ಏನು ಮಾಡಿದ್ರೂ ತಪ್ಪು ನಿಂದೇ ಅಂತಾರಾ ಸಂಗಾತಿ, ಎಲ್ಲೆಡೆ ಇದು ಕಾಮನ್ ಬಿಡಿ
ತಪ್ಪು ಮಾಡದೋರು ಯಾರೂ ಇಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ತಪ್ಪು ಮಾಡ್ತಾರೆ. ಆ ತಪ್ಪನ್ನು ಒಪ್ಪಿಕೊಳ್ಳೋದು ಒಂದು ದೊಡ್ಡ ಗುಣ. ತಾನು ಮಾಡಿದ ತಪ್ಪನ್ನ ಬೇರೆಯವರ ಮೇಲೆ ಹಾಕಿ ಸದಾ ಬೈತಿದ್ರೆ ಆ ದಾಂಪತ್ಯದಲ್ಲಿ ಸುಖ ಸಿಗಲು ಸಾಧ್ಯವಿಲ್ಲ.
ಅದೇನೇ ತಪ್ಪಾಗಿರಲಿ ಇಲ್ಲ ಅದೇನೇ ಸಮಸ್ಯೆಯಾಗಿರಲಿ ಕೆಲವರು ಎಲ್ಲದಕ್ಕೂ ಬೇರೆಯವರನ್ನು ದೂಷಿಸುತ್ತಾರೆ. ದಂಪತಿಯಲ್ಲಿ ಒಬ್ಬರು ಇಂಥ ಸ್ವಭಾವ ಹೊಂದಿದ್ರೆ ಜೀವನ ಬಹಳ ಕಷ್ಟ. ಇನ್ನೊಬ್ಬ ಸಂಗಾತಿ ಪ್ರತಿ ಬಾರಿ ತಪ್ಪಿನ ಹೊಣೆ ಹೊರಬೇಕಾಗುತ್ತದೆ. ಇದ್ರಿಂದ ದಾಂಪತ್ಯದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಹಜ. ತಪ್ಪು ಮಾಡಿದಾಗ್ಲೆ ಕಲಿಕೆ ಸಾಧ್ಯ. ಪ್ರತಿ ಬಾರಿ ಒಬ್ಬರೇ ತಪ್ಪು ಮಾಡ್ಬೇಕೆಂದು ನಿಯಮವಿಲ್ಲ. ಹಾಗೆ ಎಲ್ಲ ತಪ್ಪನ್ನು ಒಬ್ಬರೇ ಹೊರಬೇಕೆಂಬ ರೂಲ್ಸ್ ಇಲ್ಲ. ನಿಮ್ಮ ಸಂಗಾತಿ ತನ್ನ ಎಲ್ಲಾ ಸಮಸ್ಯೆಗಳಿಗೆ ನಿಮ್ಮನ್ನು ದೂಷಿಸಿದರೆ ಅದು ದೊಡ್ಡ ತಪ್ಪು. ಅಂತಹ ಸಂಬಂಧವು ನಿಮ್ಮನ್ನು ಹತಾಶೆ ಮತ್ತು ಉಸಿರುಗಟ್ಟಿಸುವಂತೆ ಮಾಡುತ್ತದೆ. ಸದಾ ನಿಮ್ಮ ಮೇಲೆ ಬೊಟ್ಟು ಮಾಡುವ ನಿಮ್ಮ ಸಂಗಾತಿ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಸಂಗಾತಿ ಮಾತು ಕೇಳಿ : ತಪ್ಪು ಮಾಡಿ ನನ್ನನ್ನು ದೂಷಿಸುತ್ತಿರುವವರು ಅವರು. ಮತ್ತೆ ಅವರ ಮಾತು ಕೇಳಬೇಕು ಅಂದ್ರೆ ಹೇಗೆ ಎನ್ನಬೇಡಿ. ಮೊದಲು ನಿಮ್ಮ ಸಂಗಾತಿ ಮಾತನ್ನು ಸರಿಯಾಗಿ ಕೇಳಿ. ನಿಮ್ಮ ಮೇಲೆ ತಪ್ಪು ಹೇಳ್ತಿದ್ದರೂ ನೀವು ಸುಮ್ಮನಿರಿ. ಮಧ್ಯೆ ಮಾತನಾಡಿದ್ರೆ ಅವರು ಮತ್ತಷ್ಟು ಕೋಪ (Anger) ಗೊಳ್ಳಬಹುದು. ಇಲ್ಲವೆ ನಿಮ್ಮ ಮಾತನ್ನು ಅವರು ಸರಿಯಾಗಿ ಕೇಳದಿರಬಹುದು. ಅನೇಕ ಬಾರಿ ಕೋಪಗೊಂಡಾಗ ಏನು ಮಾಡ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಸಂಗಾತಿ ಮಾತು
ಸಂಗಾತಿ ಜೊತೆ ಮಾತುಕತೆ ಅಗತ್ಯ : ಪ್ರತಿ ವಿಷ್ಯಕ್ಕೂ ನಿಮ್ಮನ್ನು ದೂಷಿ (Blame) ಸುವ ಸಂಗಾತಿ ನಿಮಗೆ ಸಿಕ್ಕಿದ್ದರೆ ಅವರೊಂದಿಗೆ ಮುಕ್ತವಾಗಿ ಮಾತನಾಡುವ ಅವಶ್ಯಕತೆಯಿರುತ್ತದೆ. ಸಂಗಾತಿಯ ಮನಸ್ಥಿತಿ ಹಗುರವಾಗಿರುವಾಗ ಮತ್ತು ಏಕಾಂತದಲ್ಲಿ ನೀವು ಅವರ ಜೊತೆ ಮಾತನಾಡಬೇಕು. ಸದಾ ನಿಮ್ಮ ಮೇಲೆಯೇ ಯಾಕೆ ಅವರು ತಪ್ಪು ಹೊರಿಸುತ್ತಿದ್ದಾರೆ ಎಂದು ಕೇಳಿ. ಅನೇಕ ಬಾರಿ ಜನರು ಕೆಲವು ಮಾನಸಿಕ ಒತ್ತಡದಿಂದಾಗಿ ಹೀಗೆ ವರ್ತಿಸುತ್ತಿರುತ್ತಾರೆ. ಅವರ ಜೊತೆ ಮಾತನಾಡಿದಾಗ ಸಮಸ್ಯೆ ನಿಮಗೆ ತಿಳಿಯುತ್ತದೆ.
