Behavior Tips: ನೀವು ಅಂತರ್ಮುಖಿಗಳೇ? ಜನರೊಂದಿಗಿನ ಒಡನಾಟ ಸಾಕೆನಿಸಿದಾಗ ಹೀಗ್ಮಾಡಿ

ಅಂತರ್ಮುಖಿಗಳ ಪ್ರಪಂಚ ಸೀಮಿತವಾಗಿರುತ್ತದೆ. ಹಾಗೆಂದು ಅವರ ಭಾವನಾತ್ಮಕ ಪ್ರಪಂಚ ಭಾರೀ ದೊಡ್ಡದು. ಸಾಮಾಜಿಕ ಒಡನಾಟದಲ್ಲಿ ಹೆಚ್ಚು ಸಮಯ ಕಳೆದಾಗ ಅಂತರ್ಮುಖಿಗಳಿಗೆ ಒಂದು ರೀತಿಯ ದಣಿವು ಉಂಟಾಗುವುದು ಸಹಜ. ಅದನ್ನು ಮೀರಲು ಕೆಲವು ಮಾರ್ಗೋಪಾ ಹುಡುಕಿಕೊಳ್ಳಿ.
 

Introverts should avoid exhaustion like this way

ಅಂತರ್ಮುಖಿ, ಬಹುರ್ಮುಖಿಗಳ ನಡುವೆ ದೊಡ್ಡದೊಂದು ಅಂತರವಿದೆ. ಅಂತರ್ಮುಖಿಗಳು ಸಮಾಜದೊಂದಿಗೆ ಒಡನಾಡಲು ಹಿಂದೇಟು ಹಾಕಿದರೆ, ಬಹಿರ್ಮುಖಿಗಳಿಗೆ ಅದೇ ಸುಖ. ಅಂತರ್ಮುಖಿಗಳಿಗೆ ಹೆಚ್ಚು ಸಮಯ ಬಾಹ್ಯ ಪ್ರಪಂಚದ ಆಗುಹೋಗುಗಳಲ್ಲಿ ಮುಳುಗಲು ಸಾಧ್ಯವಾಗುವುದಿಲ್ಲ. ಬಹಳ ಸಮಯ ಜನರೊಂದಿಗೆ ಒಡನಾಡುವ ಪ್ರಸಂಗ ಎದುರಾದರೆ ಅವರು ಅದರಿಂದ ಬಸವಳಿಯುತ್ತಾರೆ. ಬಹುತೇಕರಿಗೆ ಇದು ಅರ್ಥವಾಗಲಿಕ್ಕಿಲ್ಲ. “ಅವರಿಗೆ ನಾಚಿಕೆ, ಅವರೇ ಹಾಗೆʼ ಇತ್ಯಾದಿ ಕಮೆಂಟ್‌ ಗಳಿಂದ ಅಂತರ್ಮುಖಿಗಳನ್ನು ಅಳೆಯಲಾಗುತ್ತದೆ. ಆದರೆ, ನಿಜಕ್ಕೂ ಅವರು ಜನರೊಂದಿಗೆ ಒಡನಾಡಲು ಸಮಸ್ಯೆಯಾಗುತ್ತದೆ. ಇದರಿಂದ ಅವರಿಗೆ ಸುಸ್ತಾಗುತ್ತದೆ, ಕಿರಿಕಿರಿಯಾಗುತ್ತದೆ ಹಾಗೂ ಏನೂ ತೋಚದಂತೆ ಆಗಬಹುದು. ಇಂತಹ ಪರಿಸ್ಥಿತಿಗಳಲ್ಲಿ ಅಂತರ್ಮುಖಿಗಳು ತಮ್ಮನ್ನು ತಾವು ರಿಚಾರ್ಜ್‌ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಏಕಾಂಗಿಯಾಗಿ ಅಥವಾ ತಮ್ಮದಾದ ಸಣ್ಣದೊಂದು ಗುಂಪಿನ ನಡುವೆ ಇದ್ದುಕೊಂಡು  ಸುಧಾರಿಸಿಕೊಳ್ಳಬೇಕಾಗುತ್ತದೆ. ಸಾಮಾಜಿಕವಾಗಿ ಕ್ರಿಯಾಶೀಲರಾದ ಬಳಿಕ ಎದುರಾಗುವ ಮಾನಸಿಕ, ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು ಅವರು ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇಬೇಕು. ದೀರ್ಘ ಸಮಯ ಅದನ್ನು ಹಾಗೆಯೇ ಬಿಡಬಾರದು. ಏಕೆಂದರೆ, ಆ ಸಮಯದ ಒತ್ತಡ ಅವರಲ್ಲಿ ಕಾರ್ಟಿಸೋಲ್‌ ಹಾರ್ಮೋನನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದರಿಂದ ಹೆಚ್ಚು ಬಳಲಿಕೆ ಉಂಟಾಗುತ್ತದೆ. ನಿಮಗೂ ಇಂತಹ ಅನುಭವವಾಗಿದ್ದರೆ ಬಳಲಿಕೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ ನೋಡಿ.

