Asianet Suvarna News Asianet Suvarna News

ಡಿವೋರ್ಸ್‌ ಆದ್ಮೇಲೆ ಹಳೆ ಸಂಗಾತಿನೇ ಚೆನ್ನಾಗಿದ್ದರು ಅಂತ ಅನಿಸೋಕೆ ಶುರು ಆಗಿದ್ಯಾ?

ಗಂಡ ಅಥವಾ ಹೆಂಡತಿಯಿಂದ ಡಿವೋರ್ಸ್‌ ಪಡೆದುಕೊಂಡ ಬಳಿಕ ಮತ್ತೆ ಅವರೊಂದಿಗೇ ಬಾಳಬೇಕು ಎಂದು ಅನ್ನಿಸುವುದು ಅಪರೂಪ. ಆದರೆ, ಒಂದೊಮ್ಮೆ ಹಾಗೆ ಅನ್ನಿಸಿದರೆ ಅದಕ್ಕೆ ಹಿಂಜರಿಕೆ ಬೇಕಾಗಿಲ್ಲ. ಜ್ಯೋತಿಷ್ಯ ಶಾಸ್ತ್ರದ ನೆರವಿನಿಂದ ಹಳೆಯ ಪತಿ/ಪತ್ನಿಯೊಂದಿಗೇ ಭವಿಷ್ಯವನ್ನು ಸೊಗಸಾಗಿ ಕಟ್ಟಿಕೊಳ್ಳಬಹುದು.
 

If you want get back again after divorce take help from astrology sum
Author
First Published Nov 15, 2023, 5:26 PM IST

ಮದುವೆ ಮುರಿದು ಬೀಳುವುದು, ವಿಚ್ಛೇದನ ಪಡೆದುಕೊಳ್ಳುವುದು ಇಂದಿನ ದಿನಗಳಲ್ಲಿ ಅತಿ ಸಾಮಾನ್ಯ ಸಂಗತಿ. ಹೊಂದಾಣಿಕೆ ಮಾಡಿಕೊಳ್ಳಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ವಿಚ್ಛೇದನ ಪಡೆದುಕೊಳ್ಳುವುದೇ ಸುಲಭವಾಗುತ್ತದೆ. ಆದರೆ, ವಿಚ್ಛೇದನ ಪಡೆದುಕೊಂಡ ಬಳಿಕ ಮತ್ತೆ ಹಳೆಯ ಗಂಡ ಅಥವಾ ಹೆಂಡತಿಯೊಂದಿಗೇ ಮರುಬಾಳ್ವೆ ನಡೆಸಲು ಮುಂದಾಗುವುದು ಅಪರೂಪದ ಸನ್ನಿವೇಶ. ಕೇವಲ ಸಿನಿಮಾಗಳಲ್ಲಿ ಮಾತ್ರ ಹೀಗೆ ಆಗುತ್ತಿಲ್ಲ. ನಮ್ಮ ಸಮಾಜದ ಸದ್ಯದ ನೋಟ ಇದು. ಒಂದು ಹಂತದಲ್ಲಿ ಪತಿ/ಪತ್ನಿಗೆ ಡಿವೋರ್ಸ್‌ ನೀಡುವುದು ಅನಿವಾರ್ಯವೆಂದು ಭಾಸವಾಗಿ, ಬಳಿಕ, ಆ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುವಂತಾಗುತ್ತದೆ. ಅದು ತಪ್ಪೆನ್ನುವ ಭಾವನೆ ಮೂಡುತ್ತದೆ. ಆದರೆ, ಆಗ ಮತ್ತೆ ಅವರನ್ನು ಸೇರಲು ಈಗೋ ಬಿಡುವುದಿಲ್ಲ. ಸಮಾಜ, ಮನೆಯವರು ಏನಂದುಕೊಳ್ಳುತ್ತಾರೋ ಎನ್ನುವ ಹಿಂಜರಿಕೆ ಕಾಡುತ್ತದೆ. ಆದರೆ, ಡಿವೋರ್ಸ್‌ ಆದ ಬಳಿಕವೂ ಮತ್ತೆ ಹಳೆಯ ಸಂಗಾತಿಯನ್ನು ಹೊಂದಬೇಕೆಂದು ತೀವ್ರವಾಗಿ ಅನ್ನಿಸಿದರೆ ಆ ಸಮಯದಲ್ಲಿ ಕೆಲವು ಎಚ್ಚರಗಳನ್ನು ತೆಗೆದುಕೊಳ್ಳುವುದು ಒಳಿತು. ಜ್ಯೋತಿಷ್ಯ ಶಾಸ್ತ್ರದ ನೆರವನ್ನು ಈ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ಮುಂದೆ ಮತ್ತೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು ಅಥವಾ ಆ ಮರುಸಾಂಗತ್ಯ ಬೇಕೇ ಬೇಡವೇ ಎನ್ನುವುದನ್ನು ಸರಿಯಾಗಿ ನಿರ್ಧರಿಸಲು ಸಹಕಾರಿಯಾಗಬಹುದು.

•    ಜನ್ಮರಾಶಿಯ (Sun Sign) ಗುಣಾವಗುಣ
ಯಾವುದೇ ವಿವಾಹಿತರು ಮೊಟ್ಟ ಮೊದಲು ಮಾಡಬೇಕಾದ ಕೆಲಸವೆಂದರೆ, ನಿಮ್ಮ ಸಂಗಾತಿಯ (Partner) ಜನ್ಮರಾಶಿಯ ಪ್ರಮುಖ ಗುಣಾವಗುಣಗಳನ್ನು ಅರಿತುಕೊಳ್ಳಿ. ಇದರಿಂದ ನಿಮ್ಮ ಸಂಗಾತಿಯ ಸ್ವಭಾವ, ವರ್ತನೆಯ ಬಗ್ಗೆ ಸ್ಪಷ್ಟ ಅಂದಾಜು ಮೂಡುತ್ತದೆ. ಅವರ ಹೊಂದಾಣಿಕೆ (Compatibility), ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೀತಿಸಿ ಮದುವೆಯಾಗುವವರಿಗೂ ಇದೊಂದು ಮಾರ್ಗಸೂಚಿ ಆಗಬಲ್ಲದು. ಮರು ಮದುವೆಯಾಗಬಹುದೇ (Re Marriage) ಎಂದು ಅರಿತುಕೊಳ್ಳಲು ಸಹ ಇದು ಅಗತ್ಯ. 

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಹೊಸ ಪ್ರಣಯದಾಟ!

•    ಸಮಯದ (Time) ಮುಂದೆ ಇನ್ನೇನಿದೆ?
ಎಲ್ಲವೂ ಸಮಯವನ್ನು ಆಧರಿಸಿದೆ. ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಸಮಯ ಎಂದರೆ, ಗ್ರಹಗತಿ, ಚಲನೆ, ಗ್ರಹಗಳ ಸ್ಥಾನ ಇತ್ಯಾದಿ. ಗ್ರಹಗಳ ಚಲನೆಯಿಂದಲೇ ಮನುಷ್ಯನ ಜೀವನದಲ್ಲಿ ಹಲವು ಏರಿಳಿತಗಳು ಸಂಭವಿಸುತ್ತವೆ ಎನ್ನುತ್ತದೆ ಈ ಶಾಸ್ತ್ರ. ನಿರ್ದಿಷ್ಟ ಸಮಯದಲ್ಲಿ ಪತಿ-ಪತ್ನಿಯರು (Husband Wife) ದೂರವಾಗಿರುವ ಯೋಗವಿದ್ದರೆ ಹಾಗೆಯೇ ಆಗುತ್ತದೆ ಎನ್ನಲಾಗುತ್ತದೆ. ಹೀಗಾಗಿ, ಡಿವೋರ್ಸ್‌ (Divorce) ನೀಡಿದವರನ್ನೇ ಮತ್ತೆ ಮದುವೆಯಾಗಲು ಬಯಸಿದ್ದರೆ ಹಿಂಜರಿಕೆ ಬೇಡ. ಆದರೆ, ಸೂಕ್ತ ತಜ್ಞರ ಬಳಿ ಕುಂಡಲಿಗಳ ಪರಿಶೀಲನೆ ಮಾಡಿಸಲು ಮರೆಯಬಾರದು. ಏಕೆಂದರೆ, ಗ್ರಹಗತಿ, ಭವಿಷ್ಯದಲ್ಲಿ ಇಬ್ಬರ ಹೊಂದಾಣಿಕೆ, ಸಂಬಂಧದ (Relationship) ಭವಿಷ್ಯವನ್ನು ಅರಿಯಲು ಇದು ಅಗತ್ಯ. ಮತ್ತೆ ಸಮಸ್ಯೆ ಸೃಷ್ಟಿಯಾಗುವುದಾದರೆ ಮರುಮದುವೆಯಾಗುವ ಅಗತ್ಯವೇನಿರುತ್ತದೆ?

•    ಪೂಜಾ (Pooja) ಪದ್ಧತಿಗಳು
ಭಾರತೀಯ ಜ್ಯೋತಿಷ್ಯ ಶಾಸ್ತ್ರ ಸಂಸಾರದ ಹಲವು ಸಮಸ್ಯೆಗಳಿಗೆ ಪೂಜಾ ಪದ್ಧತಿಗಳನ್ನು (Rituals) ಪರಿಹಾರವಾಗಿ ಸೂಚಿಸುತ್ತದೆ. ಅವುಗಳ ಮೂಲಕ ಸಮಸ್ಯೆಗಳ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಎನ್ನುತ್ತದೆ. ಹೀಗಾಗಿ, ನಿರ್ದಿಷ್ಟ ಪೂಜೆ, ಪದ್ಧತಿಗಳನ್ನು ಅನುಸರಿಸುವುದು ಸಹಕಾರಿಯಾಗಬಲ್ಲದು. ವೈವಾಹಿಕ ಜೀವನ (Married Life) ಚೆನ್ನಾಗಿರಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ನಿರ್ದಿಷ್ಟ ಪೂಜೆಗಳ ಮೂಲಕ ಕಾಸ್ಮಿಕ್‌ ಎನರ್ಜಿ ನಮಗೆ ಒಳಿತನ್ನು ಮಾಡುವಂತೆ ಮಾಡಬಹುದು.

2024 ರಲ್ಲಿ ಗುರುವಿನಿಂದ ಈ ರಾಶಿಗೆ ಗುರು ಬಲ..ಬೃಹಸ್ಪತಿಯಿಂದ ರಾಜಯೋಗ

•    ಖಾಸಗಿ (Personal) ವಿಚಾರ
ವೈವಾಹಿಕ ಜೀವನದಲ್ಲಿ ಯಾರೋ ಒಬ್ಬರ ಕಾರಣದಿಂದಾಗಿ ಡಿವೋರ್ಸ್‌ ಆಗುವುದು ಭಾರೀ ಕಡಿಮೆ. ಇಬ್ಬರ ಕೊಡುಗೆಯೂ ಸಾಕಷ್ಟಿರುತ್ತದೆ. ಅವರಿಂದ ಡಿವೋರ್ಸ್‌ ಪಡೆದುಕೊಂಡು ಹಾಯಾಗಿರಬಹುದು ಎಂದು ನೀವಂದುಕೊಂಡಿದ್ದರೆ ಅದು ಸುಳ್ಳಾಗಬಹುದು. ಆದರೆ, ಮತ್ತೆ ಅವರನ್ನು ಸೇರಬೇಕಾದರೆ ನಿಮ್ಮ ಗುಣಾವಗುಣ, ಸಾಮರ್ಥ್ಯ (Strength), ದೌರ್ಬಲ್ಯಗಳನ್ನೂ ವಿಮರ್ಶೆ ಮಾಡಿಕೊಳ್ಳಿ. ಸಮಸ್ಯೆ ಉಲ್ಬಣವಾಗಲು ಅಥವಾ ಆರಂಭವಾಗಲು ನಿಮ್ಮ ಕೊಡುಗೆ ಏನು ಎಂದೆಲ್ಲ ಪರಿಶೀಲನೆ ಮಾಡಿಕೊಳ್ಳಿ. ಇದಕ್ಕೂ ಸಹ ಜ್ಯೋತಿಷ್ಯದ ನೆರವು ಪಡೆದುಕೊಳ್ಳಬಹುದು. 
 

Follow Us:
Download App:
  • android
  • ios