ಮದುವೆ ಇಲ್ದೆ ಹೆಣ್ಣಿಗೆ ಅಸ್ತಿತ್ವ ಇಲ್ವಾ? ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ 'ಅಮೃತಧಾರೆ'ಯ ಭೂಮಿಕಾ!
ಹುಡುಗಿಯರಿಗೆ ಇಪ್ಪತ್ತು ವರ್ಷ ದಾಟಿದರೆ ಸಾಕು ಮದ್ವೆಯ ವಯಸ್ಸಾಯ್ತು ಅಂತಾನೇ ಅರ್ಥ,, ಮೂವತ್ತು ಆಯಿತೆಂದರೆ ಅರವತ್ತು ವರ್ಷದ ಮುದುಕಿಯಂತೆ ನೋಡಿಬಿಡುತ್ತಾರೆ. ಅಂದ್ರೆ, ಮದುವೆ ಇಲ್ದೆ ಹೆಣ್ಣಿಗೆ ಅಸ್ತಿತ್ವ ಇಲ್ವಾ? ಹೀಗೊಂದು ಪ್ರಶ್ನೆ ಎಲ್ಲರ ಮನದಲ್ಲೂ ಮೂಡಬಹುದು. ಈ ರೀತಿ ಎಷ್ಟೋ ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾಗಿದ್ದಾಳೆ ಅಮೃತಧಾರೆ ಸೀರಿಯಲ್‌ನ ಭೂಮಿಕಾ.
ಮದುವೆ ಅನ್ನೋದು ಜೀವನದಲ್ಲಿ ಒಂದು ಸುಂದರವಾದ ಸಂಬಂಧ..ಗಂಡು-ಹೆಣ್ಣು, ಕಷ್ಟಾನೋ, ಸುಖಾನೋ ಅರ್ಥ ಮಾಡಿಕೊಂಡು ದಾಂಪತ್ಯ ಜೀವನ ಸಾಗಿಸುವ ಅನುಬಂಧ. ಆದ್ರೆ ಕೆಲವೊಮ್ಮೆ ಮದುವೆಯೆಂಬುದು ಬೆಂಬಿಡದ ಬೇತಾಳದಂತೆ ಕಾಡುವುದಿದೆ. ಎಲ್ಲಕ್ಕಿಂತಲೂ ದೊಡ್ಡ ಸಮಸ್ಯೆಯಾಗಿ ಧುತ್ತೆಂದು ಜೀವನದ ಎಲ್ಲಾ ಆಗುಹೋಗುಗಳಿಗೆ ಅಡ್ಡಿಯಾಗುವುದಿದೆ. ಮದುವೆಯಾಗಬೇಕೆಂಬ ಮನೆಯವರ ಒತ್ತಡ ಇವತ್ತಿನ ಕಾಲದ ಯುವಕ-ಯುವತಿಯರು ಅನುಭವಿಸುತ್ತಿರುವ ದೊಡ್ಡ ಶಿಕ್ಷೆ. ಇಂತಿಷ್ಟು ವರ್ಷವಾದರೆ ಮದುವೆಯಾಗಿಬಿಡಲೇಬೇಕು ಅನ್ನೋ ನಿಯಮವನ್ನು ಅದ್ಯಾರು ಮಾಡಿದರೋ, ಮನೆ ಮಂದಿ, ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು ಬೆಂಬಿಡದೆ ಕಾಟ ಕೊಡೋದಂತೂ ತಪ್ಪೋದಿಲ್ಲ.
ಮದುವೆಯಾಗಬೇಕು, ವಯಸ್ಸಾಯಿತು ಅಂತಲ್ಲ, ಮನೆಯವರು ಒತ್ತಾಯಿಸಿದಾಗ ಅಲ್ಲ, ಅವರಿವರು ಏನೋ ಹೇಳುತ್ತಾರೆಂದು ಅಲ್ಲ. ಮದುವೆಯಾಗುವ ವ್ಯಕ್ತಿಗೆ ಮದುವೆಯಾಗಬೇಕು ಎಂದು ಅನಿಸಿದಾಗ ಮಾತ್ರ ಮದುವೆಯಾಗಬೇಕು. ಮನಸ್ಸಿಗೆ ಜೀವನ ಸಂಗಾತಿಯೊಬ್ಬ ಬೇಕೆನಿಸಿದಾಗ ಮದುವೆಯಾಗಬೇಕು. ಇಲ್ಲದಿದ್ದರೆ ಮದುವೆಯೆಂಬ ಸುಂದರ ಬಂಧವೇ ಜೀವನಕ್ಕೆ ಮುಳ್ಳಾಗಬಹುದು. ಅದೆಷ್ಟೋ ಮಂದಿಯ ಜೀವನಕ್ಕೆ ಮದುವೆಯೆಂಬುದೇ ಮುಳುವಾಗುತ್ತದೆ. ಬಾಂಧವ್ಯವೆಂಬುದೇ ಬಂಧನವಾಗಿ ಬಿಡುತ್ತದೆ. ತಾಳಿಯೆಂಬ ಮೂರು ಗಂಟು ಕಗ್ಗಂಟಾಗಿ ಬಿಡುತ್ತಾರೆ.
