- Home
- Entertainment
- News
- LOVE-BREAKUP- ಇದು ಏಳೇಳು ಜನುಮದ ಲವ್? ಪಾರ್ಟಿಯಲ್ಲಿ ಪರಿಚಯ, ಬ್ರೇಕಪ್.. ಮತ್ತೆ ಲವ್, ಮದುವೆ ಆಗಿದ್ದು ಹೇಗೆ?
LOVE-BREAKUP- ಇದು ಏಳೇಳು ಜನುಮದ ಲವ್? ಪಾರ್ಟಿಯಲ್ಲಿ ಪರಿಚಯ, ಬ್ರೇಕಪ್.. ಮತ್ತೆ ಲವ್, ಮದುವೆ ಆಗಿದ್ದು ಹೇಗೆ?
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೇಮಕಥೆ ಸಿನಿಮಾದ ಕಥೆಗಿಂತಲೂ ರೋಚಕವಾಗಿದೆ. ತೆರೆಮೇಲೆ ಪ್ರೇಮಿಗಳಾಗಿ ನಟಿಸುತ್ತಿದ್ದ ಈ ಜೋಡಿ ನಿಜ ಜೀವನದಲ್ಲೂ ಪ್ರೀತಿಯಲ್ಲಿ ಬಿದ್ದಿತ್ತು. ಇವರ ನಡುವೆ ಒಂದು ಕಾಲದಲ್ಲಿ ಬ್ರೇಕಪ್ ಮಾತುಕತೆಯೂ ನಡೆದಿತ್ತು..

ಮದುವೆಗೂ ಮುನ್ನ ಬ್ರೇಕಪ್ಗೆ ಮುಂದಾಗಿದ್ದ ಕಿಯಾರಾ-ಸಿದ್ಧಾರ್ಥ್!
ಬಾಲಿವುಡ್ನ ಮುದ್ದಾದ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೇಮಕಥೆ ಸಿನಿಮಾದ ಕಥೆಗಿಂತಲೂ ರೋಚಕವಾಗಿದೆ. ತೆರೆಮೇಲೆ ಪ್ರೇಮಿಗಳಾಗಿ ನಟಿಸುತ್ತಿದ್ದ ಈ ಜೋಡಿ ನಿಜ ಜೀವನದಲ್ಲೂ ಪ್ರೀತಿಯಲ್ಲಿ ಬಿದ್ದಿತ್ತು. ಇಂದು ಸುಂದರ ದಾಂಪತ್ಯ ಜೀವನ ನಡೆಸುತ್ತಿರುವ ಇವರ ನಡುವೆ ಒಂದು ಕಾಲದಲ್ಲಿ ಬ್ರೇಕಪ್ ಮಾತುಕತೆಯೂ ನಡೆದಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಮದುವೆಯ ನಿರ್ಧಾರಕ್ಕೆ ಬರುವ ಮುನ್ನ ಇಬ್ಬರೂ ಸಂಬಂಧಕ್ಕೆ ಅಂತ್ಯ ಹಾಡುವ ಯೋಚನೆ ಮಾಡಿದ್ದರು ಎಂಬುದನ್ನು ಸ್ವತಃ ಕಿಯಾರಾ ಮತ್ತು ಸಿದ್ಧಾರ್ಥ್ ಹಂಚಿಕೊಂಡಿದ್ದಾರೆ.
'ಕಾಫಿ ವಿತ್ ಕರಣ್' ಕಾರ್ಯಕ್ರಮದ ಒಂಬತ್ತನೇ ಸೀಸನ್ನಲ್ಲಿ ಒಟ್ಟಿಗೆ ಭಾಗವಹಿಸಿದ್ದ ಈ ಜೋಡಿ ತಮ್ಮ ಲವ್ ಸ್ಟೋರಿಯ ಹಿಂದಿನ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ. ಮೊದಲ ಭೇಟಿಯಿಂದ ಪ್ರೀತಿ, ಮನಸ್ತಾಪ, ದೂರವಾಗುವ ನಿರ್ಧಾರ ಹಾಗೂ ಮತ್ತೆ ಒಂದಾಗಿ ಮದುವೆಯಾದ ಕ್ಷಣಗಳವರೆಗೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ನೆನಪಿಸಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಶುರುವಾದ ಪರಿಚಯ
ಕಿಯಾರಾ ನಟನೆಯ 'ಲಸ್ಟ್ ಸ್ಟೋರೀಸ್' ಚಿತ್ರದ ಚಿತ್ರೀಕರಣ ಮುಗಿದ ಬಳಿಕ ನಡೆದ ಪಾರ್ಟಿಯಲ್ಲಿ ಇವರಿಬ್ಬರ ಮೊದಲ ಭೇಟಿ ನಡೆದಿತ್ತು. ಕಿಯಾರಾ ಸ್ನೇಹಿತ ಅಮೃತ್ಪಾಲ್ ಬಿಂದ್ರಾ ಆಯೋಜಿಸಿದ್ದ ಈ ಸಮಾರಂಭದಲ್ಲಿ ಕರಣ್ ಜೋಹರ್ ಕೂಡ ಇದ್ದರು. ಈ ಪರಿಚಯ ಮುಂದೆ ಸ್ನೇಹವಾಗಿ, ಬಳಿಕ ಪ್ರೇಮವಾಗಿ ಬದಲಾಯಿತು. 2021ರಲ್ಲಿ ಬಿಡುಗಡೆಯಾದ 'ಶೇರ್ಷಾ' ಸಿನಿಮಾ ಇವರ ಪ್ರೀತಿಗೆ ಮತ್ತಷ್ಟು ಹತ್ತಿರವಾಗಲು ಕಾರಣವಾಯಿತು. ಚಿತ್ರದಲ್ಲಿ ಸಿದ್ಧಾರ್ಥ್ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ನಟಿಸಿದರೆ, ಕಿಯಾರಾ ಡಿಂಪಲ್ ಚೀಮಾ ಆಗಿ ಮಿಂಚಿದ್ದರು.
