Vitiligo Day: ವಿಚ್ಛೇದನಕ್ಕೂ ಕಾರಣವಾಗುತ್ತಿದೆ ಈ ಚರ್ಮ ಸಮಸ್ಯೆ

ದೇಹದ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಬಹಳ ಮುಖ್ಯ. ಆದ್ರೆ ಜನರಿಗೆ ಇದು ಅರ್ಥವಾಗ್ತಿಲ್ಲ. ತೊನ್ನು ಎಂಬ ಕಾರಣಕ್ಕೆ ವ್ಯಕ್ತಿಯನ್ನು ಸಮಾಜದಿಂದ ದೂರವಿಡ್ತಾರೆ. ಎಷ್ಟೋ ಸಂಬಂಧಗಳು ಇದ್ರಿಂದ ಮುರಿದು ಬಿದ್ದಿವೆ.
 

Increasing Divorce Cases Due To skin issue Vitiligo

ಅನೇಕ ಬಾರಿ ನಮ್ಮ ದೇಹದಲ್ಲಿರುವ ಕಲೆ ನಮ್ಮ ಜೀವನ ಹಾಳು ಮಾಡುತ್ತೆ ಅಂದ್ರೆ ನಂಬ್ಲೇಬೇಕು. ಈಕೆ ಬಾಳಲ್ಲೂ ಸಣ್ಣದೊಂದು ತೊನ್ನು (Vitiligo) ಆಟವಾಡಿದೆ. ಮದುವೆ (Marriage) ಯಾಗಿ ಸುಖ ದಾಂಪತ್ಯ ನಡೆಸಬೇಕೆಂಬ ಕನಸು ಕಾಣ್ತಿದ್ದ ಮಹಿಳೆ ಈಗ ಪತಿಯಿಂದ ದೂರವಾಗಿದ್ದಾಳೆ. ಮದುವೆಯಾದ ಕೆಲ ದಿನಗಳಲ್ಲಿಯೇ ಪತ್ನಿಯನ್ನು ದೂರ ಮಾಡಿದ ಪತಿ, ಆಕೆಯ ದೇಹದಲ್ಲಿರುವ ಬಿಳಿ ಕಲೆ (ತೊನ್ನು) ಇದಕ್ಕೆ ಕಾರಣ ಎಂದಿದ್ದಾನೆ. ಅಷ್ಟೇ ಅಲ್ಲ ಕೋರ್ಟ್ (Court) ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದ್ರೆ ಕೋರ್ಟ್ ವಿಚ್ಛೇದನ ನೀಡಲು ನಿರಾಕರಿಸಿದೆ. ಇಬ್ಬರು ಒಟ್ಟಿಗೆ ಬಾಳಿದ್ರೆ ಸರಿ, ಇಲ್ಲವೆಂದ್ರೆ ಆಕೆಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ನೀಡಬೇಕೆಂದು ಕೋರ್ಟ್ ಹೇಳಿದೆ. ಪತಿಯಿಂದ ಆರ್ಥಿಕ ನೆರವು ಈಕೆಗೆ ಸಿಗಬಹುದು. ಆದ್ರೆ ಮಾನ, ಸನ್ಮಾನಕ್ಕೆ ಧಕ್ಕೆಯಾಗಿದೆ. ಬರೀ ಈಕೆ ಮಾತ್ರವಲ್ಲ ಅನೇಕರ ಬಾಳಲ್ಲಿ ಈಗ ವಿಟಿಲಿಗೋ ಸಮಸ್ಯೆಯಾಗಿ ಕಾಡ್ತಿದೆ. ಪ್ರತಿ ವರ್ಷ ಜೂನ್ 25ರಂದು ವಿಶ್ವ ವಿಟಿಲಿಗೋ ದಿನವನ್ನು ಆಚರಣೆ ಮಾಡಲಾಗುತ್ತದೆ. ಜನರಿಗೆ ತೊನ್ನಿನ ಬಗ್ಗೆ ಜಾಗೃತಿ ಮೂಡಿಸುವುದು ಇದ್ರ ಮುಖ್ಯ ಉದ್ದೇಶವಾಗಿದೆ. 

