Mental Health Tips: ಆತಂಕದ ಸಮಸ್ಯೆಯೇ? ಆತಂಕ ಬೇಡ, ದಿನವೂ ಆರೇ ಕೆಲಸ ಮಾಡಿ ಆರಾಮಾಗಿರಿ

ಆತಂಕದ ಸಮಸ್ಯೆ ಯಾರಲ್ಲಾದರೂ ಇದ್ದರೆ ಅದು ಕುಟುಂಬಸ್ಥರಿಗೆ ಬೇರೊಂದು ರೀತಿಯಲ್ಲಿ ಆತಂಕ ಒಡ್ಡುತ್ತಿರುತ್ತದೆ. ಏಕೆಂದರೆ, ಅವರ ಆತಂಕದ ಇಡೀ ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಆದರೂ ಆತಂಕ ಬೇಡ. ಏಕೆಂದರೆ, ಆತಂಕದ ಸಮಸ್ಯೆ ನಿವಾರಣೆಗೆ ಕೇವಲ ಆರು ಅಂಶಗಳನ್ನು ಅನುಸರಿಸಿದರೆ ಸಾಕು. 
 

Say goodbye to anxiety disorder follow healty habits sum

ಇಂದಿನ ದಿನಗಳಲ್ಲಿ ಸಾಕಷ್ಟು ಜನ ಆತಂಕದ ಸಮಸ್ಯೆ ಅನುಭವಿಸುತ್ತಾರೆ. ಇದು ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಸಮಸ್ಯೆ ಆಗಿರುವುದರಿಂದ ನಿರ್ಲಕ್ಷಿಸುವಂತಿಲ್ಲ. ಆತಂಕದ ಸಮಸ್ಯೆ ನಿವಾರಣೆಗೆ ವೈದ್ಯರ ನೆರವಿನೊಂದಿಗೆ ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಸಹ ಅಗತ್ಯ. ನಮ್ಮ ಆಹಾರ-ವಿಹಾರಗಳು ಕೊಳಕಾಗಿದ್ದು, ಮಾನಸಿಕ ಶಾಂತಿ, ನೆಮ್ಮದಿ ಬೇಕು ಎಂದರೆ ಎಲ್ಲಿಂದ ಲಭಿಸಲು ಸಾಧ್ಯ? ದೈನಂದಿನ ಕೆಲವು ಅಭ್ಯಾಸಗಳು ಆತಂಕದ ನಿವಾರಣೆಗೆ ಕೊಡುಗೆ ನೀಡಬಲ್ಲವು ಹಾಗೆಯೇ ಕೆಲವು ಅಭ್ಯಾಸಗಳು ಆತಂಕವನ್ನು ಹೆಚ್ಚಿಸಬಲ್ಲವು. ಹೀಗಾಗಿ, ಯಾರಾದರೂ ಆತಂಕದ ಸಮಸ್ಯೆಗೆ ತುತ್ತಾಗಿದ್ದರೆ ತಕ್ಷಣ ಸಣ್ಣ ಸಣ್ಣ ಬದಲಾವಣೆಗಳಿಗೆ ಮುಂದಾಗಬೇಕು. ಸಣ್ಣದೊಂದು ಬದಲಾವಣೆಯೇ ಮುಂದೆ ಮಿದುಳಿನ ಆರೋಗ್ಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತ ಮಾನಸಿಕ ಸಮಸ್ಯೆಗಳು ಕಾಡದಂತೆ ಮಾಡುತ್ತದೆ. ಜೀವನದ ಯಾವುದಾದರೊಂದು ಹಂತದಲ್ಲಿ ಆತಂಕವಾಗುವುದು, ಭಯ, ಒತ್ತಡ ಎಲ್ಲವೂ ಸಹಜ. ಆದರೆ, ಅವು ಅತಿಯಾದಾಗ ಬದುಕಿನ ಗುಣಮಟ್ಟ ಕುಸಿಯುತ್ತದೆ. ಕೇವಲ ಆರು ಅಂಶಗಳ ಬಗ್ಗೆ ಆದ್ಯತೆ ನೀಡುವ ಅಭ್ಯಾಸ ಬೆಳೆಸಿಕೊಂಡರೆ ಮಾನಸಿಕ ಸಮಸ್ಯೆಗಳು ಕಾಡುವ ಸಂಭವವೇ ಇರುವುದಿಲ್ಲ. 

