ಡಿವೋರ್ಸ್ ಆಗಿ 2 ವರ್ಷದ ನಂತರ ಮದ್ವೆ ಉಳಿಸಿಕೊಳ್ಳೋದು ಹೇಗೆ ಹೇಳಿದ ಶಿಖರ್ ಧವನ್

ಮದುವೆ ನಂತ್ರದ ಜೀವನದಲ್ಲಿ ಸಾಕಷ್ಟು ಬದಲಾವಣೆಯಿರುತ್ತದೆ. ಸಂಬಂಧದ ಬಗ್ಗೆ ಏನೂ ತಿಳಿಯದ ವ್ಯಕ್ತಿ ಮದುವೆಯಾದ್ರೆ ಸಮಸ್ಯೆ ಹೆಚ್ಚು. ಇದನ್ನು ಶಿಖರ್ ಧವನ್ ಒಪ್ಪಿಕೊಂಡಿದ್ದಾರೆ. ಎರಡನೇ ಬಾರಿ ಚಾನ್ಸ್ ಸಿಕ್ಕಿದ್ರೆ ಈ ತಪ್ಪು ಮಾಡಲ್ಲ ಎಂದಿದ್ದಾರೆ. 
 

Indian Cricketer Shikhar Dhawan Talks About Red Flags And Failed Marriage With Wife Ayesha Mukherjee

ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಶಿಖರ್ ಧವನ್ ಕೂಡ ಒಬ್ಬರು. ಮಾರ್ಚ್ 31ರಿಂದ ಶುರುವಾಗುವ ಐಪಿಎಲ್ ನಲ್ಲಿ ಶಿಖರ್ ಧವನ್, ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕೂಲ್ ಸ್ಟೈಲ್‌ಗೆ ಫೇಮಸ್ ಆಗಿರುವ ಶಿಖರ್ ಧವನ್  ಜೀವನ ಕೂಲ್ ಆಗಿಲ್ಲ. ಶಿಖರ್ ಧವನ್ ಮದುವೆ ಮುರಿದು ಬಿದ್ದು ಈಗಾಗಲೇ ಎರಡು ವರ್ಷ ಕಳೆದಿದೆ. ವಿಚ್ಛೇದನ ಪಡೆದು ಎರಡು ವರ್ಷಗಳ ನಂತ್ರ ಶಿಖರ್ ಧವನ್, ಇದಕ್ಕೆ ಕಾರಣ ಯಾರು ಹಾಗೆ ಏನಕ್ಕೆ ತನ್ನ ದಾಂಪತ್ಯ ಜೀವನ ಹಳಿ ತಪ್ಪಿದೆ ಎಂಬುದನ್ನು ಹೇಳಿದ್ದಾರೆ.  

20124 ರಲ್ಲಿ ಶಿಖರ್ ಧವನ್ (Shikhar Dhawan), ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದರು. 2014ರಲ್ಲಿ ಶಿಖರ್, ತಂದೆಯಾದ್ರು. ಆದ್ರೆ ಈ ದಾಂಪತ್ಯ (Marriage) ಅನೇಕ ದಿನ ಉಳಿಯಲಿಲ್ಲ. 2021ರಲ್ಲಿ ಶಿಖರ್ ಹಾಗೂ ಆಯೇಷಾ ದೂರವಾಗುವ ನಿರ್ಧಾರ ಕೈಗೊಂಡರು. ಆದ್ರೆ ಸೆಟಲ್ಮೆಂಟ್ ವಿಷ್ಯ ಇನ್ನೂ ಇತ್ಯರ್ಥವಾಗಿಲ್ಲ. 

10 ಜನರ ಜೊತೆ ಮಲಗಿರುವೆ ಎಂದ ಖ್ಯಾತ ನಟ ಎಫ್​ಬಿ ಲೈವಲ್ಲಿ ಕೊಟ್ರು ಡಿವೋರ್ಸ್​!

ಒಂಭತ್ತು ವರ್ಷಗಳ ಕಾಲ ನಡೆದ ದಾಂಪತ್ಯದ ಬಗ್ಗೆ ಶಿಖರ್ ಧವನ್ ಮೌನ ಮುರಿದಿದ್ದಾರೆ. ಸ್ಪೋರ್ಟ್ಸ್ ಟಾಕ್  ನಲ್ಲಿ ಶಿಖರ್ ಧವನ್, ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ನನ್ನ ಸಂಬಂಧದಲ್ಲಿ ನಾನು ಎಂದಿಗೂ ರೆಡ್ ಫ್ಲ್ಯಾಗ್ (Red Flag ) ಗೆ ಗಮನ ಕೊಡಲಿಲ್ಲ. ನಾನು ಮೊದಲು ಯಾವುದೇ ರಿಲೇಶನ್ಶಿಪ್ ನಲ್ಲಿ ಇರಲಿಲ್ಲ. ಮದುವೆಯಾದ್ಮೇಲೆ ವಿಷಯಗಳನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯಲಿಲ್ಲ ಎಂದಿರುವ ಶಿಖರ್ ಧವನ್, ನನ್ನ ಮದುವೆ ಮುರಿದು ಬೀಳಲು ನಾನೇ ಕಾರಣ ಎಂದಿದ್ದಾರೆ. ಯುವಜನತೆಗೆ ಸಂಬಂಧ ಉಳಿಸಿಕೊಳ್ಳುವ ಬಗ್ಗೆ ಶಿಖರ್ ಧವನ್ ಟಿಪ್ಸ್ ಕೂಡ ನೀಡಿದ್ದಾರೆ.      

