ನಿಮ್ಮ ಸಂಗಾತಿ ನೇರವಾಗಿ ನಿಮ್ಮನ್ನು ಟೀಕೆ ಮಾಡದೆ ಇರಬಹುದು. ನಿಮ್ಮ ಧೋರಣೆಗಳನ್ನು ನೇರಾನೇರ ಖಂಡಿಸದೆ ಇರಬಹುದು. ಆದರೆ, ಅವರು ತಮ್ಮ ಕೆಲವು ವರ್ತನೆಗಳ ಮೂಲಕ ನಿಮ್ಮ ಮೇಲೆ ಒಂದು ರೀತಿಯ ಒತ್ತಡವನ್ನು ಹೇರಬಹುದು. ನಿಮ್ಮಲ್ಲಿ ಅಸಹಾಯಕತೆಯನ್ನು ಮೂಡಿಸಬಹುದು.
ಸಹಜ, ಸುಂದರವಾದ ಪ್ರೀತಿ ಯಾವತ್ತೂ ಮನಸ್ಸನ್ನು ಅರಳಿಸುತ್ತದೆ, ಅರಳಿಸಬೇಕು. ಪ್ರೀತಿಯ ಮಧುರ ಭಾವನೆಯಿಂದ ಜಗತ್ತೆಲ್ಲ ಪ್ರೇಮಮಯವಾಗಿ ತೋರುತ್ತದೆ. ನಿಜವಾದ ಪ್ರೀತಿಯ ಸಂಬಂಧದಿಂದ ಜೀವನದಲ್ಲಿ ಪರಿಪೂರ್ಣತೆ ಸಾಧ್ಯವಾಯಿತೆಂಬ ತೃಪ್ತಿ ಮೂಡುತ್ತದೆ. ಆದರೆ, ಕೆಲವೊಮ್ಮೆ ಸಂಬಂಧವೊಂದು ಆರಂಭವಾದರೆ ಸದ್ದಿಲ್ಲದೆ ಮನೋವಿಕಾರ ಹೆಚ್ಚಾಗುತ್ತದೆ. ಅಂದರೆ, ನಮ್ಮ ಆತ್ಮವಿಶ್ವಾಸ ನಿಧಾನವಾಗಿ ಕುಗ್ಗಬಹುದು, ಸಿನಿಕತನ ಹೆಚ್ಚಾಗಬಹುದು. ನಕಾರಾತ್ಮಕ ಮನೋಭಾವ ಮೂಡಬಹುದು. ನಮ್ಮನ್ನು ನಾವು ನೋಡಿಕೊಳ್ಳುವ ದೃಷ್ಟಿಕೋನದಲ್ಲಿ ಬಹುದೊಡ್ಡ ಬದಲಾವಣೆ ಆಗಬಹುದು. ಇದಕ್ಕೆ ಸಂಗಾತಿಯೇ ನೇರವಾಗಿ ಕಾರಣವಾಗಿರಬಹುದು. ಅಂದ ಹಾಗೆ, ನಿಮ್ಮ ಸಂಗಾತಿ ನಿಮಗೆ ಪ್ರಶ್ನೆಗಳ ಬಾಣವೆಸೆದು ಸುಮ್ಮನಾಗಿಸುತ್ತಾರೆಯೇ? ನಿಮ್ಮ ಸಂಗಾತಿ ಎಲ್ಲ ನಿರ್ಧಾರವನ್ನು ತಾವೊಬ್ಬರೇ ತೆಗೆದುಕೊಳ್ಳುತ್ತಾರೆಯೇ? ಕೆಲವು ವಿಚಾರಗಳಲ್ಲಿ ನಿಮ್ಮನ್ನು ಪ್ರಶ್ನಿಸುವುದು ಅನಗತ್ಯ ಎಂದು ಭಾವಿಸುತ್ತಾರೆಯೇ? ಹಾಗಿದ್ದರೆ ಖಂಡಿತವಾಗಿ ಇದು ಎಚ್ಚೆತ್ತುಕೊಳ್ಳುವ ಸಮಯ. ಈ ಲಕ್ಷಣಗಳು ನಿಮ್ಮ ಸಂಗಾತಿ ಅರಿವಿಗೆ ಬಾರದಂತೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತ ಸಾಗುವಂತಹ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದನ್ನು ತೋರುತ್ತವೆ. ಮೇಲ್ನೋಟಕ್ಕೆ ಅವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡದಿರಬಹುದು. ಆದರೆ, ಅವರು ನಿಮ್ಮ ಯಾವುದೇ ವಿಚಾರಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿರುತ್ತಾರೆ. ಅದರಿಂದ ನಿಮ್ಮ ವಿಶ್ವಾಸಕ್ಕೆ ನಿರಂತರವಾಗಿ ಧಕ್ಕೆಯಾಗುತ್ತಿರುತ್ತದೆ. ಕೆಲವು ವರ್ತನೆಗಳ ಮೂಲಕ ಅವರು ನಿಮ್ಮ ಬದುಕನ್ನು ನಕಾರಾತ್ಮಕವಾಗಿಸುತ್ತ ಸಾಗಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.
