Asianet Suvarna News Asianet Suvarna News

Sexual Wellness: ಈ ಹುಡುಗಂಗೆ ಆಂಟೀರಂದ್ರೆ ಪ್ರಾಣ ಅಂತೆ; ಹುಡುಗೀರಂದ್ರೆ ಅಷ್ಟಕ್ಕಷ್ಟೇ!

ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಅವನ ವಯಸ್ಸಿನ ಹುಡುಗಿಯರನ್ನು ಕಂಡರೆ ಏನೂ ಅನಿಸಲ್ವಂತೆ. ಆದರೆ ವಯಸ್ಸಾದ ಆಂಟಿಯರನ್ನು ಕಂಡರೆ ಕಾಮೋದ್ರೇಕವಾಗುತ್ತಂತೆ. ಇದು ಯಾಕೆ, ಆಕರ್ಷಣೆ ಆಂಟಿಯರ ಮೇಲೆ ಹೇಗೆ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಉತ್ತರ ಇಲ್ಲಿದೆ.

teenage boy have fantasy on aunties than younger girls
Author
First Published Sep 15, 2022, 11:54 AM IST

ನಾನು ಕಾಲೇಜು ವಿದ್ಯಾರ್ಥಿ. ನಮ್ಮ ಕಾಲೇಜಿನಲ್ಲಿ ಸಖತ್ತಾಗಿರುವ ತುಂಬ ಜನ ಹುಡುಗೀಯರಿದ್ದಾರೆ. ಆದರೆ ನನಗೆ ಅವರನ್ನು ನೋಡಿದ್ರೆ ಏನೂ ಅನಿಸೋಲ್ಲ. ಆದರೆ ಅಮ್ಮನಿಂತ ಸ್ವಲ್ಪ ಚಿಕ್ಕ ವಯಸ್ಸಿನ ಆಂಟಿಯರನ್ನು ಕಂಡರೆ ತುಂಬ ಆಕರ್ಷಣೆಯಾಗುತ್ತದೆ. ಕನಸಲ್ಲೂ ಅವರೇ ಬರುತ್ತಾರೆ. ನನಗೇನಾದರೂ ಪ್ರಾಬ್ಲಂ ಆಗಿದೆಯಾ?

ಪ್ರಶ್ನೆ: ನನಗೀಗ ಇಪ್ಪತ್ತು ವರ್ಷ ವಯಸ್ಸು. ಕಾಲೇಜು ವಿದ್ಯಾರ್ಥಿ. ನನ್ನ ಗೆಳೆಯರಲ್ಲಿ ಹೆಚ್ಚಿನವರಿಗೆ ಅವರ ಜೂನಿಯರ್ಸ್ ಜೊತೆಗೆ ಅಫೇರ್ ಇದೆ. ನಮ್ಮ ಕ್ಲಾಸಿನ ಹುಡುಗಿಯರನ್ನು ಗರ್ಲ್ ಫ್ರೆಂಡ್ ಮಾಡಿಕೊಂಡವರೂ ಇದ್ದಾರೆ. ಆದರೆ ನನಗೆ ಮಾತ್ರ ಅವರನ್ನು ಕಂಡರೆ ಅಸೂಯೆಯಾಗುತ್ತೆ. ಯಾಕೆಂದರೆ ನನಗೊಂದು ವಿಚಿತ್ರ ಸಮಸ್ಯೆ ಇದೆ. ನನಗೆ ಅವರಂತೆ ಕಾಲೇಜು ಹುಡುಗಿಯರಲ್ಲಿ ಯಾವ ಭಾವನೆಯೂ ಬರುವುದಿಲ್ಲ. ಆಕರ್ಷಣೆಯಂತೂ ದೂರದ ಮಾತು. ಹಾಗಂತ ನಾನೇನೂ ಷಂಡನಲ್ಲ. ನನಗೂ ಸೆಕ್ಸ್‌ನಲ್ಲಿ ಆಸಕ್ತಿ ಇದೆ. ಆದರೆ ನನಗೆ ಅದಕ್ಕೆ ಹುಡುಗಿಯರಿಗಿಂತ ಆಂಟಿಯರೇ ಹೆಚ್ಚು ಇಷ್ಟ ಆಗುತ್ತಾರೆ. ಅವರನ್ನು ಕಂಡರೆ ಆಕರ್ಷಣೆ ಆಗುತ್ತದೆ. ಆದರೆ ಯಾರ ಎದುರಿನಲ್ಲೂ ಇದನ್ನು ಹೇಳಿಕೊಳ್ಳುವ ಧೈರ್ಯ ಇಲ್ಲ. ಅಮ್ಮನಿಂದ ತುಸು ಚಿಕ್ಕವರಾದ ಆಂಟಿಯರು ಹತ್ತಿರದಿಂದ ಹಾದು ಹೋದರೆ ಮೈ ಮುಟ್ಟಿ ಮಾತನಾಡಿದರೆ ನಾನು ಸಂಪೂರ್ಣ ಬೆವೆತು ಹೋಗುತ್ತೇನೆ. ರಾತ್ರಿಯೆಲ್ಲ ಅವರೇ ಕನಸಲ್ಲಿ ಬರುತ್ತಾರೆ. ಇದು ನನ್ನ ಸಮಸ್ಯೆಯಾ ಅಥವಾ ನಾರ್ಮಲ್ ವಿಷಯವಾ ಅನ್ನೋದು ಗೊತ್ತಾಗುತ್ತಿಲ್ಲ. ಆನ್‌ಲೈನ್ ಮೂಲಕ ಪರಿಚಯವಾದ ವಿದೇಶದ ಗೆಳೆಯನಲ್ಲಿ ಈ ವಿಷಯ ಹೇಳಿದೆ. ಅವನು ನಮ್ಮ ದೇಶದಲ್ಲಿ ಇದೆಲ್ಲ ಕಾಮನ್ ಅಂದ. ಆದರೆ ನನಗ್ಯಾಕೋ ಇದು ಅಸಹಜ ಅನಿಸುತ್ತಿದೆ.

ಚಾಕೋಲೇಟ್‌ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜವಾ?

ಉತ್ತರ : ನಮ್ಮ ಭಾರತೀಯ ಸಮಾಜದಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಓಪನ್ ಆಗಿ ಚರ್ಚಿಸದ ಕಾರಣ ಎಷ್ಟೋ ವಿಷಯಗಳು ಗೊತ್ತೇ ಆಗಲ್ಲ. ಇದರಿಂದ ಅನೇಕ ಮಾನಸಿಕ ಸಮಸ್ಯೆಗಳೂ ಬರುತ್ತವೆ. ನಿಮ್ಮ ಸಮಸ್ಯೆ ತೆಗೆದುಕೊಂಡರೆ ಅದಕ್ಕೆ ಉತ್ತರಿಸುವುದು ಸುಲಭವಲ್ಲ. ಏಕೆಂದರೆ ನಿಮ್ಮ ಹಿನ್ನೆಲೆ ಏನು ಅಂತ ತಿಳಿದಿಲ್ಲ. ನಿಮಗೆ ಆಂಟಿಯರ ಮೇಲೆ ಆಕರ್ಷಣೆಯಾಗುತ್ತದೆ ಅಂದರೆ ಅದಕ್ಕೊಂದು ಕಾರಣ ಇರಬೇಕು. ಬಹುಶಃ ನಿಮ್ಮ ವಯಸ್ಸಿನ ಅಥವಾ ನಿಮಗಿಂತ ಚಿಕ್ಕ ಹುಡುಗಿಯರು ಚೈಲಿಶ್ ಆಗಿ ವರ್ತಿಸುತ್ತಾರೆ ಅಂತ ನಿಮಗನಿಸಬಹುದು. ಆದರೆ ಆಂಟಿಯರು ಹೆಚ್ಚು ಮೆಚ್ಯೂರ್ಡ್ ಆಗಿ ಬಿಹೇವ್ ಮಾಡುತ್ತಾರೆ ಅನ್ನುವುದು ಕಾರಣ ಆಗಿರಬಹುದು. ಜೊತೆಗೆ ಅವರು ಸೆಕ್ಸ್‌ನಲ್ಲಿ ಪಳಗಿದವರಿರುತ್ತಾರೆ, ಹೆಚ್ಚು ಸುಖ ಸಿಗಬಹುದು ಅನ್ನುವ ಮನೋಭಾವ ಕಾರಣ ಇರಬಹುದು. ಆದರೆ ನೀವು ಇದೇ ಸಮಾಜದಲ್ಲೇ ಇರುವ ಕಾರಣ ಈ ಮನೋಭಾವ ಮುಂದುವರಿಯಲು ಬಿಡದಿರುವುದು ಬೆಟರ್ ಅನಿಸುತ್ತದೆ. ಏಕೆಂದರೆ ನೀವು ಭವಿಷ್ಯದಲ್ಲಾದರೂ ಹಿರಿಯ ಹೆಣ್ಣುಮಕ್ಕಳೊಂದಿಗೆ ಸಂಬಂಧವಿಡುವುದು ಅಪಾಯಕಾರಿ. ಬದಲಾಗಿ ನೀವೊಮ್ಮೆ ಮನೋವೈದ್ಯರ ಬಳಿ ಹೋಗಿ. ಅವರು ನಿಮಗೆ ಕೌನ್ಸಿಲಿಂಗ್ ಮಾಡುತ್ತಾರೆ. ಆಗ ನಿಮ್ಮ ಈ ಸಮಸ್ಯೆಗೆ ಹಿನ್ನೆಲೆಯಲ್ಲಿ ಏನಾದರೂ ಕಾರಣ ಇದ್ದರೆ ಪತ್ತೆಯಾಗುತ್ತೆ. ಒಂದು ವೇಳೆ ನೀವಿದನ್ನು ಪರಿಹರಿಸದಲ್ಲಿ ಮುಂದೆ ಇನ್ನೂ ಹೆಚ್ಚಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಗಂಡಸರು ಪ್ರತಿ 7 ನಿಮಿಷಕ್ಕೊಮ್ಮೆ ಸೆಕ್ಸ್‌ ಬಗ್ಗೆ ಯೋಚಿಸ್ತಾರಾ?

