75 ವರ್ಷಗಳ ನಂತರ ಪಾಕ್‌ನಲ್ಲಿರುವ ಬಾಲ್ಯದ ಮನೆಗೆ ಭೇಟಿ ನೀಡಿದ 92 ವರ್ಷದ ಅಜ್ಜಿ

ಭಾರತ ಪಾಕಿಸ್ತಾನ ವಿಭಜನೆ ವೇಳೆ ದೇಶ ಬಿಟ್ಟು ಬಂದ 92 ವರ್ಷದ ಭಾರತೀಯ ಮಹಿಳೆಯೊಬ್ಬರು ಈಗ ಸುಮಾರು 75 ವರ್ಷಗಳ ನಂತರ ಪಾಕಿಸ್ತಾನದಲ್ಲಿರುವ ತಾವು ಹುಟ್ಟಿ ಬೆಳೆದ ಮನೆಗೆ ಭೇಟಿ ನೀಡಿದ್ದಾರೆ. 

India Pak Partition stories 92 year old Indian woman visited her ancestral home in Pakistan akb

ಭಾರತ ಪಾಕಿಸ್ತಾನ ವಿಭಜನೆ ವೇಳೆ ಹಲವರು ತಾವು ಹುಟ್ಟಿ ಬೆಳೆದ ಮನೆಗಳನ್ನು ತೊರೆದಿದ್ದರು. ತಮ್ಮ ಕುಟುಂಬ ಬಂಧು ಬಳಗದಿಂದ ದೂರಾಗಿದ್ದರು. ರಾತ್ರೋ ರಾತ್ರಿ ಪಾಕಿಸ್ತಾನ ತೊರೆದು ಅನೇಕರು ಭಾರತಕ್ಕೆ ಬಂದಿದ್ದರು. ಹಾಗೆಯೇ ಭಾರತ ತೊರೆದು ಅನೇಕರು ಪಾಕಿಸ್ತಾನಕ್ಕೆ ತೆರಳಿದರು. ಹೀಗೆ ದೇಶ ಬಿಟ್ಟು ಬಂದ 92 ವರ್ಷದ ಭಾರತೀಯ ಮಹಿಳೆಯೊಬ್ಬರು ಈಗ ಸುಮಾರು 75 ವರ್ಷಗಳ ನಂತರ ಪಾಕಿಸ್ತಾನದಲ್ಲಿರುವ ತಾವು ಹುಟ್ಟಿ ಬೆಳೆದ ಮನೆಗೆ ಭೇಟಿ ನೀಡಿದ್ದಾರೆ. 92 ವರ್ಷದ ಭಾರತೀಯ ಮಹಿಳೆ ಈನಾ ಛಿಬಾರ್ 75 ವರ್ಷಗಳ ನಂತರ ಪಾಕಿಸ್ತಾನದಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದವರು.

ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ಪಾಕಿಸ್ತಾನಿ ಹೈ ಕಮಿಷನ್ ಆಕೆಗೆ ಸದ್ಭಾವನೆಯ ಸೂಚಕವಾಗಿ ಮೂರು ತಿಂಗಳ ವೀಸಾವನ್ನು ನೀಡಿತು. ಆ ಮೂಲಕ ರೀನಾ ಅವರಿಗೆ ತಮ್ಮ ಬಾಲ್ಯದ ಮನೆ "ಪ್ರೇಮ್ ನಿವಾಸ"ಕ್ಕೆ ತೆರಳಲು ಸಾಧ್ಯವಾಗಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ರೀನಾ ಅವರ ಬಾಲ್ಯದ ಮನೆಯ ಇದೆ. ಶನಿವಾರ (ಜು.16) ಅವರು ಅಲ್ಲಿಗೆ ಹೋಗಲು ವಾಘಾ-ಅಟ್ಟಾರಿ ಗಡಿಯನ್ನು ದಾಟಿದ್ದಾರೆ. ಈ ವೇಳೆ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚು ಸುಲಭವಾಗಿ ಪ್ರಯಾಣಿಸಲು ವೀಸಾಗಳು  ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಎರಡೂ ದೇಶಗಳ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವಂತೆ ಅವರು ಒತ್ತಾಯಿಸಿದರು. 

