ಅಂದ್ರೆ…. ನಿಮ್ಮ ಕ್ರಶ್‌ಗೂ ನಿಮ್ ಮೇಲೆ ಲವ್ ಆಗಿದೆ !
ಕ್ರಶ್ ಯಾವಾಗ, ಯಾರ ಮೇಲೆ ಬೇಕಾದರೂ ಆಗುತ್ತೆ ಅಲ್ವಾ? ಆದರೆ ಅದೇ ಕ್ರಶ್ ಲವರ್ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಆದ್ರೆ ಇದು ಹೆಚ್ಚಾಗಿ ಸಾಧ್ಯಾನೆ ಇರೋದಿಲ್ಲ, ಯಾಕಂದ್ರೆ ಕ್ರಶ್ ಕ್ರಶ್ ಆಗಿಯೇ ಉಳಿಯುತ್ತಾರೆ. ನಿಮ್ಮ ಕ್ರಶ್ ಪ್ರಪೋಸ್ ಮಾಡಲು ನೀವು ಬಯಸಿದರೆ, ಆದರೆ ಅವರು ನಿಮ್ಮನ್ನು ಲವ್ ಮಾಡುತ್ತಿದ್ದಾರೋ? ಇಲ್ಲವೋ ಎಂದು ನಿಮಗೆ ತಿಳಿಯದೇ ಇದ್ದರೆ ಅದನ್ನು ಫೈಂಡ್ ಔಟ್ ಮಾಡೋದು ಹೇಗೆ? ಪ್ರಫೋಸ್ ಮಾಡಿದ ಮೇಲೆ ನಾಚಿಗೆ ಪಡೋದಕ್ಕಿಂತ, ಅದಕ್ಕೂ ಮುನ್ನ ಅವರಿಗೆ ಇಷ್ಟ ಇದೆಯೇ ಅನ್ನೋದು ತಿಳಿದುಕೊಳ್ಳೋದು ಮುಖ್ಯ ಅಲ್ವಾ?
Love
ನಿಮ್ಮ ಕ್ರಶ್ ಬಗ್ಗೆ ನೀವು ಏನು ಯೋಚಿಸುತ್ತೀರಿ, ನಿಮ್ಮ ಕ್ರಶ್ ಕೂಡ ನಿಮ್ಮ ಬಗ್ಗೆ ಅದನ್ನೇ ಯೋಚಿಸುತ್ತಾರೆಯೇ?. ನಿಮಗೆ ನಿಮ್ಮ ಫ್ರೆಂಡ್ ಮೇಲೆ ಅಥವಾ ಇನ್ಯಾರದ್ದೋ ಮೇಲೆ ಕ್ರಶ್ ಆಗಿರಬಹುದು. ಆದರೆ ಅವರಿಗೂ ನಿಮ್ಮ ಮೇಲೆ ಕ್ರಶ್ ಆಗಿದೆ ಅನ್ನೋದಕ್ಕೆ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಕ್ರಶ್‌ಗೆ ಪ್ರಪೋಸ್ ಮಾಡಲು ನೀವು ಮನಸ್ಸು ಮಾಡಿದಾಗಲೆಲ್ಲಾ, ಮೊದಲನೆಯದಾಗಿ, ಅವರು ಸಹ ನಿಮ್ಮ ಬಗ್ಗೆ ಪ್ರೀತಿ, ಕ್ರಶ್ ಹೊಂದಿದ್ದಾರೆಯೇ? ಅನ್ನೋದನ್ನು ತಿಳಿಯೋದು ಮುಖ್ಯ. ಅದನ್ನು ಹೇಗೆ ಕಂಡು ಹಿಡಿಯೋದು ನೋಡೋಣ.
ನಿಮ್ಮ ಜೊತೆ ಮಾತನಾಡುವುದು
ನಿಮ್ಮ ಕ್ರಶ್ ನೀವು ಯೋಚಿಸುವ ರೀತಿಯಲ್ಲಿ ನಿಮ್ಮ ಬಗ್ಗೆ ಯೋಚಿಸಿದರೆ, ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ. ಅವರ ಮಾತುಗಳು ಕೊನೆಗೊಳ್ಳುವುದೇ ಇಲ್ಲ. ಅವರಿಗೂ ನಿಮ್ಮ ಮೇಲೆ ಲವ್ ಇದೆಯೇ ಎಂದು ತಿಳಿಯಲು, ಅವರಿಗೆ ಮೆಸೇಜ್ ಮಾಡಿ, ಅವರ ಜೊತೆ ಮಾತನಾಡಿ, ಅವರು ಕೂಡ ಯಾವುದೇ ಟೈಮ್ ನಲ್ಲೂ ನಿಮ್ಮ ಜೊತೆ ಮಾತನಾಡಲು ಒಪ್ಪಿದರೆ, ಅವರಿಗೆ ನಿಮ್ಮ ಮೇಲೆ ಲವ್ ಆಗಿದೆ ಎಂದು ಅರ್ಥ.
