ಪೋಷಕರಿಗೆ ಮಕ್ಕಳ ಪಾಲನೆಯ ಸಲಹೆ ನೀಡಿ, ಮತ್ತೆ ಕೆಂಗಣ್ಣಿಗೆ ಗುರಿಯಾದ ಇನ್ಫಿ ನಾರಾಯಣ ಮೂರ್ತಿ!

ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರು ಮಕ್ಕಳ ಪಾಲನೆಯ ಕುರಿತು ನೀಡಿದ ಸಲಹೆ ಟ್ರೋಲ್‌ಗೆ ಗುರಿಯಾಗಿದೆ. ಮಕ್ಕಳಿಗೆ ಸಮಯ ನೀಡುವ ಕುರಿತು ಅವರ ಹೇಳಿಕೆಗಳು ಹಿಂದಿನ ಕೆಲಸದ ಸಮಯದ ಹೇಳಿಕೆಗಳೊಂದಿಗೆ ವ್ಯತಿರಿಕ್ತವಾಗಿವೆ ಎಂದು ಟೀಕೆ ವ್ಯಕ್ತವಾಗಿದೆ.

Infosys Narayana Murthy Parenting Tips Sparks Outrage Among Working Parents gow

ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರು ಆಗಾಗ ಮಕ್ಕಳ ಉತ್ತಮ ಪಾಲನೆಯ ಕುರಿತು ಆಗಾಗ ಸಲಹೆಗಳನ್ನು ನೀಡುತ್ತಿರುತ್ತಾರೆ. ಪೋಷಕರಾಗಿ ಅವರು ತಮ್ಮ ಮಕ್ಕಳಿಗೆ ಎಷ್ಟು ಸಮಯವನ್ನು ನೀಡಿದರು ಮತ್ತು ಅವರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಿದರು ಎಂಬ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ನಾರಾಯಣ ಮೂರ್ತಿ ತಮ್ಮ ಹೇಳಿಕೆಗಳಿಂದಾಗಿ ಟ್ರೋಲ್‌ಗೆ ಗುರಿಯಾಗುತ್ತಾರೆ.

ಕೆಲಸದ ಸಮಯದ ಬಗ್ಗೆ ಹೇಳಿಕೆ ನೀಡಿ ಟ್ರೋಲ್‌ಗೆ ಒಳಗಾಗಿದ್ದ ಇನ್ಫೋಸಿಸ್‌ನ  ನಾರಾಯಣ ಮೂರ್ತಿ ಅವರು ಈಗ  ಪೋಷಕರು ಮಕ್ಕಳಿಗೆ ಎಷ್ಟು ಸಮಯವನ್ನು ನೀಡಬೇಕು ಎಂಬುದರ ಕುರಿತು ಮಾತನಾಡುವ ಮೂಲಕ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಸೆಪ್ಟೆಂಬರ್ 9 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾರಾಯಣ ಮೂರ್ತಿ  ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲಿ ಶಿಸ್ತಿನ ವಾತಾವರಣ ಇರಬೇಕು ಎಂದು ಹೇಳಿದರು. ಇದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳು ತಮ್ಮ ಅಧ್ಯಯನದತ್ತ ಗಮನ ಹರಿಸುತ್ತಾರೆ ಎಂದು ನಿರೀಕ್ಷಿಸುತ್ತಾ ಪೋಷಕರು ಸಿನಿಮಾ ನೋಡಲು ಸಾಧ್ಯವಿಲ್ಲ.  ನಾನು ಮತ್ತು ಪತ್ನಿ ಸುಧಾ ಮೂರ್ತಿ ತಮ್ಮ ಮಕ್ಕಳ ಶಾಲಾ ಶಿಕ್ಷಣದ ಸಮಯದಲ್ಲಿ ಅವರಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತಿದ್ದೆವು ಎಂದು ಹೇಳಿದರು. ಪ್ರತಿದಿನ ಮಕ್ಕಳೊಂದಿಗೆ ಓದಲು 3.30 ಗಂಟೆಗಳ ಕಾಲ ಕಳೆಯುತ್ತಿದ್ದೆವು ಎಂದರು. ನಾರಾಯಣ ಮೂರ್ತಿ ಅವರ ಈ ಹೇಳಿಕೆ ಸರಿಯಾಗಿದ್ದರೂ, ಅವರನ್ನು ಏಕೆ ಟ್ರೋಲ್ ಮಾಡಲಾಗುತ್ತಿದೆ ಎಂಬುದು ಈಗಿರುವ ಪ್ರಶ್ನೆ.

ಬರೋಬ್ಬರಿ 58 ಮಂದಿ ಜೊತೆ ಸಂಬಂಧ ಚೀನಾದ ಸುಂದರಿ ಗವರ್ನರ್‌ಗೆ 13 ವರ್ಷ ಜೈಲು ಶಿಕ್ಷೆ!

ನಾರಾಯಣ ಮೂರ್ತಿ ಈ ಹೇಳಿಕೆ ಟ್ರೋಲ್ ಏಕೆ?
ನಾರಾಯಣ ಮೂರ್ತಿ ಅವರು ಪೋಷಕರಿಗೆ ನೀಡಿರುವ ಸಲಹೆ ಟ್ರೋಲ್ ಮಾಡಲು ಕಾರಣ ಅವರು ಈ ಹಿಂದೆ ನೀಡಿರುವ ಹೇಳಿಕೆ, ಇದರಲ್ಲಿ  ಕೆಲಸ ಮಾಡುವವರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಸಲಹೆ ನೀಡಿದ್ದರು. ಕಳೆದ ವರ್ಷ  ಈ ಹೇಳಿಕೆ ನೀಡಿದ್ದು, 70-72 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು  ಹೇಳಿದ್ದರು.

ಈಗ ಹಿಂದಿನ ಮತ್ತು ಈಗ ನೀಡಿರುವ ಹೇಳಿಕೆಗಳನ್ನು ಒಂದುಗೂಡಿಸಿ ಜನರು ನಾರಾಯಣ ಮೂರ್ತಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಓರ್ವ ಬಳಕೆದಾರರು ಬರೆದಿದ್ದಾರೆ, 'ನಾನು 14 ಗಂಟೆಗಳ ಕಾಲ ಕೆಲಸ ಮಾಡಿದರೆ, ನಂತರ ಮಕ್ಕಳೊಂದಿಗೆ 3.5 ಗಂಟೆಗಳ ಕಾಲ ಅಧ್ಯಯನ ಮಾಡಿದರೆ, ನಾವು ಕಚೇರಿಗೆ ಹೋಗಿ ಬರಲು 1.5 ಗಂಟೆ ತೆಗೆದುಕೊಂಡರೆ, ನಮಗೆ ಅಡುಗೆ ಮಾಡಲು, ತಿನ್ನಲು ಮತ್ತು ಮಲಗಲು ಸಮಯ ಸಿಗುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.

 ಮತ್ತೊರ್ವರು , 'ಆಗ ತಂತ್ರಜ್ಞಾನ ಇರಲಿಲ್ಲ, ಅದಕ್ಕೇ ಅವರು ಹಾಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.  ಇನ್ನೊಬ್ಬರು, '2023 ರಲ್ಲಿ ಮೂರ್ತಿ ವಕಾಲತ್ತು ಮಾಡಿದಂತೆ ಜನರು ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಲು ಪ್ರಾರಂಭಿಸಿದರೆ, ಅವರ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವೇ?'

ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ, ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಮಕ್ಕಳೊಂದಿಗೆ ನಿಜವಾಗಿಯೂ ಇಷ್ಟು ಸಮಯ ಕಳೆಯಲು ಸಾಧ್ಯವೇ?
9 ಗಂಟೆಯಿಂದ 5 ಗಂಟೆವರೆಗೆ ಕೆಲಸ ಮಾಡುವ ಪೋಷಕರಿಗೆ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಕೋಪ ತರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಕಚೇರಿಯಲ್ಲಿ ಕೆಲಸದ ಸಮಯ ಹೆಚ್ಚುತ್ತಿರುವುದು ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಹೀಗಾಗಿ ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ. ಐಟಿ-ಬಿಟಿ ಕಂಪೆನಿಗಳಲ್ಲಿ ತಮ್ಮ ಚಿಕ್ಕ ಮಕ್ಕಳನ್ನು ದಾದಿಯರ ಆರೈಕೆಯಲ್ಲಿ ಬಿಟ್ಟು ಹೋಗುತ್ತಾರೆ. ಕೆಲಸದ ಒತ್ತಡದಿಂದ ಅವರು ತುಂಬಾ ದಣಿದಿರುತ್ತಾರೆ, ಅವರು ತಮ್ಮ ಮಕ್ಕಳೊಂದಿಗೆ ಆಟವಾಡಲು ಸಾಧ್ಯವಿಲ್ಲ. ಕಚೇರಿಯಲ್ಲಿ ಮೌನವಾಗಿ ತಮ್ಮ ಮಕ್ಕಳನ್ನು ನಿರ್ಲಕ್ಷಿಸುವ ಲಕ್ಷಾಂತರ ಪೋಷಕರಿದ್ದಾರೆ ಏಕೆಂದರೆ ಕೆಲಸ ಇಲ್ಲದಿದ್ದರೆ ಸಮಾಜ ತಮ್ಮನ್ನು  ವೃತ್ತಿಪರರು ಅಲ್ಲ ಎಂದು ನೋಡುತ್ತಾರೆ ಎಂಬ ಭಯ ಅವರಿಗಿದೆ. 

ಮಹಿಳೆಯರು ತಮ್ಮ ಮೇಲಧಿಕಾರಿಗಳಿಗೆ ತಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದೆ ಅಥವಾ ಅವರು ಶಾಲೆಗೆ ಹೋಗಬೇಕಾಗಿದೆ ಎಂದು ಹೇಳಿದಾಗ, ಅವರನ್ನು ಮನೆಯಲ್ಲಿಯೇ ಇರಿ ಮತ್ತು ನಿಮ್ಮ ಮಗುವನ್ನು ನೋಡಿಕೊಳ್ಳಿ ಎಂದು ಹೇಳಲಾಗುತ್ತದೆ.

ಕೆಲಸ ಮಾಡುವ ಪೋಷಕರ ಕೋಪ ಸಹಜ
ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ಮೇಲಧಿಕಾರಿಗಳು ಅವರನ್ನು ಪ್ರಶ್ನಿಸುವುದಿಲ್ಲ, ಅವರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂಬ ಭಯದಲ್ಲಿರುವ ಉದ್ಯೋಗಿಯ ನೋವನ್ನು ಊಹಿಸಿ. ಆದ್ದರಿಂದ, ನಾರಾಯಣ ಮೂರ್ತಿಯಂತಹ ದೊಡ್ಡ ವ್ಯಕ್ತಿಗಳು ಪೋಷಕರಿಗೆ ತಮ್ಮ ಮಕ್ಕಳನ್ನು ಸಲಹುವ ಬಗ್ಗೆ ಸಲಹೆ ನೀಡಿದಾಗ, ಅದು ಉದ್ಯೋಗದಲ್ಲಿರುವ  ಪೋಷಕರನ್ನು ಕೆರಳಿಸಬಹುದು. 

 

Latest Videos
Follow Us:
Download App:
  • android
  • ios