ಕೆಲವು ಅಭ್ಯಾಸಗಳು ನಮ್ಮ ಸೆಕ್ಸ್‌ ಲೈಫನ್ನು ಕೊಲ್ಲುತ್ತವೆ. ಮೊದಲಿನಂತೆಯೇ ಚುರುಕಾಗಿ, ಲವಲವಿಕೆಯಿಂದ ಕಾಮಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದ್ದಾರೆ ಕೆಲವು ಅಭ್ಯಾಸ ಬಿಡಬೇಕು, ಇನ್ನು ಕೆಲವನ್ನು ರೂಢಿಸಿಕೊಳ್ಳಬೇಕು. 

ಏನ್‌ ಗೊತ್ತಾ, ಲೈಂಗಿಕ ಮಿಲನಕ್ರಿಯೆಯ ಬಗ್ಗೆ ನಾವು ಭಾರತೀಯರು ಮುಕ್ತವಾಗಿ ಮಾತಾಡುವುದೇ ಇಲ್ಲ. ಇದೇ ನಮ್ಮ ಸಮಸ್ಯೆ. ಸೆಕ್ಸ್‌ಗೆ ಸಂಬಂಧಿಸಿ ನಮ್ಮನ್ನು ಕಾಡುವ ಸಣ್ಣಪುಟ್ಟ ಸಮಸ್ಯೆಗಳು ನಿಮ್ಮ ಸಂಗಾತಿಯ ಸಹಕಾರದಿಂದ ಸಲೀಸಾಗಿ ಪರಿಹಾರವಾಗಬಹುದು. ಮುಕ್ತವಾಗಿ ಮಾತಾಡುವುದೇ ಸ್ವರ್ಗದ ದಾರಿ. ಹಾಗೆಯೇ ನೀವು ಹಾಗೂ ನಿಮ್ಮ ಸಂಗಾತಿ ಜೊತೆಯಾಗಿ ವರ್ಕ್ಔಟ್‌ ಮಾಡಿ ನಿಮ್ಮಸೆಕ್ಸ್‌ ಲೈಫನ್ನು ಇನ್ನಷ್ಟು ಉತ್ತೇಜಿಸಿಕೊಳ್ಳಬಹುದು. ಹೇಗೆ ಅಂತೀರಾ?



- ಒಂದೇ ರೀತಿಯ ಮಿಲನ, ಅದೇ ಮುನ್ನಲಿವಿನ ವರ್ತನೆಗಳು, ಅದೇ ಬೆಡ್‌ರೂಂ ಬೋರ್‌ ತರಬಹುದು. ಸೆಕ್ಸ್‌ನಲ್ಲೂ ಹೊಸ ಹೊಸ ರೂಢಿಗಳನ್ನು ತಂದು ಇದನ್ನು ಸ್ಪೈಸೀ ಆಗಿಸಿ. ಬೆಡ್‌ರೂಂನಿಂದ ಆಚೆ ಬನ್ನಿ. ಹಳೆಯ ರೊಟೀನ್‌ ಮುರಿಯಿರಿ.
- ನೇರ ಸೆಕ್ಸ್‌ಗೂ ಮುನ್ನ ನಡೆಸುವ ಫೋರ್‌ಪ್ಲೇ ಅಥವಾ ಮುನ್ನಲಿವು ತೀರ ಅಗತ್ಯ. ಅದು ಸೆಕ್ಸ್‌ನ ರುಚಿಯನ್ನು ಅಧಿಕಗೊಳಿಸುತ್ತದೆ. ಮುನ್ನಲಿವು ದೀರ್ಘ ಕಾಲ ನಡೆದಷ್ಟು ಸಂತೋಷ ಅಧಿಕ ಎಂಬುದು ಅಧ್ಯಯನಗಳ ವರದಿ.
- ನಮ್ಮ ದೇಹದ ಬಗ್ಗೆ ನಮಗೆ ಕೀಳರಿಮೆಯಿದ್ದಾಗ ಮುಕ್ತವಾಗಿ ಬರೆಯಲು ಆಗುವುದಿಲ್ಲ. ಹಾಗೇ ನಿಮ್ಮ ಸಂಗಾತಿಯ ದೇಹದ ಬಗ್ಗೆ ಮೆಚ್ಚುಗೆ ನುಡಿಯಾಡುವುದು, ಅವರಿಂದ ನಿಮ್ಮ ದೇಹದ ಬಗ್ಗೆ ಒಳ್ಳೆಯ ಫೀಡ್‌ಬ್ಯಾಕ್‌ ಪಡೆಯುವುದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.
- ತುಂಬಾ ಒತ್ತಡದ ಜೀವನ ನಡೆಸಬೇಡಿ. ಉದ್ಯೋಗವನ್ನು ಮನೆಗೂ ತರಬೇಡಿ. ಅದು ನಿಮ್ಮ ದೇಹದಲ್ಲಿ ಒತ್ತಡದ ಕಾಲದ ಹಾರ್ಮೋನ್‌ಗಳನ್ನು ಹೆಚ್ಚು ಮಾಡಿ, ನಾರ್ಮಲ್‌ ಆಗಿರಲು ಸಾಧ್ಯವಿಲ್ಲದಂತೆ ಮಾಡುತ್ತದೆ. ಕಾಮಿಡಿ ನೋಡುವುದು, ಪಾರ್ಕ್‌ನಲ್ಲಿ ವಾಕ್‌, ಯೋಗ ಇವೆಲ್ಲ ಒತ್ತಡ ಮುಕ್ತಿಗೆ ಸಹಕಾರಿ.
- ಜಂಕ್‌ಫುಡ್‌ ಸೇವನೆ ವಾರದಲ್ಲಿ ಒಂದೋ ಎರಡೋ ಬಾರಿ ಪರವಾಗಿಲ್ಲ. ಆದರೆ ಪ್ರತಿದಿನ ಜಂಕ್‌ಫುಡ್‌ ಸೇವಿಸಿದರೆ ರಕ್ತದ ಪರಿಚಲನೆ ಸ್ಲೋ ಆಗುತ್ತೆ. ಸೆಕ್ಸ್‌ನ ಕುರಿತು ಆಸಕ್ತಿ ಮತ್ತು ಪರ್‌ಫಾರ್ಮೆನ್ಸ್‌ ಎರಡೂ ಕಡಿಮೆ ಆಗುತ್ತೆ. ಹಣ್ಣು, ತರಕಾರಿ ಹೆಚ್ಚು ಸೂಕ್ತ.

ಲಾಕ್‌ಡೌನ್‌ ವೇಳೆ ಕೊರೋನಾ ಸೆಕ್ಸ್‌ಗೆ ಭಾರಿ ಬೇಡಿಕೆ! 

- ತುಂಬಾ ಬ್ಯುಸಿ ಜೀವನ ಬೇಡ. ಕೆಲಸಕ್ಕೂ ಊಟಕ್ಕೂ ಟೈಮ್‌ ಮಾಡಿಕೊಂಡ ಹಾಗೆಯೇ ಮಿಲನಕ್ಕೂ ಸಮಯ ಮಾಡಿಕೊಳ್ಳುವುದು ಅಗತ್ಯ. ಇದಕ್ಕಾಗಿ ನೀವು ಪ್ರತ್ಯೇಕ ಕ್ಯಾಲೆಂಡರ್‌ ಮೆಂಟೇನ್‌ ಮಾಡಿದ್ರೂ ಒಳ್ಳೇದೇ. ಬ್ಯುಸಿ ಜೀವನದ ಮೊದಲ ಬಲಿಯಾಗುವುದೇ ನಿಮ್ಮ ಬೆಡ್‌ರೂಂ ಸಂತೋಷ.
- ಕೆಲವರು, ಮದ್ಯಪಾನದಿಂದ ಮಂಚದ ಮೇಲಿನ ತಮ್ಮ ಪರ್‌ಫಾರ್ಮೆನ್ಸ್‌ ಭಾರೀ ಆಗುತ್ತದೆಂದು ತಪ್ಪು ತಿಳಿಯುತ್ತಾರೆ. ಹಾಗೇನೂ ಇಲ್ಲ. ಅತಿಯಾಗಿ ಕುಡಿಯವುದರಿಂದ ಬಾಡಿ ಫೇಲ್‌ ಆಗುವುದೇ ಹೆಚ್ಚು. ಆಗ ನರಗಳು ಸುಖಕ್ಕೆ ಸಹಕರಿಸುವುದಿಲ್ಲ. ಲಿಕ್ಕರ್‌ ಮಿತಿಯಲ್ಲಿರಲಿ.


- ನಿದ್ರೆಗೆಡುವುದು ದೇಹಕ್ಕೆ ಮಾತ್ರವಲ್ಲ ಸೆಕ್ಸಿಗೂ ಹಾನಿಕರ, ನಿದ್ರೆಯಿಲ್ಲದ ಜಡವಾದ ದೇಹದಿಂದ ಯಾವ ಸುಖವನ್ನೂ ನಿರೀಕ್ಷಿಸಲಾಗದು. ಅಧ್ಯಯನಗಳ ಪ್ರಕಾರ, ಸಾಕಷ್ಟು ನಿದ್ರೆ ಮಾಡುವ ಸ್ತ್ರೀಯರು ಈ ವಿಚಾರದಲ್ಲಿ ಹೆಚ್ಚು ಆಕ್ಟಿವ್‌ ಆಗಿರುತ್ತಾರಂತೆ.

#FeelFree: ನನ್ನ ಹೆಂಡತಿ ಸೆಕ್ಸ್‌ ವೇಳೆ ನನ್ನ ಗೆಳೆಯನನ್ನು ನೆನಪಿಸಿಕೊಳ್ತಾಳೆ! ...

- ನಿಮ್ಮ ದೇಹದ ಸುತ್ತಳತೆ ನಿಮಗೂ ಅರಿವಿಲ್ಲದೆ ಹೆಚ್ಚಾಗುತ್ತ ಹೋಗುತ್ತಿದೆಯಾ? ಅರ್ಥಾತ್‌, ಬೊಜ್ಜು ತುಂಬಿಕೊಳ್ಳುತ್ತಿದೆಯಾ? ಎರಡು ದೇಹಗಳು ಮಿಲನದ ಹೊತ್ತಿನಲ್ಲಿ ಹೊಟ್ಟೆ ಅಡ್ಡ ಬಂದರೆ ಏನು ಮಜಾ ಇರುತ್ತೆ ಹೇಳಿ? ಬೊಜ್ಜಿಗೆ ಬೈ ಹೇಳಿ.
- ನೀವು ಸ್ಮೋಕಿಂಗ್‌ ಅಭ್ಯಾಸವುಳ್ಳವರಾದರೆ ಇನ್ನೊಮ್ಮೆ ಯೋಚಿಸಿ. ತಂಬಾಕಿನಲ್ಲಿರುವ ಕೆಮಿಕಲ್‌ಗಳು ನಿಮ್ಮ ದೇಹದ ಕಾಮಾಸಕ್ತಿಯನ್ನು ಕುಗ್ಗಿಸುವ ಶಕ್ತಿ ಹೊಂದಿವೆ. ಅದರಲ್ಲೂ ಮುಖ್ಯವಾಗಿ ಪುರುಷರಲ್ಲಿ ಇವು ಸಂಪೂರ್ಣ ಲಿಬಿಡೋವನ್ನು ಕಸಿದುಕೊಳ್ಳಬಲ್ಲವು.

#Feelfree: ಪತ್ನಿ ಗೆಳತಿ ಜೊತೆಗೆ ಸರಸ ನಡೀತು, ಮುಂದೇನು ಕತೆ? ...