ವಿಟಿಲಿಗೋವನ್ನು  ವೈದ್ಯಕೀಯ ವಿಜ್ಞಾನದಲ್ಲಿ ಚರ್ಮದ ಪಿಗ್ಮೆಂಟೇಶನ್ ಸಮಸ್ಯೆಗಳಿಂದ ಉಂಟಾಗುವ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದರೆ ರೋಗಿಗೆ ಇದು ದೈಹಿಕ ಸಮಸ್ಯೆಗಿಂತ ಕಳಂಕ, ಕೀಳರಿಮೆ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತೊನ್ನಿರುವ ಜನರು ಮೊದಲು ಮದುವೆಯಾಗಲು ಹಿಂಜರಿಯುತ್ತಾರೆ. ಒಂದ್ವೇಳೆ ಮದುವೆಯಾದ್ರೂ ಆ ಸಂಬಂಧ ಗಟ್ಟಿಯಾಗಿ ಉಳಿಯೋದು ಅನುಮಾನ. 

ವಿಶ್ವದ ಜನಸಂಖ್ಯೆಯ ಸುಮಾರು ಶೇಕಡಾ 1.5ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಮಹಿಳೆ ಮತ್ತು ಪುರುಷ ಯಾರಿಗಾದರೂ,ಯಾವಾಗ ಬೇಕಾದರೂ ತೊನ್ನು ಕಾಣಿಸಿಕೊಳ್ಳಬಹುದು. ಭಾರತದಲ್ಲಿ ಅತಿ ಹೆಚ್ಚು ತೊನ್ನಿನ ಪ್ರಕರಣಗಳನ್ನು ಗುಜರಾತ್ ಮತ್ತು ರಾಜಸ್ಥಾನದಲ್ಲಿ ವರದಿಯಾಗುತ್ತವೆ. ಒಂದು ಮಾಹಿತಿಯ ಪ್ರಕಾರ, ದೇಶದ ಜನಸಂಖ್ಯೆಯ ಸುಮಾರು 2.5 ಪ್ರತಿಶತದಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬ್ರೇಕ್ ಅಪ್ ಆದರೆ ಹುಡುಗೀಯರು ಏನು ಮಾಡುತ್ತಾರೆ?

ದೈಹಿಕ ಸಮಸ್ಯೆಗಳಿಗಿಂತ ಹೆಚ್ಚು ಕಾಡುತ್ತೆ ಮಾನಸಿಕ ಸಮಸ್ಯೆ : ವೈದ್ಯಕೀಯ ವಿಜ್ಞಾನದಲ್ಲಿ ತೊನ್ನನ್ನು ದೈಹಿಕ ಸಮಸ್ಯೆ (Physical Issue) ಎಂದು ಪರಿಗಣಿಸಲಾಗಿದೆಯಾದರೂ,ಇದು ಮಾನಸಿಕ ಆರೋಗ್ಯದ (Mental Health) ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಿಟಿಲಿಗೋದಿಂದ ಬಳಲುತ್ತಿರುವ ಜನರು ಕೀಳರಿಮೆ, ಸಾಮಾಜಿಕ ಆತಂಕದ (Social Trauma) ಸಮಸ್ಯೆಗಳಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.   

ತೊನ್ನು ಪಾಪದ ಲಕ್ಷಣವಲ್ಲ : ತೊನ್ನಿನ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅನೇಕರು ಇದನ್ನು ಪಾಪದ ಸಂಕೇತವೆನ್ನುತ್ತಾರೆ. ಇದೇ ಮಾನಸಿಕ ಅನಾರೋಗ್ಯ ಹೆಚ್ಚಿಸಲು ಕಾರಣವಾಗ್ತಿದೆ. ವೈದ್ಯಕೀಯ ವಿಜ್ಞಾನದಲ್ಲಿ ಇದ್ರ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇದುನ ಯಾವುದೇ ಪಾಪ ಅಥವಾ ಪುಣ್ಯದೊಂದಿಗೆ ಯಾವುದೇ ಸಂಬಂಧವಿಲ್ಲ. ವಿಟಲಿಗೋ ಎಂಬುದು ಚರ್ಮದ ವರ್ಣದ್ರವ್ಯದ ಕೊರತೆಯಿಂದ ನಿರೂಪಿಸಲ್ಪಡುತ್ತದೆ. ಸಾಮಾನ್ಯವಾಗಿ ಮುಖ, ಕೈ ಮತ್ತು ಕಾಲುಗಳ ಮೇಲೆ ಬಿಳಿ ಕಲೆ ಕಂಡುಬರುತ್ತವೆ.  

ಇದಕ್ಕೆ ಚಿಕಿತ್ಸೆ : ಇದಕ್ಕೆ ಚಿಕಿತ್ಸೆಯಿದೆ. ಆದ್ರೆ ರೋಗ (Disease) ಯಾವ ಪ್ರಮಾಣದಲ್ಲಿದೆ ಮತ್ತು ಯಾವ ಜಾಗದಲ್ಲಿದೆ ಎಂಬ ವಿಷ್ಯ ಇಲ್ಲಿ ಮಹತ್ವ ಪಡೆಯುತ್ತದೆ. ಆರಂಭದಲ್ಲಿಯೇ ರೋಗ ಪತ್ತೆಯಾದ್ರೆ ಅದನ್ನು ಗುಣಪಡಿಸಬಹುದು ಇಲ್ಲವೆ ಹೆಚ್ಚಾಗದಂತೆ ತಡೆಯಬಹುದು. ವಿಟಲಿಗೋ ಸಮಸ್ಯೆಯಿಂದ ಬಳಲುವ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಯು ತುಂಬಾ ಸಾಮಾನ್ಯ. ಇದಲ್ಲದೆ  ಕೆಲವು ಮಹಿಳೆಯರಲ್ಲಿ ವಿಟಮಿನ್ ಬಿ -12, ಡಿ -3 ಮತ್ತು ಸತುವಿನ ಕೊರತೆಯೂ ಕಂಡುಬಂದಿದೆ. ಚಿಕಿತ್ಸೆಯ ಜೊತೆಗೆ, ಮಲ್ಟಿವಿಟಮಿನ್ ಮಾತ್ರೆಗಳನ್ನು ನೀಡುವ ಅವಶ್ಯಕತೆಯಿರುತ್ತದೆ.

ಮೈಗ್ರೇನ್ ಕಾಡ್ಬಾರದೆಂದ್ರೆ ಬಾಯಿಗೆ ಬೀಗ ಹಾಕ್ಕೊಳ್ಳಿ!

ಜಾಗೃತಿ (Awareness) : ಈ ಸಮಸ್ಯೆಯಿಂದ ಬಳಲುವ ಜನರನ್ನು ದೂರತಳ್ಳದೆ, ಅವರ ಕೈ ಕುಲುಕಿ, ಅವರಿಗೆ ಆತ್ಮವಿಶ್ವಾಸ ತುಂಬಬೇಕಾದ ಅವಶ್ಯಕತೆಯಿದೆ. ಅವರು ನಮ್ಮಲ್ಲಿ ಒಂದು ಎಂದು ಭಾವಿಸಿ, ಅವರನ್ನು ಹತ್ತಿರಕ್ಕೆ ಕರೆದುಕೊಂಡಾಗ ಹಾಗೂ ಇದ್ರ ಬಗ್ಗೆ ಜನರಿಗೆ ಮಾಹಿತಿ ನೀಡಿದಾಗ ಮಾತ್ರ ಅವರ ಬಾಳು ಹಸನಾಗಲು ಸಾಧ್ಯ.
 

Latest Videos
Follow Us:
Download App:
  • android
  • ios