ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ, ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಮುಂದಿನ 5 ದಿನಗಳ ಕಾಲ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ 25 ರವರೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು (ಸೆ.21): ಮುಂದಿನ 5 ದಿನ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಹೇಳಿಕೆ ನೀಡಿ, ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ಮಳೆಯಾಗಲಿದೆ.
ಜೂನ್ 1 ರಿಂದ ಸೆಪ್ಟೆಂಬರ್ 21 ರ ವರೆಗೆ ರಾಜ್ಯದಲ್ಲಿ ಸಾಮಾನ್ಯ ಮಳೆಯಾಗಿದೆ. ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಗಾಳಿಯು ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನಲ್ಲಿ ಬೀಸುತ್ತಿದೆ. ಸೆಪ್ಟೆಂಬರ್ 21 ರಿಂದ 27 ರವರಿಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆಯಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 25 ರವರೆಗೆ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 21 ರಿಂದ 25 ರ ವರೆಗೆ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ 30°C ಹಾಗೂ ಕನಿಷ್ಠ 21° C ಉಷ್ಟಾಂಶ ಇರಲಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಮಳೆ ಮುನ್ಸೂಚನೆ ನೀಡಿದ್ದಾರೆ.
ಹಳೆಯ 5 ರೂ ನೋಟು ಇದ್ಯಾ? ಒಂದೇ ಒಂದು ನೋಟಿನಿಂದ ನೀವು ಕೋಟ್ಯಾಧಿಪತಿಯಾಗಬಹುದು! ಹೇಗೆ?
ಉತ್ತರ ಕೆಲವೆಡೆ ಬಾರದ ಮಳೆ ಕಂಗಾಲಾದ ರೈತ: ಒಂದೂವರೆ ತಿಂಗಳಿಂದ ಮರೆಯಾದ ಮಳೆ ರೈತರನ್ನು ಕಂಗೆಡಿಸಿದೆ. ಎರಡು ತಿಂಗಳ ಹಿಂದೆ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗಳು ನೀರಿನ ಸ್ಪರ್ಶ ಕಾಣದೇ ಒಣಗುತ್ತಿವೆ.ಆರಂಭದಲ್ಲಿ ತಾಲೂಕಿನಲ್ಲಿ ವ್ಯಾಪಕ ಮಳೆ ಬಿದ್ದ ಪರಿಣಾಮ ರೈತರು ಅತೀವ ಉತ್ಸಾಹದಿಂದ ಕೃಷಿ ಚಟುವಟಿಕೆ ಕೈಗೊಂಡಿದ್ದರು. ರೋಹಿಣಿ, ಮೃಗಶಿರ ಮಳೆಯಿಂದಾಗಿ 12 ಸಾವಿರಕ್ಕೂ ಹೆಚ್ಚು ಕೃಷಿ ಭೂಮಿಯಲ್ಲಿ ರೈತರು ಬಿತ್ತನೆ ಕಾರ್ಯ ಕೈಗೊಂಡರು. ನಂತರ ಬಿತ್ತಿದ ಬೆಳೆಗಳು ಉತ್ತಮವಾಗಿ ಬೆಳೆದು ರೈತರಲ್ಲಿ ಹುರುಪು ಬಂದಂತಾಗಿತ್ತು. ಆಗಾಗ ಬಿದ್ದ ಸಣ್ಣ ಮಳೆ, ಮೋಡದ ವಾತಾವವರಣಕ್ಕೆ ಬೆಳೆಗಳು ಕಳೆ ಕಟ್ಟಿದವು. ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ತೆನೆ ಬಿಡಲಾರಂಭಿಸಿದವು. ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳಕ್ಕೆ ಮತ್ತೊದು ಮಳೆ ಬೇಕಿತ್ತು. ರೈತರ ನಿರೀಕ್ಷೆಯಂತೆ ಆಗಸ್ಟ್ 2ನೇ ವಾರದಲ್ಲಿ ಸತತ ಮೂರು ದಿನ ಉತ್ತಮ ಮಳೆ ಬಂತು.
ತಿರುಪತಿ ಲಡ್ಡು ವಿವಾದ: ಪವನ್ ಕಲ್ಯಾಣ್ ಹೇಳಿಕೆಗೆ ತಿವಿದ ನಟ ಪ್ರಕಾಶ್ ರಾಜ್!
ಆದರೆ ಎರಡನೇ ಹಂತದಲ್ಲಿ ಮಳೆ ಬರುತ್ತಿಲ್ಲ. ಬೆಳೆಯ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಇದರಿಂದ ಮೆಕ್ಕೆಜೋಳದ ತೆನೆಯಲ್ಲಿನ ಕಾಳು ಗಟ್ಟಿಯಾಗಿ ಉಳಿಯುವ ಸಾಧ್ಯತೆ ತೀರಾ ಕಡಿಮೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.