ಮಗನ ಮದುವೆಗೆ 20 ರಷ್ಯನ್ ಬೆಡಗಿಯರ ಕರೆಸಿದ ಅಪ್ಪ: ವೀಡಿಯೋ ವೈರಲ್

ಮಗನ ಮದುವೆಯನ್ನು ಅದ್ದೂರಿಯಾಗಿ ಆಚರಿಸಲು ತಂದೆಯೊಬ್ಬರು 20 ರಷ್ಯನ್ ನರ್ತಕಿಯರನ್ನು ಕರೆಸಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವೈಭವದ ಪ್ರದರ್ಶನವು ಅನೇಕರ ಟೀಕೆಗೆ ಗುರಿಯಾಗಿದೆ.

Indian Man Hires 20 Russian Dancers for Sons Wedding Video Goes Viral

ಜೀವನದಲ್ಲಿ ಒಂದೇ ಒಂದು ಬಾರಿ ಮದುವೆಯಾಗುವುದು ಹಾಗಾಗಿ ಅದ್ದೂರಿಯಾಗಿ ಮದ್ವೆಯಾಗಬೇಕು ಎಂಬುದು ಅನೇಕರ ಆಸೆ... ಇದಕ್ಕಾಗಿ ಅನೇಕರು ಇನ್ನಿಲ್ಲದ ವೈಭವವನ್ನುಮದುವೆಯಲ್ಲಿ ತೋರಿಸುತ್ತಾರೆ. ಸಾಲ ಸೋಲ ಮಾಡಿಯಾದರೂ ಅದ್ದೂರಿಯಾಗಿ ಮದ್ವೆಯಾಗುತ್ತಾರೆ. ಅರ್ಥಪೂರ್ಣವಾಗುವುದಕ್ಕಿಂತ ಹೆಚ್ಚು ಅದ್ದೂರಿತನವೇ ಇಂದಿನ ಮದ್ವೆಗಳಲ್ಲಿ ಜಾಸ್ತಿಯಾಗುತ್ತಿದೆ.  

ಅದೇ ರೀತಿ ಇಲ್ಲೊಂದು ಕಡೆ ಮಗನ ಮದ್ವೆಯನ್ನು ಅದ್ದೂರಿಯಾಗಿ ನಡೆಸಬೇಕು. ಎಲ್ಲೂ ಇಲ್ಲದ ಅದ್ದೂರಿತನ ನಮ್ಮ ಮನೆಯ ಮದ್ವೆಯಲ್ಲಿರಬೇಕು ಎಂದು ಅಪ್ಪನೋರ್ವ ತನ್ನ ಮಗನ ಮದ್ವೆ ದಿಬ್ಬಣದಲ್ಲಿ ಕುಣಿಯುವುದಕ್ಕಾಗಿಯೇ 20 ರಷ್ಯನ್ ಬೆಡಗಿಯರನ್ನು ಕರೆಸಿದ್ದಾರೆ. ಇದು ಮದುವೆಯ ರಂಗನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಮದ್ವೆ ದಿಬ್ಬಣದ ವೇಳೆ ಕುಣಿಯುವುದಕ್ಕಾಗಿಯೇ ರಷ್ಯನ್ ಬೆಡಗಿಯರನ್ನು ಕರೆಸಿರುವುದರಿಂದ ಈ ಮದ್ವೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. 

ನೀವು ಅಂಬಾನಿ ಮನೆ ಮದ್ವೆಯ ವೈಭವವನ್ನು ನೋಡಿರಬಹುದು. 5 ಸಾವಿರ ಕೋಟಿ ವೆಚ್ಚದ ಈ ಮದ್ವೆಯಲ್ಲಿ ಇಲ್ಲದ ಮನೋರಂಜನೆಯೇ ಇರಲಿಲ್ಲ. ವಿದೇಶಿ ನೃತ್ಯಗಾರರಿಂದ ಹಿಡಿದು ಹಾಲಿವುಡ್ ನಟನಟಿಯರು, ಬಾಲಿವುಡ್ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು ಇದರಲ್ಲಿ ಭಾಗವಹಿಸಿದ್ದರು, ಜೊತೆಗೆ ಸೆಲೆಬ್ರಿಟಿಗಳು ಈ ಮದ್ವೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಆದರೆ ಸಾಮಾನ್ಯರೊಬ್ಬರು ಇಷ್ಟೊಂದು ಅದ್ದೂರಿತನವಿಲ್ಲದಿದ್ದರೂ ತಾನು ಯಾರಿಗೆ ಕಡಿಮೆ ಇಲ್ಲ ಎಂದು ಮಗನ ಮದುವೆಯಲ್ಲಿ ಕುಣಿಯಲು ರಷ್ಯನ್ ಬೆಡಗಿಯರನ್ನು ಕರೆಸಿದ್ದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. 

ವೈರಲ್ ಆದ ವೀಡಿಯೋದಲ್ಲಿ ಹೊಳೆಯುವ ಚಿನ್ನದ ಬಣ್ಣದ ತುಂಡುಡುಗೆ ಬಟ್ಟೆ ತೊಟ್ಟು ಕುಣಿದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕಾಮೆಮಟ್ ಮಾಡ್ತಿದ್ದಾರೆ. ಆದರೆ ಈ ವೀಡಿಯೋದ ನಿಖರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. up__say ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವೈಭವತನ ಬೇಕಿತ್ತಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇಂತಹವರು ತಮ್ಮ ಸೊಸೆಯ ಬಗ್ಗೆ ನಾವೇಷ್ಟು ಸಂಸ್ಕಾರಿಗಳು ಎಂಬ ಬಗ್ಗೆ ಮಾತನಾಡುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಕನಿಷ್ಠ ಅವರ ತಂದೆಗೆ ಗೊತ್ತಿದೆ ಮಗನಿಗೆ ಏನಿಷ್ಟ ಎಂದು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಒಂದು ವೇಳೆ ಡಿವೋರ್ಸ್ ಆದ್ರೆ ಇವರು 10 ಲಕ್ಷ ತಿಂಗಳಿಗೆ ಪರಿಹಾರ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios