Asianet Suvarna News Asianet Suvarna News

ನಿಮ್ಮ ಕ್ರಶ್‌ ಒಲಿಸ್ಕೊಳೋಕೆ ನಿಮಗೆ ಸಾಧ್ಯ! ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿರಲಿ

ನಿಮ್ಮ ಕ್ರಶ್‌ ಗೆ ನಿಮಗಿರುವ ಪ್ರೀತಿ, ಆಕರ್ಷಣೆಯನ್ನು ತಿಳಿಯಪಡಿಸಬೇಕೆ? ಅದಕ್ಕಾಗಿ ಕೆಲವು ಮಾರ್ಗ ಅನುಸರಿಸಿ. ಇಷ್ಟು ದಿನ ಕೇವಲ ಸ್ನೇಹಿತರಾಗಿದ್ದವರು ಮುಂದೆ ಜೀವನದ ಸಂಗಾತಿಗಳಾಗಲು ಸಾಧ್ಯವಾಗುತ್ತದೆ. 
 

If you follow these tips you can get your crushs love
Author
First Published Oct 2, 2022, 4:21 PM IST

ನೀವು ಇಷ್ಟಪಡುವವರು ನಿಮ್ಮ ಸ್ನೇಹಿತರ ವಲಯದಲ್ಲೇ ಇದ್ದರೂ ನಿಮ್ಮ ಪ್ರೀತಿಯನ್ನು ಗುರುತಿಸುತ್ತಿಲ್ಲ ಎಂದಾದರೆ ಅದಕ್ಕಿಂತ ದೊಡ್ಡ ಹಿಂಸೆ ಬೇರೊಂದಿಲ್ಲ. ನಿಮಗೆ ಅವರ ಬಗ್ಗೆ ಸೆಳೆತ, ಆಕರ್ಷಣೆ, ಪ್ರೀತಿ ಎಲ್ಲವೂ ಇದ್ದರೂ ಅದನ್ನು ಅವರು ಗುರುತಿಸಲು ಹಲವು ಕಾರಣದಿಂದ ವಿಫಲರಾಗಬಹುದು. ಅಥವಾ ಅವರಿಗೆ ಬೇರೊಬ್ಬರ ಬಗ್ಗೆ ಸೆಳೆತ ಇರಬಹುದು ಅಥವಾ ನಿಮ್ಮ ಮನದಲ್ಲಿ ಇಂಥದ್ದೊಂದು ಭಾವನೆ ಇದೆ ಎನ್ನುವುದು ಅವರು ಅಂದಾಜಿಸಿರಲಿಕ್ಕಿಲ್ಲ. ಹಿಂದಿನ ಸ್ನೇಹಭಾವದಿಂದ ಮಾತ್ರ ನಿಮ್ಮನ್ನು ಕಂಡಿರಬಹುದು. ಹೀಗಾಗಿ, ನಿಮ್ಮೊಂದಿಗೆ  ಎಂದಿನಂತೆಯೇ ಸಾಮಾನ್ಯ ಸ್ನೇಹಿತರಂತೆ ವರ್ತಿಸಬಹುದು. ಆದರೆ, ಈ ಸಮಯದಲ್ಲಿ ನೀವು ಧೈರ್ಯ ಮಾಡಿ ನಿಮ್ಮ ಆಕರ್ಷಣೆಯನ್ನು ಅವರಿಗೆ ಮನದಟ್ಟು ಮಾಡಿಸಬೇಕಾಗುತ್ತದೆ. ಅದಕ್ಕಾಗಿ ಭಾರೀ ಏನೋ ಸಾಹಸ ಮಾಡಬೇಕಾಗಿಲ್ಲ. ಕೆಲವು ಟಿಪ್ಸ್‌ ಅನುಸರಿಸಿದರೆ ಸಾಕು. ಅವರಿಗೂ ಸಹ ನಿಮ್ಮ ಬಗ್ಗೆ ಆಸಕ್ತಿ ಮೂಡಲು ಇದರಿಂದ ಸಹಾಯವಾಗುತ್ತದೆ. ಹಾಗೂ ಅವರಿಗೆ ಒಂದೊಮ್ಮೆ ಮನದಲ್ಲೆಲ್ಲೋ ನಿಮ್ಮ ಬಗ್ಗೆ ಸ್ವಲ್ಪ ಆಸಕ್ತಿ ಇದ್ದರೆ ಅದು ಚಿಗುರುತ್ತದೆ. ಅಲ್ಲದೆ, ನಿಮ್ಮ ಭಾವನೆ ಅವರಿಗೆ ಅರಿವಾಗಲು ಸಾಧ್ಯವಾಗುತ್ತದೆ.

