ಸಂಬಂಧ ಉಳಿಸಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ, ಹೆಚ್ಚು ಡಿವೋರ್ಸ್ ಆಗೋದು ಯಾವ ದೇಶದಲ್ಲಿ?

ಮದುವೆಯೆಂಬುದು ಒಂದು ಸುಂದರವಾದ ಸಂಬಂಧ. ಗಂಡು-ಹೆಣ್ಣು ಇಬ್ಬರು ದಾಂಪತ್ಯದ ಹೆಸರಲ್ಲಿ ಒಂದಾಗಿ ಕಷ್ಟಾನೋ ಸುಖಾನೋ ಜೀವನಪರ್ಯಂತ ಜೊತೆಯಾಗಿರುವ ನಿರ್ಧಾರ ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಬಂಧ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿದೆ. ಹಾಗಿದ್ರೆ ಅತೀ ಹೆಚ್ಚು ವಿಚ್ಛೇದನ ಆಗುವುದು ಯಾವ ದೇಶದಲ್ಲಿ? ಇಲ್ಲಿದೆ ಹೆಚ್ಚಿನ ಮಾಹಿತಿ.
 

India is on top in Maintaining relationships, most divorces happen in these countries, see full list Vin

ಮನುಷ್ಯನ ಜೀವನದಲ್ಲಿ ಮದುವೆ ಎಂಬುದು ಒಂದು ಅರ್ಥಪೂರ್ಣವಾದ ಸಂಬಂಧ. ಬೇರೆ ಬೇರೆ ಹಿನ್ನಲೆಯಿಂದ ಬಂದ ಗಂಡು-ಹೆಣ್ಣು ಇಬ್ಬರೂ ದಾಂಪತ್ಯ ಜೀವನದಲ್ಲಿ ಒಂದಾಗುತ್ತಾರೆ. ಕಷ್ಟಾನೋ ಸುಖಾನೋ ಅರಿತುಕೊಂಡು ಜೀವನ ನಡೆಸುತ್ತಾರೆ. ನೈತಿಕ ಪಾಠವನ್ನು ಕಲಿಸಿ ಮಕ್ಕಳನ್ನು ಬೆಳೆಸುತ್ತಾರೆ. ಹೀಗೆ ಕುಟುಂಬ ರೂಪುಗೊಳ್ಳುತ್ತದೆ. ಮದುವೆಯೆಂಬ ಸಂಬಂಧದ ಸೊಬಗೇ ಅದು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಮದುವೆ ಎಂಬ ಸಂಬಂಧ ಅರ್ಥಹೀನವಾಗುತ್ತದೆ. ಮದುವೆಯಾದ ಕೆಲವೇ ತಿಂಗಳಲ್ಲಿ ದಂಪತಿ ಸಣ್ಣಪುಟ್ಟ ಕಾರಣಕ್ಕೆ ಜಗಳವಾಡಿ ದೂರವಾಗುತ್ತಾರೆ. ಡಿವೋರ್ಸ್ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ.  ಹಾಗಿದ್ರೆ ಅತೀ ಹೆಚ್ಚು ವಿಚ್ಛೇದನ ಆಗುವುದು ಯಾವ ದೇಶದಲ್ಲಿ? ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ ಇಲ್ಲಿದೆ ಮಾಹಿತಿ.

ಸಂಬಂಧಗಳನ್ನು ಉಳಿಸುವಲ್ಲಿ  ಭಾರತಕ್ಕೆ ವಿಶ್ವದಲ್ಲೇ ಅಗ್ರಸ್ಥಾನ
ಸಂಬಂಧ (Relationship)ಗಳನ್ನು ಉಳಿಸುವಲ್ಲಿ , ಕುಟುಂಬ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಕಾಪಾಡುವ ದೇಶಗಳಲ್ಲಿ ಭಾರತವು ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಕೇವಲ 1 ಪ್ರತಿಶತದಷ್ಟಿವೆ, ಆದರೆ ಅನೇಕ ದೇಶಗಳಲ್ಲಿ 94 ಪ್ರತಿಶತದಷ್ಟು ಸಂಬಂಧಗಳು ಮುರಿದುಹೋಗಿವೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಮಾಹಿತಿಯ ಪ್ರಕಾರ, ಏಷ್ಯಾದ ದೇಶಗಳಲ್ಲಿ ಡಿವೋರ್ಸ್ ಪ್ರಕರಣಗಳು ಕಡಿಮೆ. ಆದರೆ ಯುರೋಪ್ ಮತ್ತು ಅಮೆರಿಕಾದಲ್ಲಿ ಕುಟುಂಬಗಳು (Family) ಹೆಚ್ಚು ಡಿವೋರ್ಸ್‌ನಲ್ಲಿ ಕೊನೆಯಾಗುತ್ತಿದೆ. ವರದಿಯ ಪ್ರಕಾರ, ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ವಿಯೆಟ್ನಾಂ ಭಾರತದ ನಂತರ ಮೊದಲ ಸ್ಥಾನದಲ್ಲಿದೆ, ಅಲ್ಲಿ ಕೇವಲ 7 ಪ್ರತಿಶತದಷ್ಟು ಸಂಬಂಧಗಳು ವಿಚ್ಛೇದನದಲ್ಲಿ (Divorce) ಕೊನೆಗೊಳ್ಳುತ್ತವೆ. ಇದಲ್ಲದೆ, ತಜಕಿಸ್ತಾನ್‌ನಲ್ಲಿ 10 ಪ್ರತಿಶತ, ಇರಾನ್‌ನಲ್ಲಿ 14 ಮತ್ತು ಮೆಕ್ಸಿಕೊದಲ್ಲಿ 17 ಪ್ರತಿಶತದಷ್ಟು ಸಂಬಂಧಗಳು ವಿಚ್ಛೇದನ ಪಡೆಯುತ್ತವೆ.

99 ಸಮಸ್ಯೆಯಲ್ಲಿ ಒಂದು ನಿವಾರಣೆ, ಮಹಿಳೆಯ ಡಿವೋರ್ಸ್ ಫೋಟೋಶೋಟ್ ವೈರಲ್!

ಈಜಿಪ್ಟ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಟರ್ಕಿ ಮತ್ತು ಕೊಲಂಬಿಯಾ ಸಹ ಕಡಿಮೆ ಸಂಖ್ಯೆಯ ವಿಚ್ಛೇದನ ಹೊಂದಿರುವ 10 ದೇಶಗಳಲ್ಲಿ ಸೇರಿವೆ. ನೆರೆಯ ರಾಷ್ಟ್ರವಾದ ಪಾಕಿಸ್ತಾನವನ್ನು ಈ ವರದಿಯಲ್ಲಿ ಸೇರಿಸಲಾಗಿಲ್ಲ, ಆದರೆ ಜಪಾನ್‌ನಲ್ಲಿನ 35 ಪ್ರತಿಶತ ಸಂಬಂಧಗಳಲ್ಲಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಜರ್ಮನಿಯಲ್ಲಿ 38 ಪ್ರತಿಶತದಷ್ಟು ಸಂಬಂಧಗಳು ಮುರಿದುಹೋಗಿವೆ ಮತ್ತು ಬ್ರಿಟನ್‌ನಲ್ಲಿನ ಅಂಕಿ ಅಂಶವು 41 ಪ್ರತಿಶತದಷ್ಟಿದೆ. ಮತ್ತೊಂದೆಡೆ, ಚೀನಾದಲ್ಲಿ 44 ಪ್ರತಿಶತ ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. USನಲ್ಲಿ, ಈ ಅಂಕಿ ಅಂಶವು 45 ಪ್ರತಿಶತದಷ್ಟಿದ್ದರೆ, ಡೆನ್ಮಾರ್ಕ್, ದಕ್ಷಿಣ ಕೊರಿಯಾ ಮತ್ತು ಇಟಲಿಯಲ್ಲಿ, 46 ಪ್ರತಿಶತ ಸಂಬಂಧಗಳು ಸಮರ್ಪಕವಾಗಿಲ್ಲ ಎಂದು ತಿಳಿದುಬಂದಿದೆ.

