Asianet Suvarna News Asianet Suvarna News

Relationship Tips: ನಿಮ್ಮ ಸಂಗಾತಿ ಕ್ಷಮೆ ಕೇಳೋದಿಲ್ವಾ? ಹಾಗಾದ್ರೆ ಸಮಸ್ಯೆ ಖಂಡಿತ ಇದೆ

ಪತಿ-ಪತ್ನಿ ಪರಸ್ಪರ ಕಚ್ಚಾಡಿದಾಗ ಯಾರಾದರೊಬ್ಬರು ಮುಂದಾಗಿ ಕ್ಷಮೆ ಕೇಳಿದರೆ, ಇನ್ನೊಬ್ಬರು ಅವರ ಬೆನ್ನಿಗೇ ಕ್ಷಮೆ ಕೇಳುವುದು ಸಾಮಾನ್ಯ. ಒಟ್ಟಿನಲ್ಲಿ ಪರಸ್ಪರ ಕ್ಷಮೆ ಯಾಚಿಸುತ್ತ ಪಶ್ಚಾತ್ತಾಪ ಪಡುತ್ತಾರೆ. ಸಾಧ್ಯವಾದಷ್ಟು ಮತ್ತೆ ಜಗಳವಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ, ಕೆಲವು ಪುರುಷರು ತಮ್ಮ ಸಂಗಾತಿಯ ಕ್ಷಮೆ ಕೇಳುವುದಿಲ್ಲ. ಈ ಗುಣ ಅವರ ಕೆಲವು ಸ್ವಭಾವವನ್ನು ಸೂಚಿಸಬಹುದು.

 

If your partner does not say sorry after fight this may be reason
Author
Bangalore, First Published Aug 10, 2022, 1:05 PM IST

ದಂಪತಿಯಲ್ಲಿ ವಾಗ್ವಾದ, ವಾದ-ವಿವಾದ ಸಾಮಾನ್ಯ. ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅದು ಜಗಳದಲ್ಲೇ ಕೊನೆಗಾಣಬೇಕು ಎಂದೇನಿಲ್ಲವಾದರೂ ಜತೆಯಲ್ಲೇ ಬದುಕುವ ದಂಪತಿಗೆ ಕೆಲವೊಮ್ಮೆ ವಾದ ಮಾಡುವುದು ಅನಿವಾರ್ಯವಾಗುತ್ತದೆ. ಅವರವರು ತಮ್ಮ ನಿಲುವನ್ನು ಪ್ರತಿಪಾದಿಸುವಾಗ ತೀವ್ರವಾದ ಮಾತುಕತೆ ನಡೆಯುತ್ತದೆ. ಇದು ಮುಂದುವರಿದು ಜಗಳವೂ ಉಂಟಾಗಬಹುದು. ಪತಿಯೋ ಪತ್ನಿಯೋ ಯಾರಾದರೊಬ್ಬರು ತೀವ್ರವಾದ ಜಗಳಕ್ಕೆ ಕಾರಣರಾಗಿರುತ್ತಾರೆ. ಆದರೆ, ಜಗಳ ಮುಗಿದ ಬಳಿಕ, ಅದರ ಬಿಸಿ ಆರಿದ ನಂತರ ಪರಸ್ಪರ ಸಾರಿ ಕೇಳಿಕೊಳ್ಳುವುದು, ಕ್ಷಮಿಸು ಎಂದು ಹೇಳುವುದು, ಪಶ್ಚಾತ್ತಾಪ ಪಡುವುದು ಸಹ ಅಷ್ಟೇ ಸಾಮಾನ್ಯ. ಪತಿ-ಪತ್ನಿಯರ ಜಗಳದ ಬಳಿಕ ಕ್ಷಮೆ ಕೇಳಿಕೊಳ್ಳುವುದೂ ಒಂದು ರೀತಿಯ ಸಹಜ ಪ್ರಕ್ರಿಯೆ. ಆದರೆ, ಕೆಲವು ಪುರುಷರಿರುತ್ತಾರೆ. ಅವರು ತಮ್ಮ ಪತ್ನಿಯಲ್ಲಿ ಎಂದಿಗೂ ಕ್ಷಮೆ ಕೇಳುವುದಿಲ್ಲ. ತಮ್ಮದೇ ತಪ್ಪಿನಿಂದ ಅಚಾತುರ್ಯ ನಡೆದರೂ, ತಮ್ಮದೇ ಬಿರುಸು ನುಡಿಗಳು ಹೆಚ್ಚಾಗಿದ್ದರೂ ಪತ್ನಿಯಲ್ಲಿ ಅವರು ಕ್ಷಮೆ ಯಾಚಿಸುವುದಿಲ್ಲ. ಈ ಗುಣ ಅವರ ಕೆಲವು ಸ್ವಭಾವವನ್ನು ತೋರುತ್ತದೆ. ಕ್ಷಮೆ ಕೇಳದಿರುವ ನಡತೆ ಅವರ ಕೆಲವು ಗುಣಸ್ವಭಾವದಿಂದಾಗಿ ಬಂದಿರಬಹುದು.  ಕ್ಷಮೆ ಕೇಳದಿರುವ ವರ್ತನೆ ಅವರ ಈ ಕೆಲವು ಗುಣಗಳನ್ನು ತೋರ್ಪಡಿಸುತ್ತದೆ.

•    ಭಯಂಕರ ಈಗೋ (Ego) ತುಂಬಿರಬಹುದು
ದೌರ್ಬಲ್ಯವನ್ನು (Weakness) ತೋರಿಸಿಕೊಳ್ಳಲು ಆಗದಷ್ಟು ಈಗೋ ನಿಮ್ಮ ಪತಿಗೆ (Husband) ಇರಬಹುದು. ಕೆಲವು ಜನ ಸಂಗಾತಿಗೆ ತಮ್ಮ ದೌರ್ಬಲ್ಯಗಳನ್ನು, ಕುಂದುಕೊರತೆಗಳನ್ನು ತೋರಿಸಿಕೊಳ್ಳುವುದು ಇಷ್ಟವಾಗುವುದಿಲ್ಲ. ತಮ್ಮ ಸಂಗಾತಿ ಅವರಿಗೆ ಎಷ್ಟೇ ಆಪ್ತವಾಗಿದ್ದರೂ (Close) ಅವರಿಂದ ಇದು ಸಾಧ್ಯವಾಗುವುದಿಲ್ಲ. ಕ್ಷಮೆ (Say Sorry) ಕೇಳುವುದರಿಂದ ದೌರ್ಬಲ್ಯ ಕಾಣಿಸಿಕೊಂಡಂತೆ ಆಗುತ್ತದೆ ಎನ್ನುವ ಭಾವನೆ ಅವರದ್ದಾಗಿರುತ್ತದೆ. ಈ ಭಾವನೆ ಅವರಲ್ಲಿ ಸಿಕ್ಕಾಪಟ್ಟೆ ಈಗೋ ತುಂಬಿರುವುದನ್ನು ಸೂಚಿಸುತ್ತದೆ. ಕೆಲ ಪುರುಷರಿಗೆ ಕ್ಷಮೆ (Forgiveness) ಕೇಳುವುದು ಅಂತಹ ಸಮಸ್ಯೆಯಾಗಿ ಕಾಣುವುದಿಲ್ಲ. ಆದರೆ, ಇವರಿಗೆ ಮಾತ್ರ ಸಂಗಾತಿಯನ್ನು ಬೇಡಿಕೊಳ್ಳುವುದು ಬಿಲ್‌ಕುಲ್‌ ಸಾಧ್ಯವಾಗುವುದಿಲ್ಲ. ಇದು ಸಂಬಂಧದ (Relationship) ಹಿತದೃಷ್ಟಿಯಿಂದ ಒಳ್ಳೆಯ ಗುಣವಲ್ಲ.

ಇದನ್ನೂ ಓದಿ: ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್‌ ಮಾಡಿಕೊಂಡ ಬಾಲಕಿ

•    ಪರಿಹಾರಕ್ಕೆ (Remedy) ಯತ್ನಿಸುವ ಪುರುಷರು (Male)
ಕೆಲವು ಜನ ಸಂಗಾತಿಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸುವುದಿಲ್ಲ. ಆದರೆ, ತಮ್ಮಿಂದ ಸೃಷ್ಟಿಯಾದ ಸಮಸ್ಯೆಯ ನಿವಾರಣೆಗೆ ಯತ್ನಿಸುತ್ತಾರೆ. ಇದು ಅವರ ಲೆಕ್ಕದಲ್ಲಿ ಪಶ್ಚಾತ್ತಾಪ (Repent) ಪಡುವ ಒಂದು ಮಾರ್ಗ. ನಿಮ್ಮ ನಡುವೆ ಜಗಳವಾಗಿ (Fight) ಯಾವುದೋ ಒಂದು ವಿಚಾರಕ್ಕೆ ಸಿಕ್ಕಾಪಟ್ಟೆ ಬೇಸರವಾದರೆ, ಅವರು ಅದನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಾರೆ. ಈ ಮೂಲಕ ಅವರು ಸಂಗಾತಿಯ ಕ್ಷಮೆ ಕೇಳಲು ಬಯಸುತ್ತಾರೆ. ಹಾಗೂ ಮತ್ತೆಂದೂ ಹೀಗಾಗದಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ, ಇಂತಹ ಪ್ರಯತ್ನ ಪಡುವ ಪುರುಷರಿಗೆ ಒಂದು ಅವಕಾಶ ನೀಡುವುದು ಸಂಬಂಧದ ಹಿತದೃಷ್ಟಿಯಿಂದ ಉತ್ತಮ.

ಇದನ್ನೂ ಓದಿ: TYPES OF LOVE: ಪ್ರೀತಿ ಅಂದ್ರೆ ಒಂದೇ ಅಲ್ಲ, ನಮ್ಮಲ್ಲಿವೆ ಎಂಟು ವಿಧಗಳ ಪ್ರೀತಿ

•    ತಮ್ಮ ತಪ್ಪೇ (Wrong) ಇಲ್ಲ ಎನ್ನುವ ಪುರುಷ ವರ್ಗ
ಪತಿ-ಪತ್ನಿ ನಡುವೆ ಜಗಳವಾದ ಬಳಿಕ ಕ್ಷಮೆ ಕೇಳದ ಪುರುಷರಲ್ಲಿ ತಾವು ತಪ್ಪೇ ಮಾಡಿಲ್ಲ ಎನ್ನುವ ಭಾವನೆಯೂ ಇದ್ದಿರಬಹುದು. ಅವರಲ್ಲಿ ತಾವು ತಪ್ಪೇ ಮಾಡುವುದಿಲ್ಲ ಎನ್ನುವ ನಂಬಿಕೆ ದೃಢವಾಗಿ ಇರುತ್ತದೆ. ಹೀಗಾಗಿ, ಎಲ್ಲ ಜಗಳಕ್ಕೂ ಪತ್ನಿಯನ್ನೇ ದೂಷಿಸುತ್ತಾರೆ (Blame). ಎಲ್ಲ ಸಮಸ್ಯೆಗೂ ಪತ್ನಿಯ ಸ್ವಭಾವ, ವರ್ತನೆಯೇ ಕಾರಣ ಎಂದು ಬಲವಾಗಿ ಹೇಳುತ್ತಾರೆ. ಅವರ ಪ್ರಕಾರ, ಪ್ರತಿ ಬಾರಿ ಗಂಡ-ಹೆಂಡಿರಲ್ಲಿ ಜಗಳವಾದರೂ ಪತ್ನಿಯೇ ಕ್ಷಮೆ ಕೇಳಬೇಕು. ತಮ್ಮದೇ ತಪ್ಪಿಗೂ ಅವರು ನಿಮ್ಮ ಮೇಲೆ ದೋಷಾರೋಪಣೆ ಮಾಡುತ್ತಾರೆ. ಇದು ನಿಜಕ್ಕೂ ದುರಂತ. ಅವರಿಗೆ ತಮ್ಮ ತಪ್ಪಿನ ಅರಿವಾಗುವುದೇ ಇಲ್ಲ. ನಿಮ್ಮ ಸಂಗಾತಿ ಇಂಥವರಾಗಿದ್ದರೆ ನೀವು ಎಚ್ಚರಿಕೆಯಿಂದ ವರ್ತಿಸಬೇಕು. ತಮ್ಮ ವರ್ತನೆಯ ಬಗ್ಗೆ ಜವಾಬ್ದಾರಿ ಹೊರದ ಪತಿಯಿಂದ ಎಷ್ಟೋ ಮಹಿಳೆಯರ ಬಾಳು ನರಕವಾಗುತ್ತದೆ. ಹೀಗಾಗಿ, ನೀವು ನಿಮಗೆ ಹತ್ತಿರವಾಗಿರುವ ಯಾರಾದರೊಬ್ಬರಿಂದ ಬೆಂಬಲ (Support) ಪಡೆದುಕೊಳ್ಳಬೇಕಾಗುತ್ತದೆ.    

Follow Us:
Download App:
  • android
  • ios