Asianet Suvarna News Asianet Suvarna News

ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಾ? ಪೋರ್ನ್ ನೋಡೋ ಮುಂಚೆ ಇದನ್ನ ತಿಳ್ಕೊಳ್ಳಿ!

ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧ ಅಲ್ಲವಾ? ಅಲ್ಲವೆಂದಾದರೆ ಕದ್ದು ಮುಚ್ಚಿ ಮಾತ್ರ ನೋಡುವುದು ಏಕೆ? ನೋಡುವುದು ಸರಿ ಎಂದಾದರೆ ತಯಾರಿಸುವುದು ತಪ್ಪಾ? ಈ ಎಲ್ಲ ಪ್ರಶ್ನೆಗಳು ನಿಮ್ಮಲ್ಲೂ ಮೂಡಿರಬಹುದು. ಅವುಗಳಿಗೆ ಉತ್ತರ ತಿಳಿಯಬೇಕಾದರೆ ಭಾರತದ ಕಾನೂನುಗಳ ಬಗ್ಗೆ ನೀವು ತಿಳಿಯಬೇಕು. ಅದನ್ನು ತಿಳಿಯೋಣ ಬನ್ನಿ.

Is watching porn prohibited in India?
Author
First Published Sep 17, 2022, 11:04 AM IST

ಕೆಲವು ತಿಂಗಳ ಹಿಂದೆ ಬಾಲಿವುಡ್ (bollywood) ನಟಿ ಶಿಲ್ಪಾ ಶೆಟ್ಟಿ (shilpa shetty) ಅವರ ಪತಿ ರಾಜ್ ಕುಂದ್ರಾ (raj kundra) ಅವರನ್ನು ಪೋರ್ನ್ (porn film) ಚಿತ್ರಗಳನ್ನು ತಯಾರಿಸಿ ಮಾರಾಟ ಮಾಡಿದ್ದಕ್ಕಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಕೆಲವೊಮ್ಮೆ ಪೋರ್ನ್ ವೆಬ್‌ಸೈಟ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದ ಸುದ್ದಿಗಳನ್ನು ಓದುತ್ತೇವೆ. ಆದರೆ ಎಲ್ಲೂ, ಪೋರ್ನ್ ವೀಕ್ಷಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸಿದ, ದಂಡ ಹಾಕಿದ, ಜೈಲಿಗೆ ಹಾಕಿದ ನಿದರ್ಶನ ಇಲ್ಲ. 
ಹಾಗಿದ್ದರೆ, ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧ ಅಲ್ಲವಾ? ಅಲ್ಲವೆಂದಾದರೆ ಕದ್ದು ಮುಚ್ಚಿ ಮಾತ್ರ ನೋಡುವುದು ಏಕೆ? ನೋಡುವುದು ಸರಿ ಎಂದಾದರೆ ತಯಾರಿಸುವುದು ತಪ್ಪಾ? ಈ ಎಲ್ಲ ಪ್ರಶ್ನೆಗಳು ನಿಮ್ಮಲ್ಲೂ ಮೂಡಿರಬಹುದು. ಅವುಗಳಿಗೆ ಉತ್ತರ ತಿಳಿಯಬೇಕಾದರೆ ಭಾರತದ ಕಾನೂನುಗಳು ಪೋರ್ನ್ ಕಂಟೆಂಟ್ (porn content) ಬಗ್ಗೆ ಏನು ಹೇಳುತ್ತವೆ ಎಂದು ನೀವು ತಿಳಿಯಬೇಕು. ಅದನ್ನು ತಿಳಿಯೋಣ ಬನ್ನಿ. 

ಅಶ್ಲೀಲ ವಸ್ತುಗಳ ಮಾರಾಟ ಮತ್ತು ವಿತರಣೆ ಅಪರಾಧ
ಭಾರತೀಯ ದಂಡ ಸಂಹಿತೆ, (IPC) 1860ರ ಸೆಕ್ಷನ್ 292ರ ಅಡಿಯಲ್ಲಿ, ಕಾಮಪ್ರಚೋದಕ ಅಥವಾ ಅಶ್ಲೀಲವಾದ ಯಾವುದೇ ಚಿತ್ರ, ಚಿತ್ರಕಲೆ, ಬರವಣಿಗೆ, ಪುಸ್ತಕ, ಕರಪತ್ರ ಅಥವಾ ರೇಖಾಚಿತ್ರವನ್ನು ಮಾರಾಟ ಮಾಡುವುದು, ವಿತರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವುದು, ಆಮದು ಮಾಡಿಕೊಳ್ಳುವುದು ಅಥವಾ ರಫ್ತು ಮಾಡುವುದು ಶಿಕ್ಷಾರ್ಹ ಅಪರಾಧ. ಈ ಕಾನೂನು ಸಿದ್ಧಪಡಿಸುವಾಗ ಸಿನಿಮಾಗಳಾಗಲೀ, ಇಂಟರ್‌ನೆಟ್ ಆಗಲೀ ಇರಲಿಲ್ಲ. ಆದ್ದರಿಂಧ ಇಲ್ಲಿ ಪುಸ್ತಕ, ಚಿತ್ರಕಲೆ ಎಂದು ಇದ್ದಲ್ಲಿ ಸಿನಿಮಾ, ವಿಡಿಯೋ ಎಂದೂ ಅರ್ಥ ಮಾಡಿಕೊಳ್ಳಬಹುದು. ಈ ಕಾನೂನು ಉಲ್ಲಂಘಿಸಿದವರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಮೊದಲ ಅಪರಾಧಕ್ಕೆ 2000 ರೂ. ಮತ್ತು ನಂತರದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. 

ಅಪ್ರಾಪ್ತರಿಗೆ ಮಾರಾಟ ಅಪರಾಧ
ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಕಾಮಪ್ರಚೋದಕ ಅಥವಾ ಅಶ್ಲೀಲವಾದ ಯಾವುದೇ ಚಿತ್ರ, ಚಿತ್ರಕಲೆ, ಬರಹ, ಪುಸ್ತಕ, ಕರಪತ್ರ ಅಥವಾ ರೇಖಾಚಿತ್ರ ಮಾರಾಟ ಮಾಡಿದರೆ, ವಿತರಿಸಿದರೆ, ಪ್ರದರ್ಶಿಸಿದರೆ ಅಥವಾ ಪ್ರಸಾರ ಮಾಡಿದರೆ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ನಂತರದ ಅಪರಾಧಕ್ಕಾಗಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 5000 ದಂಡ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ ಅಪರಾಧ 
ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ಕಿರಿಕಿರಿ, ಮುಜುಗರ ಉಂಟುಮಾಡುವ ಅಶ್ಲೀಲ ಹಾಡುಗಳು ಅಥವಾ ಪದಗಳನ್ನು ಹಾಡುವುದು, ಪಠಿಸುವುದು ಅಥವಾ ಹೇಳುವುದು ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಆರೋಪಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: Sexual Wellness: ಈ ಹುಡುಗಂಗೆ ಆಂಟೀರಂದ್ರೆ ಪ್ರಾಣ ಅಂತೆ; ಹುಡುಗೀರಂದ್ರೆ ಅಷ್ಟಕ್ಕಷ್ಟೇ!

ಇತ್ತೀಚಿನ ದಿನಗಳಲ್ಲಿ, ಅಶ್ಲೀಲ ವಸ್ತುಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿವೆ, ಈ ಕಾರಣದಿಂದಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 67A ಮತ್ತು ಸೆಕ್ಷನ್ 67B ಅನ್ನು ಜಾರಿಗೊಳಿಸಲಾಗಿದೆ. ಸೆಕ್ಷನ್ 67A ಪ್ರಕಾರ ಅಶ್ಲೀಲ ಲೈಂಗಿಕ ಕ್ರಿಯೆಗಳ ಪ್ರಕಟಣೆ, ಪ್ರಸಾರ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಹಂಚುವಿಕೆ ಶಿಕ್ಷಾರ್ಹ. ಆರೋಪಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ನಂತರದ ಅಪರಾಧದ ಸಂದರ್ಭದಲ್ಲಿ ಈ ಜೈಲು ಶಿಕ್ಷೆಯನ್ನು ಏಳು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಕಾಯಿದೆಯ ಸೆಕ್ಷನ್ 67B ಪ್ರಕಾರ, ಮಕ್ಕಳನ್ನು ಲೈಂಗಿಕವಾಗಿ, ಅಶ್ಲೀಲವಾಗಿ ಚಿತ್ರಿಸುವ ದೃಶ್ಯಗಳನ್ನು ಒಳಗೊಂಡಿದ್ದರೆ ಇನ್ನಷ್ಟು ಕಠಿಣ ಶಿಕ್ಷೆಯಿದೆ.

ಹಾಗಿದ್ದರೆ ಪೋರ್ನ್ ನೋಡಬಹುದಾ? 
ಹೌದು, ಭಾರತದಲ್ಲಿ ಖಾಸಗಿಯಾಗಿ ಪೋರ್ನ್ ನೋಡಲು ಯಾವುದೇ ಕಾನೂನು ಅಡ್ಡಿಪಡಿಸುವುದಿಲ್ಲ. ಭಾರತೀಯ ಸಂವಿಧಾನದ 21ನೇ ವಿಧಿಯ ಪ್ರಕಾರ ಖಾಸಗಿ ಸ್ಥಳಗಳಲ್ಲಿ ಲೈಂಗಿಕತೆ ವೀಕ್ಷಿಸುವುದು  ಕಾನೂನುಬಾಹಿರವಲ್ಲ, ಇದು ಭಾರತೀಯ ನಾಗರಿಕರಿಗೆ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಡಿ ಬರುತ್ತದೆ. ಇದನ್ನು 2015ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮೌಖಿಕವಾಗಿ ಸಮ್ಮತಿಸಿದೆ. 

ಹಾಗಿದ್ದರೆ ಅದರರ್ಥವೇನು?
ಎಂದರೆ ನೋವು ಭಾರತದಲ್ಲಿ ಖಾಸಗಿಯಾಗಿ ಪೋರ್ನ್ ವೀಕ್ಷಿಸಬಹುದು. ಆದರೆ ಅಶ್ಲೀಲ ಕೃತ್ಯಗಳನ್ನು ಚಿತ್ರೀಕರಿಸಿ ಅದನ್ನು ವಿತರಿಸುವುದು, ಮಾರುವುದು ಅಪರಾಧ. ಮಕ್ಕಳನ್ನು ಇದಕ್ಕೆ ಬಳಸಿಕೊಂಡರೆ ಗಂಭೀರ ಅಪರಾಧ. ಅಪ್ರಾಪ್ತ ವಯಸ್ಸಿನವರಿಗೆ ಮಾರಿದರೆ ಕಠಿಣ ಶಿಕ್ಷೆ ಇದೆ. ಮಕ್ಕಳನ್ನು ಒಳಗೊಂಡ, ಮಹಿಳೆಯರನ್ನು ಹಿಂಸಿಸುವ ಪೋರ್ನ್ ಅನ್ನು ಖಾಸಗಿಯಾಗಿ ವೀಕ್ಷಿಸುವುದೂ, ಸಂಗ್ರಹಿಸಿಡುವುದೂ ಅಪರಾಧವೇ ಆಗಿರುತ್ತದೆ. ಹಾಗೇ ಯಾವುದೇ ಪೋರ್ನ್ ಅನ್ನು ವೀಕ್ಷಿಸಿದರೆ ತಪ್ಪಿಲ್ಲ, ಆದರೆ ಅದನ್ನು ಶೇರ್ ಮಾಡುವುದು, ಸಂಗ್ರಹಿಸಿಟ್ಟುಕೊಳ್ಳುವುದು ಅಪರಾಧ. ಅನ್ಯರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಕ್ರಿಯೆಗಳನ್ನು ಚಿತ್ರೀಕರಿಸುವುದು ಕೂಡ ಅಪರಾಧವೇ. 

ಇದನ್ನೂ ಓದಿ: ಒಂದಿನ ಬೇರೆಯವರ ಜೊತೆ ಮಲಗಬೇಕು, ಹೆಂಡತಿ ಡಿಮ್ಯಾಂಡಿಗೆ ಗಂಡ ಸುಸ್ತು!

Follow Us:
Download App:
  • android
  • ios