#Feelfree: ಪತ್ನಿ ಗೆಳತಿ ಜೊತೆಗೆ ಸರಸ ನಡೀತು, ಮುಂದೇನು ಕತೆ?
ಕೆಲವೊಮ್ಮೆ ಪತಿಯ ಗೆಳೆಯನ ಜೊತೆಗೆ ಪತ್ನಿಗೆ, ಪತ್ನಿಯ ಗೆಳತಿಯ ಜೊತೆ ಪತಿಗೆ ಪ್ರೇಮದ, ದೇಹದ ಸಂಬಂಧ ಶುರು ಆಗುವುದುಂಟು, ಇವುಗಳನ್ನು ನಿಭಾಯಿಸುವುದು ಹೇಗೆ?
ಪ್ರಶ್ನೆ: ನನಗೀಗ ನಲುವತ್ತು ವರ್ಷ. ನನ್ನ ಪತ್ನಿಗೆ ಮೂವತ್ತೈದು. ನಮ್ಮ ದಾಂಪತ್ಯದಲ್ಲಿ ಏನೂ ನ್ಯೂನತೆ ಇಲ್ಲ. ಇಬ್ಬರೂ ಪರಸ್ಪರ ಪ್ರೀತಿಸುತ್ತೇವೆ. ಕನಿಷ್ಠ ವಾರಕ್ಕೊಮ್ಮೆಯಾದರೂ ಸೆಕ್ಸ್ ನಮ್ಮ ಮಧ್ಯೆ ನಡೆಯುತ್ತದೆ. ಆದರೆ ಇತ್ತೀಚೆಗೆ ನನ್ನ ಪತ್ನಿಯ ಗೆಳತಿ ನನಗೆ ಹೆಚ್ಚು ಹತ್ತಿರವಾಗಿದ್ದಾಳೆ. ನನ್ನ ಮಡದಿ ಇಲ್ಲದ ವೇಳೆಯಲ್ಲಿ ಒಂದೆರಡು ಬಾರಿ ನಾವಿಬ್ಬರೂ ದೈಹಿಕವಾಗಿ ಕೂಡ ಹತ್ತಿರವಾಗಿ ಸೇರಿದ್ದೇವೆ. ಆಕೆಯ ದಾಂಪತ್ಯವೂ ಚೆನ್ನಾಗಿಯೇ ಇದೆ. ಮೊದಲ ಬಾರಿ ನಮ್ಮಿಬ್ಬರ ಮಿಲನ ನಡೆದಾಗ, ಛೇ, ನಾವಿಬ್ಬರೂ ನಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಿದ್ದೇವಲ್ಲ ಅನಿಸಿತ್ತು. ಆದರೆ ಎರಡನೇ ಬಾರಿ ಆ ವಂಚನೆಯ ಭಾವನೆಯನ್ನೂ ಮೀರಿ ನಮ್ಮಿಬ್ಬರ ದೇಹಗಳು ನಮ್ಮನ್ನು ಆಕರ್ಷಿಸಿದ್ದವು. ಈ ಭಾವನೆಯಿಂದ ಬಿಡುಗಡೆ ಹೇಗೆ? ಇದನ್ನು ನನ್ನ ಹೆಂಡತಿ ಮತ್ತು ಆಕೆಯ ಗಂಡನಿಗೆ ಗೊತ್ತಾಗದಂತೆ ನಿಭಾಯಿಸಲು ಸಾಧ್ಯವೇ?
ಉತ್ತರ: ನಿಮ್ಮ ಪ್ರಶ್ನೆ ಅತಾರ್ಕಿಕವಾಗಿದೆ. ಈ ಪ್ರಶ್ನೆಯಲ್ಲಿ, ನಿಮ್ಮಿಬ್ಬರ ಸಂಬಂಧದ ವಿವರಣೆ ಇದೆ; ಸಂಗಾತಿಗಳಿಗೆ ಮೋಸ ಮಾಡುತ್ತಿದ್ದೇವೇನೋ ಎಂಬ ಭಾವನೆಯೂ ಇದೆ. ಆದರೆ ಇನ್ನೂ ಕೂಡ ನೀವು ಅದರಿಂದ ಹೊರ ಬರಲು ಸಿದ್ಧರಿಲ್ಲ ಅನ್ನುವುದು ನಿಮ್ಮ ನಿಲುಮೆಯಿಂದ ಗೊತ್ತಾಗುತ್ತದೆ. ಅಂದರೆ ನೀವು, ಈ ಸಂಬಂಧವನ್ನು ನಮ್ಮಿಬ್ಬರ ಪತ್ನಿ ಮತ್ತು ಪತಿಗೆ ಗೊತ್ತಾಗದಂತೆ ನಿಭಾಯಿಸುವುದು ಹೇಗೆ ಎಂದು ಕೇಳಿದ್ದೀರಿ. ಅಂದರೆ ಮೋಸ ಮಾಡುವ ಈ ಸಂಬಂಧದಲ್ಲಿ ನೀವಿಬ್ಬರೂ ಅಪಾಯಕಾರಿಯಾದ ಸುಖ ಕಂಡುಕೊಳ್ಳುತ್ತಿದ್ದೀರಿ ಅನ್ನುವುದು ಗೊತ್ತಾಗುತ್ತದೆ.
