ಭಾರತೀಯರ ಕಾಂಡೋಮ್ ಫ್ಲೇವರ್ ಎಲ್ಲರಿಗಿಂತ ಭಿನ್ನ. ಊಟದ ಬಳಿಕ ಪಾನ್ ಬೀಡ ಹಾಕಿದರೆ, ರಾತ್ರಿ ವೇಳೆ ಬೇಕೂ ಪಾನ್ ಫ್ಲೇವರ್. ಭಾರತೀಯರ ಕಾಂಡೋಮ್ ಆಯ್ಕೆ ಕುರಿತು ರೋಚಕ ಮಾಹಿತಿ ಬಹಿರಂಗವಾಗಿದೆ.
ನವದೆಹಲಿ(ಫೆ.01) ಭಾರತದಲ್ಲಿ ಪ್ರತಿ ರಾಜ್ಯದ ಭಾಷೆ, ಸಂಸ್ಕೃತಿ, ಆಹಾರ, ಪದ್ದತಿ, ಸಂಪ್ರದಾಯಗಳು ಭಿನ್ನವಾಗಿದೆ. ಈ ಪೈಕಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಹೇಳುವಂತೆ ಒಂದು ರಾಜ್ಯ ಹಲವು ಜಗತ್ತು. ವಿಶೇಷ ಅಂದರೆ ಇದೀಗ ಭಾರತೀಯ ಕಾಂಡೋಮ್ ಆಯ್ಕೆಕೂಡ ಒಂದೊಂದು ಭಾಗದಲ್ಲಿ ಭಿನ್ನವಾಗಿದೆ. ಉತ್ತರದಲ್ಲಿನಜನ ಹೆಚ್ಚು ಬಳಸುವ ಸುವಾಸನೆಯ ಕಾಂಡೋಮ್, ದಕ್ಷಿಣದಲ್ಲಿ ಲೆಕ್ಕಕ್ಕಿಲ್ಲ. ವಿಶೇಷ ಅಂದರೆ ಭಾರತದಲ್ಲಿ ಹೆಚ್ಚು ಜನ ಇಷ್ಟಪಡುವ ಕಾಂಡೋಮ್ ಫ್ಲೇವರ್ ಚಾಕ್ಲೇಟ್, ಸ್ಟ್ರಾಬರಿ ಹಾಗೂ ಪಾನ್ ಫ್ಲೇವರ್. ಈ ಕುರಿತು ಮ್ಯಾನ್‌ಕೈಂಡ್ ಫಾರ್ಮಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.
ಪಾಡ್‌ಕಾಸ್ಟ್ ಒಂದರಲ್ಲಿ ರಾಜೀವ್ ಜುನೇಜಾ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾಂಡೋಮ್ ಕುರಿತು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ರಾಜೀವ್ ಜುನೇಜಾ ನೀಡಿದ ಉತ್ತರ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಭಾರತ ಜನಪ್ರಿಯ ಔಷಧಿ ಸೇರಿದಂತೆ ಕಾಂಡೋಮ್ ಉತ್ಪಾದಕ ಫಾರ್ಮಾ ಕಂಪನಿ ಮ್ಯಾನ್‌ಕೈಂಡ್ ಭಾರತದ ಪ್ರತಿ ಭಾಗದಲ್ಲಿ ಕಾಂಡೋಮ್ ಫ್ಲೇವರ್ ಬದಲಾಗುತ್ತದೆ ಎಂದಿದ್ದಾರೆ.
ಉಚಿತ ಕಾಂಡೋಮ್ ವಿತರಣೆಗೆ $50 ಮಿಲಿಯನ್ ನೆರವು ನಿಲ್ಲಿಸಿದ ಟ್ರಂಪ್, ಸಂಕಷ್ಟ ಯಾರಿಗೆ?
ಚಾಕೋಲೇಟ್ ಹಾಗೂ ಸ್ಟ್ರಾಬರಿ ಫ್ಲೇವರ್ ಜೊತೆಗೆ ಪಾನ್ ಸುಗಂಧದ ಕಾಂಡೋಮ್ ಕೂಡ ಮಾರಾಟ ಕಾಣುತ್ತಿದೆ. ಆದರೆ ಅತೀ ಕಡಿಮೆ ಮಾರಾಟವಾಗುವ ಕಾಂಡೋಮ್ ನ್ಯಾಚುರಲ್(ಯಾವುದೇ ಸುವಾಸನೆ ಇಲ್ಲದ ಕಾಂಡೋಮ್) ಎಂದು ರಾಜೀವ್ ಜುನೇಜಾ ಹೇಳಿದ್ದಾರೆ.ದಕ್ಷಿಣ ಭಾರತದಲ್ಲಿ ಜಾಸ್ಮಿನ್ ಸುವಾಸನೆಯ ಕಾಂಡೋಮ್ ಹೆಚ್ಚು ಮಾರಾಟವಾಗುತ್ತದೆ ಎಂದಿದ್ದಾರೆ. ಈ ಮೂಲಕ ದಕ್ಷಿಣ ಭಾರತೀಯರು ಜಾಸ್ಮಿನ್ ಫ್ಲೇವರ್‌ಗೆ ಮೊದಲ ಆದ್ಯತೆ ನೀಡಿದ್ದಾರೆ. ಪ್ರಮುಖವಾಗಿ ಹೂವುಗಳ ಸುವಾಸನೆಯ ಕಾಂಡೋಮ್ ದಕ್ಷಿಣ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಫ್ಲವರ್ ಫ್ಲೇವರ್ ದಕ್ಷಿಣ ರಾಜ್ಯಗಳಲ್ಲಿ ಮೊದಲ ಆಯ್ಕೆಯಾಗಿದೆ. ಇದಾದ ಬಳಿಕ ಸ್ಟ್ರಾಬರಿ ಸೇರಿದಂತೆ ಇತರ ಫ್ಲೇವರ್ ಕಾಂಡೋಮ್‌ಗೆ ಆದ್ಯತೆ ನೀಡಿದ್ದಾರೆ.
