ಮಕ್ಕಳನ್ನು ಮನೇಲಿ ಒಬ್ಬರೇ ಬಿಟ್ಟುಹೋಗುವಾಗ ಈ ವಿಚಾರ ಹೇಳಿಕೊಡೋದನ್ನು ಮರೀಬೇಡಿ

ಬದಲಾದ ಜೀವನಶೈಲಿಯಲ್ಲಿ ಮನೆಯಲ್ಲಿ ಮಕ್ಕಳನ್ನು (Children) ಮಾತ್ರ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರ (Parents)ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿ ಮಕ್ಕಳನ್ನು ಮನೆಯಲ್ಲಿ ಒಬ್ಬರೇ ಬಿಟ್ಟು ಹೋಗುವುದು ಸಾಮಾನ್ಯ ವಿಷಯ ಅನಿಸಬಹುದು. ಆದ್ರೆ ಇದು ಕೆಲವೊಮ್ಮೆ ಅನಾಹುತಕ್ಕೂ ಕಾರಣವಾಗಬಹುದು. ಹೀಗಾಗಿ ಮಕ್ಕಳನ್ನು ಮನೆಯಲ್ಲಿ ಒಬ್ಬರೇ (Alone) ಬಿಟ್ಟು ಹೋಗುವ ಮುನ್ನ ಕೆಲವೊಂದು ವಿಚಾರಗಳನ್ನು ಹೇಳಿಕೊಡೋದು ಒಳ್ಳೆಯದು.

Important Teachings For Your Kids While Being Home Alone To Maintain Their Safety Vin

ಮಕ್ಕಳನ್ನು (Children) ಸದಾ ಸುರಕ್ಷಿತವಾಗಿರಿಸುವುದು ಪ್ರತಿಯೊಬ್ಬ ಪೋಷಕರ (Parents) ಆದ್ಯತೆಯಾಗಿದೆ. ಹೀಗಾಗಿಯೇ ಮಕ್ಕಳ ಪ್ರತಿ ಚಲನವಲವನ್ನೂ ಸೂಕ್ಷ್ಯವಾಗಿ ಗಮನಿಸುತ್ತಿರುತ್ತಾರೆ. ಆದರೂ, ಕೆಲವೊಮ್ಮೆ ಎಮರ್ಜೆನ್ಸಿ (Emergency) ಸಂದರ್ಭಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗಬೇಕಾಗಿ ಬರುತ್ತದೆ. ಹೀಗೆ ಮಕ್ಕಳನ್ನು ಒಂಟಿಯಾಗಿಸಿ (Alone) ಹೋಗಲೇಬೇಕಾದ ಸಂದರ್ಭಗಳಲ್ಲಿ ಮಕ್ಕಳಿಗೆ ಕೆಲವೊಂದು ವಿಚಾರಗಳನ್ನು ಹೇಳಿಕೊಡಬೇಕಾದುದು ಅತೀ ಅಗತ್ಯ. ಅವು ಯಾವುವೆಲ್ಲಾ ?

ಅಪರಿಚಿತರಿಗಾಗಿ ಬಾಗಿಲು ತೆರೆಯಬೇಡಿ ಎಂಬುದನ್ನು ಹೇಳಿಕೊಡಿ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅಪರಿಚಿತರಗಾಗಿ ಬಾಗಿಲು ತೆಗೆಯದಂತೆ ಮಕ್ಕಳಿಗೆ ಹೇಳಿಕೊಡಬೇಕು. ಮನೆಯ ಸುತ್ತಲಿನ ಎಲ್ಲಾ ಬಾಗಿಲುಗಳನ್ನು ಲಾಕ್ (Lock) ಮಾಡಿ ಸುರಕ್ಷಿತವಾಗಿರಲು ಮಕ್ಕಳಿಗೆ ತಿಳಿಸಿಕೊಡಬೇಕು. ಅವರು ಗುರುತಿಸದ ಯಾರಿಗಾದರೂ ಮುಂಭಾಗದ ಬಾಗಿಲನ್ನು ತೆರೆಯದಂತೆ ಅವರಿಗೆ ಸಲಹೆ ನೀಡಬೇಕು. ಮನೆಯ ಸುತ್ತಲೂ ಭದ್ರತಾ ಕ್ಯಾಮೆರಾಗಳನ್ನು ಸ್ಥಾಪಿಸುವುದನ್ನು ಪರಿಗಣಿಸಿ ಇದರಿಂದ ನಿಮ್ಮ ಮಕ್ಕಳು ತಮ್ಮ ಸುರಕ್ಷತೆಗೆ ಧಕ್ಕೆಯಾಗದಂತೆ ಬಾಗಿಲಲ್ಲಿ ಯಾರಿದ್ದಾರೆ ಎಂಬುದನ್ನು ವೀಕ್ಷಿಸಬಹುದು.

ನೀರಿನಿಂದಾಗುವ ಅಪಾಯದ ಬಗ್ಗೆ ತಿಳಿಸಿ
ಮಕ್ಕಳ ಪಾಲಿಗೆ ನೀರು ತುಂಬಾ ಅಪಾಯಕಾರಿಯಾಗಿದೆ (Danger). ಮಕ್ಕಳು ಕೆಲವೇ ಇಂಚುಗಳಷ್ಟು ನೀರಿನಲ್ಲಿ ಸುಲಭವಾಗಿ ಮುಳುಗಬಹುದು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಅದಕ್ಕಾಗಿಯೇ ಆರು ವರ್ಷದೊಳಗಿನ ಮಕ್ಕಳು ಸ್ನಾನ ಮಾಡುವಾಗ ಅಥವಾ ಕೊಳದಲ್ಲಿ ಆಡುವಾಗ ಯಾವಾಗಲೂ ಮೇಲ್ವಿಚಾರಣೆ ಮಾಡಬೇಕು. ಒಂಟಿಯಾಗಿರುವಾಗ ಬಾತ್ ರೂಂನಲ್ಲಿ ಎಂದಿಗೂ ನೀರಿನೊಂದಿಗೆ ಆಟವಾಡದಂತೆ ಚಿಕ್ಕ ಮಕ್ಕಳಿಗೆ ಕಲಿಸಬೇಕು. ಮನೆಯಲ್ಲಿ ಮಕ್ಕಳನ್ನು ಒಬ್ಬರೇ ಬಿಟ್ಟು ಹೋದಾಗ ನೀರಿನ ಸಂಪಿನ ಬಳಿ ಹೋಗದಂತೆ ಸೂಚನೆ ನೀಡಬೆಕು.

Parenting Tips : ಮಕ್ಕಳ ಖಿನ್ನತೆ ಕಾರಣವಾಗುತ್ತೆ ಪಾಲಕರ ಈ ವರ್ತನೆ

ಬೆಂಕಿಯಿಂದ ದೂರವಿರುವಂತೆ ಕಲಿಸಬೇಕು 
ಬೆಂಕಿ (Fire) ಎಷ್ಟು ಅಪಾಯಕಾರಿಯಾಗಿದೆ ಎಂದು ಮಕ್ಕಳಿಗೆ ತಿಳಿದಿರುವುದಿಲ್ಲ. ಹೀಗಾಗಿ ಬೆಂಕಿಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವುದಿಲ್ಲ. ಹೀಗಾಗಿ ಮಕ್ಕಳು ಗ್ಯಾಸ್ ಹಚ್ಚುವಾಗ, ಬೆಂಕಿ ಕಡ್ಡಿ ಹಚ್ಚುವಾಗ ಜಾಗರೂಕರಾಗಿರುವಂತೆ ಹೇಳಿಕೊಡಬೇಕು. ಅಥವಾ ಮನೆಯಲ್ಲಿ ಮಕ್ಕಳು ಒಬ್ಬರೇ ಇದ್ದಾಗ ಗ್ಯಾಸ್ ಉರಿಸದಂತೆ ಹೇಳಿದರೂ ಆಗಬಹುದು.

ವಿದ್ಯುತ್‌ ಬಗ್ಗೆ ಹೇಳಿಕೊಡಿ
ನೀರು ಮತ್ತು ವಿದ್ಯುತ್ ಅನ್ನು ಮಿಶ್ರಣ ಮಾಡಬೇಡಿ ಎಂದು ಮಕ್ಕಳಿಗೆ ನೆನಪಿಸಬೇಕು. ಏಕೆಂದರೆ ಇದು ವಿದ್ಯುದಾಘಾತಕ್ಕೆ ಕಾರಣವಾಗಬಹುದು. ಟೋಸ್ಟರ್‌ಗಳು, ಹೇರ್ ಡ್ರೈಯರ್‌ಗಳು, ರೇಡಿಯೋಗಳು, ಟೆಲಿವಿಷನ್‌ಗಳು, ಲ್ಯಾಂಪ್‌ಗಳು ಅಥವಾ ಎಲೆಕ್ಟ್ರಿಕಲ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಯಾವುದನ್ನಾದರೂ ಒದ್ದೆಯಾದ ಕೈಗಳಿಂದ ಹಿಡಿದುಕೊಳ್ಳಬಾರದು ಎಂಬುದನ್ನು ತಿಳಿಸಿಕೊಡಿ.

ಮೆಡಿಸಿನ್‌ಗಳಿಂದ ದೂರವಿಡಿ
ಔಷಧಿಗಳು (Medicine), ಸೂಕ್ತವಾಗಿ ಬಳಸದಿದ್ದಲ್ಲಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು. ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವ ಪೋಷಕರು ಔಷಧಿಗಳು ತುಂಬಿದ ಡಬ್ಬ ಮಕ್ಕಳಿಗೆ ಸುಲಭವಾಗಿ ತಲುಪುವುದಿಲ್ಲ ಎಂಬುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಬೇಕು. ಮಕ್ಕಳಿಗಾಗಿ ಉದ್ದೇಶಿಸಲಾದ ಔಷಧಗಳು ಸೇರಿದಂತೆ ಯಾವುದೇ ರೀತಿಯ ಔಷಧಿಗಳು ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಮಕ್ಕಳಿಗೆ ಅಪಾಯಕಾರಿಯಾಗಬಹುದು.

ಮಕ್ಕಳ ಲಂಚ್‌ಬಾಕ್ಸ್‌ಗೆ ಅಪ್ಪಿತಪ್ಪಿಯೂ ಇದನ್ನು ಹಾಕಿಕೊಡಬೇಡಿ !

ಅಪಾಯದ ಸಂದರ್ಭ ಎದುರಿಸಲು ಕಲಿಸಿಕೊಡಿ
ತುರ್ತು ಪರಿಸ್ಥಿತಿಗಳಿಗಾಗಿ ನೀವು ಕುಟುಂಬ ಎಸ್ಕೇಪ್ ಯೋಜನೆಯನ್ನು ಮ್ಯಾಪ್ ಮಾಡಬೇಕು ಮತ್ತು ನಿರ್ದಿಷ್ಟ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ನಿಮ್ಮ ಮಕ್ಕಳಿಗೆ ಕಲಿಸಬೇಕು. ಕಳ್ಳತನ, ನೈಸರ್ಗಿಕ ವಿಕೋಪ ಅಥವಾ ಬೆಂಕಿಯ ಸಂದರ್ಭದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನಿಮ್ಮ ಮಕ್ಕಳು ತಿಳಿದಿರಬೇಕು.

ಮಕ್ಕಳಿಗೆ ಸಿಗುವಂತೆ ತುರ್ತು ಸಂಪರ್ಕ ಸಂಖ್ಯೆಯನ್ನು ಬರೆದಿಡಿ
ಮಕ್ಕಳನ್ನು ಮನೆಯಲ್ಲಿ ಒಬ್ಬರೇ ಬಿಟ್ಟು ಹೋದಾಗ ಅವರಿಗೆ ಕೆಲವು ವಿಚಾರಗಳನ್ನು ಕಲಿಸಿಕೊಡಬೇಕು. ಮುಖ್ಯವಾಗಿ ಮೊಬೈಲ್ ಬಳಸುವುದು ಹೇಗೆಂದು ಹೇಳಿಕೊಡಿ. ತುರ್ತು ಸಂಖ್ಯೆಯನ್ನು, ಮನೆ ವಿಳಾಸವನ್ನು ಮಕ್ಕಳಿಗೆ ಸಿಗುವ ಸ್ಥಳದಲ್ಲಿ ಬರೆದಿಡಿ. ತುರ್ತು ಸಂಖ್ಯೆಯಗಳ ಪಟ್ಟಿಯು ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ಇಲಾಖೆ, ಕುಟುಂಬ ವೈದ್ಯರು, ಹಾಗೆಯೇ ಪ್ರತಿ ಪೋಷಕರು ಮತ್ತ ಅಥವಾ ವಿಶ್ವಾಸಾರ್ಹ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಸಂಪರ್ಕ ಸಂಖ್ಯೆಯನ್ನು ಒಳಗೊಂಡಿರಬೇಕು.

Latest Videos
Follow Us:
Download App:
  • android
  • ios