ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಗೋವಾ ಬೀಚ್‌ನಲ್ಲಿ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ಶುರುವಾದ ಇವರ ಪ್ರೇಮ ಪಯಣ ಈಗ ಮದುವೆಯವರೆಗೆ ಮುಂದುವರೆದಿದೆ. ಈ ಜೋಡಿಯ ಕುರಿತಾದ ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ.

Bigg Boss ಖ್ಯಾತಿಯ ಶಿಶಿರ್​ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೆಲವು ವರ್ಷಗಳಿಂದ ನಡೆಯುತ್ತಿದ್ದ ಗುಸುಗುಸು ಸುದ್ದಿಗೆ ತೆರೆ ಎಳೆದಿರುವ ಜೋಡಿ ಈಗ ದಂಪತಿಯಾಗಿ ದಾಂಪತ್ಯ ಜೀವನ ಎಂಜಾಯ್​ ಮಾಡುತ್ತಿದ್ದಾರೆ. ಇದರ ನಡುವೆಯೇ, ಮದುವೆಯಾಗುತ್ತಿದ್ದಂತೆಯೇ ಬೀಚ್​ನಲ್ಲಿ ಮತ್ತೊಂದು ರೀಲ್ಸ್​ ಮಾಡಿರುವ ಜೋಡಿ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಿಶ್ಚಿತಾರ್ಥದ ಯುಗ ನಮಗೆ ಚೆನ್ನಾಗಿ ಕಾಣುತ್ತಿದೆ, ಗೋವಾ ಮರಳು ಸೂರ್ಯಾಸ್ತದ ಬೀಚ್ ಚಿಪ್ಪುಗಳು ಮತ್ತು ಅಪಾರ ಪ್ರೀತಿ ತುಂಬಿದೆ ಎಂದು ಐಶ್ವರ್ಯ ಅವರು ಕ್ಯಾಪ್ಷನ್​ ಕೊಟ್ಟಿದ್ದು, ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಇದಾಗಲೇ ಈ ಜೋಡಿ ಹಲವು ರೀಲ್ಸ್​ಗಳ ಮೂಲಕ ಸದ್ದು ಮಾಡುತ್ತಲೇ ಇದೆ. ಇವರಿಬ್ಬರ ಸುಂದರ ತಿರುವಿಗೆ ಕಾರಣವಾದದ್ದು Bigg Boss. ಈ ಬಗ್ಗೆ ಈ ಹಿಂದೆ ಐಶ್ವರ್ಯ ಹೇಳಿಕೊಂಡಿದ್ದರು. ಬಿಗ್​ಬಾಸ್​ ವೇದಿಕೆಯಲ್ಲಿ ನಮ್ಮಿಬ್ಬರ ಪಯಣ ಶುರುವಾಗಲು ಕಾರಣರಾದವರು Sudeep Sir ಎಂದಿದ್ದರು. ಅಷ್ಟಕ್ಕೂ, Bigg Bossನ 11ನೇ ಸೀಸನ್​ನಲ್ಲಿ ಈ ಜೋಡಿ ಭಾಗವಹಿಸಿತ್ತು. ಅಲ್ಲಿಯೇ ಇವರ ಪ್ರೇಮ ಪಯಣ ಶುರುವಾಗಿತ್ತು. ಅಲ್ಲಿಂದ ಹೊರಕ್ಕೆ ಬಂದ ಮೇಲೂ ಮುಂದುವರೆದಿತ್ತು. ಬಳಿಕ ಸೀರಿಯಲ್, ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದ ಐಶ್ವರ್ಯ, ಶಿಶಿರ್ ಜೊತೆಗಿನ ಗೆಳತನದಿಂದ ಸುದ್ದಿಯಾಗಿದ್ದರು. ಇಬ್ಬರೂ ಬಿಗ್ ಬಾಸ್ ಬಳಿಕ ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾ, ಟ್ರಾವೆಲ್ ಮಾಡುತ್ತಲೇ ಇದ್ದಾರೆ. ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಏನೋ ಇದೆ ಎನ್ನುವ ಗುಸು ಗುಸು ಕೇಳಿ ಬಂದಿದ್ದರೂ ಜೋಡಿ ಮಾತ್ರ ಏನಿಲ್ಲ, ಏನಿಲ್ಲ ಎನ್ನುತ್ತಿತ್ತು. ಈಗ ಮದುವೆಯ ಆಗಿದೆ.