30 ದಿನಗಳ ಫೋನ್ ಮಾತುಕತೆಯಲ್ಲಿ ಅರಳಿದ ಪ್ರೀತಿ
ಆದರೆ ಪ್ರೀತಿಯ ಹಾದಿ ಸುಗಮವಾಗಿರಲಿಲ್ಲ. ಸಿದ್ಧಾರ್ಥ್ ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ಹರಿಸಲು ಬಯಸಿದರೆ, ಕಿಯಾರಾ ಸಂಬಂಧದ ಭವಿಷ್ಯದ ಬಗ್ಗೆ ಸ್ಪಷ್ಟತೆ ಬಯಸಿದ್ದರು. ಹೀಗಾಗಿ ಇಬ್ಬರೂ ಒಂದು ಹಂತದಲ್ಲಿ ದೂರವಾಗುವ ನಿರ್ಧಾರ ಕೈಗೊಂಡಿದ್ದರು. ಶೇರ್ಷಾ ಚಿತ್ರೀಕರಣಕ್ಕಾಗಿ ಸಿದ್ಧಾರ್ಥ್ ಕಾರ್ಗಿಲ್ಗೆ ತೆರಳಿದ ಬಳಿಕವೂ ಕಿಯಾರಾ ಜೊತೆ ಸಂಪರ್ಕ ಮುಂದುವರಿಸಿದರು. ಪ್ರತಿದಿನ ಫೋನ್ನಲ್ಲಿ ಮಾತನಾಡುತ್ತಾ ಸತತ 30 ದಿನಗಳನ್ನು ಕಳೆದಿದ್ದರು. ಈ ಮಾತುಕತೆಯೇ ಇಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಕಾರ್ಗಿಲ್ನಲ್ಲಿದ್ದಾಗಲೇ ಅಧಿಕೃತವಾಗಿ ಡೇಟಿಂಗ್ ಆರಂಭಿಸಿದ್ದಾಗಿ ಕಿಯಾರಾ ಹೇಳಿದ್ದಾರೆ.
ಹೂಗುಚ್ಛ ಹಿಡಿದು ಬಂದ ಸಿದ್ಧಾರ್ಥ್!
ಇವರ ಸಂಬಂಧದಲ್ಲಿ ಮತ್ತೊಮ್ಮೆ ಬಿರುಕು ಮೂಡಿದಾಗ ಸಿದ್ಧಾರ್ಥ್ ಬೇಸರಗೊಂಡಿದ್ದರು ಎಂದು ಕರಣ್ ಜೋಹರ್ ನೆನಪಿಸಿಕೊಂಡಿದ್ದಾರೆ. ಬಳಿಕ 'ಜಗ್ ಜಗ್ ಜೀಯೋ' ಚಿತ್ರೀಕರಣದ ವೇಳೆ ಕಿಯಾರಾ ಅವರನ್ನು ಭೇಟಿಯಾಗಲು ಹೂವುಗಳೊಂದಿಗೆ ತೆರಳಿದ್ದರು. 'ರಂಗಿಸಾರಿ' ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ವ್ಯಾನಿಟಿ ವ್ಯಾನ್ನಲ್ಲಿ ಇಬ್ಬರೂ ಮಾತನಾಡಿಕೊಂಡರು. ಈ ಭೇಟಿ ಪ್ರೀತಿಗೆ ಹೊಸ ತಿರುವು ನೀಡಿತು.
ಎಲ್ಲಾ ಏರಿಳಿತಗಳನ್ನು ದಾಟಿ ಮತ್ತೆ ಒಂದಾದ ಜೋಡಿ ಮದುವೆಯಾಗಲು ನಿರ್ಧರಿಸಿತು. ಅಂತಿಮವಾಗಿ 2023ರ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬ್ರೇಕಪ್ ಹಂತದಿಂದ ಮದುವೆಯ ಮಂಟಪದವರೆಗೆ ಸಾಗಿದ ಇವರ ಲವ್ ಸ್ಟೋರಿ ಅಭಿಮಾನಿಗಳಲ್ಲಿ ಇಂದಿಗೂ ವಿಶೇಷ ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