ಆರಂಭದಲ್ಲಿ ಈ ಬಗೆಯ ದೈಹಿಕ ಸಂಬಂಧಗಳಿಂದ ಒಂದು ಬಗೆಯ ರೋಚಕತೆ ಸಿಗುತ್ತದೆ. ಇದರಲ್ಲಿ ಹೊಸತನ ಇರುತ್ತದೆ. ಅದೇ ಸಂಗಾತಿಯ ಜೊತೆಗಿನ ಸೆಕ್ಸ್‌ನ ಏಕತಾನತೆಯಿಂದ ಹೊರಬಂದು ವೆರೈಟಿ ಪಡೆದಂತೆ ಅನಿಸುತ್ತದೆ. ಅದು ರುಚಿಯಾಗಿಯೂ ಇರುತ್ತದೆ. ನಂತರ ಅದು ಅಭ್ಯಾಸವಾಗುತ್ತದೆ.
ಮೊದಲ ಬಾರಿ ನಡೆಯುವುದೂ ಆಕಸ್ಮಿಕ ಏನಲ್ಲ. ಇಬ್ಬರೂ ಹೊಸತೊಂದು ಸಂಬಂಧಕ್ಕೆ, ವಂಚನೆಗೆ ಸಿದ್ಧರಾಗಿಯೇ ಇರುವುದರಿಂದ ಈ ಸಂಬಂಧ ಹುಟ್ಟಿಕೊಳ್ಳುತ್ತದೆ ಅಷ್ಟೇ. ಅಂದರೆ ನಿಮ್ಮ ಮನಸ್ಸಿನ ಆಳದಲ್ಲಿ ಈ ಸಂಬಂಧ ಬೇಕೆಂದೇ ಇದೆ. ಬೇಡವೆಂದು ಅನಿಸಿದ್ದರೆ ನೀವು ಯಾವಾಗಲೋ ಇದರಿಂದ ಹೊರಬರಬೇಕಿತ್ತು. ಹೊರಬರುವುದು ಸುಲಭ ಕೂಡ. ಆದರೆ ನೀವು ಅದಕ್ಕೆ ಸಿದ್ಧರಿಲ್ಲ. ನಿಮಗೆ ಹೊಸ ಸಂಬಂಧದಿಂದ ಸಿಕ್ಕುವ ರೋಚಕತೆಯೂ ಬೇಕು, ಅದರಿಂದ ಉಂಟಾಗುವ ಪಾಪಪ್ರಜ್ಞೆಯಲ್ಲಿ ಮೀಯುವುದೂ ಬೇಕು.
#FeelFree: ಚೆಂದುಳ್ಳಿ ಹೆಂಡ್ತಿ ಇದ್ರೂ ಗಂಡ ಹಸ್ತ ಮೈಥುನ ಮಾಡ್ಕೋತಾನಲ .
