ಸಂಗಾತಿಯ ತಪ್ಪು ಹುಡುಕೋದ್ರಲ್ಲಿ ನಿಸ್ಸೀಮರು ಈ 4 ರಾಶಿಯವರು!

ಸಂಗಾತಿಯ ತಪ್ಪುಗಳನ್ನು ಗುರುತಿಸುವಲ್ಲಿ ಎಲ್ಲರೂ ಮುಂದಿರುತ್ತಾರೆ. ಪತಿ ಪತ್ನಿಯ, ಪತ್ನಿ ಪತಿಯ ವರ್ತನೆಗಳಲ್ಲಿ ತಪ್ಪುಗಳನ್ನು ಕಂಡು ಹಿಡಿಯುವುದು ಸಹಜವೂ ಹೌದು. ಆದರೆ, ಈ ನಾಲ್ಕು ರಾಶಿಯವರು ಮಾತ್ರ ಸಂಗಾತಿಯ ತಪ್ಪುಗಳನ್ನು ಎತ್ತಿ ಆಡುವ ಗುಣ ಹೊಂದಿರುತ್ತಾರೆ.
 

Leo to Sagittarius these zodiac signs constantly find faults of their partner

ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರನ್ನು, ಸಂಗಾತಿಯನ್ನು (Partner) ಒಂದಿಲ್ಲೊಂದು ವಿಚಾರದಲ್ಲಿ ದೂರುತ್ತಾರೆ. ತಮ್ಮನ್ನು ಸರಿಯಾಗಿ ಗಮನಿಸಲಿಲ್ಲವೆಂದೋ, ಸರಿಯಾಗಿ ಕಾಳಜಿ ವಹಿಸುವುದಿಲ್ಲವೆಂದೋ, ಸುಳ್ಳು ಹೇಳುತ್ತಾರೆಂದೋ... ಏನೋ ಒಂದು. ಒಟ್ಟಿನಲ್ಲಿ ಸಂಗಾತಿಯಲ್ಲಿ ಯಾವುದಾದರೊಂದು ದೋಷ (Fault) ಕಂಡೇ ಕಾಣುತ್ತದೆ. ಆದರೆ, ಕೆಲವರು ಎಲ್ಲ ಬಾರಿಯೂ ಸಂಗಾತಿಯನ್ನು ದೂರಲು (Complaint) ಹೋಗುವುದಿಲ್ಲ. ಅವರಿಗೆ ಬೇಸರವಾಗಬಹುದು ಎನ್ನುವ ಎಚ್ಚರಿಕೆಯಲ್ಲಿ ದೂರುಗಳನ್ನು ಅವರೆದುರು ಬಿಚ್ಚಿಡುವುದಿಲ್ಲ. ಆದರೆ, ಇನ್ನು ಕೆಲವರಿರುತ್ತಾರೆ. ಅವರು ಚಿಕ್ಕಪುಟ್ಟ ವಿಚಾರಕ್ಕೂ ಸಂಗಾತಿಯನ್ನು ದೂರುತ್ತ ಇರುತ್ತಾರೆ. ಹೀಗೆ ದೂರು ಸ್ವಭಾವ ನಿಮ್ಮ ನಿಮ್ಮ ರಾಶಿ (Zodiac Signs) ಗಳನ್ನು ಅವಲಂಬಿಸಿದೆ ಎಂದರೆ ಅಚ್ಚರಿಯಾಗಬಹುದು.

ನಿಮ್ಮ ಸಂಗಾತಿ ನಿಮ್ಮನ್ನು ಎಲ್ಲ ವಿಚಾರಕ್ಕೂ ದೂರುತ್ತಾರೆಯೇ? ಹಾಗಾದರೆ ಅವರು ಈ ನಾಲ್ಕು ರಾಶಿಗಳಲ್ಲಿ ಯಾವುದಾದರೂ ಒಂದು ರಾಶಿಗೆ ಸೇರಿರಬಹುದು! ಸಂಗಾತಿಯನ್ನು ಎಗ್ಗಿಲ್ಲದೆ ದೂರುವ, ಅವರಲ್ಲಿ ತಪ್ಪುಗಳನ್ನು ಹುಡುಕಿ ಆಡುವವರಲ್ಲಿ ಈ ನಾಲ್ಕು ರಾಶಿಗಳ ಜನರೇ ಹೆಚ್ಚು. 

