ಲಾಕ್‌ಡೌನ್ ವೇಳೆ ಕೊರೋನಾ ಸೆಕ್ಸ್‌ಗೆ ಭಾರಿ ಬೇಡಿಕೆ!
ಲಾಕ್‌ಡೌನ್ ಸಂದರ್ಭದಲ್ಲಿ ದೊಡ್ಡ ಹೊಡೆತ ಅನುಭವಿಸಿದ ಎಲ್ಲ ಇಂಡಸ್ಟ್ರಿಗಳ ಹಾಗೇ ಪೋರ್ನ್ ಇಂಡಸ್ಟ್ರಿಗೂ ಆಗಿದೆ. ಈ ನಡುವೆಯೂ ಕೊರೋನಾ ವೈರಸ್ ಅನ್ನುವ ಥೀಮಿನಲ್ಲಿ ವಿಡಿಯೋಗಳು, ಆಡಿಯೋಗಳು ಸಾಕಷ್ಟು ಸೇಲಾಗಿವೆ.
ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್ ಆಯ್ತಲ್ಲ. ಆಗ ಹಳೆಯ ಪೋರ್ನ್ ವಿಡಿಯೋಗಳಿಗೆ ಭಾರಿ ಬೇಡಿಕೆ ಹುಟ್ಟಿಕೊಂಡಿತು. ಕೆಲವು ದಿನಗಳಲ್ಲಿ ಈ ಹಳೆಯ ಸ್ಟಾಕ್ ಕೂಡ ಜನಪ್ರಿಯತೆ ಕಳೆದುಕೊಂಡಿತು. ಹೊಸದಾಗಿ ಏನಾದರೂ ಸೃಷ್ಟಿಸಬೇಕು, ಟ್ರೆಂಡಿಯಾಗಿರಬೇಕು ಅಂದುಕೊಂಡವರಿಗೆ ವರವಾಗಿ ಬಂದದ್ದು ಕೊರೋನಾವೈರಸ್ ಸೆಕ್ಸ್ ಅಥವಾ ಕೋವಿಡ್ ಸೆಕ್ಸ್.
ಕೊರೋನಾ ಸೆಕ್ಸ್ ಅಂದರೇನು ಅಂತ ಕೇಳುವವರಿಗೆ ಉತ್ತರಿಸುವುದು ಸುಲಭ. ಕೊರೋನಾ ವೈರಾಣು ಕಾಟದ ನಡುವೆ ಲೈಂಗಿಕ ತೃಪ್ತಿಗಾಗಿ ಕಂಡುಕೊಂಡ ಎಲ್ಲ ದಾರಿಯೂ ಕೊರೋನಾ ಸೆಕ್ಸೇ. ಅದರಲ್ಲಿ ನಾನಾ ಬಗೆಯ ಸೆಕ್ಸುಯಲ್ ಆಟಗಳು, ಆಡಿಯೋ ಪೋರ್ನ್‌ಗಳು ಕಂಡುಬಂದವು. ಕೆಲವರು ಮಾಸ್ಕ್ ಹಾಕಿಕೊಂಡು, ತುಟಿಗೆ ತುಟಿ ಸೇರಿಸದೆ ಸೆಕ್ಸ್ ಮಾಡಿದರು. ಇನ್ನು ಕೆಲವರು ದೂರದಿಂದಲೇ, ನೋಡಿಕೊಳ್ಳುತ್ತ ಹಸ್ತಮೈಥುನದಿಂದ ಸಂತೃಪ್ತಿ ಅನುಭವಿಸುವ ವಿಡಿಯೋ ಫಿಲಂಗಳನ್ನು ಮಾಡಿ ಅಪ್‌ಲೋಡ್ ಮಾಡಿದರು. ಈ ವಿಡಿಯೋಗಳಿಗೆ ಬೇಡಿಕೆಯೂ ಬಂತು ಅಂತ ಪೋರ್ನ್ ಇಂಡಸ್ಟ್ರಿಯ ಹಾಗೂ ಪೋರ್ನ್ ವೆಬ್‌ಸೈಟ್‌ಗಳ ದಾಖಲೆ ತೆಗೆದು ನೋಡಿದರೆ ಗೊತ್ತಾಗುತ್ತದೆ.