ದೇಶ ವಿಭಜನೆಯ ಕೆಲವೇ ತಿಂಗಳುಗಳ ಮೊದಲು ರೀನಾ ವರ್ಮಾ 1946 ರಲ್ಲಿ ಭಾರತಕ್ಕೆ ಬಂದಿದ್ದರು. ಅವರು ಮತ್ತು ಅವರ ಒಡಹುಟ್ಟಿದವರು ಸೋಲನ್‌ಗೆ ಮೊದಲು ಬಂದರು. ಮತ್ತು 1947ರಲ್ಲಿ ದೇಶ ವಿಭಜನೆಯ ನಂತರ ಅವರ ಪೋಷಕರು ಅವರೊಂದಿಗೆ ಸೇರಿಕೊಂಡರು. ಆಕೆಯ ಒಡಹುಟ್ಟಿದವ ಸಹೋದರರು ವಿವಿಧ ಸಮುದಾಯಗಳಲ್ಲಿಒಳ್ಳೆಯ ಸ್ನೇಹಿತರನ್ನು ಹೊಂದಿದ್ದರು ಮತ್ತು ಅವರ ಮನೆಗಳಲ್ಲಿ ಕಷ್ಟ ಸುಖಕ್ಕೆ ಜೊತೆಯಾಗುತ್ತಿದ್ದರು. ತಮ್ಮ ತಂದೆ ಪ್ರಗತಿಪರರಾಗಿದ್ದು, ಪುಸ್ತಕಗಳು ಮನೆಯಲ್ಲಿ ಬೇಕಾದಷ್ಟಿದ್ದವು. ಇಂತಹ ಬಹುಸಂಸ್ಕೃತಿಯ ವಾತಾವರಣದಲ್ಲಿ ತಾವು ಬೆಳೆದಿದ್ದಾಗಿ ರೀನಾ ನೆನಪಿಸಿಕೊಂಡರು.

ರೀನಾ ಬಹಳ ಸಮಯದಿಂದ ತನ್ನ ಪೂರ್ವಿಕರ ಮನೆಗೆ ಭೇಟಿ ನೀಡಲು ಪ್ರಯತ್ನಿಸುತ್ತಿದ್ದರು. ಆದರೆ ಭಾರತಕ್ಕೆ ಬಂದ ಇಪ್ಪತ್ತು ವರ್ಷಗಳ ನಂತರ, 1965ರಲ್ಲಿ, ಅವರು ವಿಶೇಷ ಭಾರತ-ಪಾಕಿಸ್ತಾನ ಪಾಸ್ಪೋರ್ಟ್ ಪಡೆದರು. ಆದರೆ ವೈಯಕ್ತಿಕ ಕಾರಣಗಳಿಂದ ಆಕೆಗೆ ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ, ಅವರು ಇಂಡಿಯಾ-ಪಾಕಿಸ್ತಾನ್ ಹೆರಿಟೇಜ್ ಕ್ಲಬ್ ಎಂಬ ಫೇಸ್‌ಬುಕ್ ಗ್ರೂಪ್‌ಗೆ ಸೇರಿಕೊಂಡಿದ್ದರು ಮತ್ತು ಅಲ್ಲಿರುವ ತಮ್ಮ ಬಾಲ್ಯದ ಮನೆಗೆ ಹೋಗಬೇಕೆಂದು ಪೋಸ್ಟ್ ಮಾಡಿದ್ದರು.

ಇದನ್ನು ನೋಡಿದ ಫೇಸ್‌ಬುಕ್‌ ಗುಂಪಿನ ಒಬ್ಬ ಸದಸ್ಯ ಸಾಜಾದ್ ಹುಸೇನ್ ರೀನಾ ಸಹಾಯಕ್ಕೆ ಬಂದರು. ರೀನಾ ನೀಡಿದ ವಿವರದಂತೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಮನೆಯನ್ನು ಸಾಜಾದ್ ಗುರುತಿಸಿದರು. ಆದಾಗ್ಯೂ, ಆಕೆಯ ವೀಸಾ ಅರ್ಜಿಯನ್ನು ಮಾರ್ಚ್ 2022 ರಲ್ಲಿ ತಿರಸ್ಕರಿಸಲಾಯಿತು. ನಂತರ ಮೇ 2022 ರಲ್ಲಿ, 'ದಿ ಇಂಡಿಪೆಂಡೆಂಟ್ ಉರ್ದು' ರೀನಾ ಅವರ ವೀಡಿಯೊ ಸ್ಟೋರಿ ಮಾಡಿದ ನಂತರ ಈ ವಿಚಾರವಾಗಿ ಮತ್ತೆ ಪಾಕಿಸ್ತಾನ ಪರಿಶೀಲನೆ ನಡೆಸಿತು. ನಂತರ ಇದರ ಪರಿಣಾಮವಾಗಿ ಪಾಕಿಸ್ತಾನದ ಹೈ ಕಮಿಷನ್ ಆಕೆಗೆ ಮೂರು ತಿಂಗಳ ಸದ್ಭಾವನಾ ವೀಸಾವನ್ನು ನೀಡಿತು.

Latest Videos
Follow Us:
Download App:
  • android
  • ios