ಶ್ರೀಮಂತ ದೇಶಗಳಲ್ಲಿ ವಿಚ್ಛೇದನ ಹೆಚ್ಚು
ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವ ಹೆಚ್ಚಿನ ದೇಶಗಳಲ್ಲಿ ಯುರೋಪ್ ದೇಶಗಳ ಸಂಖ್ಯೆ ಹೆಚ್ಚಿದೆ. ಪೋರ್ಚುಗಲ್‌ನಲ್ಲಿ ಶೇಕಡಾ 94ರಷ್ಟು ವಿಚ್ಛೇದನ ಪ್ರಕರಣಗಳು ವರದಿಯಾಗಿವೆ. ಇದರ ಹೊರತಾಗಿ, ಸ್ಪೇನ್ ಕೊನೆಯದಾಗಿ ಎರಡನೇ ಸ್ಥಾನದಲ್ಲಿದೆ, ಅಲ್ಲಿ 85 ಪ್ರತಿಶತ ಸಂಬಂಧಗಳು ಸಮರ್ಪಕವಾಗಿರುವುದಿಲ್ಲ. ಇದರ ಹೊರತಾಗಿ, ಲಕ್ಸೆಂಬರ್ಗ್‌ನಲ್ಲಿ 79 ಪ್ರತಿಶತ ಮದುವೆಗಳು ಡಿವೋರ್ಸ್‌ನಲ್ಲಿ ಕೊನೆಗೊಳ್ಳುತ್ತದೆ. ಇಷ್ಟೇ ಅಲ್ಲ, ಅಂಕಿಅಂಶಗಳ ಪ್ರಕಾರ ರಷ್ಯಾದಲ್ಲಿ ಶೇಕಡ 73ರಷ್ಟು ವಿಚ್ಛೇದನ ನಡೆಯುತ್ತದೆ.  ನೆರೆಯ ದೇಶವಾದ ಉಕ್ರೇನ್‌ನಲ್ಲಿ 70 ಪ್ರತಿಶತ ಮದುವೆಗಳು ಮುರಿದು ಬೀಳುತ್ತವೆ ಎಂದು ತಿಳಿದುಬಂದಿದೆ.

ಗಂಡ ಹೆಂಡ್ತೀನ ಒಂದು ಮಾಡುತ್ತಂತೆ ಈ ಸ್ಲೀಪ್ ಡಿವೋರ್ಸ್!

ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆ ಯಾಕೆ?
ಸಮಾಜಶಾಸ್ತ್ರಜ್ಞರ ಪ್ರಕಾರ, ಭಾರತದಲ್ಲಿ ದೀರ್ಘ ಸಂಬಂಧಗಳಿಗೆ ಕಾರಣವೆಂದರೆ ಇಲ್ಲಿನ ಸಾಂಸ್ಕೃತಿಕ ಅಂಶವಾಗಿದೆ. ಇದರಲ್ಲಿ ಕುಟುಂಬ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಒತ್ತು ನೀಡಲಾಗುತ್ತದೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯ ವಿಚ್ಛೇದನ ಪ್ರಕರಣಗಳು ಕಾನೂನು ಪ್ರಕ್ರಿಯೆಯ ಮೂಲಕ ಹೋಗುವುದಿಲ್ಲ ಮತ್ತು ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಹಲವು ಬಾರಿ ಸರಿಯಾದ ಅಂಕಿ ಅಂಶ ಬಹಿರಂಗವಾಗಿಲ್ಲ. ಹೀಗಿದ್ದೂ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿದೆ.

Latest Videos
Follow Us:
Download App:
  • android
  • ios