• ನಿಮ್ಮನ್ನು ಪರಿಗಣಿಸದೇ ತಾವೇ ನಿರ್ಧಾರ (Decisions) ಕೈಗೊಳ್ಳುವುದು
ಉತ್ತಮ ಸಂಗಾತಿ (Partner)ಯಾದವರು ಇನ್ನೊಬ್ಬರ ನಿಲುವನ್ನು ಪರಿಗಣಿಸುತ್ತಾರೆ. ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ, ಕೆಲವರು ತಮ್ಮದೊಬ್ಬರದ್ದೇ ಬದುಕು ಎನ್ನುವಂತೆ ವರ್ತಿಸುತ್ತಾರೆ. ಸಂಸಾರದಲ್ಲಿ (Family) ಕೆಲವು ಸಂಗತಿಗಳ ಬಗ್ಗೆ ಇಬ್ಬರೂ ಕೂಡಿಯೇ ನಿರ್ಧಾರ ಕೈಗೊಳ್ಳಬೇಕಾಗಿರುತ್ತದೆ. ಹಾಗೆ ಮಾಡದೆ ನಿಮ್ಮ ಅಭಿಪ್ರಾಯವನ್ನು (Suggestion) ಕೇಳುವುದು ಅನಗತ್ಯವೆಂದು ಭಾವಿಸುವುದು, ನಿಮ್ಮನ್ನು ಪರಿಗಣನೆಗೆ (Consider) ತೆಗೆದುಕೊಳ್ಳದೇ ವರ್ತಿಸುವುದು ಒಳ್ಳೆಯದಲ್ಲ. ಆಗ ಏನಾಗುತ್ತದೆ ಎಂದರೆ ನಿಮ್ಮದೇ ಸಂಸಾರದ ಬಗ್ಗೆ ನಿಮಗೆ ಪೂರ್ತಿ ಅರಿವು ಇರುವುದಿಲ್ಲ. ಇದೊಂಥರ ನಿಮ್ಮನ್ನು ಕತ್ತಲೆಯಲ್ಲಿ ಇಟ್ಟ ಹಾಗೆ ಆಗುತ್ತದೆ.
ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸೋದು ಹೇಗೆ?
• ನೀವೇ ಪ್ರತಿ ಬಾರಿ ಸಾರಿ (Sorry) ಕೇಳಬೇಕು!