ವಾಸ್ತವವಾಗಿ, ಲೋಕದಲ್ಲಿ ಯಾವುದೇ ಮೇಜರ್ ಘಟನೆ ನಡೆದರೂ ಅದಕ್ಕೆ ಸಂಬಂಧಿಸಿ ಪೋರ್ನ್ ಸೈಟ್‌ಗಳಲ್ಲಿ ಅದೇ ಥೀಮ್‌ನ ವಿಡಿಯೋಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಅಮೆರಿಕದ ಅಧ್ಯಕ್ಷರ ಚುನಾವಣೆ ನಡೆದಾಗ ಅಲ್ಲಿದ್ದವರನ್ನೇ ಪಾತ್ರಗಳಂತೆ ಮಾಡಿದ ಪೋರ್ನ್ ಹುಟ್ಟಿಕೊಳ್ಳುತ್ತದೆ. ಹೀಗೆ ಕೋವಿಡ್ ಸಂದರ್ಭದಲ್ಲಿಯೂ ಕೋವಿಡ್ ಥೀಮಿನ ಸೆಕ್ಸ್ ಹುಟ್ಟಿಕೊಂಡದ್ದರಲ್ಲಿ ಆಶ್ಚರ್ಯವಿಲ್ಲ. ಈ ವಿಡಿಯೋಗಳು ತಮಾಷೆಯಾಗಿಯೂ ಇದ್ದವು. ಕೆಲವು ವಿಡಿಯೋಗಳು ಟ್ರೆಂಡ್‌ನ ಲಾಭ ಪಡೆಯುವುದಕ್ಕಾಗಿಯಷ್ಟೇ ಹೊಸ ಥೀಮ್‌ನ ಹೆಸರು ಜೋಡಿಸಿಕೊಂಡು ಬಂದಿದ್ದವಷ್ಟೇ.
ಹ್ಯಾಪಿ ರಿಲೇಶನ್‌ಶಿಪ್‌ನ ವೈಜ್ಞಾನಿಕ ಒಳಗುಟ್ಟು
ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಅತ್ಯಂತ ಬೇಡಿಕೆ ಕಂಡುಬಂದದ್ದು ಎಂದರೆ ಆಡಿಯೋ ಪೋರ್ನ್ ಕ್ಲಿಪ್‌ಗಳಿಗೆ. ಲಾಕ್‌ಡೌನ್ ಸಂದರ್ಭದಲ್ಲಿ ಸಂಗಾತಿಗಳು ಹೆಚ್ಚಾಗಿ ಮನೆಯಲ್ಲಿ ಇರುತ್ತಿದ್ದುದರಿಂದ ಏಕಾಂಗಿಯಾಗಿ ಪೋರ್ನ್ ವಿಡಿಯೋ ನೋಡಿ ಎಂಜಾಯ್ ಮಾಡಲು ಸಾಧ್ಯಾವಾಗದುದರಿಂದ, ಹೆಚ್ಚಿನವರು ಆಡಿಯೋ ಪೋರ್ನ್ ಮೊರೆ ಹೋದರು. ಆಡಿಯೋ ಪೋರ್ನ್ ಎಂದರೆ ಕೇವಲ ಲೈಂಗಿಕ ಕ್ರಿಯೆಯ ವರ್ಣನೆ ಮಾತ್ರವೇ ಅಲ್ಲ. ಅಲ್ಲೊಂದು ಕತೆಯಿರುತ್ತದೆ.
