ಮಕ್ಕಳ ಲಂಚ್‌ಬಾಕ್ಸ್‌ಗೆ ಅಪ್ಪಿತಪ್ಪಿಯೂ ಇದನ್ನು ಹಾಕಿಕೊಡಬೇಡಿ !

ಮಕ್ಕಳು (Children) ಗೊತ್ತಲ್ಲಾ..ಊಟದ ತಟ್ಟೆ ಮುಂದಿಟ್ರೆ ದೂರ ತಳ್ತಾರೆ. ಚಿಪ್ಸ್‌ (Chips), ಕೇಕ್, ಡೋನಟ್ಸ್ ತಂದು ಮುಂದಿಟ್ರೆ ಗಬಗಬ ತಿಂತಾರೆ. ಅದ್ರೆ ಬೆಳೆಯುತ್ತಿರುವ ಮಕ್ಕಳ ಪೋಷಣೆಗೆ ಅಗತ್ಯವಾಗಿರುವುದು ಇದಲ್ಲ. ಹೀಗಾಗಿ ಮಕ್ಕಳಿಗೆ ಲಂಚ್‌ಬಾಕ್ಸ್ (Lunchbox) ರೆಡಿ ಮಾಡಿ ಕೊಡುವಾಗಲೂ ಗಮನಿಸಿಕೊಳ್ಳಬೇಕು. ಅದರಲ್ಲೂ ಕೆಲವೊಂದು ಆಹಾರ (Food)ಗಳನ್ನು ಮಕ್ಕಳ ಲಂಚ್‌ಬಾಕ್ಸ್‌ಗೆ ತುಂಬಿ ಕೊಡಲೇಬಾರದು.

What Food Should Parents Not Pack In The Childrens Lunchbox Vin

ಮಕ್ಕಳನ್ನು (Children) ಪೋಷಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಲಾಲನೆ-ಪಾಲನೆಯ ಎಲ್ಲಾ ಜವಾಬ್ದಾರಿಗಳ ನಡುವೆ, ನಿಮ್ಮ ಮಗುವು ಮನಸ್ಸು ಮತ್ತು ದೇಹದ ಸಮಗ್ರ ಬೆಳವಣಿಗೆಗೆ ಸಾಕಷ್ಟು ಪೋಷಕಾಂಶಗಳು ಮತ್ತು ಖನಿಜಗಳನ್ನು ಪಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಹೀಗಾಗಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಯಾವ ಆಹಾರ (Food) ನೀಡುತ್ತಿದ್ದೀರಿ ಎಂಬುದನ್ನು ಪ್ರತ್ಯೇಕವಾಗಿ ಗಮನಿಸಿಕೊಳ್ಳಬೇಕು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು ಹೆಚ್ಚು ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಅವರಿಗೆ ಹೆಚ್ಚು ದೈಹಿಕ, ಮಾನಸಿಕ ಶಕ್ತಿಯ ಅಗತ್ಯವಿದೆ. ಹೀಗಾಗಿ ಆಹಾರ ಸಹ ಇದಕ್ಕೆ ಪೂರಕವಾಗಿರಬೇಕು. ಸ್ಕೂಲ್‌ಗೆ ಹೋಗುವ ಮಕ್ಕಳ ಬಾಕ್ಸ್‌ನಲ್ಲಿ ಪೋಷಕಾಂಶಭರಿತ ಆಹಾರವನ್ನು ಸೇರಿಸಿ. ಅದರಲ್ಲೂ ಈ ಕೆಲವು ಫುಡ್‌ಗಳನ್ನು ಮಕ್ಕಳ ಲಂಚ್‌ಬಾಕ್ಸ್‌ (Lunchbox)ನಲ್ಲಿ ಹಾಕಿ ಕೊಡಲೇಬೇಡಿ.

