ಗಂಡಸ್ರು ಮಾಡೋ ಈ ಕೆಲಸ ವಿಶ್ವದ ಯಾವ ಹೆಂಡ್ತಿಗೂ ಇಷ್ಟವಾಗೋಲ್ಲ ಬಿಡಿ!
ಪತಿ -ಪತ್ನಿ ಸಂಬಂಧ ತುಂಬಾ ಸುಂದರವಾದ ಬಾಂಧವ್ಯ. ಆದರೆ ಇದು ಅದೇ ರೀತಿ ಸರಿಯಾಗಿ ನಡೆಸಿಕೊಂಡು ಹೋದರೆ ಸರಿಯಾಗಿರುತ್ತೆ. ಆದರೆ ಇಬ್ಬರ ನಡುವೆ ಯಾವಾಗಲೂ ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ಇನ್ನೊಂದರ ಬಗ್ಗೆ ಭಿನ್ನಾಭಿಪ್ರಾಯಗಳಿರುತ್ತವೆ. ಹೆಚ್ಚಾಗಿ ಗಂಡಸರು ಮಾಡುವ ಕೆಲವೊಂದು ವಿಷ್ಯಗಳು ಅಥವಾ ಕೆಲಸ ಹೆಂಡ್ತಿಗೆ ಇಷ್ಟವಾಗೋದಿಲ್ಲ. ಅಂತಹ ಕೆಲವು ಪ್ರಮುಖ ವಿಷ್ಯಗಳ ಬಗ್ಗೆ ಇಲ್ಲಿ ನೀಡಲಾಗಿದೆ. ಪ್ರಪಂಚದ ಯಾವ ಹೆಂಡ್ತಿ ಸಹ ಗಂಡ ಮಾಡೋ ಈ ಕೆಲಸಗಳನ್ನು ಖಂಡಿತವಾಗಿಯೂ ಇಷ್ಟ ಪಡೋದಿಲ್ಲ.
ಪ್ರೀತಿಯಲ್ಲಿ ಗಂಡ ಮತ್ತು ಹೆಂಡತಿ ನಡುವೆ ಜಗಳವಾಡುವುದು ಸಾಮಾನ್ಯ. ಕೆಲವೊಮ್ಮೆ ಈ ವಿಷಯಗಳು ಪರಸ್ಪರರೊಂದಿಗಿನ ಸಂಬಂಧವನ್ನು ಬಲಪಡಿಸುತ್ತವೆ. ಆದರೆ ನಿಮ್ಮ ಸಂಬಂಧಕ್ಕೆ ಸೂಕ್ತವಲ್ಲದ ಅನೇಕ ವಿಷಯಗಳಿದ್ದರೆ, ಸಂಬಂಧ (Relationship) ದೂರವಾಗುವ ಸಾಧ್ಯತೆ ಇದೆ. ಈ ವಿಷಯಗಳು ನೋಡಲು ಚಿಕ್ಕದಾಗಿ ತೋರಬಹುದು, ಆದರೆ ಇದು ಗಂಡ ಹೆಂಡತಿಯ ಮನಸ್ಸಿನಲ್ಲಿ ಕಹಿ ಹಿಂಡುತ್ತೆ. ಇಂದು ನಾವು ಯಾವ ಹೆಂಡತಿಯೂ ಸಹಿಸಲಾಗದ ಗಂಡ ಮಾಡುವ ಕೆಲವು ವಿಷಯಗಳು ಯಾವುವು ಎಂಬುದರ ಬಗ್ಗೆ ಮಾತನಾಡುತ್ತೇವೆ. ಇದನ್ನ ಗಂಡಸ್ರಾದ ನೀವು ಅರ್ಥ ಮಾಡ್ಕೊಂಡ್ರೆ ಸಂಬಂಧ ಚೆನ್ನಾಗಿರುತ್ತೆ.
ಸಾರ್ವಜನಿಕವಾಗಿ ಅವಮಾನ ಮಾಡೋದು (insulting in public)
ಅನೇಕ ಗಂಡಂದಿರು ತಮ್ಮ ಹೆಂಡತಿಯನ್ನು ಇತರರ ಮುಂದೆ ಗೇಲಿ ಮಾಡುವ ಮೂಲಕ ತಾವು ಸಂತೋಷವಾಗಿರುವ ಅಭ್ಯಾಸ ಹೊಂದಿರುತ್ತಾರೆ. ಇದನ್ನು ಮಾಡೋದ್ರಿಂದ ತಮ್ಮನ್ನು ತಾವು ಗ್ರೇಟ್ ಎಂದು ನೀವು ಅಂದುಕೊಂಡಿರಬಹುದು. ತನ್ನ ಸುತ್ತಲಿನ ಜನರು ತನ್ನಿಂದ ಪ್ರಭಾವಿತರಾಗುತ್ತಿದ್ದಾರೆ ಎಂದು ಅವನು ಭಾವಿಸುತ್ತಾನೆ. ಆದರೆ ಇಂತಹ ಗುಣ ಯಾವತ್ತೂ ಹೆಂಡ್ತಿಗೆ ಇಷ್ಟವಾಗೋದಿಲ್ಲ.
ಪತ್ನಿಯ ಫ್ಯಾಮಿಲಿಯನ್ನು ನಿಂದಿಸುವುದು
ಎರಡು ಕುಟುಂಬಗಳ ನಡುವೆ ಯಾವಾಗಲೂ ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ಇನ್ನೊಂದರ ಬಗ್ಗೆ ಭಿನ್ನಾಭಿಪ್ರಾಯಗಳಿರುತ್ತವೆ, ಆದರೆ ನೀವು ಯಾವಾಗಲೂ ಅದೇ ವಿಷ್ಯಗಳನ್ನು ಹಿಡಿದುಕೊಂಡು, ನಿಮ್ಮ ಹೆಂಡತಿಯನ್ನು ಕೀಳಾಗಿ ಕಾಣುತ್ತೀರಿ ಅಥವಾ ಅವರ ಸಹೋದರ, ತಂದೆ, ತಾಯಿಯನ್ನು ನಿಂದಿಸುತ್ತಲೇ ಇರೋದು ಸರಿಯಲ್ಲ. ಇದನ್ನು ಮಾಡುವುದರಿಂದ, ಹೆಂಡತಿಯ ದೃಷ್ಟಿಯಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ.
ಹೆಂಡತಿಗಿಂತ ಇನ್ನೊಬ್ಬ ಮಹಿಳೆಯನ್ನು ಹೊಗಳೋದು
ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯ ಹೊಂದಿರುತ್ತಾರೆ. ನಿಮ್ಮ ಹೆಂಡತಿ ನಿಮಗಾಗಿ ಎಷ್ಟು ಮಾಡಲು ಸಾಧ್ಯವೋ ಅಷ್ಟು ಮಾಡಿರುತ್ತಾರೆ. ಅವರು ಮಾಡೋದನ್ನು ಮೆಚ್ಚೋದನ್ನು ಬಿಟ್ಟು ನೀವು ಯಾವಾಗಲೂ ಹೆಂಡತಿಯನ್ನು ಕೀಳಾಗಿ ಹೋಲಿಸುವುದು ಮತ್ತು ಸ್ತ್ರೀ ಸ್ನೇಹಿತೆ, ಸಂಬಂಧಿಕರು, ನೆರೆಹೊರೆಯವರನ್ನು ಹೆಂಡತಿಗಿಂತ ಬೆಸ್ಟ್ ಎಂದು ವರ್ಣಿಸುವುದು ನಿಮ್ಮ ಹೆಂಡತಿಗೆ ಖಂಡಿತವಾಗಿಯೂ ನೋವನ್ನುಂಟು ಮಾಡುತ್ತೆ.
ಹೆಂಡತಿಗೆ ಅಪಮಾನ
ಪ್ರತಿಯೊಬ್ಬರು ಸೌಂದರ್ಯದ ಬಗ್ಗೆ ಹೋಲಿಕೆ ಮಾಡುತ್ತಾರೆ. ಅಂತದ್ದರಲ್ಲಿ ನೀವು ಹೆಂಡತಿಯ ಸೌಂದರ್ಯದ ಬಗ್ಗೆ ಕೀಳಾಗಿ ಮಾತನಾಡುತ್ತಾ ಬಂದರೆ, ಖಂಡಿತವಾಗಿಯೂ ಇದನ್ನು ಅವಳು ಇಷ್ಟ ಪಡೋದಿಲ್ಲ. ಇದು ಆಕೆಗೆ ಅಪಮಾನ ಮಾಡಿದಂತೆ. ಆದುದರಿಂದ ಎಂದಿಗೂ ಇಂತಹ ಕೆಲಸ ಮಾಡಬೇಡಿ.
ಅವರ ಸಮಸ್ಯೆ ಬಗ್ಗೆ ಕೇಳದೇ ಇರೋದು
ನೀವು ಎಷ್ಟೇ ಬ್ಯುಸಿಯಾಗಿದ್ದರೂ ಸಹ, ನೀವು ಹೆಂಡತಿಯೊಂದಿಗೆ ಮಾತನಾಡಬೇಕು, ಅವಳು ಯಾವುದೇ ವಿಷಯದ ಬಗ್ಗೆ ಅಸಮಾಧಾನಗೊಂಡಿದ್ದಾಳೆಯೇ? ಎಂದು ಕೇಳಿ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ, ಮಹಿಳೆಯರು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರೆ, ಆಗ ಸಂಬಂಧ ದೂರವಾಗುತ್ತೆ.
ನಿಮ್ಮ ಹೆಂಡತಿಯ ವೃತ್ತಿಯನ್ನು ಕೀಳಾಗಿ ಕಾಣೋದು
ನಿಮ್ಮ ಹೆಂಡತಿ ನಿಮಗಿಂತ ಕಡಿಮೆ ಸಂಪಾದನೆ (less salary) ಮಾಡಿದರೂ ಅಥವಾ ಗೃಹಿಣಿಯಾಗಿದ್ದರೂ, ನೀವು ಅವಳ ಕೆಲಸವನ್ನು ಗೌರವಿಸಬೇಕು. ಮನೆಯಲ್ಲಿ ಮತ್ತು ಹೊರಗೆ ಎಲ್ಲವನ್ನೂ ಅವರು ಸರಿಯಾಗಿ ನಿಭಾಯಿಸಿದ ನಂತರವೂ ನೀವು ಯಾವಾಗಲೂ ಅವರನ್ನು ನಿಂದಿಸಿದರೆ, ಅದು ಅವರಿಗೆ ದುಃಖ, ಅವಮಾನ ಮತ್ತು ಕೋಪ ತರಿಸುತ್ತೆ.