ಇದನ್ನು ಊಹಿಸಿಕೊಳ್ಳಿ- ನೀವಿಬ್ಬರೂ ಒಮ್ಮೆ ಸೇರಿರುವಾಗ ನಿಮ್ಮ ಪತ್ನಿಯೋ ಅಥವಾ ಆಕೆಯ ಗಂಡನೋ ಬಂದರು ಎಂದಿಟ್ಟುಕೊಳ್ಳಿ. ಆಗ ಏನಾಗುತ್ತದೆ? ಖಂಡಿತವಾಗಿಯೂ ನಿಮ್ಮಿಬ್ಬರ ದಾಂಪತ್ಯ ಮುರಿದುಬೀಳುತ್ತದೆ. ಭೌತಿಕವಾಗಿ ಮುರಿಯಬಹುದು; ಇಲ್ಲವಾದರೆ ಮಾನಸಿಕವಾಗಿಯಂತೂ ಮುರಿಯುವುದು ಖಂಡಿತ. ಇದರಲ್ಲಿ ವೇದನೆ ಅನುಭವಿಸುವವರು ನೀವು ನಾಲ್ವರು. ಮಾತ್ರವಲ್ಲ, ನಿಮ್ಮ ಮಕ್ಕಳು, ನಿಮ್ಮ ಬಂಧುಗಳು ಕೂಡ. ಮುಂದೆ ಎಂದೆಂದೂ ನೀವು ಗಂಡ ಹೆಂಡತಿ ಕೂಡ ಸ್ವಚ್ಛಂದವಾಗಿ ಒಂದಾಗುವುದು ಸಾದ್ಯವಿಲ್ಲ. ಡೈವೋರ್ಸ್ ಆಗಿಬಿಟ್ಟರಂತೂ ನಿಮ್ಮ ಮಕ್ಕಳ ಸ್ಥಿತಿ ಕೂಡ ನರಕ ಆಗಿಬಿಡುತ್ತದೆ. ಸಮಾಜದಲ್ಲಿ, ಬಂಧುಗಳ ಮುಂದೆ, ಕಚೇರಿಯಲ್ಲಿ ಕೂಡ ತಲೆಯೆತ್ತಿ ಓಡಾಡಲಾಗದಂತೆ ಆಗುತ್ತದೆ. ಇದೆಲ್ಲ ಬೇಕಾ?
#Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!
ಬಿಡುವುದು ಹೇಗೆ ಎಂದು ಕೇಳಿದ್ದೀರಿ. ಸುಲಭ. ಇಬ್ಬರೂ ಒಮ್ಮೆ ಅಂತಿಮವಾಗಿ ಮಾತಾಡಿಕೊಳ್ಳಿ. ಇನ್ನು ಮುಂದೆ ಪರಸ್ಪರ ಮುಖ ನೋಡುವುದಿಲ್ಲ ಎಂದು ತೀರ್ಮಾನಿಸಿಕೊಳ್ಳಿ. ಬೇರೆಯಾಗುವುದು ಎಂಬ ಮಾತು ಕಡ್ಡಿ ಮುರಿದಂತಿರಲಿ. ಅದರಲ್ಲಿ ಯಾವ ರಾಜಿಯೂ ಬೇಡ. ಇದುವರೆಗೂ ರಹಸ್ಯ ಹೊರಬೀಳದಂತೆ ಕಾಪಾಡಿಕೊಂಡಿದ್ದೀರಿ. ಅದು ನಿಮ್ಮ ಆಯುಷ್ಯದ ಕಡೆಯವರೆಗೂ ಹಾಗೆಯೇ ಇರಲಿ. ಸಂಗಾತಿಗೆ ಹೇಳಿ ನಿಮ್ಮ ಸಂಸಾರವನ್ನು ನೀವಾಗಿ ಕೆಡಿಸಿಕೊಳ್ಳಬೇಡಿ. ಆದ ಪ್ರಮಾದ ಹಾಗೆಯೇ ತೆರೆಯಂಚಿಗೆ ಸರಿಯಲಿ. ಮುಂದೆಂದೂ ಅದನ್ನು ನೆನಪಿಸಿಕೊಳ್ಳಲು, ಸವರಿಕೊಳ್ಳಲು ಹೋಗಬೇಡಿ. ಆಕೆಯ ಜೊತೆ ಪಡೆಯುತ್ತಿದ್ದ ಸುಖವನ್ನು ನಿಮ್ಮ ಪತ್ನಿಯಲ್ಲೇ ಪಡೆಯಲು ಸಂಕಲ್ಪ ಮಾಡಿ. ಸೆಕ್ಸ್‌ನಲ್ಲಿ ವೈವಿಧ್ಯವನ್ನು ತನ್ನಿ. ಅನಿವಾರ್ಯವೆನಿಸಿದರೆ ಸೆಕ್ಸ್‌ನಲ್ಲಿ ಫ್ಯಾಂಟಸಿ ಸೇರಿಸಿಕೊಳ್ಳಿ.
#Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು!