರು ಗರಿಷ್ಠ ಎರಡು ಅವಧಿಗೆ ಸ್ಪರ್ಧಿಸಲು ಅವಕಾಶ ಇದೆ. ಹೀಗಾಗಿ ಮೊದಲ ಅವಧಿಯಲ್ಲಿ ಅಧ್ಯಕ್ಷರಾದವರೇ ಎರಡನೇ ಅವಧಿಗೆ ಸ್ಪರ್ಧಿಸುತ್ತಾರೆ.

ರಿಚರ್ಡ್‌ ನಿಕ್ಸನ್‌ ಅವರ ರಾಜೀನಾಮೆಯಿಂದ 1976ರಲ್ಲಿ ಅಧ್ಯಕ್ಷೀಯ ಹುದ್ದೆಗೆ ಏರಿದ್ದ ಜೆರಾಲ್ಡ್‌ ಫೋರ್ಡ್‌ ಮೊದಲ ಬಾರಿ ಸೋಲು ಅನುಭವಿಸಿದ್ದರು. 1992ರಲ್ಲಿ ಜಾಜ್‌ರ್‍ ಎಚ್‌. ಡಬ್ಲ್ಯು ಬುಷ್‌ ಅವರು ಕಡೆಯ ಬಾರಿ ಸೋಲು ಅನುಭವಿಸಿದ್ದರು. ಇದೀಗ 28 ವರ್ಷದ ಬಳಿಕ ಬೈಡೆನ್‌ ವಿರುದ್ಧ ಟ್ರಂಪ್‌ ಸೋಲು ಅನುಭವಿಸಿದ್ದಾರೆ.

ನಾನು ಗೆದ್ದಿದ್ದೇನೆ: ಸೋಲೊಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್!

ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ಗೆಲುವಿನ ಸಂಭ್ರಮದಲ್ಲಿದ್ದಾರೆ. ಆದರೆ ಇತ್ತ ಡೊನಾಲ್ಡ್ ಟ್ರಂಪ್ ಕೂಡಾ ಸೋಲೊಪ್ಪಿಕೊಂಡಿಲ್ಲ. ಬೈಡೆನ್ ಗೆದ್ದಿದ್ದಾರೆಂದು ಘೋಷಿಸಿದ ಬಳಿಕ ಸುಮಾರು ಐದು ಗಂಟೆ ಮೌನವಾಗಿದ್ದ ಟ್ರಂಪ್ ಮತ್ತೆ ಟ್ವೀಟ್ ಮಾಡಿ ತಾನೇ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.