ಪ್ರಶ್ನೆ : ನನಗೆ 23 ವರ್ಷ ವಯಸ್ಸು. ಇತ್ತೀಚೆಗೆ ಒಂದು ಭಯ ಕಾಡುತ್ತಿದೆ. ಪದೇ ಪದೇ ನನಗೆ ಸ್ವಪ್ನ ಸ್ಖಲನವಾಗುತ್ತಿದೆ. ಇದರಿಂದ ನನ್ನ ವೀರ್ಯ ನಾಶವಾಗಬಹುದಾ? ಆಯುಸ್ಸು ಹೆಚ್ಚಬೇಕಾದರೆ ವೀರ್ಯನಾಶವಾಗಬಾರದು ಅನ್ನುತ್ತಾರಲ್ಲ. ನನಗೆ ಮದುವೆಯಾದಾಗ ಸಮಸ್ಯೆ ಆಗಬಹುದಾ? ಅಷ್ಟಕ್ಕೂ ವೀರ್ಯನಾಶ ಸಮಸ್ಯೆಯಾ ಅಥವಾ ಕಾಮನ್ ವಿಷಯವಾ?

ಉತ್ತರ: ವೀರ್ಯ ಅನ್ನುವುದು ಹೆಚ್ಚು ಕಡಿಮೆ ನಮ್ಮ ಬಾಯಲ್ಲಿರುವ ಎಂಜಲಿನ ಹಾಗೆ. ನಿಮಗೆ ಸ್ಖಲನವಾದಾಗ ಹೊರಬರುತ್ತವೆ. ಮತ್ತೆ ವೃಷಣಗಳ ಮೂಲಕ ತುಂಬಿಕೊಳ್ಳುತ್ತದೆ. ಈ ವಯಸ್ಸಿಗೆಲ್ಲ ಅದು ಖಾಲಿಯಾಗುವುದು ಅಂತಿಲ್ಲ. ನೀವು ಲೈಂಗಿಕ ಬಯಕೆಗಳನ್ನು ಬಲವಂತವಾಗಿ ತಡೆ ಹಿಡಿಯುವದರಿಂದ ಸ್ವಪ್ನ ಸ್ಖಲನ ಆಗಿರಬಹುದು. ಅದು ಖಂಡಿತಾ ಸಮಸ್ಯೆ ಅಲ್ಲ. ಕಾಮನ್ ವಿಚಾರ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಲೈಫ್ ಅನ್ನು ಎನ್ ಜಾಯ್ ಮಾಡಿ.

Follow Us:
Download App:
  • android
  • ios