ಜೋಡಿ ಕುರಿತು

ಇನ್ನು ಐಶ್ವರ್ಯ ಅವರ ಕುರಿತು ಹೇಳುವುದಾದರೆ, ಐಶ್ವರ್ಯ ತಂದೆಯ ಸಾವಿನ ಬಳಿಕ ಕಷ್ಟದಲ್ಲಿ ದಿನದೂಡಿದ್ದರು ಐಶ್ವರ್ಯ. ಅವರ ಬ್ಯುಸಿನೆಸ್ ನಲ್ಲೂ ಹಲವರು ಮೋಸ ಮಾಡಿದ್ದರಂತೆ. ಆದರೆ ಎಲ್ಲಾ ಕಷ್ಟವನ್ನು ಮೆಟ್ಟಿ ನಿಂತು ಐಶ್ವರ್ಯ ನಟನೆಯಲ್ಲಿ ತೊಡಗಿದರು, ಬಳಿಕ ಅಮ್ಮನನ್ನು ಸಹ ಕಳೆದುಕೊಂಡರು. ಆದರೆ ಕಲೆ, ನಟನಾ ಲೋಕ ಕೈ ಬಿಟ್ಟಿಲ್ಲ ಎನ್ನುತ್ತಾರೆ ಐಶ್ವರ್ಯ. ಇನ್ನು ಶಿಶಿರ್​ ಅವರು, ಕಿರುತೆರೆ ಮತ್ತು ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟ ಹಾಗೂ ಭರತನಾಟ್ಯ ಕಲಾವಿದ. 2012ರಲ್ಲಿ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 'ಕುಲವಧು' ಧಾರಾವಾಹಿಯ ವಚನ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. 'ಪುಟ್ಟಗೌರಿ ಮದುವೆ', 'ಭಾರತಿ', 'ಸೇವಂತಿ' ಸೇರಿದಂತೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. 2018ರಲ್ಲಿ 'ಮಿ. ಎಲ್‌ಎಲ್‌ಬಿ' (Mr LLB) ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. 'ಬಿಲ್‌ಗೇಟ್ಸ್' (BillGates) ಮತ್ತು 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮದುವೆಗೂ ಮುನ್ನ ಎಂಗೇಜ್​ಮೆಂಟ್​ ಕೂಡ ವಿಶೇಷವಾಗಿತ್ತು. ಎಂಗೇಜ್​ಮೆಂಟ್​ ರಿಂಗ್​ನ ಮಹತ್ವವನ್ನು ತಾರಾ ಜೋಡಿ ಹೇಳಿಕೊಂಡಿದ್ದರು. ಐಶ್ವರ್ಯ ಅವರು ರಿಂಗ್​ ಶಿವ-ಪಾರ್ವತಿಯ ಥೀಮ್​ನಲ್ಲಿ ಹೇಳಲಾಗಿದ್ದು, ಅದರಲ್ಲಿ ಶಿಶಿರ್​ ಅವರ ಎಸ್​ ಎನ್ನುವ ಹೆಸರನ್ನು ಕೆತ್ತಲಾಗಿದೆ. ಅದೇ ರೀತಿ ಶಿಶಿರ್​ ಅವರು ತಮ್ಮ ರಿಂಗ್​ ಕೂಡ ನೀಲಿ-ಕೆಂಪು ಹರಳುಗಳಿಂದ ಶಿವ-ಪಾರ್ವತಿ ಥೀಮ್​ ಹೊಂದಿದ್ದು, ಅದರಲ್ಲಿ ಎ ಎಂದು ಐಶ್ವರ್ಯ ಅವರ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ರಿಂಗ್ ಒಳಗಡೆ ನಮ್ಮ ಎಂಗೇಜ್​ಮೆಂಟ್​ ಆಗಿರುವ ಡೇಟ್​ ಸಂಪೂರ್ಣವಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು.