ಪತ್ನಿಯೇ ಬೇರೆ, ಆತ್ಮಸಂಗಾತಿಯೇ ಬೇರೆ... ಡಿವೋರ್ಸ್ಗೂ, ಹಿಂದಿನ ಜನ್ಮಕ್ಕೂ ಇದೆ ನಂಟು! ಗುರೂಜಿ ಮಾತು ಕೇಳಿ..
ದಂಪತಿ ನಡುವೆ ಹೆಚ್ಚುತ್ತಿರುವ ಡಿವೋರ್ಸ್ಗೆ ಹಿಂದಿನ ಜನ್ಮದ ನಂಟಿದೆ ಎಂದಿರುವ ಡಾ.ರಾಮಚಂದ್ರ ಗುರೂಜಿ ಈ ಬಗ್ಗೆ ಹೇಳಿದ್ದೇನು?
ಪುನರ್ಜನ್ಮ ಎನ್ನುವುದು ಇದೆಯೇ ಇಲ್ಲವೇ ಎನ್ನುವ ಬಗ್ಗೆ ಇದಾಗಲೇ ಹಲವರು ಒಂದೊಂದು ರೀತಿ ಹೇಳುತ್ತಲೇ ಬಂದಿದ್ದಾರೆ. ಆದರೆ ಕೆಲವು ಸಂಶೋಧಕರು ದಶಕಗಳ ಕಾಲ ಈ ಬಗ್ಗೆ ಸಂಶೋಧನೆ ಮಾಡಿ ಪುನರ್ಜನ್ಮ ಇದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದಾಗಲೇ ನಟ ಪುನೀತ್ ರಾಜ್ಕುಮಾರ್, ವಿರಪ್ಪನ್ ಸೇರಿದಂತೆ ಕೆಲವರ ಆತ್ಮದ ಜೊತೆ ಮಾತನಾಡಿರುವ ಡಾ.ರಾಮಚಂದ್ರ ಗುರೂಜಿ ಅವರು ಈ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ತಾವು ದೇವರು, ದೆವ್ವಗಳ ನಡುವೆ ನೇರಪ್ರಸಾರದಲ್ಲಿಯೇ ಸಂಪರ್ಕ ಸಾಧಿಸಿರುವುದಾಗಿ ಹೇಳಿರುವ ಗುರೂಜಿ, ಪುನರ್ಜನ್ಮ ಎನ್ನುವುದು ಬರೀ ಭ್ರಮೆ ಎಂದು ಹಲವರು ಹೇಳುತ್ತಾರೆ. ಆದರೆ ವಿತ್ತಂಡ ವಾದ ಮಾಡುವವರಿಗೆ ಉತ್ತರಿಸುವ ಅವಶ್ಯಕೆ ಇಲ್ಲ ಎಂದಿದ್ದಾರೆ. ವಿದೇಶಗಳಲ್ಲಿನ ಸೈಕ್ರಿಯಾಟ್ರಿಸ್ಟ್ಗಳು ಪುನರ್ಜನ್ಮದ ಕುರಿತು ಮಾಡಿರುವ ಅಧ್ಯಯನದ ಕುರಿತು ಗುರೂಜಿ ವಿವರಿಸಿದ್ದಾರೆ. ಅಮೆರಿಕದ ಸೈಕಾಲಾಜಿ ಪ್ರೊಫೆಸರ್ 40 ವರ್ಷ ಸಂಶೋಧನೆ ಮಾಡಿ ಪುರ್ನಜ್ಮದ ಕುರಿತು ಅನೇಕ ಗ್ರಂಥ ಬರೆದಿದ್ದಾರೆ. ಅವರ ಶಿಷ್ಯ ಜಿನ್ ಟಕ್ಕರ್ ಹಾಗೂ ಸದ್ಯ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಸೈಕಾಲಾಜಿ ಪ್ರೊಫೆಸರ್ ಆಗಿರುವ ಅವರ ಶಿಷ್ಯೆ ಪುನರ್ಜನ್ಮದ ಕುರಿತು ನಾಲ್ಕು ಗ್ರಂಥಗಳನ್ನು ಬರೆದಿದ್ದಾರೆ ಎಂದಿದ್ದಾರೆ.
