ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಹೊಸ ಪ್ರಣಯದಾಟ!
ಯಾರೀ ಅದೃಷ್ಟವಂತರು? ಯಾವ ರಾಶಿಗಳು ಹೊಸ ವರ್ಷ ಹೆಚ್ಚು ರೊಮ್ಯಾಂಟಿಕ್ ಆಗುವ ಯೋಗ ಹೊಂದಿದ್ದಾರೆ? ಬನ್ನಿ ತಿಳಿಯೋಣ.
ಹೊಸ ವರ್ಷದಲ್ಲಿ ನೀವು ಕೆಲವು ಹೊಸ ವೃತ್ತಿಗಳಿಗೆ, ಹೊಸ ಪ್ರದೇಶಗಳಿಗೆ, ಹಾಗೆಯೇ ಹೊಸ ಪ್ರಣಯಕ್ಕೂ ತೆರೆದುಕೊಳ್ಳಬಹುದು. ಅದು ಈಗಿರುವ ಸಂಗಾತಿಯ ಜೊತೆಗಿನ ಹೊಸ ಪ್ರಣಯದಾಟವೂ ಆಗಿರಬಹುದು, ಅಥವಾ ಹೊಸ ಸಂಗಾತಿಯೂ ಆಗಿರಬಹುದು. ಹಾಗಾದರೆ ಯಾರೀ ಅದೃಷ್ಟವಂತರು? ಯಾವ ರಾಶಿಗಳು ಹೊಸ ವರ್ಷ ಹೆಚ್ಚು ರೊಮ್ಯಾಂಟಿಕ್ ಆಗುವ ಯೋಗ ಹೊಂದಿದ್ದಾರೆ? ಬನ್ನಿ ತಿಳಿಯೋಣ.
ವೃಷಭ ರಾಶಿ (Taurus): ನಿಮ್ಮ ಪ್ರೀತಿಪಾತ್ರ ಸಂಗಾತಿಗಳ ತೋಳುಗಳಲ್ಲಿ ಹೆಚ್ಚು ರೊಮ್ಯಾಂಟಿಕ್ ದಿನಗಳನ್ನು ಕಳೆಯುವಿರಿ. ನೀವು ಅವರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಸಂತೋಷಪಡಿಸಬಹುದು. ಇದು ನಿಮಗೆ ಮೊದಲಿಗಿಂತ ಹೆಚ್ಚು ಪ್ರೀತಿ ಮತ್ತು ಪ್ರಣಯವನ್ನು ನೀಡುತ್ತದೆ. ನಿಮ್ಮ ಜೀವನ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ, ಇದರಿಂದ ಜೀವನದಲ್ಲಿ ಉತ್ತಮ ಬದಲಾವಣೆ ಆಗಲಿದೆ. ಮತ್ತು ನಿಮ್ಮ ಹಾಗೂ ನಿಮ್ಮ ಸಂಗಾತಿಯ ಪ್ರಣಯ ಭವಿಷ್ಯ ಉತ್ತಮವಾಗಬೇಕಾದರೆ ನೀವು ಜಗಳವಾಡುವುದನ್ನು ತಪ್ಪಿಸಬೇಕು. ನಿಮ್ಮ ಜೀವನ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಅವರು ಕೂಡ ನಿಮ್ಮನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡುವರು.
ಮಿಥುನ ರಾಶಿ (Gemini): ಶುಕ್ರನು ಅದೃಷ್ಟದ ಮನೆಯಲ್ಲಿರುವುದರಿಂದ ನಿಮ್ಮ ಪ್ರೀತಿ ಮತ್ತು ಪ್ರಣಯ ಜೀವನ ಈ ವರ್ಷ ಉತ್ತಮ ಇರಲಿದೆ. ನೀವಿಬ್ಬರೂ ಪರಸ್ಪರ ಸಮಯ ಕಳೆಯಲು ಹೆಚ್ಚು ಆಸಕ್ತಿ ತೋರಬಹುದು. ಇದು ನಿಮ್ಮಿಬ್ಬರಿಗೂ ಪರಸ್ಪರರ ಮಹತ್ವ ಮತ್ತು ಪ್ರೀತಿಯನ್ನು ಅನುಭವಿಸುವಂತೆ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಮತ್ತು ಪ್ರೇಮಿಯ ನಡುವೆ ಜಗಳ ಆಗಬಹುದು. ಆದರೆ ಜಗಳದ ನಂತರದ ಪ್ರಣಯ ಇನ್ನಷ್ಟು ರೊಮ್ಯಾಂಟಿಕ್ ಆಗಿರಲಿದೆ.
ಕನ್ಯಾ ರಾಶಿ (Virgo): ನಿಮ್ಮ ಪ್ರೇಮಿ ನಿಮಗೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಸಹಾಯ ಮಾಡುವುದನ್ನು ಕಾಣಬಹುದು. ಇಬ್ಬರೂ ಒಳ್ಳೆಯ ಸಮಯವನ್ನು ಕಳೆಯುವ ಮೂಲಕ ನಿಮ್ಮ ಪ್ರೀತಿಯ ಜೀವನವನ್ನು ಅರ್ಥಪೂರ್ಣವಾಗಿಸಲು ಸಾಧ್ಯವಾಗುತ್ತದೆ. ನಿಮ್ಮ ವೈವಾಹಿಕ ಜೀವನದ ಎಲ್ಲಾ ಕೆಟ್ಟ ನೆನಪುಗಳನ್ನು ಮರೆತು ಬಿಡುತ್ತೀರಿ. ಹೊಸ ಜೀವಗಳು ನಿಮ್ಮ ಮನೆಗೆ ಬರಬಹುದು. ಇದು ನಿಮ್ಮ ಪ್ರೀತಿ ಪ್ರಣಯಕ್ಕೆ ಇನ್ನಷ್ಟು ರಂಗು ತುಂಬುತ್ತವೆ.
ಸಿಂಗಲ್ ಮದರ್ಸ್‌ಗೇ ಸ್ಫೂರ್ತಿ ಈ ಸೀತಾ ದೇವಸ್ಥಾನ, ಇಲ್ಲಿ ರಾಮನ ಮೂರ್ತಿಯೂ ಇಲ್ಲ!
ವೃಶ್ಚಿಕ ರಾಶಿ (Scorpio): ನಿಮ್ಮ ಗೆಳತಿಯನ್ನು ಒಲಿಸಿಕೊಳ್ಳಲು ನೀವು ಅನೇಕ ಪ್ರಯತ್ನ ಮಾಡುವಿರಿ. ಇದು ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಸಂಗಾತಿಯೊಂದಿಗೆ ನೀವು ಹತ್ತಿರವಾಗುತ್ತೀರಿ. ಈ ರಾಶಿಯ ವಿವಾಹಿತರಿಗೆ ತಮ್ಮ ಸಂಗಾತಿಯಿಂದ ಸಮಾಜದಲ್ಲಿ ಗೌರವ ಸಿಗಲಿದೆ. ಅವಿವಾಹಿತರಿಗೆ ಸಂಗಾತಿ ದೊರೆಯುತ್ತಾರೆ. ನಿಮ್ಮ ಪ್ರೀತಿಯ ಜೀವನವನ್ನು ಸುಧಾರಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವ ಅವಕಾಶವನ್ನು ನೀವು ಪಡೆಯುತ್ತೀರಿ. ನಿಮ್ಮಿಬ್ಬರ ನಡುವೆ ನಡೆಯುವ ಪ್ರತಿಯೊಂದು ವಿವಾದವೂ ಕೊನೆಗೊಳ್ಳುವ ಸಾಧ್ಯತೆಯೂ ಇದೆ.
ಮೂಗಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ ಗೊತ್ತಾ..?
ಮಕರ ರಾಶಿ (Capricorn): ಹುಡುಕಾಟದಲ್ಲಿರುವವರಿಗೆ ಸಂಗಾತಿ ದೊರೆಯುವ ಸಮಯ. ಇದು ವಿವಾಹಿತರಿಗೂ ಇನ್ನೊಂದು ರೊಮ್ಯಾಂಟಿಕ್ ಒಡನಾಟದ ಸಾಂಗತ್ಯದ ಸಾಧ್ಯತೆ ಎದುರಾಗುವ ಸಮಯ. ಇದೀಗ ನಿಮ್ಮ ವಿವೇಕ ವಿವೇಚನೆಗಳನ್ನು ಬಳಸುವ ಸಮಯ. ಗುಟ್ಟುಗುಟ್ಟಾಗಿ ಪ್ರಣಯ ಮುಂದುವರಿಸಬಹುದು. ಈ ವರ್ಷ ಈ ಕದ್ದುಮುಚ್ಚಿ ಪ್ರಣಯದಾಟದ ರೋಮಾಂಚನಕಾರಿಯಾಗಿ ಮುಂದುವರಿರಬಹುದು. ಆದರೆ ನಂತರದ ವರ್ಷ ಮಂಗಳಗ್ರಹದ ಕೃಪೆ ಮುಗಿಯುವುದರಿಂದ, ಏನಾದೀತೋ ಈಗಲೇ ಹೇಳಲಾಗದು. ಈ ವರ್ಷ ಉಂಡ ರೊಮ್ಯಾನ್ಸ್‌ನ ಫಲವನ್ನೆಲ್ಲಾ ಮುಂದಿನ ವರ್ಷ ಕಕ್ಕಬೇಕಾದೀತು.
ಧನು ರಾಶಿ (Sagittarius): ಈ ವರ್ಷ ನಿಮ್ಮ ಪ್ರೇಮ ಜೀವನಕ್ಕೆ ತುಂಬಾ ಒಳ್ಳೆಯದು. ನಿಮ್ಮ ಹಾಗೂ ನಿಮ್ಮ ಲವರ್ ನಡುವಿನ ಪರಸ್ಪರ ಪ್ರೀತಿಯ ಭಾವನೆ ಬಲವಾಗಿರುತ್ತದೆ. ನಿಮ್ಮ ಕುಟುಂಬದ ಬಗ್ಗೆ ನಿಮ್ಮ ಸಂಗಾತಿಯ ಕಾಳಜಿಯುಳ್ಳ ನಡವಳಿಕೆಯು ನಿಮಗೆ ಹೆಮ್ಮೆಯನ್ನುಂಟು ಮಾಡುತ್ತದೆ. ಅವಿವಾಹಿತರಿಗೆ ಸಂಗಾತಿಯು ಪ್ರೇಮ ನಿವೇದನೆ ಮಾಡಬಹುದು. ಇದರಿಂದ ನಿಮ್ಮ ಪ್ರೀತಿಯ ಸಂಬಂಧ ಬಲವಾಗುತ್ತದೆ ಮತ್ತು ನೀವು ಪರಸ್ಪರ ಹತ್ತಿರ ಆಗುವಿರಿ. ಸಂಗಾತಿಯೊಂದಿಗೆ ಪ್ರತಿದಿನ ಸಂಜೆಯನ್ನು ಕಳೆಯಲು ನೀವು ಬಯಸುತ್ತೀರಿ.
ಮೀನ ರಾಶಿ (Pisces): ಪ್ರೀತಿಯು ನೀವು ಅಂದುಕೊಂಡಷ್ಟು ವಾಸ್ತವದಲ್ಲಿ ಸುಲಭ ಅಲ್ಲ ಎಂದು ನೀವು ಅರಿತುಕೊಳ್ಳುತ್ತೀರಿ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ಪ್ರಯತ್ನ ಮಾಡುವಿರಿ. ಮೂರನೇ ವ್ಯಕ್ತಿಯ ಕಾರಣದಿಂದ ನಿಮ್ಮಿಬ್ಬರ ನಡುವೆ ಅಂತರ ಸಾಧ್ಯತೆ ಇದೆ. ಜಾಗೃತೆ ವಹಿಸಿ. ಪ್ರಣಯದ ಮೂಲಕ ನೀವು ಮಾನಸಿಕವಾಗಿ ಶಾಂತಿ ಆನಂದವನ್ನು ಅನುಭವಿಸುವಿರಿ. ಸಂಗಾತಿಗೂ ಅದನ್ನು ಕೊಡುವ ಪ್ರಯತ್ನ ಮಾಡುವಿರಿ.