•    ಸಿಂಹ (Leo)
ಸಿಂಹ ರಾಶಿಯವರು “ಎಲ್ಲವನ್ನೂ ತಿಳಿದಿರುತ್ತಾರೆ’! ಅರ್ಥಾತ್, ಅವರು “ತಮಗೆಲ್ಲ ತಿಳಿದಿದೆ’ ಎನ್ನುವ ಭಾವನೆ ಹೊಂದಿರುತ್ತಾರೆ. ಯಾರನ್ನಾದರೂ ಮೆಚ್ಚಿಕೊಳ್ಳುವ ಬದಲು ಅವರು ಹೇಗಿರಬೇಕು ಎನ್ನುವ ಬಗ್ಗೆ ಉಪನ್ಯಾಸ (Lecture) ಕೊಡುತ್ತಾರೆ. ಸದಾಕಾಲ ಸಲಹೆ ನೀಡುತ್ತಾರೆ. ತುಂಬ ಚಾರ್ಮಿಂಗ್ (Charming) ನೇಚರ್ ಹೊಂದಿರುವ ಸಿಂಹದ ರಾಶಿಯವರು ತಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಿಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಹೀಗಾಗಿ, ಅವರು ತಮ್ಮ ಸಂಗಾತಿಯ  ತಪ್ಪುಗಳನ್ನು ಹುಡುಕುವಲ್ಲಿ ಮುಂದಿರುತ್ತಾರೆ. ಈ ಮೂಲಕ ಅವರು ಸಂಬಂಧದಲ್ಲಿ ತಾವೇ ಗ್ರೇಟ್ ಎನ್ನುವಂತೆ ನಡೆದುಕೊಳ್ಳುತ್ತಾರೆ. ಸಂಗಾತಿಯ ತಪ್ಪುಗಳನ್ನು ಟೀಕಿಸಿ ತಾವು ಮುಂಚೂಣಿಯಲ್ಲಿರುವುದು ಅವರಿಗೆ ಇಷ್ಟ.

•    ಕನ್ಯಾ ರಾಶಿ (Vigro)
ಕನ್ಯಾರಾಶಿಯವರಷ್ಟು ನಿಖರವಾಗಿ (Perfect) ಹಾಗೂ ಚುರುಕಾಗಿ ಇತರರ ತಪ್ಪುಗಳನ್ನು ಕಂಡುಹಿಡಿಯುವ ನಿಸ್ಸೀಮರು ಯಾರೂ ಇಲ್ಲ. ನೀವು ನೋಡಿರಬಹುದು, ಕನ್ಯಾರಾಶಿಯವರು ಉಳಿದೆಲ್ಲರಿಗಿಂತ ಬಹು ಬೇಗ ಇತರರ ತಪ್ಪುಗಳನ್ನು ಕಂಡು ಹಿಡಿಯುತ್ತಾರೆ. ಅವರು ಗುರುತಿಸುವ ತಪ್ಪುಗಳು ನಿಖರವಾಗಿಯೂ ಇರುತ್ತವೆ. ಈ ರಾಶಿಯಲ್ಲಿ ಜನಿಸಿದವರು  ಇಂಥದ್ದೊಂದು ವಿಲಕ್ಷಣವಾದ ಶಕ್ತಿ ಹೊಂದಿರುತ್ತಾರೆ. ಪ್ರೀತಿಪಾತ್ರರಿಂದ ಸಲಹೆ ಬಂದರೆ ಅದನ್ನು ಕೇಳಿಸಿಕೊಳ್ಳುವ ಅಗತ್ಯ ಅವರಿಗೆ ಇರುವುದಿಲ್ಲ. 

ಅಯ್ಯಪ್ಪಾ, ಡೇಂಜರ್! ಹೆಚ್ಚಿನ Serial killers ಈ ರಾಶಿಯವರು!