•    ಸ್ವ ಆರೈಕೆಗೆ (Self Care) ಗಮನ
ಮಾನಸಿಕ (Mental) ಮತ್ತು ಭಾವನಾತ್ಮಕ (Emotional) ಕ್ಷೇಮಕ್ಕೆ ಸ್ವಯಂ ಆರೈಕೆಯ ಬಗ್ಗೆ ಕಾಳಜಿ ನೀಡುವುದು ಅಗತ್ಯ. ಇಲ್ಲಿ ಆರೈಕೆ ಎಂದರೆ, ನಿಮ್ಮನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು, ನಿಮಗೆ ಖುಷಿಯಾಗುವ ಕೆಲಸಗಳಲ್ಲಿ ತೊಡಗುವವರೆಗೆ ಕಾಳಜಿ ವಹಿಸಬೇಕು. ಹಾಗೆಯೇ, ವ್ಯಾಯಾಮ (Exercise) ಮಾಡುವುದು, ಧ್ಯಾನದಲ್ಲಿ (Meditation) ನಿರತರಾಗುವುದು, ಸ್ವಲ್ಪ ಹೊತ್ತು ವಾಕಿಂಗ್‌, ಮನೆಕೆಲಸದಲ್ಲಿ ತೊಡಗಿಕೊಳ್ಳುವುದು ಸಹ ನಿಮ್ಮದೇ ಸ್ವಂತ ಆರೈಕೆಗೆ ಸೇರುತ್ತವೆ. ಇವುಗಳನ್ನು ಅಳವಡಿಸಿಕೊಳ್ಳಿ.

ಮುಂಜಾನೆಯ ಈ ಅಭ್ಯಾಸ ನಿಮ್ಮ ಜೀವನವನ್ನೇ ಬದಲಾಯಿಸ್ಬಹುದು!

•    ಸಮತೋಲಿತ ಆಹಾರ (Balanced Food)
ಆಹಾರವೇ ಆರೋಗ್ಯ ತರುವ ಪ್ರಮುಖ ಅಂಶ. ಆಹಾರ ಸರಿಯಾಗಿದ್ದರೆ ಮನಸ್ಸು ಮತ್ತು ದೇಹದ (Physical Health) ಆರೋಗ್ಯವೂ ಸರಿಯಾಗಿರುತ್ತದೆ. ಹೀಗಾಗಿ, ನಿಮ್ಮ ಆಹಾರದಲ್ಲಿ ಎಲ್ಲ ಅಂಶಗಳೂ ಇರುವಂತೆ ನೋಡಿಕೊಳ್ಳಿ. ಕಾರ್ಬೋಹೈಡ್ರೇಟ್ಸ್‌, ಪ್ರೊಟೀನ್‌, ಸೇರಿದಂತೆ ಎಲ್ಲ ರೀತಿಯ ಪೌಷ್ಟಿಕಾಂಶ (Nutrients) ಲಭ್ಯವಾಗಲು ವಿಭಿನ್ನ ಆಹಾರ ವಸ್ತುಗಳನ್ನು ಬಳಕೆ ಮಾಡಿ. ಅಧಿಕ ಕೆಫೀನ್‌, ಸಕ್ಕರೆ (Sugar), ಕರಿದ ತಿಂಡಿ, ಸಂಸ್ಕರಿತ (Processed) ಆಹಾರಗಳಿಂದ ದೂರವಿರಬೇಕು. ಹಾಗೂ ಸಾಕಷ್ಟು ನೀರು (Water) ಕುಡಿಯುವುದು ಸಹ ಮಿದುಳಿನ ಆರೋಗ್ಯಕ್ಕೆ (Brain Health) ಅಗತ್ಯ.

•    ನಿದ್ರೆ (Sleep) ಬಗ್ಗೆ ಗಮನವಿರಲಿ
ಕೆಲವರು ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಉತ್ತಮ ಎಂದು ಬೇಗ ಏಳುವ ಅಭ್ಯಾಸ ಹೊಂದಿರುತ್ತಾರೆ. ಬೇಗ ಏಳುವುದು ಒಳ್ಳೆಯದೇ. ಆದರೆ, ರಾತ್ರಿ ಹನ್ನೆರಡು ಗಂಟೆಗೆ ಮಲಗಿ ಬೇಗ ಏಳುವುದರಿಂದ ನಿದ್ರೆ ಸಾಕಾಗುವುದಿಲ್ಲ. ಬೇಗ ಮಲಗುವ ಅಭ್ಯಾಸ ಮಾಡಿದರೆ ಬೇಗ ಏಳುವುದು ಸಾಧ್ಯವಾಗುತ್ತದೆ. ನಿದ್ರೆ ಕೊರತೆಯಾದರೆ ಒತ್ತಡ (Stress) ಮತ್ತು ಆತಂಕದ (Anxiety) ಸಮಸ್ಯೆ ಹೆಚ್ಚುತ್ತದೆ. ಮಲಗುವ ಮುನ್ನ ಎಲೆಕ್ಟ್ರಾನಿಕ್ಸ್‌ ಸಲಕರಣೆಗಳ ಬಳಕೆ ತಪ್ಪಿಸಿ.

•    ಸೂಕ್ತ ವ್ಯಾಯಾಮ (Exercise)
ಆತಂಕದ ಸಮಸ್ಯೆ ನಿವಾರಣೆಗೆ ದೈಹಿಕ ಚಟುವಟಿಕೆ ಅತ್ಯಂತ ಶಕ್ತಿಶಾಲಿ ಮಾರ್ಗ. ವ್ಯಾಯಾಮ ಅಥವಾ ಯಾವುದಾದರೂ ದೈಹಿಕ ಶ್ರಮದ ಕೆಲಸ ಮಾಡಿದಾಗ ದೇಹದಲ್ಲಿ ಎಂಡಾರ್ಫಿನ್‌ ಬಿಡುಗಡೆಯಾಗುತ್ತದೆ. ಇದು ನೈಸರ್ಗಿಕವಾಗಿ ಮನಸ್ಸನ್ನು (Natural Booster) ಖುಷಿಯಾಗಿಟ್ಟು, ಉತ್ತೇಜಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಜಾಗಿಂಗ್‌, ಯೋಗ, ಈಜುವುದು ಸೇರಿದಂತೆ ಯಾವುದಾದರೂ ದೈಹಿಕ ಚಟುವಟಿಕೆಯನ್ನು 30 ನಿಮಿಷಗಳ ಕಾಲ ಮಾಡಿದರೆ ಮಾನಸಿಕ ಸ್ವಾಸ್ಥ್ಯ ಉತ್ತಮವಾಗುತ್ತದೆ.

ಸಮಾಜದೊಂದಿಗಿನ ಸಾಮರಸ್ಯಕ್ಕೆ ಬೇಕಾದ ಸಂಗೀತ-ಯೋಗಕ್ಕೆ ಒಂದೇ ದಿನ!

•    ಮನಸ್ಸು ತುಂಬಿರಲಿ (Mindful)
ಯಾವುದೇ ಕೆಲಸ ಮಾಡುವಾಗ ಅದರ ಬಗೆಗೆ ಮಾತ್ರ ಗಮನ ಹರಿಸಬೇಕು. ನಿಮ್ಮ ಬೇಡದ ಆಲೋಚನೆಗಳ ಬಗ್ಗೆ ಗಮನವಿರಿಸಿ, ಸ್ವಯಂ ಅರಿವು ಬೆಳೆಸಿಕೊಂಡಾಗ ಆತಂಕವನ್ನು ನಿವಾರಿಸಿಕೊಳ್ಳಬಹುದು. 

•    ಬೆಂಬಲದ ಜಾಲ (Supporting Network)
ದೃಢವಾದ ಬೆಂಬಲದ ಸಾಮಾಜಿಕ ಜಾಲವನ್ನು ಹೊಂದಿರುವುದು ಆತಂಕದ ನಿವಾರಣೆಗೆ ಅತ್ಯುತ್ತಮ. ಕುಟುಂಬದ (Family) ಸದಸ್ಯರು, ಸ್ನೇಹಿತರು, ನಿರ್ದಿಷ್ಟ ಉದ್ದೇಶದೊಂದಿಗೆ ಕೆಲಸ ಮಾಡುವ ಗುಂಪಿನೊಂದಿಗೆ ನಿಮ್ಮ ಒಡನಾಟವಿರಲಿ. ಸಕಾರಾತ್ಮಕ ಚಿಂತನೆ (Positive People) ಹೊಂದಿರುವವರ ಸಂಪರ್ಕದಲ್ಲಿರಿ. 

Latest Videos
Follow Us:
Download App:
  • android
  • ios