ಖ್ಯಾತ ನಟಿ ಛಾಯಾ ಸಿಂಗ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅಮೃತಧಾರೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಛಾಯಾ ಸಿಂಗ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಮದುವೆಯಾದ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಛಾಯಾ ಸಿಂಗ್ ಮಫ್ತಿ ಸಿನಿಮಾ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮತ್ತೆ ಸಕ್ರೀಯರಾಗಿದ್ದ ಛಾಯಾ ಸಿಂಗ್ ಕಿರುತೆರೆಗೆ ವಾಪಾಸ್ ಆಗಿದ್ದಾರೆ. ನಟಿ ಛಾಯಾ ಸಿಂಗ್ ಕಿರುತೆರೆ ಮೂಲಕವೇ ಬಣ್ಣದ ಲೋಕದ ಪಯಣ ಪ್ರಾರಂಭಿಸಿದವರು. ಇದೀಗ ಮತ್ತೆ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಛಾಯಾ ಸಿಂಗ್ ಅಮೃತಧಾರೆ ಎನ್ನುವ ಧಾರಾವಾಗಿ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ಝೀ ಕನ್ನಡ ವಾಹಿನಿಯಲ್ಲಿ 'ಅಮೃತಧಾರೆ' ಹೆಸರಿನಲ್ಲಿ ಹೊಸ ಧಾರಾವಾಹಿ ಪ್ರಾಸಾರವಾಗಲಿದೆ. ಸದ್ಯ ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಇಂಟ್ರಸ್ಟಿಂಗ್ ಆಗಿದೆ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಬೈಕ್‌ ಏರಿ ಬರ್ತಿರುವ ಛಾಯಾ ಸಿಂಗ್ ಸಿಗ್ನಲ್‌ನಲ್ಲಿ ನಿಂತುಕೊಳ್ತಾರೆ. ಹಣೆಗೆ ಬೊಟ್ಟು ಇಡಲು ಕನ್ನಡಿ ಹುಡುಕ್ತಾ ಇರ್ತಾರೆ. ಅದೇ ಸಮಯಕ್ಕೆ ರಾಜೇಶ್ ಕಾರು ಪಕ್ಕದಲ್ಲಿ ಬಂದು ನಿಲ್ಲುತ್ತೆ. ಕಾರಿನ ಗ್ಲಾಸ್‌ನಲ್ಲಿ ಮುಖ ನೋಡಿಕೊಂಡು ಬೊಟ್ಟು ಇಟ್ಟುಕೊಳ್ತಾರೆ. ಆಗ ರಾಜೇಶ್ ನಂದೆ ಕಾರು ಬೇಕಾ ಎಂದು ಛಾಯಾ ಸಿಂಗ್ ಮೇಲೆ ರೇಗುತ್ತಾರೆ. ಇಬ್ಬರ ಕಿತ್ತಾಟದ ಪ್ರೋಮೋ ಸದ್ಯ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಅಂದಹಾಗೆ ಅಮೃತಧಾರೆ ಸೀರಿಯಲ್ ಹಿಂದಿಯ ಬಡೆ ಅಚ್ಚೆ ಲಗ್ತಾ ಧಾರಾವಾಹಿಯ ರಿಮೇಕ್ ಆಗಿದೆ ಎನ್ನಲಾಗಿದೆ. ಈ ಧಾರಾವಾಹಿ ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಝೀ ಕನ್ನಡ ವಾಹಿನಿಯಲ್ಲಿ ಈಗಾಗಲೇ 3 ಹೊಸ ಧಾರಾವಾಹಿಗಳು ಎಂಟ್ರಿ ಕೊಡುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿತ್ತು. ಈಗಾಗಲೇ ಭೂಮಿಗೆ ಬಂದ ಭಗವಂತ ಧಾರಾವಾಹಿ ಪ್ರಸಾರ ಪ್ರಾಂಭಿಸಿದೆ. ಸದ್ಯ ಅಮೃತಧಾರೆ ಮತ್ತು ಸೀತಾ ರಾಮ ಧಾರಾವಾಹಿಗಳು ಪ್ರಸಾರವಾಗಬೇಕಿದೆ. 

ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟ ಇರ್ಲಿಲ್ಲ; ಅಕ್ಕನನ್ನು ನೋಡಿ ಕಣ್ಣೀರಿಟ್ಟ ಧನಂಜಯ್

ಈಗಾಗಲೇ ಅನೇಕ ಧಾರಾವಾಹಿಳು ಝೀ ವಾಹಿನಯಲ್ಲಿ ಪ್ರೇಕ್ಷಕರ ಹೃದಯ ಗೆದ್ದಿವೆ. ಇದೀಗ ಹೊಸ ಧಾರಾವಾಹಿಗಳು ಹೇಗೆ ಮೂಡಿಬರಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಛಾಯಾ ಸಿಂಗ್ ಎಂಟ್ರಿ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

View post on Instagram

ಐರನ್ ಲೆಗ್‌ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್

ನಟಿ ಛಾಯಾ ಸಿಂಗ್ ಕನ್ನಡ ಜೊತೆಗೆ ತಮಿಳಿನಲ್ಲೂ ಖ್ಯಾತಿಗಳಿಸಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಛಾಯಾ ಖಾಕಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲಿ ಸಿಲ್ಲಿ ರಾಣಿ ಸಿನಿಮಾದಲ್ಲಿ ಛಾಯಾ ಮಿಂಚಿದ್ದರು. ಸಿನಿಮಾ ಜೊತೆಗೆ ಛಾಯಾ ತಮಿಳು ಕಿರುತೆರೆಯಲ್ಲೂ ಸಕ್ರೀಯರಾಗಿದ್ದರು. ಇದೀಗ ಮತ್ತೆ ಕನ್ನಡಕ್ಕೆ ವಾಪಾಸ್ ಆಗಿದ್ದಾರೆ.