20 ವರ್ಷಗಳಿಂದ ಪತ್ನಿ ಜೊತೆ ಮಾತು ಬಿಟ್ಟ, ಕಾರಣ ಹೇಳ್ತೀವಿ ಕೇಳಿ!
ಒಂದೇ ಮನೆಯಲ್ಲಿದ್ದಾಗ ಮಾತು ಅನಿವಾರ್ಯ. ದಂಪತಿ ಅನೇಕ ವಿಷ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದ್ರೆ ಒಂದೇ ಸೂರಿನಡಿ ಇದ್ರೂ, ಒಂದೇ ಹಾಸಿಗೆ ಮೇಲೆ ಮಲಗಿದ್ರೂ ಮಾತೇ ಇಲ್ಲ ಅಂದ್ರೆ.?
ದಂಪತಿ ಮಧ್ಯೆ ಜಗಳ, ಗಲಾಟೆ ಸಾಮಾನ್ಯ. ದಂಪತಿ ಮಧ್ಯೆ ಸಣ್ಣಪುಟ್ಟ ಜಗಳಗಳು ಅವರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ ಎನ್ನುವ ಮಾತಿದೆ. ಕೆಲ ಜೋಡಿ ಇಡೀ ದಿನ ಜಗಳ ಆಡಿದ್ರೂ ಅವರಿಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗಿರೋದಿಲ್ಲ. ಮತ್ತೆ ಕೆಲವರು ಸಣ್ಣ ಜಗಳವನ್ನೇ ದೊಡ್ಡದು ಮಾಡುತ್ತಾರೆ. ಒಂದೆರಡು ದಿನ ಇಬ್ಬರ ಮಧ್ಯೆ ಮಾತುಕತೆ ಇರೋದಿಲ್ಲ. ಇನ್ನು ಕೆಲವರು ಸಣ್ಣ ಜಗಳಕ್ಕೆ ವಿಚ್ಛೇದನ ನೀಡುವುದಿದೆ. ಮುನಿಸಿಕೊಂಡ ವ್ಯಕ್ತಿ ಜೊತೆಯಲ್ಲಿದ್ದಾಗ ಆತನ ಜೊತೆ ಮಾತನಾಡದೆ ಇರೋದು ಬಹಳ ಕಷ್ಟ. ಅಂತೂ ಇಂತೂ ಒಂದು ದಿನ, ಒಂದು ವಾರ ಕಳೆಯಬಹುದು. ಆದ್ರೆ ಹತ್ತು – ಇಪ್ಪತ್ತು ವರ್ಷ ಕಳೆಯೋದು ಅಸಾಧ್ಯವಾದ ಮಾತು. ಇಬ್ಬರೂ ಒಂದೇ ಮನೆಯಲ್ಲಿದ್ದಾಗ ಮಾತುಕತೆ ಅನಿವಾರ್ಯವಾಗುತ್ತದೆ. ಅದೂ ದಂಪತಿ ಮಧ್ಯೆ ನಾನಾ ವಿಷ್ಯಗಳ ಚರ್ಚೆ ಆಗ್ಲೇಬೇಕು. ಆದ್ರೆ ಈ ದಂಪತಿ ನಡೆಸಿದ ಜೀವನ ಅಚ್ಚರಿಯುಂಟು ಮಾಡುತ್ತೆ. ಯಾಕೆಂದ್ರೆ ಪತಿ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತ್ತು ವರ್ಷ ಪತ್ನಿ ಜೊತೆ ಮಾತು ಬಿಟ್ಟಿದ್ದಾನೆ. ಕೊನೆಯಲ್ಲಿ ಒಂದಾಗಿದ್ದು, ಆ ಕ್ಷಣ ಪತ್ನಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಜಪಾನಿ (Japanese) ನ ಈ ಪತಿ ಮತ್ತು ಪತ್ನಿ ಹೆಸರು ಒಟೌ ಕಟಯಾಮಾ ಮತ್ತು ಯುಮಿ. 20 ವರ್ಷಗಳಿಂದ ಹೆಂಡತಿ ಜೊತೆ ಮಾತನಾಡದೆ ಶಿಕ್ಷೆ (Punishment) ನೀಡಿದ್ದಾನೆ ಒಟೌ ಕಟಯಾಮಾ. ಇಬ್ಬರಿಗೆ ಮೂರು ಮಕ್ಕಳು. ಅವರಲ್ಲಿ ಒಬ್ಬ ಮಗ ಅಲ್ಲಿನ ಹೊಕ್ಕೈಡೊ ಟಿವಿಗೆ ಇಮೇಲ್ ಮಾಡಿದ್ದ. ತನ್ನ ತಂದೆ ಅಮ್ಮ (Mom) ನ ಜೊತೆ ಇಪ್ಪತ್ತು ವರ್ಷಗಳಿಂದ ಮಾತನಾಡುತ್ತಿಲ್ಲ. ಅಮ್ಮ ಇದ್ರಿಂದ ತುಂಬಾ ಬೇಸರದಲ್ಲಿದ್ದಾರೆ. ಒಂಟಿತನ ಅನುಭವಿಸುತ್ತಿದ್ದಾರೆ. ಅವರಿಗೆ ನೆರವು ನೀಡಿ, ಇಬ್ಬರು ಮಾತನಾಡುವಂತೆ ಮಾಡಿ ಎಂದು ವಿನಂತಿಸಿಕೊಂಡಿದ್ದ. ಈ ಮೇಲ್ ನೋಡಿದ ಹೊಕ್ಕೈಡೊ ಟಿವಿ ಸಿಬ್ಬಂದಿ ಅಚ್ಚರಿಗೊಂಡಿದ್ದರು. ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ ಟಿವಿಯವರು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದರು.
ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!
ಕಾರಣ : ಟಿವಿ ಶೋನಲ್ಲಿ ಒಟೌ ಕಟಯಾಮಾ ಮಾತನಾಡದಿರಲು ಕಾರಣ ಏನು ಎಂಬುದನ್ನು ಹೇಳಿದ್ದಾನೆ. ಪತ್ನಿ ಯಮಿ ಕೇವಲ ಮಕ್ಕಳ ಬಗ್ಗೆ ಗಮನ ನೀಡುತ್ತಿದ್ದಳು. ತನ್ನ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ನನ್ನ ಬಗ್ಗೆ ಕಾಳಜಿ ತೋರುತ್ತಿರಲಿಲ್ಲ. ಇದ್ರಿಂದ ಕೋಪಗೊಂಡು ಮಾತು ಬಿಟ್ಟಿದ್ದೆ ಎಂದು ಒಟೌ ಕಟಯಾಮಾ ಹೇಳಿದ್ದಾನೆ. ಟಿವಿ ಶೋ ಮುಗಿದ ಮೇಲೆ ಒಟೌ ಕಟಯಾಮಾ, ಪತ್ನಿಯನ್ನು ನಾರಾ ಪಾರ್ಕ್ ಗೆ ಕರೆದಿದ್ದಾನೆ. ನಿನ್ನ ಜೊತೆ ಮಾತನಾಡಬೇಕು ಬರ್ತಿಯಾ ಎಂದಿದ್ದಾನೆ.
ಇದಾದ್ಮೇಲೆ ಇಬ್ಬರೂ ಪಾರ್ಕ್ ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಮಕ್ಕಳು, ಪಾಲಕರನ್ನು ದೂರದಿಂದ ನೋಡಿದ್ದಾರೆ. ನಾವಿಬ್ಬರೂ ಮಾತನಾಡದೆ ತುಂಬಾ ಸಮಯವಾಗಿದೆ. ನಿನಗೆ ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಇತ್ತು. ನೀನು ಇಲ್ಲಿಯವರೆಗೆ ತುಂಬಾ ನೋವನ್ನು ಅನುಭವಿಸಿದ್ದೀಯಾ. ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ಇನ್ಮುಂದೆ ನಾನು ಮಾತನಾಡಲು ಬಯಸುತ್ತೇನೆ. ಇದ್ರ ನಂತ್ರ ನಮ್ಮ ಜೀವನ ಮತ್ತೆ ಸರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಪತಿ ಹೇಳಿದ್ದಾನೆ. ಅಲ್ಲದೆ ಪತ್ನಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಸಂಗಾತಿ ಬದುಕಿದ್ದಾಗ ವಿಚ್ಚೇದನವಾಗದೆ ಮತ್ತೊಬ್ಬರೊಡನೆ ಲಿವ್ ಇನ್‌ನಲ್ಲಿರುವಂತಿಲ್ಲ; ಅಲಹಾಬಾದ್ ಹೈಕೋರ್ಟ್
ಮತ್ತೆ ತಂದೆ – ತಾಯಿ ಮಾತನಾಡುತ್ತಿರೋದನ್ನು ನೋಡಿ ಮಕ್ಕಳು ಭಾವುಕರಾಗಿದ್ದಾರೆ. ಈ ವಿಷ್ಯವನ್ನು ಮಗ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ಬಗ್ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಇದು ಕೋಪವಲ್ಲ ಭಾವನಾತ್ಮಕ ನಿಂದನೆ (Emotional Assault) ಎಂದು ಅನೇಕರು ಕರೆದಿದ್ದಾರೆ.