ಇದೀಗ ಪುನರ್ಜನ್ಮಕ್ಕೂ ಡಿವೋರ್ಸ್ಗೂ ನಂಟು ಇದೆ ಎನ್ನುವುದನ್ನು ರಾಮಚಂದ್ರ ಗುರೂಜಿ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಿಂದಿನ ಜನ್ಮದಲ್ಲಿ ಶತ್ರುಗಳಾಗಿದ್ದವರು, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದವರು ಈ ಜನ್ಮದಲ್ಲಿ ಪತಿ-ಪತ್ನಿಯಾದಾಗ ಡಿವೋರ್ಸ್ಗಳಾಗುತ್ತವೆ. ಹೋದ ಜನ್ಮದಲ್ಲಿ ಸೇಡು ತೀರಿಸಿಕೊಳ್ಳಲು ಸಾಧ್ಯವಾಗದೇ, ಸಾವನ್ನಪ್ಪಿದಾಗ ಈ ಜನ್ಮದಲ್ಲಿ ಪತಿ-ಪತ್ನಿಯಾಗುತ್ತಾರೆ. ಆಗ ಇಬ್ಬರ ನಡುವೆ ಹೊಂದಾಣಿಕೆ ಬಾರದೇ ವಿಚ್ಛೇದನ ಆಗುತ್ತದೆ ಎನ್ನುವುದು ಗುರೂಜಿ ಮಾತು.
ಗಾಂಧೀಜಿ ತೊಡೆ ಮೇಲೆ ಕುಳಿತಿದ್ದ ಆ ಬಾಲಕಿ... ಮಚ್ಚೆ- ಪುನರ್ಜನ್ಮದ ಕುತೂಹಲ ವಿಷಯ ಹೇಳಿದ ರಾಮಚಂದ್ರ ಗುರೂಜಿ
ಇದೇ ವೇಳೆ, ಪತ್ನಿಯೇ ಬೇರೆ, ಆತ್ಮಸಂಗಾತಿಯೇ (Soulmate) ಬೇರೆ. ಇಬ್ಬರೂ ಒಂದೇ ಎಂದುಕೊಳ್ಳುವುದು ತಪ್ಪು ಎನ್ನುವುದು ಅವರ ಮಾತು. ರಾಮಚಂದ್ರನಿಗೆ ಸೀತೆ ಪತ್ನಿ. ಇವರ ದಾಂಪತ್ಯ ಜೀವನ ದುರಂತ ಅಂತ್ಯ ಕಂಡಿತು. ಆದರೆ ಶ್ರೀಕೃಷ್ಣನಿಗೆ ರಾಧಾ ಆತ್ಮಸಂಗಾತಿ. ಆದ್ದರಿಂದ ಇಬ್ಬರೂ ಗಂಡ-ಹೆಂಡತಿ ಅಲ್ಲದಿದ್ದರೂ ಕೊನೆಯವರೆಗೂ ಸಂತೋಷದಿಂದ ಬಾಳಿದರು ಎಂದಿರುವ ಗುರೂಜಿ, ಅಂದ ಮಾತ್ರಕ್ಕೆ ಆತ್ಮಸಂಗಾತಿ ಪತಿ-ಪತ್ನಿಯೇ ಆಗಿರಬೇಕೆಂದೇನೂ ಇಲ್ಲ ಎಂದಿದ್ದಾರೆ.
ರಾಣಾ ಪ್ರತಾಪ್ ಸಿಂಗ್ಗೆ ಕುದುರೆ ಆತ್ಮಸಂಗಾತಿಯಾಗಿತ್ತು. ರಾಮನಿಗೆ ಹನುಮಂತ ಆತ್ಮಸಂಗಾತಿಯಾಗಿದ್ದ. ಬುದ್ಧನಿಗೆ ಸ್ನೇಹಿತ ಚನ್ನ, ಕೃಷ್ಣನಿಗೆ ತಾಯಿ ಯಶೋದಾ... ಹೀಗೆ ಸೋಲ್ಮೇಟ್ ಅಂದರೆ ಆತ್ಮಸಂಗಾತಿ ಯಾರು ಬೇಕಾದರೂ ಆಗಬಹುದು. ಸ್ನೇಹಿತ, ಪ್ರಾಣಿ, ಪಕ್ಷಿ, ಅಪ್ಪ-ಮಗಳು, ತಾಯಿ-ಮಗ... ಹೀಗೆ ಯಾರು ಬೇಕಾದರೂ ಆಗಬಹುದು. ಆದರೆ ಪತಿ-ಪತ್ನಿಯ ವಿಷಯ ಬಂದಾಗ ಹೋದ ಜನ್ಮದಲ್ಲಿ ಅವರು ಶತ್ರುಗಳಾಗಿರುತ್ತಾರೆ. ಇವರ ನಡುವೆ ಇರುವ ಸಿಟ್ಟನ್ನು, ಹಿಂದಿನ ಜನ್ಮದ ಶತ್ರುತ್ವವನ್ನು ಹಿಂದಿನ ಜನ್ಮಕ್ಕೇ ಕರೆದೊಯ್ದು ಚಿಕಿತ್ಸೆ ಮೂಲಕ ಸರಿ ಮಾಡಬಹುದು ಎನ್ನುತ್ತಾರೆ ಡಾ.ರಾಮಚಂದ್ರ ಗುರೂಜಿ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