ಸಂಗಾತಿ ಪ್ರತಿ ಬಾರಿ ನಿಮ್ಮನ್ನು ದೂಷಿ ಮಾಡಿದಾಗ ನಿಮಗೆ ಏನೆನ್ನಿಸುತ್ತದೆ ಎಂಬುದನ್ನು ಅವರಿಗೆ ಹೇಳಿ. ನಿಮ್ಮ ನೋವ (Pain) ನ್ನು ಅವರ ಜೊತೆ ಹಂಚಿಕೊಳ್ಳಿ. ಆಗ ಅವರು ತಮ್ಮ ಸ್ವಭಾವ ಬದಲಿಸಿಕೊಳ್ಳಬಹುದು.
ಪತಿ ಸ್ನೇಹಿತೆ ಮೇಲೆ ಡೌಟಾ? ಹೀಗ್ ಚೆಕ್ ಮಾಡಬಹುದು ನೋಡಿ
ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ : ಅನೇಕ ಬಾರಿ ಸಂಗಾತಿ ತಪ್ಪು ಹೊರಿಸ್ತಿದ್ದರೆ ನಾವು ಹೌದು ಎಂದು ತಲೆ ಆಡಿಸ್ತೇವೆ. ಅದು ತಪ್ಪು. ನಿಮ್ಮ ಪರವಾಗಿ ನೀವೇ ವಾದ ಮಾಡಬೇಕು. ನೀವು ಮಾಡಿದ್ದು ಹೇಗೆ ಸರಿಯಾಗಿದೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ಒಂದ್ವೇಳೆ ದೊಡ್ಡ ತಪ್ಪು ನಿಮ್ಮ ಅರಿವಿಗೆ ಬರದೆ ನಡೆದು ಹೋಗಿದ್ದರೆ ಆ ಸಂದರ್ಭದಲ್ಲಿ ಸಂಗಾತಿ ಇದ್ರೆ ಏನು ಮಾಡ್ತಿದ್ದರು ಎಂದು ನೀವು ಅವರನ್ನು ಪ್ರಶ್ನೆ ಮಾಡಿ. ಯಾವುದೇ ಆಲೋಚನೆ ಮಾಡದೆ ನಿಮ್ಮ ಮೇಲೆ ತಪ್ಪು ಹೊರಿಸುವುದನ್ನು ಆಗ ಅವರು ಬಿಡಬಹುದು.
ಪರಸ್ಪರ ಅರ್ಥ ಮಾಡಿಕೊಳ್ಳಿ : ಒಂದ್ವೇಳೆ ನೀವೇ ನಿಮ್ಮ ಸಂಗಾತಿಯನ್ನು ಸದಾ ದೂಷಿಸುತ್ತಿದ್ದರೆ ಮೊದಲು ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅವರ ಅನುಭವಕ್ಕೆ ಗೌರವ ನೀಡಿ. ಅವರ ಸಮಸ್ಯೆ ಏನು ಎಂಬುದನ್ನು ಅರಿಯಿರಿ. ನಂತ್ರ ನಿರ್ಧಾರಕ್ಕೆ ಬನ್ನಿ.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ದೃಷ್ಟಿಕೋನ ಬದಲಿಸಿ : ಅನೇಕ ಬಾರಿ ಸಂಗಾತಿಯನ್ನು ಒಂದೇ ದೃಷ್ಟಿಕೋನದಲ್ಲಿ ನೋಡ್ತಿರುತ್ತೇವೆ. ಹಾಗಾಗಿ ಅವರು ಮಾಡಿದ್ದೆಲ್ಲ ತಪ್ಪು ಎನ್ನಿಸುತ್ತದೆ. ನೀವು ನಿಮ್ಮ ಆಲೋಚನೆ ಬದಲಿಸಿ ನೋಡಿ. ಆಗ ಅತ್ಯದ ಅರಿವಾಗುತ್ತದೆ.