•    ಮಿತಿ (Boundary) ನಿಗದಿ ಮಾಡಿಕೊಳ್ಳಿ
ಅಂತರ್ಮುಖಿಗಳು (Introverts) ತಮಗೆ ಸುಸ್ತಾಗದಂತೆ (Fatigue) ನೋಡಿಕೊಳ್ಳಲು ಸಾಮಾಜಿಕ ಒಡನಾಟಕ್ಕೆ (Social Time) ಮಿತಿ ಹಾಕಿಕೊಳ್ಳಬೇಕು. ಸೆಲೆಕ್ಟಿವ್‌ (Selective) ಸಮಾರಂಭಗಳಿಗೆ ಮಾತ್ರ ಹಾಜರಿ ನೀಡಬೇಕು. ಅದಕ್ಕಾಗಿ ಸಮಯ ನಿಗದಿ ಮಾಡಿಕೊಳ್ಳಬೇಕು. ಎಲ್ಲ ಆಹ್ವಾನಗಳಿಗೆ ಓಗೊಡುವ ಅಗತ್ಯ ನಿಮಗಿಲ್ಲ. ಹಾಗೆಯೇ, ಸ್ಪಷ್ಟವಾದ ಸಂವಹನ (Clear Communication) ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಇದರಿಂದಾಗಿ ಇತರರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಹಾಗೂ ನಿಮ್ಮ ಭಾವನೆಯನ್ನು (Feelings) ಗೌರವಿಸಲು ಸಾಧ್ಯವಾಗುತ್ತದೆ.

Real Story : ಮೊದಲ ಪ್ರೇಮಿ ನೆನೆದು ಕಣ್ಣೀರಿಡ್ತಾಳೆ ನನ್ನ ಹುಡುಗಿ

•    ಒಬ್ಬರೇ ಇರುವ (Alone Time) ಸಮಯ
ಅಂತರ್ಮುಖಿಗಳು ತಾವೊಬ್ಬರೇ ಇರುವ ಸಮಯದಲ್ಲಿ ರಿಚಾರ್ಜ್‌ (Recharge) ಆಗುತ್ತಾರೆ. ಈ ಸಮಯದಲ್ಲಿ ಓದುವುದು (Reading), ಧ್ಯಾನ (Meditation) ಮಾಡುವುದು, ಬರೆಯುವುದು, ವ್ಯಾಯಾಮ (Exercising) ಮಾಡುವುದು ಸೇರಿದಂತೆ ಹಲವು ರೀತಿಯ ರಿಲ್ಯಾಕ್ಸಿಂಗ್‌ (Relaxing) ವಿಧಾನಗಳನ್ನು ಅನುಸರಿಸಬಹುದು. ಆದರೆ, ಪ್ರತಿದಿನವೂ ಇವರಿಗೆ ಇಂಥದ್ದೊಂದು ಕ್ಷಣ ಅಗತ್ಯ. ತಮ್ಮ ಹವ್ಯಾಸ (Habit) ಹಾಗೂ ಆಸಕ್ತಿಯ ಕಡೆಗೆ ಗಮನ ನೀಡಬೇಕು. ಇದರಿಂದ ಬಳಲುವಂತಾಗುವುದಿಲ್ಲ. ಜತೆಗೆ, ತಮ್ಮ ಬಗ್ಗೆ ಕಾಳಜಿ (Care) ವಹಿಸಬೇಕು. ಸ್ವ ಕಾಳಜಿ ಜೀವನದಲ್ಲಿ ಅತಿ ಅಗತ್ಯ. ಅಂತರ್ಮುಖಿಗಳಿಗಂತೂ ಇದು ಅತಿ ಮುಖ್ಯ. ತಮ್ಮನ್ನು ಆರೈಕೆ ಮಾಡಿಕೊಳ್ಳುವಂಥ, ಮನಸ್ಸು ಮತ್ತು ದೇಹಕ್ಕೆ ಹಿತ ನೀಡುವಂಥ ಚಟುವಟಿಕೆಗಳನ್ನು ಈ ಸಮಯದಲ್ಲಿ ಮಾಡಿಕೊಳ್ಳಬೇಕು. 

•    ಸಮತೋಲನವಿರಲಿ (Balance)
ಬಾಹ್ಯ ಪ್ರಪಂಚಕ್ಕೆ ಹೋಗುವುದು ಅಂತರ್ಮುಖಿಗಳಿಗೆ ಅತ್ಯಗತ್ಯ. ಏಕಾಂಗಿ ಭಾವನೆ ಮೂಡದಿರಲು ಹಾಗೂ ಭಾವನಾತ್ಮಕ ಬಳಲಿಕೆ ಉಂಟಾಗದಿರಲು ಸಮಾಜದೊಂದಿಗೆ ಒಡನಾಟ ಬೇಕಾಗುತ್ತದೆ. ಆದರೆ, ಇದರಲ್ಲಿ ಸಮತೋಲನ ಇಟ್ಟುಕೊಳ್ಳಬೇಕು. ಸಾಮಾಜಿಕ ಒಡನಾಟದಿಂದ ಸಮುದಾಯದೊಂದಿಗೆ ಸಂಪರ್ಕ ಇರುವ ಭಾವನೆ ಮೂಡುತ್ತದೆ. ಹಾಗೆಯೇ ಅದು ಅತಿಯಾದರೆ ಮಾನಸಿಕವಾಗಿ ದಣಿವಾಗುತ್ತದೆ (Mental Exhaustion). ಹೀಗಾಗಿ, ಸಮತೋಲನ ಅಗತ್ಯ.

ನಿಮ್ಮ ಗೆಳತಿಯೂ ಒತ್ತಡ ಹಾಕಿ, ಸ್ವಾರ್ಥ ಈಡೇರಿಸಿಕೊಳ್ತಾರಾ?

•    ಅತಿಯಾದ ಯೋಚನೆ (Over Thinking) ಬೇಡ
ಅತಿಯಾಗಿ ಯೋಚಿಸುವುದು ಯಾರಿಗಾದರೂ ತೊಂದರೆ ನೀಡುವ ವಿಚಾರವೇ ಆಗಿದೆ. ಆದರೆ, ಅಂತರ್ಮುಖಿಗಳು ಅತಿಯಾಗಿ ಯೋಚನೆ ಮಾಡುವುದು ಹೆಚ್ಚು. ಹೆಚ್ಚು ಒಡನಾಟವಿರದ ಕಾರಣ ವಿಪರೀತ ಯೋಚನೆಗಳಿಗೆ ಅವಕಾಶ ಇರುತ್ತದೆ. ಆಂತರಿಕ (Inner) ಯೋಚನೆಗಳಿಗೆ ಅವರು ಹೆಚ್ಚು ಆದ್ಯತೆ ನೀಡುತ್ತಾರೆ. ಅತಿಯಾಗಿ ಯೋಚನೆ ಮಾಡುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ (Emotional) ದಣಿವು ಉಂಟಾಗುತ್ತದೆ. ಹಾಗೂ ಒತ್ತಡ (Stress) ನಿರ್ಮಾಣವಾಗುತ್ತದೆ. ವಿಪರೀತ ಯೋಚನೆಗಳನ್ನು ತಡೆಯಲು ವಿವಿಧ ಚಟುವಟಿಕೆಗಳಲ್ಲಿ ನಿರತರಾಗಬೇಕು. 

Latest Videos
Follow Us:
Download App:
  • android
  • ios