Asianet Suvarna News Asianet Suvarna News

ಇಂಡೋನೇಷ್ಯಾದಲ್ಲಿ ವಿವಾಹ ಪೂರ್ವ ಲೈಂಗಿಕ ಸಂಬಂಧಕ್ಕೆ 1 ವರ್ಷ ಜೈಲು ಶಿಕ್ಷೆ

ವಿವಾಹ ಪೂರ್ವ ಲೈಂಗಿಕ ಸಂಬಂಧಕ್ಕೆ ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿಗೆ ತರಲು ಇಂಡೋನೇಷ್ಯಾ ಸರ್ಕಾರ ನಿರ್ಧರಿಸಿದೆ. ಇಂತಹ ಲೈಂಗಿಕ ಸಂಬಂಧಗಳಿಗೆ 1 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ಶ್ರೀಘ್ರವೇ ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ. 

Indonesia Set To Make Premarital Sex Punishable Under New Criminal Code Vin
Author
First Published Dec 3, 2022, 10:17 AM IST

ಜಕಾರ್ತ: ವಿವಾಹಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತರಲು ಸಜ್ಜಾಗಿದೆ. ಅದಕ್ಕಾಗಿ ಕರಡನ್ನೂ ಸಿದ್ಧಪಡಿಸಿದೆ. ಶ್ರೀಘ್ರವೇ ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ.  ತಮ್ಮ ಪತಿ ಅಥವಾ ಪತ್ನಿಯಲ್ಲದವರ ಜೊತೆ ಇನ್ನು ಮುಂದೆ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹವರಿಗೆ ವ್ಯಭಿಚಾರ ಕಾನೂನಿನಡಿ ಶಿಕ್ಷೆ ವಿಧಿಸಲಾಗುವುದು. ಇದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲು ಅವರ ಪತಿ, ಪತ್ನಿ ಅಥವಾ ಪೋಷಕರು ದೂರು ನೀಡಬೇಕು. ಅಲ್ಲದೇ ಕೋರ್ಚ್‌ನಲ್ಲಿ ವಿಚಾರಣೆ ಆರಂಭವಾಗುವ ಮೊದಲು ಈ ದೂರನ್ನು ಹಿಂಪಡೆಯಬಹುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ವಿವಾಹ ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ
ಹೊಸ ಕ್ರಿಮಿನಲ್ ಕಾನೂನು (Criminal Law) ಪ್ರಕಾರ ವಿವಾಹ (Marriage) ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಪತಿ ಅಥವಾ ಪತ್ನಿ ಸಂಬಂಧ ಇಲ್ಲದವರೊಂದಿಗೆ ಸಂಭೋಗಿಸಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಿ ಆರ್ಟಿಕಲ್ 413ರಲ್ಲಿ ಉಲ್ಲೇಖಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಇಂಡೋನೇಷ್ಯಾ ಎಂದು ತಿಳಿಸಲಾಗಿದೆ. 'ಇಂಡೋನೇಷ್ಯಾ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗಲಿದೆ' ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ.  

ವರದಕ್ಷಿಣೆ ಬಗ್ಗೆ ಭಾರತದ ಕಾನೂನು ಹೇಳೋದೇನು? ಹೆಣ್ಣು ಮಕ್ಕಳಿಗೆ ಗೊತ್ತಿರಬೇಕಿವು!

ಇಂಡೋನೇಷ್ಯಾದಲ್ಲಿ ಮದುವೆಯ ಮೊದಲು ಸಹಬಾಳ್ವೆ ಸಹ ನಿಷೇಧ
ಸಂಹಿತೆಯ ಹಿಂದಿನ ಕರಡು ಮೂರು ವರ್ಷಗಳ ಹಿಂದೆ ಅಂಗೀಕರಿಸಬೇಕಾಗಿತ್ತು ಆದರೆ ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಪ್ರಚೋದಿಸಿತು, ಏಕೆಂದರೆ ಹತ್ತಾರು ಜನರು ಕಾನೂನಿನ ವಿರುದ್ಧ ಬೀದಿಗಿಳಿದಿದ್ದರು, ಅವರ ಪ್ರಕಾರ ಅವರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು. ಅಧ್ಯಕ್ಷರು ಅಥವಾ ರಾಜ್ಯ ಸಂಸ್ಥೆಗಳನ್ನು ಅವಮಾನಿಸುವುದು ಮತ್ತು ಇಂಡೋನೇಷ್ಯಾದ ರಾಜ್ಯ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು, ಮದುವೆಯ ಮೊದಲು ಸಹಬಾಳ್ವೆಯನ್ನು ಸಹ ನಿಷೇಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಕರಡು ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ.

ಕಾನೂನು ಮತ್ತು ಮಾನವ ಹಕ್ಕುಗಳ ಉಪ ಮಂತ್ರಿ ಮತ್ತು ಇಂಡೋನೇಷ್ಯಾದ ಸಂಸತ್ತಿನ ಕಮಿಷನ್ III ರ ನಡುವಿನ ಸಭೆಯು ನವೆಂಬರ್‌ನಲ್ಲಿ ಜಕಾರ್ತಾದ ಸೆನಾಯನ್‌ನ ಸಂಸತ್ತಿನ ಸಂಕೀರ್ಣದಲ್ಲಿ ನಡೆದ ನಂತರ ಈ ಬೆಳವಣಿಗೆ ಕಂಡುಬಂದಿದೆ. 

Law for women: ಹೆಣ್ಮಕ್ಕಳಿಗೆ ಇದು ಗೊತ್ತಾದರೆ ಸೇಫ್, ಹಿಂಸೆಯಿಂದ ಸಿಗುತ್ತೆ ರಕ್ಷಣೆ

ಹೊಸ ನಿಯಮದಿಂದ ಇಂಡೋನೇಷ್ಯಾದಲ್ಲಿ ಪ್ರವಾಸಿಗರ ಇಳಿಕೆ ಸಾಧ್ಯತೆ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರವಾದ ಇಂಡೋನೇಷ್ಯಾ, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು LGBT ಜನರ ವಿರುದ್ಧ ತಾರತಮ್ಯ ಮಾಡುವ ಸ್ಥಳೀಯ ಮಟ್ಟದಲ್ಲಿ ನೂರಾರು ನಿಯಮಾವಳಿಗಳನ್ನು ಹೊಂದಿದೆ. ಹೊಸ ಕ್ರಿಮಿನಲ್ ಕೋಡ್ ಅನ್ನು ಅಂಗೀಕರಿಸಿದರೆ, ಅದು ಇಂಡೋನೇಷಿಯಾದ ನಾಗರಿಕರಿಗೆ ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಹೊಸ ನಿಯಮಗಳು ಪ್ರವಾಸಿ ಮತ್ತು ಹೂಡಿಕೆ ತಾಣವಾಗಿ ಇಂಡೋನೇಷ್ಯಾದದ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ ಸಹ ವ್ಯಕ್ತವಾಗಿದೆ.

ವೈವಾಹಿಕ ಸಂಬಂಧದಲ್ಲಿ ಹಿಂಸಾಚಾರದಿಂದ ಮಹಿಳೆಯನ್ನು ಕಾಡೋ ಸಮಸ್ಯೆಗಳಿವು

Follow Us:
Download App:
  • android
  • ios