ಕಾಂಡೋಮ್ ಮಾರಾಟದಲ್ಲಿ ಉತ್ತರ ಪ್ರದೇಶ ಅತೀ ದೊಡ್ಡ ಮಾರುಕಟ್ಟೆಯಾಗಿದೆ ಎಂದಿದ್ದಾರೆ. ಈ ಪೈಕಿ ಉತ್ತರ ಪ್ರದೇಶದ ಕೆಲ ಭಾಗದಲ್ಲಿ ಪಾನ್ ಸುವಾಸನೆ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ರಾಜೀವ್ ಜುನೇಜಾ ಹೇಳಿದ್ದಾರೆ. ಗುಜರಾತಿನಲ್ಲಿ ನವರಾತ್ರಿ ಸಮಯದಲ್ಲಿ ಹೆಚ್ಚಿನ ಕಾಂಡೋಮ್ ಬೇಡಿಕೆ ಬರುತ್ತದೆ. ಈ ವೇಳೆ ಕಾಂಡೋಮ್ ಮಾರಾಟ ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಗರ್ಬಾ ಸಾಂಸ್ಕೃತಿಕ ಹಬ್ಬದ ವೇಳೆ ಕಾಂಡೋಮ್ ಮಾರಾಟ ಪ್ರಮಾಣ ಏರಿಕೆಯಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಾಲಾ ಕಟ್ಟ ಹಾಗೂ ಸಾಬುದಾನ ಫ್ಲೇವರ್ ಕಾಂಡೋಮ್ ಕೇವಲ ಮಾರ್ಕೆಟಿಂಗ್‌ಗೆ ಮಾಡಿದ ಗಿಮಿಕ್. ಇನ್ನು ಮಾರುಕಟ್ಟೆಗೆ ಈ ಫ್ಲೇವರ್ ಕಾಂಡೋಮ್ ಬಿಡುಗಡೆಯಾಗಿಲ್ಲ ಎಂದಿದ್ದಾರೆ. ಕಾಂಡೋಮ್ ಬಳಕೆ ಹೆಚ್ಚಳ ಹಾಗೂ ಮಾರಾಟ ಏರಿಕೆ ಕಂಪನಿಗೆ ಲಾಭ ತಂದುಕೊಡುತ್ತಿದೆ ನಿಜ. ಇದರೊಂದಿಗೆ ಜನರು ಸುರಕ್ಷತ ಕಡೆಗೆ ಹೆಚ್ಚು ಜಾಗರೂಕರಾಗಿದ್ದಾರೆ ಅನ್ನೋದು ಸೂಚಿಸುತ್ತದೆ ಎಂದು ರಾಜೀವ್ ಜುನೇಜಾ ಹೇಳಿದ್ದಾರೆ.
ಇದೀಗ ಭಾರತದ ಕಾಂಡೋಮ್ ಆಯ್ಕೆಯಲ್ಲೂ ವಿವಿಧತೆ ಇದೆ ಅನ್ನೋ ಮಾಹಿತಿ ಭಾರಿ ಚರ್ಚೆಯಾಗುತ್ತಿದೆ. ಆಯಾ ಪ್ರದೇಶದಲ್ಲಿ ಕಾಂಡೋಮ್ ಫ್ಲೇವರ್ ಬದಲಾಗುತ್ತಿರುವುದೇಕೆ ಅನ್ನೋ ಪ್ರಶ್ನೆಗಳು ಮೂಡಿದೆ. ಇಷ್ಟೇ ಅಲ್ಲ ಆಯಾ ಪ್ರದೇಶ, ಅಲ್ಲಿನ ವಾತಾವರಣ, ಹವಾಮಾನ, ಸಂಸ್ಕೃತಿಗಳ ಅನುಗುಣವಾಗಿ ಅವರ ಬಯಕೆ, ಆಸಕ್ತಿಗಳು ಬದಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಎಲ್ಲೆಡೆ ಫ್ಲೇವರ್ ಕಾಂಡೋಮ್ ಚರ್ಚೆ ನಡೆಯುತ್ತಿದೆ.
ಹೊಸ ವರ್ಷದ ಪಬ್ ಪಾರ್ಟಿ ಆಮಂತ್ರಣ ಜೊತೆ ಕಾಂಡೋಮ್, ಇದು ಜಾಗೃತಿಯೋ? ಪ್ರಚೋದನೆಯೋ?