ಆಲೂಗಡ್ಡೆ ಚಿಪ್ಸ್: ಆಲೂಗಡ್ಡೆ (Potato) ಚಿಪ್ಸ್‌ನ್ನು ಕರುಂಕುರುಂ ಎಂದು ಮಕ್ಕಳೇನೋ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದರಲ್ಲಿರುವ ಕೃತಕ ರಾಸಾಯನಿಕಗಳು, ಅತಿಯಾದ ಉಪ್ಪು ಮತ್ತು ಕಡಿಮೆ-ದರ್ಜೆಯ ಎಣ್ಣೆಯ ಬಳಕೆ ಮಕ್ಕಳಿಗೆ ಅಸುರಕ್ಷಿತವಾಗಿದೆ. ಅವು ಹೆಚ್ಚಿನ ಟ್ರಾನ್ಸ್ ಕೊಬ್ಬುಗಳು ಮತ್ತು ಕ್ಯಾಲೋರಿ (Calorie)ಗಳನ್ನು ಹೊಂದಿರುತ್ತವೆ. ಹೀಗಾಗಿ ಜೀವನದಲ್ಲಿ ಮುಂದೆ ಇದು ಮಧುಮೇಹ ಮತ್ತು ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು.

ಪ್ಯಾಕೇಜ್ ಮಾಡಿದ ಸ್ಯಾಂಡ್‌ವಿಚ್‌ಗಳು: ಕಡಿಮೆ-ದರ್ಜೆಯ ಮೇಯನೇಸ್‌ನ್ನು ಪ್ಯಾಕೇಜ್‌ ಮಾಡಿದ ಸ್ಯಾಂಡ್‌ವಿಚ್‌ (Sandwich)ಗಳಲ್ಲಿ ಬಳಸುತ್ತಿರುತ್ತಾರೆ, ಇದು ನೈಟ್ರೇಟ್ ಮತ್ತು ಸೋಡಿಯಂ ಸೇರಿಸಿದ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಮಕ್ಕಳ ದೇಹಕ್ಕೆ ಅನಾರೋಗ್ಯಕರ ಕೊಬ್ಬುಗಳನ್ನು ಸೇರಿಸುತ್ತದೆ.

Children Health Tips: ಮಕ್ಕಳಲ್ಲಿ ಕಾಡುವ ವಾಂತಿ ಸಮಸ್ಯೆ ನಿವಾರಣೆಗೆ ತ್ವರಿತ ಟಿಪ್ಸ್ ಇಲ್ಲಿದೆ

ಎನರ್ಜಿ ಡ್ರಿಂಕ್ಸ್‌: ಹೆಚ್ಚಿನ ಪೋಷಕರು ಮಕ್ಕಳು ಸುಸ್ತಾದಾಗ ಕುಡಿಯಲಿ ಎಂದು ಬ್ಯಾಗ್‌ನಲ್ಲಿ ಎನರ್ಜಿ ಡ್ರಿಂಕ್ಸ್ (Energy Drinks) ತುಂಬಿಸಿ ಕಳುಹಿಸಿಕೊಡುತ್ತಾರೆ. ಆದರೆ ಇದು ಮಕ್ಕಳಿಗೆ ಯಾವುದೇ ಪ್ರಯೋಜನಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ಯಾಕೆಂದರೆ ಎನರ್ಜಿ ಡ್ರಿಂಕ್ಸ್ ಸಕ್ಕರೆ ಮತ್ತು ಕೆಫೀನ್‌ನಿಂದ ತುಂಬಿರುತ್ತದೆ. ಇದು ಯಾವುದೇ ಮಗುವಿಗೆ ಅಗತ್ಯವಿಲ್ಲ. ಅತಿಯಾದ ಸಕ್ಕರೆ ಸೇವನೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದರೂ, ಕೆಫೀನ್ ಚಿಕ್ಕ ವಯಸ್ಸಿನಲ್ಲಿಯೇ ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಸೋಡಾ: ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ ಒಂದು ಅಥವಾ ಹೆಚ್ಚಿನ ಕ್ಯಾನ್ ಸೋಡಾ (Soda)ವನ್ನು ಸೇವಿಸುವ ಜನರು ಟೈಪ್ 2 ಡಯಾಬಿಟಿಸ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ 26ರಷ್ಟು ಹೆಚ್ಚಾಗಿದೆ. ಆದ್ದರಿಂದ, ನಿಮ್ಮ ಮಗುವಿಗೆ ಪ್ರತಿ ದಿನ ಸೋಡಾವನ್ನು ಕೊಡುತ್ತಿದ್ದರೆ ಅದನ್ನು ನಿಲ್ಲಿಸಿ. ಸೋಡಾ, ಸಕ್ಕರೆ ಮತ್ತು ಕಠಿಣ ರಾಸಾಯನಿಕಗಳಿಂದ ತುಂಬಿದ್ದು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸುತ್ತದೆ, ಮೂಳೆಯ ಆರೋಗ್ಯವನ್ನು ಕುಂಠಿತಗೊಳಿಸುತ್ತದೆ. ಹಲ್ಲುಗಳಲ್ಲಿ ಕುಳಿಗಳನ್ನು ಸೃಷ್ಟಿಸುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಉಂಟುಮಾಡುತ್ತದೆ.

