Asianet Suvarna News Asianet Suvarna News

ಹೆಂಡ್ತಿ ಖುಷಿಗಾಗಿ ಬಾಲ್ಯದ ಪ್ರೇಮಿ ಜೊತೆ ಪತ್ನಿ ಮದುವೆ ಮಾಡಿಸಿದ ಪತಿ! ಮಗು ಕಸ್ಟಡಿ ತನ್ನದೆಂದ ಗಂಡ!

ಬಿಹಾರದ ಲವ್ ಸ್ಟೋರಿಯೊಂದು ಸುದ್ದಿಯಲ್ಲಿದೆ. ಪತಿಯೊಬ್ಬ ತನ್ನ ಪತ್ನಿಯನ್ನು ಆಕೆ ಲವ್ವರ್ ಗೆ ಕೊಟ್ಟು ಮದುವೆ ಮಾಡಿದ್ದಾನೆ. ಎಲ್ಲರ ಸಮ್ಮುಖದಲ್ಲಿ ಪತ್ನಿ ಮದುವೆ ನೆರವೇರಿಸಿದ ಪತಿ, ಮಗುವನ್ನು ತನ್ನ ಜೊತೆಗಿಟ್ಟುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.
 

Husband helps Wife Marriage With Lover keeps custody of kid roo
Author
First Published Aug 1, 2024, 11:05 AM IST | Last Updated Aug 1, 2024, 11:07 AM IST

ನಾವು ಪ್ರೀತಿ ಮಾಡುವವರಿಗಿಂತ ನಮ್ಮನ್ನು ಪ್ರೀತಿ ಮಾಡುವವರ ಜೊತೆ ನಾವಿರಬೇಕು ಎನ್ನುವ ಒಂದು ಮಾತಿದೆ. ಜೊತೆಯಲ್ಲಿದ್ದೂ ಪ್ರೀತಿ ಸಿಗ್ತಿಲ್ಲ ಎಂದಾಗ ಅವರಿಂದ ದೂರವಾಗೋದು ಉತ್ತಮ. ಹಾಗೆ ಅವರ ಪ್ರೀತಿಗೆ ಬೆಂಬಲ ನೀಡೋದು ಕೂಡ ಮುಖ್ಯ. ಅದಕ್ಕೆ ಈ ವ್ಯಕ್ತಿ ಮಾದರಿಯಾಗಿದ್ದಾನೆ. ಪತ್ನಿ ಬಾಲ್ಯದ ಸ್ನೇಹಿತನನ್ನು ಪ್ರೀತಿ ಮಾಡ್ತಿದ್ದಾಳೆ ಎಂಬುದು ಗೊತ್ತಾದ ಪತಿಯೊಬ್ಬ, ತನ್ನ ಪತ್ನಿಯನ್ನು ಆತನಿಗೆ ಕೊಟ್ಟು ಮದುವೆ ಮಾಡಿದ್ದಾನೆ. ಅಷ್ಟೇ ಅಲ್ಲ ಪತ್ನಿ ತನಗೆ ನೀಡಿದ ಎರಡು ವರ್ಷದ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ಕೂಡ ವ್ಯಕ್ತಿ ಹೊತ್ತಿದ್ದಾನೆ.

ಪ್ರೇಮಿ (Lover) ಗೆ ಪತ್ನಿಯನ್ನು ಮದುವೆ ಮಾಡಿದ ಪತಿ (Husband) : ಘಟನೆ ಬಿಹಾರ (Bihar) ದ ಲಖಿಸರೈನಲ್ಲಿ ನಡೆದಿದೆ. ಜುಲೈ 30ರಂದು ಖುಷ್ಬೂ ನೋಡಲು ಚಂದನ್ ಆಕೆ ಮನೆಗೆ ಬಂದಿದ್ದ. ಈ ವೇಳೆ ಖುಷ್ಬೂ ಪತಿ ಹಾಗೂ ಆತನ ಕುಟುಂಬಸ್ಥರು ಮನೆಯಲ್ಲಿದ್ದರು. ಖುಷ್ಬೂ ಹಾಗೂ ಚಂದನ್ ರನ್ನು ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದ್ರೆ, ಖುಷ್ಬೂ ಪತಿ ರಾಜೇಶ್, ಪತ್ನಿ ಹಾಗೂ ಚಂದನ್ ಗೆ ಮದುವೆ ಮಾಡುವ ನಿರ್ಧಾರಕ್ಕೆ ಬಂದ. ಅಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಖುಷ್ಬೂ ಹಾಗೂ ಚಂದನ್ ಮದುವೆ ನಡೆದಿದೆ. 

ರೀಲ್ ಅಲ್ಲ…. ರಿಯಲ್ ಗಂಡನ ಜೊತೆಗೆ ರೊಮ್ಯಾಂಟಿಕ್ ಪೋಸ್ ಕೊಟ್ಟ ರಾಮಾಚಾರಿಯ ವಿಲನ್ ವೈಶಾಖ

ಈ ಮದುವೆಯಿಂದ ಚಂದನ್ ತುಂಬಾ ಖುಷಿಯಾಗಿದ್ದಾನೆ. ಖುಷ್ಬೂ ಅಂಹರಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರದ ನಿವಾಸಿ. ಚಂದನ್ ಕೂಡ ಅದೇ ಊರಿನ ವ್ಯಕ್ತಿ. ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ದೊಡ್ಡವರಾಗ್ತಿದ್ದಂತೆ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಚಂದನ್ ಹಾಗೂ ಖುಷ್ಬೂ ವಿಷ್ಯ ಮನೆಯವರಿಗೆ ತಿಳಿದಿತ್ತು. ಆದ್ರೆ ಖುಷ್ಬೂ ತಾಯಿ ಹಾಗೂ ಮಾವ, ಇವರಿಬ್ಬರ ಮದುವೆಗೆ ಒಪ್ಪಲಿಲ್ಲ. ಮೂರು ವರ್ಷದ ಹಿಂದ ಖುಷ್ಬೂನನ್ನು ರಾಜೇಶ್ ಗೆ ಕೊಟ್ಟು ಮದುವೆ ಮಾಡಿದ್ದರು.

ರಾಜೇಶ್ ಹಾಗೂ ಖುಷ್ಬೂಗೆ ಎರಡು ವರ್ಷದ ಒಂದು ಗಂಡು ಮಗುವಿದೆ. ಮದುವೆ ನಂತ್ರವೂ ಖುಷ್ಬೂ ಹಾಗೂ ಚಂದನ್ ಭೇಟಿಯಾಗ್ತಿದ್ದರು. ಇಬ್ಬರ ಮಧ್ಯೆ ಫೋನ್ ನಲ್ಲಿಯೇ ಮಾತುಕತೆ ನಡೆಯುತ್ತಿತ್ತು. ಜುಲೈ 30ರಂದು ಇಬ್ಬರ ಪ್ರೇಮ ಪ್ರಸಂಗ ಬಹಿರಂಗವಾಗಿದೆ. ಬಾಲ್ಯದ ಪ್ರೇಮಿಯನ್ನು ಮದುವೆ ಆಗಿರುವ ಚಂದನ್ ಖುಷಿಯಾಗಿದ್ದಾನೆ. ಖುಷ್ಬೂಳನ್ನು ಮದುವೆಯಾಗಿದ್ದು ಸಂತೋಷ ನೀಡಿದೆ. ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆಕೆಯನ್ನು ಸುಖವಾಗಿಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಎಂದು ಚಂದನ್ ಹೇಳಿದ್ದಾನೆ.

ಇನ್ನು ಖುಷ್ಬೂ ಹಳೆ ಪ್ರೀತಿ ಸಿಕ್ಕಿದ್ದಕ್ಕೆ ಖುಷಿಯಾಗಿದ್ರೂ, ಮಗನನ್ನು ಬಿಟ್ಟು ಹೋಗುವ ನೋವಿದೆ. ನಾನು ರಾಜೇಶ್ ಜೊತೆ ವಾಸಿಸ್ತಿದ್ದೆ. ಆದ್ರೆ ರಾಜೇಶ್ ಇದಕ್ಕೆ ಅವಕಾಶ ನೀಡಲಿಲ್ಲ. ಮಗನನ್ನು ಬಿಟ್ಟು ಬದುಕುವುದು ಕಷ್ಟ ಎಂದು ಖುಷ್ಬೂ ಹೇಳಿದ್ದಾಳೆ. ಪತ್ನಿ ಖುಷ್ಬೂ ಹಾಗೂ ಚಂದನ್ ಬಗ್ಗೆ ರಾಜೇಶ್ ಕೂಡ ಮಾಧ್ಯಮದವರ ಜೊತೆ ಮಾತನಾಡಿದ್ದಾನೆ. ಮದುವೆಯಾಗಿ ಬಂದಾಗಿನಿಂದ ಖುಷ್ಬೂ ಫೋನಿನಲ್ಲಿ ದೀರ್ಘ ಸಮಯ ಮಾತನಾಡ್ತಿದ್ದಳು. ಯಾರು ಅಂತ ಕೇಳಿದ್ರೆ ಅಮ್ಮ ಎನ್ನುತ್ತಿದ್ದಳು. ಈ ಬಗ್ಗೆ ವಿಚಾರಿಸಿದಾಗ ಚಂದನ್ ಬಗ್ಗೆ ತಿಳಿಯಿತು. ಅನೇಕ ಬಾರಿ ನಾನು ಮೊಬೈಲ್ ಒಡೆದು ಹಾಕುವ ಪ್ರಯತ್ನ ನಡೆಸಿದ್ದೆ. ಆದ್ರೆ ಅದು ಅವರ ಪ್ರೀತಿಗೆ ಅಡ್ಡಿಯಾಗ್ಲಿಲ್ಲ. ಒತ್ತಾಯದ ಪ್ರೀತಿಗಿಂತ ಅವರಿಬ್ಬರನ್ನು ಒಂದು ಮಾಡೋದು ಒಳ್ಳೆಯದು ಎಂದು ಇಬ್ಬರಿಗೆ ಮದುವೆ ಮಾಡಿದ್ದೇನೆ. ಖುಷ್ಬೂ ಖುಷಿ ನನಗೆ ಮುಖ್ಯ ಎಂದು ರಾಜೇಶ್ ಹೇಳಿದ್ದಾನೆ. 

ಜಗಳ, ಮನಸ್ಥಾಪದಿಂದ ಮಾತ್ರವಲ್ಲ, ಖಾಸಗಿ ಅಂಗ ಸೇರಿ ದೇಹದ ಬೇರೆ ಭಾಗದ ವಾಸನೆಯೂ ಬ್ರೇಕಪ್, ಡೀವೋರ್ಸ್ ಆಗುತ್ತೆ!

ಖುಷ್ಬೂ ತನ್ನ ಮಗವಿನ ಜವಾಬ್ದಾರಿಯನ್ನು ಗಂಡನಿಗೆ ನೀಡಿದ್ದು, ಆಸ್ತಿಯಲ್ಲಿ ಪಾಲು ಕೇಳೋದಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾಳೆ. ಖುಷ್ಬೂ ಹಾಗೂ ರಾಜೇಶ್ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ರಾಜೇಶ್ ತಾಯಿ ತೆಗೆದುಕೊಂಡಿದ್ದಾಳೆ. 

Latest Videos
Follow Us:
Download App:
  • android
  • ios