•    ಹೊಗಳಿಕೆಗಳ (Compliments) ಸರಮಾಲೆ ಹಾಕಿ!
ಸಾಮಾನ್ಯವಾಗಿ ಸ್ನೇಹಿತರು (Friends) ಪರಸ್ಪರ ಹೊಗಳಿಕೊಳ್ಳುವುದು ಕಡಿಮೆ. ಒಂದೊಮ್ಮೆ ಹೊಗಳಿದರೂ ಅದು ತಮಾಷೆ ಮಾಡಿದಂತೆ ಇರುತ್ತದೆ. ಆದರೆ, ನೀವು ಹಾಗೆ ಮಾಡಬೇಡಿ. ನಿಮಗೆ ನಿಜವಾಗಿಯೂ ಅವರೊಂದಿಗೆ ಇನ್ನೊಂದು ಹೆಜ್ಜೆ ಮುಂದಿನ ಸಂಬಂಧಕ್ಕೆ (Relation) ಅಡಿ ಇಡಬೇಕೆಂದು ಮನಸ್ಸಿದ್ದರೆ ಅವರನ್ನು ಮುಕ್ತವಾಗಿ ಹೊಗಳಿ. ಅವರ ಬಗ್ಗೆ ಪ್ರೀತಿ (Love), ಆಸಕ್ತಿ (Interest) ಇದೆ ಎನ್ನುವುದನ್ನು ಪರೋಕ್ಷವಾಗಿ ತೋರಿಸಿಕೊಳ್ಳಿ. ಯಾವ ಕಾರಣಕ್ಕಾಗಿ ಅವರು ಇಷ್ಟ ಎನ್ನುವುದನ್ನು ಸಂದರ್ಭ ಬಂದಾಗಲೆಲ್ಲ ಹೇಳಿ. ಅವರ ಡ್ರೆಸ್‌ (Dress) ಹೇಗಿದೆ, ಹೇಗೆ ವಿಶಿಷ್ಟವಾಗಿ ಕಾಣುತ್ತಿದ್ದಾರೆ ಎನ್ನುವುದನ್ನು ಹೊಗಳಿ ನೋಡಿ. ಆತ್ಮೀಯವಾಗಿ ಸ್ಪರ್ಶಿಸಿ (Touch). ಸ್ನೇಹಿತರಾಗಿ ಹಗ್‌ (Hug) ಮಾಡಿಕೊಳ್ಳುವ ಅಭ್ಯಾಸ ಇದ್ದರೆ ಅದರಲ್ಲಿ ಬೇರೊಂದು ಆಪ್ತ ಭಾವ ತುಂಬಿ. ಅವರ ಕಣ್ಣುಗಳನ್ನು ನೋಡಿ ಇಷ್ಟಪಡಿ, ಮಾತನಾಡಿ. ನಿಮ್ಮ ಪ್ರಯತ್ನಕ್ಕೆ ತೀವ್ರತೆ ಬೇಡ, ಸೂಕ್ಷ್ಮತೆ ಇರಲಿ.

ಅಂದ್ರೆ…. ನಿಮ್ಮ ಕ್ರಶ್‌ಗೂ ನಿಮ್ ಮೇಲೆ ಲವ್ ಆಗಿದೆ !