•    ವೃಶ್ಚಿಕ ರಾಶಿ (Scorpio)
ತಮ್ಮ ಸಂಗಾತಿ ಅಥವಾ ಪ್ರೀತಿಪಾತ್ರರ ಬಗ್ಗೆ ಉಳಿದೆಲ್ಲ ರಾಶಿಗಳ ಜನರು ಸ್ವಲ್ಪ ಮೃದುವಾಗಿ (Soft) ವರ್ತಿಸುತ್ತಾರೆ. ಅವರಿಗೆ ಬೇಸರವಾಗದಂತೆ ತಪ್ಪುಗಳನ್ನು ತಿಳಿಸಲು ಯತ್ನಿಸುತ್ತಾರೆ. ಆದರೆ, ವೃಶ್ಚಿಕ ರಾಶಿಯವರು ಹಾಗಲ್ಲ. ಅವರಿಗೆ ಸಂಗಾತಿಯ ಕುರಿತು ಮೃದುವಾದ ಭಾವನೆ ಇರುವುದಿಲ್ಲ. ಬದಲಿಗೆ ಒಂದು ಬಗೆಯ ಹಗೆತನ(Malice)ವನ್ನೇ ಹೊಂದಿರುತ್ತಾರೆ. ತಮ್ಮ ಸಂಗಾತಿ ತಮಗಿಂತ ಕಡಿಮೆ ಎನ್ನುವುದನ್ನು ಅವರು ಟೀಕಿಸುವುದರ (Criticism) ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅವರ ಕಟುವಾದ ಮಾತುಗಳು ಅವರ ಸಂಗಾತಿಯ ಆತ್ಮವಿಶ್ವಾಸವನ್ನು (Self Esteem) ಘಾಸಿಗೊಳಿಸುತ್ತಲೇ ಇರುತ್ತವೆ. ಹೀಗಾಗಿ, ವೃಶ್ಚಿಕ ರಾಶಿಯವರ ಸಂಗಾತಿ ಏಕಾಂಗಿತನವನ್ನು ಅನುಭವಿಸುತ್ತಾರೆ. ಅಲ್ಲದೆ, ವೃಶ್ಚಿಕ ರಾಶಿಯವರ ಖುಷಿಗಾಗಿ ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. 

ಈ 5 ರಾಶಿಯವರು ಸಂಗಾತಿಯಾಗಿ ಸಿಕ್ಕರೆ ನಿಮ್ಮ ಅದೃಷ್ಟ ಎಂದುಕೊಳ್ಳಿ..

•    ಧನು ರಾಶಿ (Sagittarius)
ಧನು ರಾಶಿಯವರು ಅದ್ಭುತವಾಗಿ ಗಮನಿಸಬಲ್ಲರು (Observe). ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಇದರಿಂದಾಗಿ, ಅವರಿಗೆ ಪ್ರತಿಯೊಂದು ಸನ್ನಿವೇಶವನ್ನೂ ನಿಖರವಾಗಿ ವಿಮರ್ಶಿಸಲು ಸಾಧ್ಯವಾಗುತ್ತದೆ. ಅವರು ಇನ್ನೊಬ್ಬರ ತಪ್ಪುಗಳನ್ನು ದೂರದಿಂದಲಾದರೂ ಪತ್ತೆ ಮಾಡಬಲ್ಲರು. ಹಾಗೂ ತಮ್ಮ ಈ ಗಮನಿಸುವ ಗುಣಕ್ಕೆ ಭಾರೀ ನಿಷ್ಠರಾಗಿರುತ್ತಾರೆ. ಅಂದರೆ, ತಮ್ಮ ಗಮನಿಸುವಿಕೆ ಎಂದಿಗೂ ತಪ್ಪಾಗುವುದಿಲ್ಲ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಾಗಿ, ಸಂಗಾತಿಗೆ ಪದೇ ಪದೆ ಅವರ ತಪ್ಪುಗಳನ್ನು ತೋರಿಸಿಕೊಡುತ್ತ ಕಿರಿಕಿರಿ (Annoying) ಮಾಡುತ್ತಾರೆ. 

Latest Videos
Follow Us:
Download App:
  • android
  • ios