ಹೊಸ ವರ್ಷದ ಪಬ್ ಪಾರ್ಟಿ ಆಮಂತ್ರಣ ಜೊತೆ ಕಾಂಡೋಮ್, ಇದು ಜಾಗೃತಿಯೋ? ಪ್ರಚೋದನೆಯೋ?
ಹೊಸ ವರ್ಷ ಆಚರಣೆ ಆಮಂತ್ರಣದಲ್ಲಿ ಜನಪ್ರಿಯ ಪಬ್, ಯುವ ಸಮೂಹಕ್ಕೆ ಆಮಂತ್ರಣ ನೀಡಿದೆ. ಆದರೆ ಈ ಆಮಂತ್ರಣ ಜೊತೆಗೆ ಕಾಂಡೋಮ್ ಹಂಚುತ್ತಿದೆ.ಇದು ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಪುಣೆ(ಡಿ.30) ಹೊಸ ವರ್ಷ ಬರ ಮಾಡಿಕೊಳ್ಳಲು ಕೆಲವೇ ಗಂಟೆಗಳು ಮಾತ್ರ ಬಾಕಿ. ಎಲ್ಲೆಡೆ ಸಂಭ್ರಮಾಚರಣೆ ಆರಂಭಗೊಂಡಿದೆ. ತಯಾರಿಗಳು ನಡೆಯುತ್ತಿದೆ. ಈ ಪೈಕಿ ಪಬ್ ಸೇರಿದಂತೆ ರೆಸ್ಟೋರೆಂಟ್‌ಗಳಲ್ಲಿ ಹೊಸ ವರ್ಷದ ಸಂಭ್ರಮ ಹಾಗೂ ಆಫರ್ ನೀಡಲಾಗುತ್ತದೆ. ಆದರೆ ಪುಣೆಯ ಪಬ್ ಯುವ ಸಮೂಹಕ್ಕೆ ಹೊಸ ವರ್ಷದ ಆಮಂತ್ರಣ ನೀಡಿದೆ. ಆದರೆ ಈ ಆಮಂತ್ರಣದ ಜೊತೆ ಕಾಂಡೋಮ್ ಹಂಚುತ್ತಿದೆ. ಪಬ್ ಯುವ ಸಮೂಹವನ್ನು ಕೆಟ್ಟ ಸಂಪ್ರದಾಯಕ್ಕೆ ಪ್ರಚೋದಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಪಬ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಪುಣೆಯ ಜನಪ್ರಿಯ ಪಬ್ ಹೊಸ ವರ್ಷಾಚರಣೆ ಪ್ರಯುಕ್ತ, ಜಾಹೀರಾತು, ಆಮಂತ್ರಣ ಹಂಚಿದೆ. ಹಲವು ಯುವ ಸಮೂಹಕ್ಕೆ ಆಮಂತ್ರಣ ನೀಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಬ್‌ನಲ್ಲಿ ಪಾರ್ಟಿ, ಹಾಡು, ಡ್ಯಾನ್ಸ್ಸ ಡಿಜೆ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಇದರ ಜೊತೆಗೆ ಕಾಂಡೋಮ್ ಕೂಡ ನೀಡಿದೆ. ಈ ಮಾಹಿತಿ ಪಡೆದ ಯೂಥ್ ಕಾಂಗ್ರೆಸ್ ನಾಯಕ ಅಕ್ಷಯ್ ಜೈನ್ ಪಬ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್‌ಗೆ ದೂರು ಸಲ್ಲಿಸಿದ್ದಾರೆ. ಪಬ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಾಂಡೋಮ್ ಆರ್ಡರ್‌ನಲ್ಲಿ ಬೆಂಗಳೂರು ನಂ.1, ರಾತ್ರಿ 10 ರಿಂದ 11ರ ಹೊತ್ತಲ್ಲೇ ಹೆಚ್ಚು ಬೇಡಿಕೆ!
ದೂರು ನೀಡಿದ ಬಳಿಕ ಮಾತನಾಡಿದ ಅಕ್ಷಯ್ ಜೈನ್, ಪಬ್ ಕೆಟ್ಟ ಸಂಪ್ರದಾಯಕ್ಕೆ ಯುವಕರನ್ನು ತಳ್ಳುತ್ತಿದೆ. ಇದು ಯುವ ಸಮೂಹಕ್ಕೆ ಕೆಟ್ಟ ಪ್ರಚೋದನೆ ನೀಡಿದಂತಾಗುತ್ತದೆ. ಯೂಥ್ ಕಾಂಗ್ರೆಸ್ ನೈಟ್ ಲೈಫ್, ಪಬ್, ರೆಸ್ಟೆೋರೆಂಟ್‌ಗೆ ವಿರುದ್ಧವಾಗಿಲ್ಲ. ಆದರೆ ಈ ಸಂಪ್ರದಾಯ, ಸಂಸ್ಕೃತಿ ಒಪ್ಪಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹವನ್ನು ಈ ಸಂಪ್ರದಾಯಕ್ಕೆ ತಳ್ಳಲು ನಾವು ಬಿಡುವುದಿಲ್ಲ. ಹೀಗಾಗಿ ಪಬ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಕ್ಷಯ್ ಜೈನ್ ಆಗ್ರಹಿಸಿದ್ದಾರೆ.
ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಮಂತ್ರ ಪಡೆದ ಕೆಲವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಕಾಂಡೋಮ್ ನೀಡಿ ಹೊಸ ವರ್ಷ ಆಚರಣೆ ಮಾಡುವ ದುಸ್ಥಿತಿ ಯಾಕೆ ಬಂತು ಎಂದು ಅಕ್ಷಯ್ ಜೈನ್ ಪ್ರಶ್ನಿಸಿದ್ದಾರೆ. ಈ ರೀತಿಯ ಘಟನೆಗಳಿಂದ ನಗರದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಕ್ಷಯ್ ಜೈನ್ ಹೇಳಿದ್ದಾರೆ.
ಹೊಸ ವರ್ಷ ಸಂಭ್ರಮದಲ್ಲಿ ದೇಶಾದ್ಯಂತ ಎಲ್ಲಾ ಪಬ್‌ಗಳು ತುಂಬಿ ತುಳುಕಲಿದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಅತ್ಯಂತ ವಿಶೇಷವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ಅದ್ಧೂರಿ ಪಾರ್ಟಿ ನಡೆಯಲಿದೆ. ಬೆಂಗಳೂರಿನ ಎಲ್ಲಾ ಪಬ್ ರೆಸ್ಟೋರೆಂಟ್ ಭರ್ತಿಯಾಗಲಿದೆ. ಈಗಾಗಲೇ ಪೊಲೀಸರು ಅಹಿತಕರ ಘಟನೆ ಸಂಭವಿಸದಂತೆ ತಡೆಯಲ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.
ದೇಶ ಶೋಕಾಚರಣೆಯಲ್ಲಿರುವಾಗ ರಾಹುಲ್ ಗಾಂಧಿ ವಿದೇಶದಲ್ಲಿ ಹೊಸ ವರ್ಷ ಪಾರ್ಟಿ, ಬಿಜೆಪಿ ಆರೋಪ!