ಬ್ರೇಕ್ ಅಪ್ ಆದರೆ ಹುಡುಗೀಯರು ಏನು ಮಾಡುತ್ತಾರೆ?
ರಿಲೇಶನ್ ಶಿಪ್ ಗೆ ಬರೋದು ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಕ್ಲೋಸ್ ಆಗಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು. ಆದರೆ ಎಲ್ಲಾ ಸಂಬಂಧವು ಬಹುದೂರ ಸಾಗಿ ಮದುವೆಯಂತಹ ಪವಿತ್ರ ಬಂಧದ ಹೊಸ್ತಿಲನ್ನು ತಲುಪುವ ಅಗತ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ಆ ಸಂಬಂಧಗಳು ಅರ್ಧದಲ್ಲೇ ಮುರಿದು ಬೀಳುತ್ತೆ. ಸಂಗಾತಿ ಜೊತೆ ಸರಿಯಾಗಿ ಹೊಂದಾಣಿಕೆ ಸಾಧ್ಯವಾಗದೆ ಇದ್ದಾಗ ಆ ಸಂಬಂಧದಿಂದ ಹೊರಬರುತ್ತಾರೆ. ಅಂದ್ರೆ ಬ್ರೇಕ್ ಅಪ್ (breakup) ಆಗಿಬಿಡುತ್ತೆ.
ಪಾರ್ಟಿ ಮತ್ತು ಫ್ಲರ್ಟಿಂಗ್
ಅನೇಕ ಹುಡುಗಿಯರು ಬ್ರೇಕ್ ಅಪ್ ಆದ ಬಳಿಕ ಪಾರ್ಟಿಗಳಿಗೆ ಹೋಗಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಅವರು ಅಲ್ಲಿ ಹೊಸ ಜನರ ಜೊತೆ ಬೆರೆಯುತ್ತಾರೆ. ಹೊಸ ಜನರನ್ನು ಭೇಟಿಯಾಗಿ, ಫ್ಲರ್ಟ್ (flirting) ಮಾಡಲು ಆರಂಭಿಸುತ್ತಾರೆ. ಅನೇಕ ಹುಡುಗಿಯರು ತಮ್ಮ ಮಾಜಿ ಗೆಳೆಯನಿಗೆ ಜೆಲಸ್ ಫೀಲ್ ಆಗಲು ಇದನ್ನು ಮಾಡ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಬ್ರೇಕಪ್ ನಂತರ, ಹುಡುಗಿಯರು ಸೋಶಿಯಲ್ ಮೀಡಿಯಾದಲ್ಲಿ (social media) ಸ್ವಲ್ಪ ಹೆಚ್ಚು ಆಕ್ಟೀವ್ ಆಗಿರುತ್ತಾರೆ ಎಂದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಸ್ತವವಾಗಿ, ಅವಳು ತನ್ನ ಮಾಜಿ ಸಂಗಾತಿಗೆ ಆತ ಇಲ್ಲದೇನೆ ತಾನು ಎಷ್ಟು ಹ್ಯಾಪಿ ಆಗಿದ್ದೇನೆ ಎಂದು ತೋರಿಸಲು ಬಯಸುತ್ತಾಳೆ.
ಬ್ಲಾಕ್ - ಅನ್ ಬ್ಲಾಕ್ ಮಾಡೋದು
ಸೋಶಿಯಲ್ ಮೀಡಿಯಾದಲ್ಲಿರುವ, ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಅನ್ನು ಬ್ಲಾಕ್ ಮಾಡ್ತಾರೆ, ನಂತರ ಸ್ವಲ್ಪ ಸಮಯದ ನಂತರ ಅವರು ಅನ್ ಬ್ಲಾಕ್ (unblock) ಮಾಡುತ್ತಾರೆ ಮತ್ತು ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ನೋಡುತ್ತಾರೆ. ಬ್ರೇಕಪ್ ನಂತರ ಹುಡುಗಿಯರು ತಮ್ಮ ಗೆಳೆಯನ ಪ್ರತಿಕ್ರಿಯೆ ಏನು ಎಂದು ತಿಳಿಯಲು ಬಯಸುತ್ತಾರೆ.
ಶಾಪಿಂಗ್ ಮಾಡ್ತಾರೆ
ಅನೇಕ ಹುಡುಗಿಯರು ತಮ್ಮ ಬ್ರೇಕಪ್ ನ ಬೇಸರದಿಂದ ಹೊರಬರಲು ಶಾಪಿಂಗ್ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಅವರು ತಮ್ಮ ಸ್ಟ್ರೆಸ್ ಕಡಿಮೆ ಮಾಡಲು ಇದನ್ನ ಮಾಡ್ತಾರೆ. ಶಾಪಿಂಗ್ (shopping) ನಿಂದ ತಮ್ಮ ಜೀವನವನ್ನ ಎಂಜಾಯ್ ಮಾಡ್ತಾರೆ.
ಸ್ನೇಹಿತರ ಜೊತೆ ಮಾತುಕತೆ
ಕೆಲವು ಹುಡುಗಿಯರು ಬ್ರೇಕ್ ಅಪ್ ಆದ ಬಳಿಕ ಕಳೆದ ಉತ್ತಮ ಕ್ಷಣಗಳನ್ನು ನೆನಪಿಸಿಕೊಳ್ಳುವ ಮೂಲಕ ತುಂಬಾ ಭಾವುಕರಾಗಿರುತ್ತಾರೆ. ತಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಮನಸ್ಸಿಗೆ ನೆಮ್ಮದಿ ಸಿಗಬೇಕೆಂದು ಅವರು ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.
ಪತ್ತೇದಾರಿ
ಹುಡುಗಿಯರು ಬ್ರೇಕ್ ಅಪ್ ನಿಂದ ಹೊರಬರಲು ಬಯಸಿದರೂ, ಅವರು ತಮ್ಮ ಸಂಗಾತಿ (partner) ಯಾರೊಂದಿಗೆ ಸಂಬಂಧದಲ್ಲಿದ್ದಾರೆ ಅನ್ನೋದರ ಬಗ್ಗೆ ತಿಳಿಯಲು ಇಷ್ಟ ಪಡ್ತಾರೆ. ಇಷ್ಟೇ ಅಲ್ಲ, ಅವಳು ತನ್ನ ಸ್ನೇಹಿತರು ಮತ್ತು ಇತರರ ಹಾಯದಿಂದ ಎಕ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಯತ್ನಿಸುತ್ತಾರೆ.