ಗಂಡ ಸರಿಯಾಗಿದ್ರೆ ಮಾತ್ರ ಜೀವನದಲ್ಲಿ ನೆಮ್ಮದಿಯಾಗಿರಬಹುದು: ಮದುವೆ ಬಗ್ಗೆ ಛಾಯಾ ಸಿಂಗ್ ಮಾತು
ಹೆಣ್ಣುಮಕ್ಕಳಿಗೆ ಮದುವೆಯಾಗಲೇಬೇಕೆಂಬ ಒತ್ತಾಯ ಯಾಕೆ?
ಮುಖ್ಯವಾಗಿ ನಾವಿಲ್ಲಿ ಮಾತನಾಡುತ್ತಿರುವುದು ಹೆಣ್ಣು ಮಕ್ಕಳ ಬಗ್ಗೆ. ಹಳ್ಳಿ ಕಡೆ ಹೈಸ್ಕೂಲ್ ಮುಗಿದರೆ ಸಾಕು ಹೆಣ್ಣು ಮಕ್ಕಳಿಗೆ ಹುಡುಗ ಹುಡುಗಿ ಮದುವೆ ಮಾಡಿಬಿಡುತ್ತಾರೆ. ಆಕೆಯ ಇಷ್ಟಕಷ್ಟಗಳನ್ನು ಕೇಳುವವರಿಲ್ಲ. ಆಕೆಯ ಮುಂದೆ ಓದುವ ಆಸೆ, ಉದ್ಯೋಗಕ್ಕೆ ಸೇರುವ ಆಸೆ, ಹೊಸ ಊರನ್ನು ಸುತ್ತುವ ಆಸೆ ಎಲ್ಲವನ್ನೂ ಗಂಟು ಕಟ್ಟಿ ಅಟ್ಟಕ್ಕೆ ಎಸೆದು ಬಿಡಬೇಕು ಅಷ್ಟೆ. ಹುಡುಗಿಯರಿಗೆ ಇಪ್ಪತ್ತು ವರ್ಷ ದಾಟಿದರೆ ಸಾಕು ಮದ್ವೆಯ ವಯಸ್ಸಾಯ್ತು ಅಂತಾನೇ ಅರ್ಥ,, ಮೂವತ್ತು ಆಯಿತೆಂದರೆ ಅರವತ್ತು ವರ್ಷದ ಮುದುಕಿಯಂತೆ ನೋಡಿಬಿಡುತ್ತಾರೆ. ಇನ್ನೂ ಮದುವೆಯಾಗಿಲ್ಲ ಅನ್ನೋ ಸಹತಾಪ, ಬೈಗುಳ, ದೋಷಾರೋಪಣೆ ಎಲ್ಲವೂ ಅದರಲ್ಲಿ ಸೇರುತ್ತದೆ. ಅಂದ್ರೆ, ಮದುವೆ ಇಲ್ದೆ ಹೆಣ್ಣಿಗೆ ಅಸ್ತಿತ್ವ ಇಲ್ವಾ? ಹೀಗೊಂದು ಪ್ರಶ್ನೆ ಎಲ್ಲರ ಮನದಲ್ಲೂ ಮೂಡಬಹುದು. ಈ ರೀತಿ ಎಷ್ಟೋ ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾಗಿದಾಳೆ ಅಮೃತಧಾರೆ ಸೀರಿಯಲ್‌ನ ಭೂಮಿಕಾ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ, ಮಧ್ಯಮವರ್ಗದ ಮನೆಯ ಯುವತಿಯಾಗಿದ್ದು, ಹೆಣ್ಣು ಮಕ್ಕಳಿಗೆ ಮದುವೆ ಯಾಕೆ ಅನಿವಾರ್ಯ ಎಂದು ಪ್ರಶ್ನಿಸುತ್ತಾಳೆ. ಕಥೆಯಲ್ಲಿ ಮೂವತ್ತು ವರ್ಷ ಕಳೆದರೂ ನಾಯಕಿಗೆ ಮದುವೆಯಾಗಿರುವುದಿಲ್ಲ. ಬಂಧ ಎಲ್ಲಾ ಸಂಬಂಧಗಳು ಸಹ ಕೂಡಿ ಬರುವುದಿಲ್ಲ. ಓಕೆ ಅನಿಸಿದ ಕೆಲ ಸಂಬಂಧಗಳು ವರದಕ್ಷಿಣೆ ಕೇಳುವ ಕಾರಣ ಭೂಮಿಕಾ ಮದುವೆಗೆ ಒಪ್ಪುವುದಿಲ್ಲ. ಹೀಗಿರುವಾಗ ಮನೆಯವರೆಲ್ಲರೂ ನೋಡಿದ ಸಂಬಂಧವೊಂದು, ಹುಡುಗಿ ನೋಡಲು ಬಂದ ಶಾಸ್ತ್ರದ ನಂತರ, ಹುಡುಗನಿಗೆ ಈಗಾಗಲೇ ಮದುವೆಯಾಗಿದೆ ಅನ್ನೋ ಕಾರಣಕ್ಕೆ ಮುರಿದು ಬೀಳುತ್ತದೆ. ಈ ಸಂದರ್ಭದಲ್ಲಿ ಮನಸ್ಸು ಮುರಿದುಕೊಂಡ ಭೂಮಿಕಾ, ಸಮಾಜ ಹೆಣ್ಣನ್ನು ನೋಡುವ ರೀತಿಯನ್ನು ಪ್ರಶ್ನಿಸುತ್ತಾಳೆ.
ಮತ್ತೆ ಕಿರುತೆರೆಗೆ ಮರಳಿದ ಛಾಯಾ ಸಿಂಗ್; 'ಅಮೃತಧಾರೆ'ಯಾಗಿ ಅಭಿಮಾನಿಗಳ ಮುಂದೆ ಖ್ಯಾತ ನಟಿ
ಯಾಕೆ ಹೆಣ್ಣು ಮಕ್ಕಳಿಗೆ ಮಾತ್ರ ಇಷ್ಟು ಪ್ಲಾಬ್ಲಂ
'ಮದ್ವೆ ಆದ್ರೆ ಮಾತ್ರ ಒಂದು ಹೆಣ್ಣಿಂದ ಬದುಕೋಕೆ ಸಾಧ್ಯನಾ, ಮದುವೆ ಲೇಟಾಗಿ ಆದ್ರೆ ತಪ್ಪು, ಮದುವೆ ಆಗದಿದ್ರೂ ತಪ್ಪು, ಮದ್ವೆ ಮುರಿದು ಹೋದ್ರೆ ಅದೂ ತಪ್ಪು, ಮದುವೆಯಾಗಿ ವಾಪಾಸ್ ತವರು ಮನೆಗೆ ಬಂದ್ರೆ ಅದು ಇನ್ನೂ ದೊಡ್ಡ ತಪ್ಪು, ಯಾಕೆ ಹೆಣ್ಮಕ್ಕಳಿಗೆ ಇಷ್ಟು ಪ್ರಾಬ್ಲಂ, ಯಾಕೆ ಹೆಣ್ಣು ಮಕ್ಕಳಿಗೆ ಮಾತ್ರ ಇಷ್ಟು ಪ್ಲಾಬ್ಲಂ. ಈ ತರ ಬೇಗ ಬೇಗ ಅವಸರದಲ್ಲಿ ಮದುವೆ ಮಾಡಿ ಕಳಿಸಿ, ಗಂಡನ ಮನೆಯಲ್ಲಿ ಕಷ್ಟ ಸಹಿಸಿಕೊಳ್ಳೋಕಾಗ್ದೆ, ಯಾರ ಹತ್ರಾನೂ ಹೇಳೋಕಾಗ್ದೆ, ಗಂಡನ ಮನೆಯಲ್ಲಿ ಇರೋಕು ಆಗ್ದೆ, ವಾಪಾಸ್ ತವರು ಮನೆಗೆ ಬರೋಕು ಆಗ್ದೆ ಹೆಣ್ಣುಮಕ್ಕಳು ನರಳ್ತಿದ್ದಾರೆ' ಎಂದು ಭೂಮಿಕಾ ಅಳುತ್ತಾ ಹೇಳುತ್ತಾಳೆ.
ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ, ಸಂಸ್ಕಾರ ಕೊಟ್ಟರೆ ಸಾಕಾಗುವುದಿಲ್ಲ ಆಕೆಗೆ ಮದುವೆಯಾಗಲೇಬೇಕೆಂಬ ಕಟ್ಟಳೆ ಯಾಕೆ. ಹೆಣ್ಣುಮಕ್ಕಳಿಗೆ ಮದುವೆ ಆದರಷ್ಟೇ ಜವಾಬ್ದಾರಿ ಮುಗಿಯುತ್ತದೆ ಎಂದು ಪೋಷಕರು ಅಂದುಕೊಳ್ಳುವುದು ಯಾಕೆ ಎಂದು ಭೂಮಿಕಾ ಪ್ರಶ್ನಿಸುತ್ತಾಳೆ. ಒಟ್ನಲ್ಲಿ ಈ ಧಾರವಾಹಿಯಲ್ಲಿ ಎಷ್ಟೋ ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾಗಿದಾಳೆ ಭೂಮಿಕಾ.