•    ಇದ್ದಕ್ಕಿದ್ದ ಹಾಗೆ ಬ್ಯುಸಿಯಾಗಿ (Keep Distance) ಬಿಡಿ!
ಮೊದಲ ಹಂತದ ಪ್ರಯತ್ನದ ಬಳಿಕ, ಅವರಿಗೆ ನಿಮ್ಮ ಮನದ ಭಾವದ (Feelings) ಬಗ್ಗೆ ಒಂದಿಷ್ಟು ಅಂದಾಜಾದ ಬಳಿಕ ಅವರಿಂದ ಕೆಲವೊಮ್ಮೆ ದೂರವಿರಿ. ಮೊದಲು ಹತ್ತಿರವಿದ್ದು, ಖುಷಿಖುಷಿಯಾಗಿ ಮಾತನಾಡಿ, ಹಗುರವಾಗಿಸುತ್ತಿದ್ದ ಜೀವ ಇದ್ದಕ್ಕಿದ್ದ ಹಾಗೆ ಇಲ್ಲವಾದರೆ ಅವರಿಗೆ ಏನೋ ಕಳೆದುಕೊಂಡ ಭಾವನೆ ದಟ್ಟವಾಗುವುದು ಗ್ಯಾರೆಂಟಿ. ಆಗ ಅವರು ಅದನ್ನು ಮರುಭೇಟಿಯಲ್ಲಿ ತೋರಿಸಿಕೊಳ್ಳುತ್ತಾರೆ. ತೋರಿಸಿಕೊಳ್ಳದಿದ್ದರೆ ನಿಮ್ಮ ಹಿಂದಿನ ಪ್ರಯತ್ನಗಳು ಸಫಲವಾಗಿಲ್ಲ ಎಂದರ್ಥ. ಹಾಗೆಯೇ ಅವರ ಬಗ್ಗೆ ಮರುವಿಮರ್ಶೆ ಮಾಡುವುದು ಒಳಿತು. ಅಲ್ಲದೆ, ಹೀಗೆ ಕೆಲವೊಮ್ಮೆ ಅಂತರ ಕಾಯ್ದುಕೊಳ್ಳುವುದರಿಂದ ನಿಮಗೂ ಅವರ ಕುರಿತಾದ ಭಾವನೆಗಳ ಬಗ್ಗೆ ಸ್ಪಷ್ಟತೆ ಮೂಡುತ್ತದೆ.

•    ಅವರಿಗೆ ಅಸೂಯೆ (Jealousy) ಆಗ್ಬೇಕು!
ಕೆಲವೊಮ್ಮೆ ಅವರು ಅಸೂಯೆ ಪಡುವಂತೆ ವರ್ತಿಸಿ. ಅರ್ಥಾತ್‌, ನೀವು ಅವರೆದುರು ಅತ್ಯಂತ ಖುಷಿ (Happy)ಯಾಗಿರಿ, ಅವರು ಮಾತ್ರವಲ್ಲ, ಎಲ್ಲ ಸ್ನೇಹಿತರೊಂದಿಗೂ ಖುಷಿಯಾಗಿ ಬೆರೆಯಿರಿ. ಇದರಿಂದ ಅವರು ನಿಮ್ಮ ಬಗ್ಗೆ ಸ್ವಲ್ಪವಾದರೂ ಅಸೂಯೆ ಪಡುತ್ತಾರೆ. ಹಾಗೂ ನಿಮ್ಮನ್ನು ಮಿಸ್‌ (Miss) ಮಾಡಿಕೊಳ್ಳಲು ಆರಂಭಿಸುತ್ತಾರೆ. ನೀವು ಇತರ ಸ್ನೇಹಿತರ ಜತೆ ಖುಷಿಯಾಗಿ ಕಾಲ ಕಳೆಯುವುದನ್ನು ನೋಡಿ ಅವರು ಅಸೂಯೆ ಮಟ್ಟರೆ ನಿಮ್ಮ ಪ್ರಯತ್ನ ಫಲಿಸುತ್ತಿದೆ ಎಂದೇ ಅರ್ಥ.

ದಕ್ಷಿಣ ಭಾರತದ ಈ ಸ್ಟಾರ್ ತನ್ನ ಕ್ರಶ್ ಎಂದ ರಮ್ಯಾ ಕೃಷ್ಣನ್; ಯಾರು ಆ ನಟ?

•    ನಿಮ್ಮ ಸಾಮರ್ಥ್ಯ (Capacity) ಹೆಚ್ಚಿಸಿಕೊಳ್ಳಿ
ಈ ಸಮಯದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯತ್ನಿಸಿ. ಕ್ರಶ್‌ ಸೆಳೆಯಲು ನೀವು ಇಷ್ಟೆಲ್ಲ ಪ್ರಯತ್ನ ಪಡುತ್ತಿರುವುದು ಅವರಿಗಾಗಿ ಮಾತ್ರವಲ್ಲ. ನಿಮ್ಮದೇ ಸಂತಸಕ್ಕಾಗಿ. ಈಗ ಅವರು ನಿಮ್ಮತ್ತ ಒಲಿಯುವ ಸಾಧ್ಯತೆ ಹೆಚ್ಚಿರುತ್ತದೆ. ಎಂದಿಗೂ ಆತ್ಮವಿಶ್ವಾಸ (Self Confidence) ಕಳೆದುಕೊಳ್ಳಬೇಡಿ, ನಿರಾಶರಾಗಬೇಡಿ. 
 

Follow Us:
Download App:
  • android
  • ios