ರೊಮ್ಯಾಂಟಿಕ್ ಹಂತದಿಂದ ಎರೋಟಿಕ್ ಹಂತಕ್ಕೆ, ನಂತರ ಸೆಕ್ಸ್ ಹಂತಕ್ಕೆ ಅದು ಏರುವುದರಿಂದ, ಕೇಳುಗನಿಗೆ ಮೈ ಮನಸ್ಸು ತೃಪ್ತಿಯಾಗುವಂಥ ಕತೆ ಸಿಗುತ್ತದೆ. ಮೊದಮೊದಲು ನಮ್ಮಲ್ಲಿ ಚಕೋರಿ, ರತಿವಿಜ್ಞಾನ ಮುಂತಾದ ಸೆಕ್ಸ್ ಮ್ಯಾಗಜಿನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳಿ. ಎ ಫಿಲಂಗಳು ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳಿ. ಇಲ್ಲಿ ದೃಶ್ಯದ ಬದಲು ಆಡಿಯೋ ಇರುತ್ತದೆ ಅಷ್ಟೇ. ಹಾಗೆ ನೋಡಿದರೆ ವಿಡಿಯೋಕ್ಕಿಂತಲೂ ಒಂದು ರೀತಿಯಲ್ಲಿ ಆಡಿಯೋವೇ ಪವರ್‌ಫುಲ್ ಕೂಡ. ಯಾಕೆಂದರೆ ವಿಡಿಯೋ ನೋಡುವಾಗ ಕೇಳುಗನ ಕಲ್ಪನೆಗೆ ಜಾಗ ಇರೋದಿಲ್ಲ. ಆದರೆ ಆಡಿಯೋ ಕೇಳುವಾಗ ಕೇಳುಗನ ಕಲ್ಪನೆಗೆ ಎಷ್ಟೂ ಜಾಗವಿದೆ. ಆತ ಅಥವಾ ಆಕೆ ಅಲ್ಲಿ ಬರುವ ನಾಯಕ ಅಥವಾ ನಾಯಕಿಯ ಜಾಗದಲ್ಲಿ ತನಗೆ ಬೇಕಾದ ವ್ಯಕ್ತಿಯನ್ನು ಕಲ್ಪಿಸಿಕೊಂಡು ಸುಖಪಡಬಹುದು. ಫ್ಯಾಂಟಸಿಗೆ ಹೆಚ್ಚಿನ ಅವಕಾಶವಿದೆ. ಒಂದು ಊಹೆಯ ಪ್ರಕಾರ, ಆಡಿಯೋ ಸೆಕ್ಸ್‌ನ ಮಾರಾಟ ಈ ಅವಧಿಯಲ್ಲಿ ಎರಡು ಪಟ್ಟು ಹೆಚ್ಚಿದೆಯಂತೆ.
#Feelfree: ಪತ್ನಿ ಗೆಳತಿ ಜೊತೆಗೆ ಸರಸ ನಡೀತು, ಮುಂದೇನು ಕತೆ?
ಹಾಗಾದರೆ ಈ ಪೋರ್ನ್ ಇಂಡಸ್ಟ್ರಿಗೆ ಕೋವಿಡ್‌ನಂಥ ಅಪಾಯಕಾರಿ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಹೊಣೆ ಇಲ್ಲವೇ ಎಂದು ನೀವು ಕೇಳಬಹುದು. ಸಾಕಷ್ಟು ಪೋರ್ನ್ ಪ್ರೊಡ್ಯೂಸರ್‌ಗಳು ಸೋಶಿಯಲ್ ಡಿಸ್ಟೆನ್ಸ್, ಕ್ವಾರಂಟೈನ್, ಐಸೋಲೇಶನ್, ಸುರಕ್ಷತೆ ಹಾಗು ಸ್ವಚ್ಛತೆಯ ಸಂದೇಶವನ್ನೂ ಸಾರುವ ವಿಡಿಯೋಗಳನ್ನೂ ಮಾಡಿ ಹರಿಬಿಟ್ಟದ್ದು ಉಂಟು. ಆದರೆ ಅವುಗಳ ಸಂಖ್ಯೆ ಅಲ್ಪ. ಮೂಲತಃ ಈ ಉದ್ಯಮದ ಬೇಸ್‌ನಲ್ಲೇ ಸೋಶಿಯಲ್ ಡಿಸ್ಟೆನ್ಸಿಂಗ್ ಅನ್ನು ಧಿಕ್ಕರಿಸುವ ಸ್ವಭಾವ ಇದೆ.
ನಿಮ್ಮ ಸುತ್ತ ಪ್ರೇತಾತ್ಮಗಳಿವೆಯಾ? ತಿಳಿಯೋದು ಹೇಗೆ?