ನಿಮ್ಮ ಸಂಗಾತಿ ಪ್ರತಿ ಬಾರಿ ನೀವೇ ಸಾರಿ ಕೇಳುವಂತಹ ಒತ್ತಡ ನಿರ್ಮಿಸುತ್ತಾರೆಯೇ? ಚಿಕ್ಕಪುಟ್ಟ ವಿಚಾರಕ್ಕೂ ಬೇಸರ ಮಾಡಿಕೊಳ್ಳುತ್ತ, ಸೀನ್ ಕ್ರಿಯೇಟ್ (Scene Create) ಮಾಡುವ ಮೂಲಕ ನೀವು ಸಾರಿ ಕೇಳುವಂತೆ ಮಾಡುವ ಸಂಗಾತಿ ನಿಮಗಿದ್ದಾರಾ? ಹಾಗಾದರೆ ನಿಮ್ಮ ಜೀವನ (Life) ಸಾಕುಸಾಕಾಗುತ್ತದೆ. ಅಂತಹ ಸಂಗಾತಿ ಇದ್ದಾಗ ಪ್ರತಿಯೊಂದಕ್ಕೂ ನೀವೇ ಹೊಂದಾಣಿಕೆ (Adjustment) ಮಾಡಿಕೊಂಡು, ನೀವೇ ಸುಧಾರಿಸಿಕೊಂಡು ನಡೆಯಬೇಕಾಗುತ್ತದೆ.
• ಸಂಗಾತಿ ಜತೆಗೆ ಸಮಯ (Time) ಕಳೆಯಲು ನಿಮಗೆ ಭಯವೇ?
ಸಾಮಾನ್ಯವಾಗಿ ಪರಸ್ಪರ ಪ್ರೀತಿ-ಗೌರವವಿದ್ದಾಗ (Love and Respect) ಜತೆಗೆ ಸಮಯ ಕಳೆಯಲು ಬೇಸರವಾಗುವುದಿಲ್ಲ, ಭಯವೂ (Fear) ಇರುವುದಿಲ್ಲ. ಆದರೆ, ನಿಮ್ಮ ಸಂಗಾತಿ ಜತೆಗೆ ಸಮಯ ಕಳೆಯಲು ನಿಮಗೆ ಭಯವಾಗುತ್ತದೆ ಎಂದಾದರೆ ಅದು ಅಪಾಯದ ಸಂಕೇತ. ಅವರ ವರ್ತನೆ ನಿಮ್ಮನ್ನು ಅಷ್ಟರಮಟ್ಟಿಗೆ ರೋಸಿಹೋಗುವಂತೆ ಮಾಡಿರುತ್ತದೆ. ಅವರಲ್ಲಿ ನೀವು ಯಾವುದನ್ನೂ ನೇರವಾಗಿ ಹೇಳಲು ಸಾಧ್ಯವೇ ಆಗುವುದಿಲ್ಲ. ಕಾಲಕ್ರಮೇಣ ನೀವು ಅವರೆದುರು ಮೂಕರಾಗಿ ಬಿಡುತ್ತೀರಿ.
ಈ ರಾಶಿಯವರು ವಿಪರೀತ ಆತ್ಮ ವಿಶ್ವಾಸಿಗಳು
• ನಿಮಗೆ ಸ್ವಯಂ ಗೌರವ (Self-Respect) ಇಲ್ಲದಿರುವುದು
ನಿಮ್ಮ ಸಂಗಾತಿ ನಿಮ್ಮನ್ನು ಎಷ್ಟು ಸತಾಯಿಸಬಹುದು ಎಂದರೆ, ಅದರಿಂದಾಗಿ ನಿಮ್ಮ ಬಗ್ಗೆಯೇ ನಿಮಗೆ ಗೌರವ ಇಲ್ಲದೆ ಹೋಗಬಹುದು. ಕೆಲವೊಮ್ಮೆ ನಿಮ್ಮನ್ನು ನೀವೇ ಘಾಸಿಗೊಳಿಸಿಕೊಳ್ಳಬಹುದು. ಆತ್ಮವಿಶ್ವಾಸ (Self Esteem) ಕುಸಿಯಬಹುದು. ನಿಮ್ಮ ಬಗ್ಗೆ ನಿಮ್ಮಲ್ಲಿ ಯಾವ ಭಾವನೆ ಇದೆ ಎನ್ನುವುದನ್ನು ಗುರುತಿಸಿಕೊಂಡು ಮುನ್ನಡೆಯಿರಿ.
