ಗರ್ಲ್‌ಫ್ರೆಂಡ್ ಇದ್ದರೂ ಬೇರೆ ಹುಡುಗಿಯರ ಜೊತೆ ಫ್ಲರ್ಟ್ ಮಾಡೋ ಅಭ್ಯಾಸ ಸರೀನಾ ?

ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್‌ (Girlfriend)ಇರ್ತಾರೆ. ಆದ್ರೂ ಮತ್ತೊಬ್ಬ, ಮತ್ತೊಬ್ಬಳ ಹಿಂದೆ ಬೀಳುವ ಗೀಳು. ಸಂಗಾತಿ (Partner) ಯಿದ್ದರೂ ಇನ್ಯಾರನ್ನೋ ಇಂಪ್ರೆಸ್ ಮಾಡೋ ತವಕ. ಹೀಗೆ ಕಮಿಟ್‌ (Commit) ಆಗಿದ್ದರೂ ಫ್ಲರ್ಟ್ (Flirt) ಮಾಡುವುದು ಸರೀನಾ ?

Is Flirting With Others Right When You Are In A Relationship Vin

ಸಂಬಂಧ (Relationship)ಗಳು ತುಂಬಾ ಸೂಕ್ಷ್ಮ. ಹೀಗಾಗಿ ಅದನ್ನು ಅಷ್ಟೇ ನಾಜೂಕಾಗಿ ನಿಭಾಯಿಸುವುದು ಸಹ ತುಂಬಾ ಮುಖ್ಯ. ಇವತ್ತಿನ ದಿನಗಳಲ್ಲಿ ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್ ಇಲ್ಲದವರಿಲ್ಲ. ಹೆಸರಿಗೋ ಇಲ್ಲ ಟೈಮ್‌ ಪಾಸಿಗೋ ಹೆಸರಿಗಂತೂ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್. ಕೆಲವೊಂದು ಜೋಡಿಗಳ ವಿಷಯದಲ್ಲಿ ಮಾತ್ರ ಇದು ಮದುವೆ (Marriage)ಯ ವರೆಗೂ ಹೋಗುತ್ತದೆ. ಆದ್ರೆ ಕೆಲವೊಬ್ಬರು ಕಮಿಟ್ (Commit) ಆಗಿದ್ದರೂ ಮತ್ತೊಬ್ಬರ ಮೇಲೆ ಕಣ್ಣು ಹಾಕುತ್ತಾರೆ. ಅವರ ಜೊತೆ ಫ್ಲರ್ಟ್ (Flirt) ಮಾಡುತ್ತಾರೆ. ಆದರೆ ಇದು ಸರೀನಾ ?

ಕೆಲವರು ತಮಗೊಪ್ಪುವ ಸಂಗಾತಿ ಜೊತೆಗೆ ಹಾಯಾಗಿದ್ದರೂ ಫ್ಲರ್ಟ್ ಮಾಡುವುದನ್ನು ನೀವು ನೋಡಿರಬಹುದು. ಸೋಶಿಯಲ್ ಮೀಡಿಯಾ ಸೈಟ್‌ಗಳು ಇಂದು ಫ್ಲರ್ಟಿಂಗ್ ಅನ್ನು ಸಾಮಾನ್ಯ ಸಂಗತಿಯಾಗಿ ಮಾಡಿವೆ. ನೀವು ಇಂಟರ್ನೆಟ್‌ನಲ್ಲಿ ಯಾರೊಂದಿಗಾದರೂ ಚೆಲ್ಲಾಟವಾಡುತ್ತಿದ್ದರೆ, ಅದು ಹಾನಿಕರವಲ್ಲ ಎಂದು ಭಾವಿಸಿರಬಹುದು. ಆದರೆ ಇದು ಒಂದು ಹಂತದವರೆಗೆ ಮಾತ್ರ. ತೋರಿಕೆಯಲ್ಲಿ ನಿರುಪದ್ರವವಾಗಿದ್ದ ಫ್ಲರ್ಟಿಂಗ್ ಅಭ್ಯಾಸ ಕೆಲವೊಮ್ಮೆ ಸಂಬಂಧವನ್ನೇ ಹಾಳು ಮಾಡಿಬಿಡುತ್ತದೆ. ಅಲ್ಲದೆ ಕೆಲವೊಮ್ಮೆ ಈ  ಫ್ಲರ್ಟಿಂಗ್ ಅಭ್ಯಾಸ ಬಿಡಲಾರದ ಅಭ್ಯಾಸವಾಗಿ ಕಾಡಬಹುದು. ಹೀಗಾಗಿ ನೀವು ಸಂಬಂಧದಲ್ಲಿರುವಾಗ ಬೇರೆಯವರೊಂದಿಗೆ ಚೆಲ್ಲಾಟವಾಡುವುದು ಸರಿಯೇ ಅಥವಾ ಬೇಡವೇ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು.

ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ

ಪರಿಣಿತ ತರಬೇತುದಾರರಾದ ಸಮ್ಮರ್ ವ್ಯಾಟ್ಸನ್ ಮತ್ತು ಜೆನ್ ಫಾಂಟಾನಿಲ್ಲಾ ಅವರು ತಮ್ಮ ಲೈವ್ ಶೋ ದಿ ಲೈಫ್, ಲವ್ ಮತ್ತು ಮನಿ ಶೋ ಮೂಲಕ ಜೀವನ, ಪ್ರೀತಿ ಮತ್ತು ಹಣದ ವಿಷಯಗಳನ್ನು ನಿರ್ವಹಿಸಲು ಸಹಾಯ ಮಾಡಲು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತಾರೆ. ಕಮಿಟ್ ಆಗಿದ್ದರೂ ಫ್ಲರ್ಟ್ ಮಾಡುವುದು ಸರಿಯೇ ಎಂಬ ಈ ಪ್ರಶ್ನೆಗೆ ಉತ್ತರಿಸಲು, ಒಬ್ಬರು ಮೊದಲು ಫ್ಲರ್ಟ್ ಮಾಡುವ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಯಾರನ್ನಾದರೂ ಪ್ರಣಯದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಅಥವಾ ಇಲ್ಲದೆ ತಮಾಷೆಯ ರೀತಿಯಲ್ಲಿ ವರ್ತಿಸುವುದು. ಅನೇಕ ಬಾರಿ, ಇದು ಬಹಿರಂಗವಾದ ನಡವಳಿಕೆಯು ತಮಾಷೆಯ, ನಯವಾದ, ಆಕರ್ಷಣೀಯ ಮತ್ತು ವ್ಯಕ್ತಿಗತವಾಗಿರಬಹುದು. ದೇಹ ಭಾಷೆಯಿಂದ ಅಥವಾ ಲಿಖಿತ ರೂಪದಲ್ಲಿರಬಹುದು. ಆದರೆ ತಮಾಷೆಯೆಂಬುದು ಅನಿಸುವ ವಿಚಾರ ಹಲವಾರು ಬಾರಿ ತೊಂದರೆಗೂ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.

ಫ್ಲರ್ಟಿಂಗ್ ಅನ್ನು ಮುಗ್ಧತೆಯಿಂದ ಮಾಡಲಾಗುತ್ತದೆ ಎಂದು ಒಬ್ಬರು ಭಾವಿಸಬಹುದು, ಆದರೆ ಇದು ಅವರು ಪ್ರಜ್ಞಾಪೂರ್ವಕವಾಗಿ ತಿಳಿದಿರುವ ಅಥವಾ ತಿಳಿದಿರದ ಯಾವುದೋ ಕಾರಣದಿಂದಾಗಿರಬಹುದು, ಆದರೆ ಇದು ನಡವಳಿಕೆಯಲ್ಲಿ ತೊಡಗಿರುವ ವ್ಯಕ್ತಿಗೆ ಕೆಲವು ರೀತಿಯ ಭಾವನಾತ್ಮಕ ಅಗತ್ಯವನ್ನು ಪೂರೈಸುತ್ತದೆ. ಆದರೆ ಕೆಲವೊಮ್ಮೆ ಇದು ಇತರರಿಗೆ ತೊಂದರೆಯನ್ನು ಸಹ ಉಂಟು ಮಾಡಬಹುದು.

ಮದುವೆಯ ನಂತರವೂ ಒಂಟಿತನ ಕಾಡ್ತಿದ್ತಾ ? ಕಾರಣವೇನು ತಿಳ್ಕೊಳ್ಳಿ

ನೀವು  ತಮಾಷೆಗೆ ಫ್ಲರ್ಟ್ ಮಾಡುವುದು ಕೆಲವೊಮ್ಮೆ ಸಂಗಾತಿಯ ಮನಸ್ಸನ್ನು ನೋಯಿಸುವ ವಿಷಯವಾಗಬಹುದು. ಆಕೆ ದಪ್ಪ, ಕುಳ್ಳಗೆ, ಕಪ್ಪಗೆ ಇದ್ದರೆ ಅದನ್ನು ಟೀಕಿಸುವ ವಿಷಯದಂತೆ ತೋರಬಹುದು. ಬೇರೊಬ್ಬಾಕೆಯ ಜೊತೆ ಫ್ಲರ್ಟ್ ಮಾಡಿ ಆಕೆಯಿಂದ ನೀವು ಸ್ಮಾರ್ಟ್, ಚೆಲುವ, ಸುಂದರಾಂಗ ಎಂದೆಲ್ಲಾ ಹೇಳಿಸಿಕೊಳ್ಳುವ ವರ್ತನೆ ತೋರಿಸುವ ಸಾಧ್ಯತೆ ಇದೆ. 

ಫ್ಲರ್ಟ್ ಜೊತೆಗೆ ನಿಮ್ಮ ಸಂವಹನದಲ್ಲಿ ಲೈಂಗಿಕ ಸಂಪರ್ಕದ ಸೂಚನೆ ಇದ್ದರೆ, ಸಂವಹನಗಳು ಸೂಕ್ಷ್ಮ ಲೈಂಗಿಕ ಸೂಚನೆಗಳನ್ನು ಹೊಂದಿದ್ದರೆ, ಜಾಗರೂಕರಾಗಿರಿ. ಇದು ನಿಮಗೆ ಈಗಾಗಲೇ ಇರುವ ಉತ್ತಮ ಸಂಬಂಧವನ್ನು ಹಾಳು ಮಾಡಬಹುದು. ಇದು ನಿಮ್ಮಿಂದಲೂ ಆಗಿರಬಹುದು, ಅವರಿಂದಲೂ ಆಗಿರಬಹುದು. ಇದು ಇಬ್ಬರ ಜೀವನಕ್ಕೂ ಹಾನಿಕರವೇ ಆಗುತ್ತದೆ.

ಫ್ಲರ್ಟಿಂಗ್ ನಿಮ್ಮ ಸಂಗಾತಿಯನ್ನು ನಿಮ್ಮತ್ತ ಆಕರ್ಷಿಸುವ ವಿಷಯವಾಗಿರಬಹುದು, ಆದರೆ ಇದು ಘರ್ಷಣೆಗೆ ಕಾರಣವಾಗಬಹುದು. ಸಂಬಂಧದಲ್ಲಿ ಫ್ಲರ್ಟಿಂಗ್ ಸರಿಯೇ ಅಥವಾ ಇಲ್ಲವೇ ಎಂಬುದರ ಕುರಿತು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಮುಕ್ತ ಮನಸ್ಸು ಮತ್ತು ಹೃದಯದಿಂದ ಕೇಳಲು ಸಿದ್ಧರಾಗಿರಿ. ಪ್ರೀತಿ ಹೆಚ್ಚಾಗಲು ನಿಮ್ಮ ಸಂಗಾತಿಯೊಂದಿಗೇ ಹೆಚ್ಚು ಫ್ಲರ್ಟಿಂಗ್ ಮಾಡುವುದನ್ನು ಸಹ ನೀವು ಪರಿಗಣಿಸಬಹುದು.

Latest Videos
Follow Us:
Download App:
  • android
  • ios