ಭೇಟಿಯಾಗಲು ಸಿದ್ಧ
ನಿಮ್ಮ ಕ್ರಶ್ ನಿಮ್ಮನ್ನು ಎಲ್ಲಾ ಸಮಯದಲ್ಲೂ ಭೇಟಿಯಾಗಲು ಸಿದ್ಧವಾಗಿದ್ದರೆ ಮತ್ತು ನಿಮ್ಮನ್ನು ಮೀಟ್ ಮಾಡೋದು ಅವರಿಗೆ ತುಂಬಾ ಇಷ್ಟ ಅನ್ನೋದಾದ್ರೆ ಇದನ್ನು ನೀವು ಲವ್ ಅನ್ನಬಹುದು. ಅವನು ಮತ್ತೆ ಮತ್ತೆ ಭೇಟಿಯಾಗುವ (Meeting) ಬಗ್ಗೆ ಮಾತನಾಡಿದರೆ, ಆಗ ಅವನ ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿಯಿದೆ ಎಂದು ಅರ್ಥಮಾಡಿಕೊಳ್ಳಿ. ಅಂದರೆ, ಏನೋ ನಡೆಯುತ್ತಿದೆ.
ನಿಕ್ ನೇಮ್ ಇಡೋದು
ನಿಮ್ಮ ಕ್ರಶ್ ನಿಮ್ಮನ್ನು ನಿಕ್ ನೇಮ್ ನಿಂದ (Nick Name) ಕರೆದರೆ, ಅವರ ಫೋನಿನಲ್ಲಿ ನಿಮ್ಮ ನಿಕ್ ನೇಮ್‌ನಿಂದ ಫೋನ್ ನಂಬರ್ ಸೇವ್ ಮಾಡಿದರೆ, ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಬೇಕು. ಕ್ರಶ್ ನಿಮ್ಮೊಂದಿಗೆ ಅಟ್ಯಾಚ್ಮೆಂಟ್ ಹೊಂದಿದ್ದು ಮತ್ತು ನಿಮಗೆ ಹತ್ತಿರವಾಗಲು ಬಯಸುತ್ತಿದ್ದಾರೆ ಅನ್ನೋದನ್ನು ತಿಳಿದುಕೊಂಡ್ರೆ ಉತ್ತಮ.
ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳೋದು
ನಿಮ್ಮ ಕ್ರಶ್ ನಿಮ್ಮೊಂದಿಗೆ ವೈಯಕ್ತಿಕ ವಿಷಯಗಳನ್ನು (personal things) ಹಂಚಿಕೊಳ್ಳಲು ಪ್ರಾರಂಭಿಸಿದಾಗಲೆಲ್ಲಾ, ಅವನು ನಿಮ್ಮನ್ನು ಪ್ರೀತಿಸುತ್ತಿರಬಹುದು. ಏಕೆಂದರೆ ಯಾವುದೇ ವ್ಯಕ್ತಿ ತನ್ನ ಪ್ರತಿಯೊಂದೂ ವಿಷಯವನ್ನು ಹೃದಯಕ್ಕೆ ಹತ್ತಿರವೆಂದು ಪರಿಗಣಿಸಿದ ವ್ಯಕ್ತಿಯೊಂದಿಗೆ ಮಾತ್ರ ಹೇಳುತ್ತಾನೆ.
Emoji ಯಿಂದ ಪ್ರೀತಿಯ ಸಂದೇಶ
ನಿಮ್ಮ ಕ್ರಶ್ ಮೆಸೇಜ್ ಮಾಡುವಾಗ ನಿಮ್ಮೊಂದಿಗೆ emoji ಗಳನ್ನು ಹಂಚಿಕೊಂಡರೆ. ಮೆಸೇಜ್ ಅಥವಾ ಚಾಟ್ ಸಮಯದಲ್ಲಿ ಅವರು emoji ಯನ್ನು ಹೆಚ್ಚು ಬಳಸಿದರೆ, ಅದು ನಿಮ್ಮ ಮೇಲೆ ಅವರಿಗೂ ಕ್ರಶ್ ಆಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಅವರು ತಮ್ಮ ಹೃದಯದ ಸಂದೇಶವನ್ನು ಎಮೋಜಿಗಳ ಮೂಲಕ ನಿಮಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ ಅನ್ನೋದನ್ನು ತಿಳಿಯಿರಿ.