ಕೇಕ್ ಮತ್ತು ಡೋನಟ್ಸ್: ಇಂಥಾ ಆಹಾರಗಳನ್ನು ಸಂಸ್ಕರಿಸಿದ ಹಿಟ್ಟು, ಬೆಣ್ಣೆಯಿಂದ ತಯಾರಿಸಲಾಗುತ್ತದೆ. ಹೆಚ್ಚಿನ ಪ್ರಮಾಣದ ಟ್ರಾನ್ಸ್ ಕೊಬ್ಬನ್ನು ಹೊಂದಿರುವ ಸಿಹಿಕಾರಕಗಳು ಮತ್ತು ಬಣ್ಣಗಳಿಂದ ಲೋಡ್ ಮಾಡಲಾಗುತ್ತದೆ. ಟ್ರಾನ್ಸ್ ಕೊಬ್ಬುಗಳು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು, ಕೃತಕ ಬಣ್ಣಗಳು ನಡವಳಿಕೆಯ ಸಮಸ್ಯೆಗಳು, ಕಲಿಕೆಯ ತೊಂದರೆಗಳು ಮತ್ತು ಮಕ್ಕಳಲ್ಲಿ ಹೈಪರ್ ಅಕ್ವಿವಿಟಿಗೆ ಸಂಬಂಧಿಸಿವೆ.

Child Health : ನಿಮ್ಮ ಮಗು ಏನೂ ತಿನ್ತಿಲ್ವಾ? ಹಸಿವು ಹೆಚ್ಚಿಸಲು ಇಲ್ಲಿದೆ ಪರಿಹಾರ

ನೂಡಲ್ಸ್ ಮತ್ತು ಪಾಸ್ತಾ: ಇವೆರಡನ್ನೂ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹೀಗಾಗಿ ತರಕಾರಿಗಳನ್ನು ಸೇರಿಸಿದ ನಂತರವೂ ಮಕ್ಕಳ ಆರೋಗ್ಯಕ್ಕೆ ವಿಷಯಕ್ಕೆ ಬಂದಾಗ ಇದು ಹೆಚ್ಚಿನ ವ್ಯತ್ಯಾಸವನ್ನು ಮಾಡುವುದಿಲ್ಲ. ಇದರಲ್ಲಿ ಬಳಸಿರುವ ಸಂರಕ್ಷಕಗಳು ಮತ್ತು ಅನಾರೋಗ್ಯಕರ ರುಚಿ ವರ್ಧಕಗಳು ಆರೋಗ್ಯಕ್ಕೆ ಹಾನಿಕರವಾಗಿದೆ.

ಬಿಳಿ ಬ್ರೆಡ್: ಬಿಳಿ ಬ್ರೆಡ್‌ (White Bread)ಗೆ ಹೆಚ್ಚು ಸಂಸ್ಕರಿಸಿದ ಬಿಳಿ ಹಿಟ್ಟು ಮತ್ತು ಪಿಷ್ಟವನ್ನು ಬಳಸುತ್ತಾರೆ. ಅದು ಮಕ್ಕಳಿಗೆ ಒಳ್ಳೆಯದಲ್ಲ. ಇದು ಸ್ಥೂಲಕಾಯತೆ ಮತ್ತು ಅನಿಯಮಿತ ಕರುಳಿನ ಚಲನೆಯನ್ನು ಉಂಟುಮಾಡಬಹುದು.

ಕ್ಯಾಂಡಿ ಬಾರ್‌ಗಳು: ಕ್ಯಾಂಡಿ ಬಾರ್‌ (Candy Bar)ಗಳು ಸಕ್ಕರೆಯಿಂದ ತುಂಬಿರುತ್ತವೆ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ ಮತ್ತು ಜೀವನದ ನಂತರದ ಹಂತಗಳಲ್ಲಿ ಮಧುಮೇಹಕ್ಕೆ ಕಾರಣವಾಗಬಹುದು.

Latest Videos
Follow Us:
Download App:
  • android
  • ios