ರೆಡ್ ಫ್ಲ್ಯಾಗ್ ಎಂದರೇನು?  : ಶಿಖರ್ ಧವನ್ ಪ್ರಕಾರ, ರೆಡ್ ಫ್ಲ್ಯಾಗ್ ಅರ್ಥ ಮಾಡಿಕೊಳ್ಳದೆ ಇರುವುದೇ ಅವರ ವಿಚ್ಛೇದನಕ್ಕೆ ಕಾರಣ. ಹಾಗಿದ್ರೆ ರೆಡ್ ಫ್ಲ್ಯಾಗ್ ಅಂದ್ರೇನು ಎಂಬ ನಿಮ್ಮ ಪ್ರಶ್ನೆಗೆ, ಸಂಗಾತಿ ಜೊತೆ ಜೀವನ ನಡೆಸುವ ಬಗ್ಗೆ ಮತ್ತೊಮ್ಮೆ ವಿಚಾರ ನಡೆಸುವ ಅರ್ಥವನ್ನು ಇದು ಸೂಚಿಸುತ್ತದೆ. ಸಂಗಾತಿಯ ಪ್ರಮುಖ ವಿಷಯಗಳನ್ನು ಮರೆತುಬಿಡುವುದು, ಅನುಮಾನಿಸುವುದು, ಜಗಳವಾಡುವುದು, ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದು ಸೇರಿದಂತೆ ಕೆಲ ವಿಷಕಾರಿ ವ್ಯಕ್ತಿತ್ವ ಇದ್ರಲ್ಲಿ ಸೇರಿದೆ. 

ಸೇಫ್ ಸೆಕ್ಸ್‌ಗೆ ಕಾಂಡೋಮ್‌ ಬೇಕು ನಿಜ, ಆದ್ರೆ ಇದ್ರ ಬಳಕೆಯಿಂದ ತೊಂದ್ರೆನೂ ಆಗುತ್ತೆ!

ಶಿಖರ್ ಧವನ್ ಯುವಜನರಿಗೆ ಹೇಳಿದ್ದೇನು? : 
ಭಾವುಕರಾಗಿ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಡಿ :
 ಮದುವೆಗೆ ಮುನ್ನ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಇಬ್ಬರ ಸಂಸ್ಕಾರಗಳು ಹೊಂದಿಕೆಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಇಬ್ಬರು ಒಟ್ಟಿಗಿದ್ದಾಗ ಸಂತೋಷಪಡುತ್ತಾರಾ ಎಂಬುದನ್ನು ಗಮನಿಸಬೇಕು. ಯಾವುದೇ ಕಾರಣಕ್ಕೂ ಆತುರದಲ್ಲಿ ಮದುವೆಯಾಗಬಾರದು. ನನಗೆ ರಿಲೇಶನ್ಶಿಪ್ ಬಗ್ಗೆ ಯಾವುದೇ ಅನುಭವವಿರಲಿಲ್ಲ. ನಾನು ಭಾವುಕನಾಗಿ ಮದುವೆಗೆ ಮುಂದಾದೆ ಎನ್ನುತ್ತಾರೆ ಶಿಖರ್.

ಸಂಬಂಧ  ಒಂದು ಮ್ಯಾಚ್ ಇದ್ದಂತೆ ಎಂದ ಶಿಖರ್ ಧವನ್ : ಶಿಖರ್ ಧವನ್ ಪ್ರಕಾರ, ಸಂಬಂಧವು ಒಂದು ಹೊಂದಾಣಿಕೆಯಂತೆ. ಎಲ್ಲರಿಗೂ ತಮ್ಮ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ.  ಪರಿಪೂರ್ಣ ಜೀವನ ಸಂಗಾತಿ ಹುಡುಕಲು 4-5 ಸಂಬಂಧಗಳು ಅಥವಾ 8-9 ಸಂಬಂಧಗಳು ಬೇಕಾಗಬಹುದು. ಇದರಿಂದ ಯಾವುದೇ ಹಾನಿ ಇಲ್ಲ. ನಿಮಗೆ ಪರಿಪೂರ್ಣರು ಸಿಕ್ಕಿದಾಗ ಮಾತ್ರ ಮದುವೆಯಾಗಿ ಎನ್ನುತ್ತಾರೆ ಶಿಖರ್ ಧವನ್.

ಮದುವೆಗೆ ಮೊದಲು ನೀವು ಎಷ್ಟು ದಿನ ಡೇಟ್ ಮಾಡ್ಬೇಕು? : ಮದುವೆ ಮೊದಲು ಎಷ್ಟು ದಿನ ಡೇಟ್ ಮಾಡ್ಬೇಕು ಎನ್ನುವ ಪ್ರಶ್ನೆಗೆ ಇದು ನಿಮ್ಮ ವಯಸ್ಸು ಮತ್ತು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ತಜ್ಞರು. ಒಂದರಿಂದ ಮೂರು ವರ್ಷಗಳ ಕಾಲ ನೀವು ಡೇಟ್ ಮಾಡಿ ಮದುವೆಯಾದ್ರೆ ಅಭ್ಯಂತರವೇನೂ ಇಲ್ಲ. 
 

Latest Videos
Follow Us:
Download App:
  • android
  • ios